Breaking News

admin

ನೌಕರರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ

ಚಿತ್ರದುರ್ಗ: ರಾಜ್ಯ ನೌಕರರ ಸಂಘದ ಚಿತ್ರದುರ್ಗ ಜಿಲ್ಲಾಘಟಕಕ್ಕೆ ಬೆಳಗ್ಗೆಯಿಂದ ಮತದಾನ ಪ್ರಾರಂಭವಾಗಿದ್ದು, ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ. ಜಿಲ್ಲಾಧ್ಯಕ್ಷ ಖಜಾಂಶಿ ಕಾರ‍್ಯದರ್ಶಿ ಮತ್ತು ರಾಜ್ಯ ಸಂಘಕ್ಕೆ ಜಿಲ್ಲಾ ಪ್ರತಿನಿಧಿ ಆಯ್ಕೆ ಇಂದು ನಡೆಯಲಿದೆ.1ಘಂಟೆ ವರೆಗೂ ಚುನಾವಣೆ ನಡೆಯಲಿದ್ದು , 4 ಘಂಟೆಯಿಂದ ಮತಎಣಿಕೆ ನಡೆಯಲಿದೆ.

Read More »

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾಕಾರ್ಯಕರ್ತೆಯರ ಪ್ರತಿಭಟನೆ

ಚಾಮರಾಜನಗರ: ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ, ಆಶಾ ಕಾರ್ಯಕರ್ತೆಯರು ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಆಶಾ ಕಾರ್ಯಕರ್ತೆಯರು, ತಮ್ಮ ಕನಿಷ್ಠ ಬೇಡಿಕೆ ಗಳನ್ನ ಈಡೇರಿಸುವಂತೆ ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೆಲಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನ ಒತ್ತಾಯಿಸಿದರು.ರಾಜ್ಯದ ಆರೋಗ್ಯ ಇಲಾಖೆಯಡಿಯಲ್ಲಿ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಗರ್ಭಿಣಿ …

Read More »

ಖಾಲಿ ಕೊಡಗಳೊಂದಿಗೆ ಗ್ರಾ.ಪಂ ಮುಂದೆ ಪ್ರತಿಭಟನೆ

ಮಂಡ್ಯ: ಜಿಲ್ಲೆಯ ಮಂಡ್ಯ ಬೂಕನಕೆರೆ ಐಚನಹಳ್ಳಿ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಐಚನಹಳ್ಳಿ ಗ್ರಾಮದ ನೂರಾರು ಮಹಿಳೆಯರು ಕುಡಿಯುವ ನೀರು ಸರಬರಾಜು ಮಾಡಲು ವಿಫಲರಾಗಿರುವ ಅಧ್ಯಕ್ಷ ಮತ್ತು ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರುಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದ ಮಹಿಳೆಯರು ಒಂದು ಕಿ.ಮೀ ದೂರದಿಂದ ಬಿಂದಿಗೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಭಾರೀ ಸಾಹಸದಿಂದ ಕುಡಿಯಲು ನೀರು ತರುತ್ತಿದ್ದೇವೆ. ಪಿಡಿಓ ರಮೇಶಮೂರ್ತಿ ಮತ್ತು ಅಧ್ಯಕ್ಷ …

Read More »

