Breaking News

admin

ಕಾಂಗ್ರೆಸ್ ಶಾಸಕರ ರಾಜಿನಾಮೆಗೆ ಸಿದ್ದು ಕಾರಣ.

ಉಡುಪಿ : ಕಾಂಗ್ರೆಸ್ಸಿನ ೧೨ ಶಾಸಕರು ರಾಜೀನಾಮೆ ನೀಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣ ಎಂದು ಉಡುಪಿ ಚಿಕ್ಕಮಂಗಳೂರು ಸಂಸದೆ ಶೋಭಾ ಕರಾಂದ್ಲಾಜೆ ಹೇಳಿದ್ದಾರೆ. ಅವರು ಉಡುಪಿಯ ಸಂಸದರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ನಡೆಸಿದರು. ಮೈತ್ರಿ ಸರ್ಕಾರದ ಆಂತರಿಕ ಗೊಂದಲ ಬಹಿರಂಗವಾಗಿದೆ ,ಆನಂದ್ ಸಿಂಗ್ ರಾಜಿನಾಮೆ ಕೊಟ್ಟಾಗಲೇ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಹೇಳಿದರು. ಸಿದ್ದು- ಪರಂ ಒಳಜಗಳವೇ ಬಿರುಕಿಗೆ ಕಾರಣ ಸಿದ್ದರಾಮಯ್ಯ – ಪರಮೇಶ್ವರ್ ಒಳ …

Read More »

ಬಡ ವಿದ್ಯಾರ್ಥಿಗಳಿಗೆ ಉಚಿತ ಪಾಸ್ ಗೆ ಆಗ್ರಹಿಸಿ ಪ್ರತಿಭಟನೆ.

ಚಿತ್ರದುರ್ಗ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಬಡ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ ನಲ್ಲಿ ಉಚಿತ ಪಾಸ್ ನೀಡುವಂತೆ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನಾ ಮೆರವಣಿಗೆ ಮಾಡಿದರು. ‌ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಮತ್ತು ಸರಕಾರಿ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಯನ್ನು ಕೈಗೊಂಡು ಸರಕಾರದ ಗಮನ ಸೆಳೆದರು.ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗೆ ಮನವಿ ನೀಡುವ ಮೂಲಕ ಕೊನೆಗೊಂಡಿತು.

Read More »

ಕಿಡಿಗೇಡಿಗಳಿಂದ ರೇಷ್ಮೆ ಬೆಳೆಗೆ ಬೆಂಕಿ

ಕೋಲಾರ: ಕಿಡಿಗೇಡಿಗಳಿಂದ ರೇಷ್ಮೆ ಬೆಳೆದ ಮನೆಗೆ ಬೆಂಕಿ, ರೈತನಿಗೆ ಲಕ್ಷಾಂತರ ನಷ್ಟವಾಗಿರುವ ಘಟನೆ ಮುಳಬಾಗಲು ತಾಲೂಕಿನ ಬೇವಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.ಗ್ರಾಮದ ರೈತ ರಾಮಕೃಷ್ಣಪ್ಪ ಎಂಬುವರಿಗೆ ಸೇರಿದ ರೇಷ್ಮೆ ಮನೆ ಸುಟ್ಟು ಭಸ್ಮವಾಗಿದೆ.‌ಕಿಡಿಗೇಡಿಗಳು 600 ಚಂದ್ರಂಕಿಯಲ್ಲಿ ರೇಷ್ಮೆ ಬೆಳೆ ಸಮೇತ ಬೆಂಕಿ ಹಾಕಿ ಸುಟ್ಟಿದ್ದಾರೆ.‌ಚಂದ್ರಂಕಿ, ರೇಷ್ಮೆ ಬೆಳೆ, ಮನೆ ಸೇರಿ 15 ಲಕ್ಷ ಕ್ಕೂ ಹೆಚ್ಚು ನಷ್ಟ ಉಂಟಾಗಿದೆ.ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮುಖ್ಯ ಶಿಕ್ಷಕರ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ.

ಮೊಳಕಾಲ್ಮುರು: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡಬೇಕು ಹಾಗೂ ಬದಲಿನ ಶಿಕ್ಷಕರ ನೇಮಕ ನಡೆಸಬೇಕೆಂದು ಆಗ್ರಹಿಸಿ ಮೊಣಕಾಲ್ಮೂರು ತಾಲ್ಲೂಕಿನ ಗಡಿ ಭಾಗವಾದ ಹುಚ್ಛಂಗಿ ದುರ್ಗದ ಸ್ಥಳೀಯರು ಪ್ರತಿಭಟನೆ ನಡೆಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಗಿಲು ಹಾಕಿ ಊರಿನ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಶಾಲೆಗೆ ಸಂಪೂರ್ಣ ಶಿಕ್ಷಕರು ಬರುವರೆಗೂ ಹಾಗೂ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡುವರೆಗೂ ಶಾಲೆಯ ಬಾಗಿಲು ತೆಗೆಯುವದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಹಾಗೂ …

Read More »

07ಕ್ಕೆ ಕ್ಷತ್ರಿಯ ಒಕ್ಕೂಟದ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಹುಬ್ಬಳ್ಳಿ; ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾ ಘಟಕದ ಹಾಗೂ ಧಾರವಾಡ ಜಿಲ್ಲೆಯ ಎಲ್ಲ ತಾಲೂಕಿನ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇದೇ 07ರಂದು ವಿದ್ಯಾನಗರದಲ್ಲಿ ಭಾರತಿ ಮರಾಠಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ಷತ್ರಿಯ ಸಮಾಜದ ಮುಖಂಡರಾದ ಅಶೋಕ ಕಾಟವೆ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷತ್ರಿಯ ಸಮಾಜ ರಾಜಕೀಯವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, ರಾಜಕೀಯವಾಗಿ ಕ್ಷತ್ರಿಯ ಸಮಾಜವನ್ನು ಅಡುಗೆಯಲ್ಲಿ ಕರಿಬೇವಿನ ಹಾಗೇ ಬಳಕೆ ಮಾಡಿಕೊಂಡು ಊಟ ಮುಗಿದ ಮೇಲೆ …

Read More »

ಯುವ ಸ್ಪಂದನ ಜಾಗೃತಿ ಕಾರ್ಯಕ್ರಮ

ಮಂಡ್ಯ: ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಯುವಜನ ಕೌಶಲ್ಯ ಮತ್ತು ಯುವಸ್ಪಂದನ ಜಾಗೃತಿ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮ ಉದ್ಘಾಟಿಸಿದ ಮಂಡ್ಯ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಮಾಜಿಅಧ್ಯಕ್ಷ ಹಾಗೂ ಚಿಂತಕರಾದ ಡಾ.ಕೆ.ಕಾಳೇಗೌಡ ಮಾತನಾಡಿ ಯುವಜನರು ತಮ್ಮಲ್ಲಿನ ಕೀಳರಿಮೆಯನ್ನು ಅಳಿಸಿಹಾಕಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು‌ ಎಂದರು.‌ಇಂದಿನ ಜಾಗತಿಕ ಜಗತ್ತಿನ ಸ್ಪರ್ಧಾ ಪ್ರಪಂಚದಲ್ಲಿ ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು. ಪರೋಪಕಾರ ಹಾಗೂ ಸೇವಾ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿಯಾಗಿ …

Read More »

ಮೊಬೈಲ್ ಅಂಗಡಿಯಲ್ಲಿ ಕೈಚಳಕ ತೋರಿದ ಕಳ್ಳರು

ಆನೇಕಲ್ : ಪಟ್ಟಣದ ಮೊಬೈಲ್ ಅಂಗಡಿವೊಂದರಲ್ಲಿ ಕದೀಮರ ಗ್ಯಾಂಗ್ ಒಂದು ಅಂಗಡಿಯ ಮೇಲ್ಭಾಗದ ಶೀಟ್ ಕಟ್ ಮಾಡಿ ಕಳ್ಳರು ತಮ್ಮ ಕೈಚಳಕ ತೋರಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ರಸ್ತೆಯಲ್ಲಿ ನಡೆದಿದೆ.ಆನೇಕಲ್ ಪಟ್ಟಣದ ಅತ್ತಿಬೆಲೆ ರಸ್ತೆಯಲ್ಲಿರುವ ಅಂಜನಾದ್ರಿ ಮೊಬೈಲ್ ಅಂಗಡಿಯ ಮೇಲ್ಬಾಗದಲ್ಲಿದ್ದ ಕಬ್ಬಿಣದ ಶೀಟ್ ಗಳನ್ನು ಕಟ್ ಮಾಡಿ ಮಧ್ಯರಾತ್ರಿ ಅಂಗಡಿಯಲ್ಲಿದ್ದ ಇಪ್ಪತ್ತು ಸಾವಿರ ನಗದು ಸೇರಿದಂತೆ ಐವತ್ತು ಸಾವಿರ ಬೆಲೆ ಬಾಳುವ ವಸ್ತುಗಳನ್ನು ಕದಿಮರು ಕಳ್ಳತನ …

Read More »