ಕೃಷಿ ವಸ್ತು ಪ್ರದರ್ಶನ, ಮಾಹಿತಿ ಕಾರ್ಯಕ್ರಮ

ಮಂಡ್ಯ: ಜಿಲ್ಲೆಯ ತೆಂಡೇಕೆರೆ ಗ್ರಾಮದಲ್ಲಿ ಸಮಗ್ರ ಕೃಷಿ ಅಭಿಯಾನದ ಅಂಗವಾಗಿ ಕೃಷಿ ವಸ್ತು ಪ್ರದರ್ಶನ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣ ತೆಂಡೇಕೆರೆಜಿಲ್ಲಾ ಪಂಚಾಯತಿ ಕೃಷಿ ಕೈಗಾರಿಕೆ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಮಾತನಾಡಿ, ರೈತರು ವೈಜ್ಞಾನಿಕವಾಗಿ ಬೇಸಾಯ ಮಾಡಿ ಹೆಚ್ಚಿನ ಇಳುವರಿಯನ್ನು ಪಡೆಯಬೇಕು.ಏಕ ಬೆಳೆ ಪದ್ಧತಿಯನ್ನು ಅನುಸರಿಸದೇ ಮಿಶ್ರಬೆಳೆ ಪದ್ದತಿಯನ್ನು ಅನುಸರಿಸಿ ಹೆಚ್ಚಿನ ಲಾಭಗಳಿಸುವ ಮೂಲಕ ಕೃಷಿಯನ್ನು ಲಾಭದಾಯಕ ಉಧ್ಯಮವನ್ನಾಗಿಸಿಕೊಳ್ಳಬೇಕು ಎಂದು ಮಂಜು ಕರೆ ನೀಡಿದರು.ತಾ.ಪಂ ಸದಸ್ಯೆ …

Read More »

ಭ್ರಷ್ಟ ಆಯುಕ್ತರ ವಿರುದ್ಧ ಪ್ರತಿಭಟನೆ.

ಚಿಕ್ಕಬಳ್ಳಾಪುರ: ಭ್ರಷ್ಟ ನಗರಸಭೆ ಆಯುಕ್ತ ಚಲಪತಿ ವಿರುದ್ದ ಹಿಡಿ ಶಾಪ ಹಾಕುತ್ತಾ, ಸಾರ್ವಜನಿಕರು ನಗರಸಭೆ ಮುಂದೆ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತಿರುವ ದೃಶ್ಯ ಆಂದ್ರ ಪ್ರದೇಶದ ಗಡಿ ಜಿಲ್ಲೆಯ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿಂದು‌ ಕಂಡು ಬಂದಿತು.‌ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ಪುರಸಭೆಯಿಂದ ಮೇಲ್ದರ್ಜೆಗೆ ಏರಿ ಕೇವಲ ಎರಡು ಮೂರು ವರ್ಷಗಳು ಕಳೆದಿವೆ ಇಲ್ಲಿ ಇದುವರೆಗೂ ನಾಲ್ಕೈದು ನಗರಸಭೆ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ , ಇದೇ ನಗರಸಭೆಯಲ್ಲಿ ಆರ್ …

Read More »

ಆಲ್ ದಿ ಬೆಸ್ಟ್ ಇಂಡಿಯಾ

ರಾಮನಗರ: ಇಂದು ವಿಶ್ವಾದ್ಯಂತಕ್ರಿಕೆಟ್ ಜ್ವರ ಹಬ್ಬಿಸಿರುವ ವಿಶ್ವಕಪ್ ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಟೀಂ ಇಂಡಿಯಾಗೆ ನಾಲ್ಕನೇ ಭಾರಿ ಫೈನಲ್ ಗೇರುವ ಹಂಬಲದಲ್ಲಿದೆ. ಕ್ರಿಕೆಟ್ ಅಭಿಮಾನಿಗಳನ್ನ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿರುವ ಎರಡು ತಂಡಗಳ ನಡುವಿನ ಕದನಕ್ಕೆ ಓಲ್ಡ್ ಟ್ರಾಫರ್ಡ್ ಮೈದಾನ ಸಜ್ಜಾಗಿದೆ. ಟೀಂ‌ ಇಂಡಿಯಾ ಗೆದ್ದುಬರಲಿ ಎಂದು ರೇಷ್ಮೆನಗರಿ ರಾಮನಗರ ಜಿಲ್ಲೆಯ ಕ್ರಿಕೆಟ್ ಅಭಿಮಾನಿಗಳು ಹಾರೈಸಿದ್ದಾರೆ. ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ತರಬೇತಿ ಪಡೆಯುತ್ತಿರುವ …

Read More »

ಶಿಕ್ಷಕರ ಸಂಘಟನೆ ನೀಡಿದ್ದ ಬಂದ ಕರೆ ವಿಫಲ.

ಧಾರವಾಡ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂದು ರಾಜ್ಯಾದ್ಯಂತ ರಾಜ್ಯದ 55,066 ಸರ್ಕಾರಿ ಶಾಲೆಗಳ ಬಂದ್ ಗೆ ಕರೆ ನೀಡಲಾಗಿತ್ತು. ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿ, ವರ್ಗಾವಣೆ ಸೇರಿದಂತೆ ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘ ಬಂದ್ ಗೆ ಕರೆ ನೀಡಿತ್ತು.ಆದರೆ ಬಂದ್ ಗೆ ಧಾರವಾಡದಲ್ಲಿ ನೀರಸ ವ್ಯಕ್ತವಾಗಿದೆ. ಪ್ರತಿದಿನದಂತೆ ಶಾಲಾ ತರಗತಿಗಳು ಯಥಾ ಪ್ರಕಾರ ನಡೆಯುವ ಮೂಲಕ ಶಿಕ್ಷಕರು ಬಂದ್ ಗೆ …

Read More »

ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

ಚಿಕ್ಕೋಡಿ: ಸಿಎಂ ಹಾಗೂ ಡಿಸಿಎಂ ಸ್ಥಾನಕ್ಕೇ ರಾಜಿನಾಮೆ ಕೊಟ್ಟು ಪ್ರಜಾತಂತ್ರ ಗೌರವಿಸುವಂತೆ ಆಗ್ರಹಿಸಿ ಚಿಕ್ಕೋಡಿ ಪಟ್ಟಣದ ಬಸವ ವೃತ್ತದಲ್ಲಿಂದುವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಾಯಿತು. ‌ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.

Read More »

ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ಗದಗ : ಸಿ ಎಂ ಕುಮಾರಸ್ವಾಮಿ ರಾಜೀನಾಮೆಗೆ ಆಗ್ರಹಿಸಿ ಗದಗನಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ನಗರದ ಗಾಂಧಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ಆಯೋಜಿಸಲಾಗಿತ್ತು. ಪದರತಿಭಟನೆಯಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಇನ್ನು ತಕ್ಷಣ ಕುಮಾರಸ್ವಾಮಿ ರಾಜೀನಾಮೆ ನೀಡುವಂತೆ‌ ಧರಣಿಯಲ್ಲಿ ಬಿಜೆಪಿಗರು ಆಗ್ರಹಿಸಿದ್ರು. ಮೈತ್ರಿ ಸರಕಾರ ಬಹುಮತವನ್ನ ಕಳೆದುಕೊಂಡಿದೆ. ಸಮ್ಮಿಶ್ರ ಸರ್ಕಾರ ರಾಜ್ಯದ ಅಭಿವೃದ್ಧಿ ಬಿಟ್ಟು ಸರಕಾರ ಉಳಿಸಿಕೊಳ್ಳುವಲ್ಲಿ ಬಡಿದಾಡ್ತಿದೆ. ರಾಜ್ಯದ ಜನತೆಗೆ ಮೈತ್ರಿ ಸರಕಾರ ಅನ್ಯಾಯ ಎಸಗಿದೆ …

Read More »

ಕತ್ತು ಕೊಯ್ದು ಗೃಹಿಣಿಯ ಕೊಲೆ

ಚಾಮರಾಜನಗರ: ಜಿಲ್ಲೆಯಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತದ ಬಳಿ ಕತ್ತು ಕೊಯ್ದು ಗೃಹಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಭರಚುಕ್ಕಿ ಜಲಪಾತ ಬಳಿಯ ಮಯೂರ ಪ್ರವಾಸಿ ಮಂದಿರದ ಕಾವೇರಿ ನದಿ ದಂಡೆ ಮೇಲೆ ಗೃಹಿಣಿಯ ಕೊಲೆ ಮಾಡಲಾಗಿದೆ. ಬಂಡೆ ಮೇಲೆ ಕತ್ತು ಸೀಳಿದ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿದ್ದು, ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದರು. ಶವದ ಪಕ್ಕದಲ್ಲಿ ಪುರುಷನ ಪ್ಯಾಂಟ್, ಗೃಹಿಣಿಯ ಚಪ್ಪಲಿ, ಜ್ಯೂಸ್ ಬಾಟಲಿ, ಬಟ್ಟೆಸೋಪು ಮತ್ತು …

Read More »