ಧರೆಗೆ ವರುಣನ ಸಿಂಚನ

ಆನೇಕಲ್: ತಾಲ್ಲೂಕಿನಾದ್ಯಂತ ತುಂತುರು ಮಳೆ ಆರಂಭವಾಗಿದ್ದು, ವರುಣ ತನ್ನ ಕೃಪೆಯನ್ನು ಬೀರಿದ್ದಾನೆ. ತಾಲೂಕಿನಾದ್ಯಂತ ಬೆಳಗಿನಿಂದಲೂ ಮೋಡ ಕವಿದ ವಾತಾವರಣದ ನಡುವೆ ಮಳೆರಾಯನ ಆಗಮನ ಗ್ರಾಮಸ್ಥರಲ್ಲಿ ಸಂತಸವನ್ನು ಉಂಟು ಮಾಡಿದೆ. ತಾಲೂಕಿನ ಆನೇಕಲ್,ಅತ್ತಿಬೆಲೆ, ಸರ್ಜಾಪುರ,ಸೇರಿದಂತೆ ಚಂದಾಪುರ ಬೊಮ್ಮಸಂದ್ರ ಹಲವು ಕಡೆ ತುಂತುರು ಮಳೆ ಸುರಿದಿದೆ.‌ ಮಳೆಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳ ಪರದಾಟ ಪಡುವಂತಾಗಿದ್ದು, ವಾಹನ ಸವಾರರು ಮಳೆಯಿಂದ ರಕ್ಷಣೆ ಪಡೆಯಲು ಅಂಗಡಿ ಮುಂಗಟ್ಟುಗಳ ಬಳಿ ಆಶ್ರಯ ಪಡೆದ ಚಿತ್ರಣ ಕಂಡು …

Read More »

ಸಮಗ್ರ ಕೃಷಿ ಅಭಿಯಾನ ರಥಯಾತ್ರೆಗೆ ಚಾಲನೆ

ಮಂಡ್ಯ: ಜಿಲ್ಲೆಯ ಶೀಳನೆರೆ ಹೋಬಳಿಯ ತೆಂಡೇಕೆರೆ ಗ್ರಾಮದಲ್ಲಿ ಸಮಗ್ರ ಕೃಷಿ ಅಭಿಯಾನ ರಥಯಾತ್ರೆ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ಕೆ ಜಿಲ್ಲಾ ಪಂಚಾಯತ ಕೃಷಿಕೈಗಾರಿಕೆ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಚಾಲನೆ ನೀಡಿದರು. ಅನ್ನದಾತನಾದ ರೈತನು ಕೃಷಿಯಲ್ಲಿ ಲಾಭಗಳಿಸುವ ಬದಲಿಗೆ ಸಯಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸದೇ ಸತತವಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ. ಅನ್ನದಾತ ರೈತನ ಮೊಗದಲ್ಲಿ ಮಂದಹಾಸ ಮೂಡಿಸಲು, ಬೇಸಾಯದಿಂದ ದೂರ ಸರಿಯುತ್ತಿರುವ ಯುವಜನಾಂಗವನ್ನು ಮರಳಿ ಬೇಸಾಯದತ್ತ ಆಕರ್ಷಿಸಲು ಸಮಗ್ರವಾದ ಕೃಷಿಪದ್ಧತಿಯ ಬಗ್ಗೆ …

Read More »

ವಿಶೇಷ ಪೂಜೆಯಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ ದೇವಿ.

ಆಷಾಢ ಮಾಸದ ಸಂಭ್ರಮದಲ್ಲಿ ಯುವತಿಯರುಚಾಮರಾಜನಗರ:ಆಷಾಢ ಮಾಸ ಬಂತೆಂದ್ರೆ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ. ಒಂದೆಡೆ ನವವಿವಾಹಿತ ಹೆಣ್ಣು ಮಗಳು ತಿಂಗಳ ಕಾಲ ತವರು ಮನೆಯಲ್ಲೆ ಇರುವ ಖುಷಿಯಾದ್ರೆ, ಇದೇ ಮಾಸದಲ್ಲಿ ಬರುವ ಆಷಾಢ ಶುಕ್ರವಾರದಂದು ಮುತ್ತೆದೆ ಸ್ಥಾನ ಗಟ್ಟಿಯಾಗಲೆಂದು ಚಾಮುಂಡೇಶ್ವರಿಗೆ ಪ್ರಾರ್ಥಿಸುವ ಸುವರ್ಣಾವಕಾಶ ಮತ್ತೊಂದೆಡೆ. ಈ ಹಿನ್ನೆಲೆಯಲ್ಲಿ ಇಂದು ಚಾಮರಾಜನಗರದ ಚಾಮರಾಜೇಶ್ವರ ಸನ್ನಿಧಿಯಲ್ಲೂ ಆಷಾಢ ಶುಕ್ರವಾರದ ವಿಶೇಷ ಪೂಜೆ ನಡೆಯಿತು. ಈ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.ಆಷಾಢ …

Read More »