Breaking News

admin

ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ.

ಮಂಡ್ಯ: ಮದ್ದೂರು ಕೆರೆ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ 14 ಹಳ್ಳಿಗಳಿಗೆ ನೀರು‌ ಒದಗಿಸಲು ಮದ್ದೂರು ಕೆರೆಯನ್ನು ಬಳಸಿ ಕೆರೆಯ ಸ್ವರೂಪವನ್ನು ಹಾಳುಗೆಡುವಿದ ಸರ್ಕಾರದ ನೀತಿಯನ್ನು ಖಂಡಿಸಿ ಇಂದು ಪ್ರತಿಭಟನೆ ಕೈಗೊಳ್ಳಲಾಯಿತು.ಮದ್ದೂರು ತಾಲೂಕಿನ ದೇಶಹಳ್ಳಿ,ಚಾಮನಹಳ್ಳಿ,ಶಿವಪುರ,ಮದ್ದೂರು,ಚನ್ನೇಗೌಡನದೊಡ್ಡಿ,ಗೊರವನಹಳ್ಳಿ,ಚನ್ನಸಂದ್ರ,ವೈದ್ಯನಾಥಪುರ,ನಗರೆಕೆರೆ,ಸೋಂಪುರ,ಮಾಲಗಾರನಹಳ್ಳಿ,ಅಜ್ಜಹಳ್ಳಿ,ಉಪ್ಪಿನಕೆರೆ,ತೊರೆಚಾಕನಹಳ್ಳಿ, ಇನ್ನು ಹಲವು ಗ್ರಾಮಗಳ ರೈತರು ತಮ್ಮ ಬೆಳೆಗಳಿಗೆ ಆಶ್ರಯಿಸಿದ್ದ ಮದ್ದೂರು ಕರೆಯ ನೀರನ್ನು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಹೆಸರಿನಲ್ಲಿ ಕೆರೆಯ ಸ್ವರುಪವನ್ನ ಕೆಡಿಸಿ ಕೆರೆ ಅಚ್ಚುಕಟ್ಟು ವ್ಯಾಪ್ತಿಯ 14 ಹಳ್ಳಿಗಳ ರೈತರ ಬದುಕನ್ನು …

Read More »

ಲಾರಿ ಬಸ್ ನಡುವೆ ಡಿಕ್ಕಿ: ಇಬ್ಬರ ಸ್ಥಿತಿ ಚಿಂತಾಜನಕ

ಧಾರವಾಡ: ಬಸ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎಂಟು ಜನರು ಗಂಭೀರ ಗಾಯ, ಇಬ್ಬರ ಸ್ಥಿತಿ ಚಿಂತಾಜನಕಗೊಂಡ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4 ಬಳಿ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಬೆಳಗಾವಿಗೆ ಹೊರಟ್ಟಿದ್ದ ಲಾರಿಗೆ ಗೋಕಾಕ್ ದಿಂದ ಹುಬ್ಬಳ್ಳಿ ಮಾರ್ಗದ ಮೂಲಕ ಹಾನಗಲ್ ಗೆ ಹೊರಟ್ಟಿದ್ದ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಎಂಟು ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರು ಸ್ಥಿತಿ ಗಂಭೀರವಾಗಿದೆ. ಇನ್ನೂ ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು …

Read More »

ಚಿತ್ರದುರ್ಗದ ನೂತನ ಜಿಲ್ಲಾಧಿಕಾರಿಯಾಗಿ ಗಿರೀಶ ನೇಮಕ.

ಚಿತ್ರದುರ್ಗ: ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್. ವಿನೋತ್ ಪ್ರಿಯ ಇವರನ್ನು ವರ್ಗಾವಣೆಗೊಳಿಸಿ ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿದ್ದ ಆರ್. ಗಿರೀಶ್ ಇವರನ್ನು ಚಿತ್ರದುರ್ಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.ಇವರು ಆರ್. ವಿನೋತ್ ಪ್ರಿಯ ಅವರಿಗಿಂತ ಮೊದಲು ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.ಆರ್. ವಿನೋತ್ ಪ್ರಿಯ ಇವರನ್ನು ಕಾರ್ಮಿಕ ಇಲಾಖೆಯ ಆಯುಕ್ತರನ್ನಾಗಿ ನೇಮಿಸಲಾಗಿದೆ.

Read More »

ಕೊನೆಗೂ ಯಶಸ್ವಿಯಾಗಿ ಚಿರತೆ ಬೋನಿಗೆ ಸೇರಿಸಿದ ಅರಣ್ಯ ಇಲಾಖೆ

ಚಿಕ್ಕಬಳ್ಳಾಪುರ: ಬೆ ಳಂಬೆಳಗೆ ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರ ಕ್ಷೇತ್ರದಲ್ಲಿ ನಡೆದಿದೆ.ಜಿಲ್ಲೆಯ ಪ್ರಮುಖ ಯಾತ್ರ ಸ್ಥಳವಾದ ಕೈವಾರ ಬೆಟ್ಟದ ಮೇಲೆ ಕಳೆದ ಎರಡು ತಿಂಗಳ ಹಿಂದೆ ಚಿರತೆ ಪ್ರತ್ಯಕ್ಷವಾಗಿದ್ದು ಪ್ರವಾಸಿಗರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದರು. ಇನ್ನೂ ಚಿರತೆಯನ್ನು ಸೆರೆಹಿಡಿಯುವುದರಲ್ಲಿ ಅರಣ್ಯ ಇಲಾಖೆಯೂ ಸಹ ಸಾಕಷ್ಟು ಶ್ರಮವಹಿಸಿದ್ದು ಚಿರತೆ ಮಾತ್ರ ಕಣ್ಣಾಮುಚ್ಚಾಲೇ ಆಟವಾಡಿ ತಪ್ಪಿಸಿಕೊಳ್ಳುತ್ತಿತ್ತು. ಇದುವರೆಗೂ ಎರಡು ಬಾರೀ ಪ್ರತ್ಯಕ್ಷವಾದ ಚಿರತೆ ಪ್ರವಾಸಿಗರು ಸೇರಿದಂತೆ …

Read More »

ಮೃತ ರೈತ ಕುಟುಂಬಕ್ಕೆ ಒಂದು ಲಕ್ಷ ಪರಿಹಾರಧನ ವಿತರಣೆ

ಮಂಡ್ಯ: ಕಳೆದ ಒಂದು ತಿಂಗಳ ಹಿಂದೆ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸೊಳ್ಳೇಪುರ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತ ನರಸೇಗೌಡ ಎತ್ತಿನಗಾಡಿ ಮಗುಚಿ ಮೃತಪಟ್ಟದ್ದ ಹಿನ್ನೆಲೆಯಲ್ಲಿ ಇಂದು ಕೃಷ್ಣರಾಜಪೇಟೆ ಎ ಪಿ ಎಂ ಸಿ ನಿರ್ದೇಶಕ ರಾದ ಐನೋರಹಳ್ಳಿ ಮಲ್ಲೇಶ್ ಹಾಗೂ ಮಹೇಶ್ವರಿ ನರಸೇಗೌಡ ರವರು ಮೃತ ಕುಟುಂಬಕ್ಕೆ ರೈತ ಸಂಜೀವಿನಿ ಯೋಜನೆಯಡಿ ಮೃತ ಕುಟುಂಬದ ಮನೆಗೆ ಬೇಟಿ ನೀಡಿ ಮೃತನ ಪತ್ನಿ ಚಂದ್ರಮ್ಮ ರವರಿಗೆ ಒಂದು ಲಕ್ಷ …

Read More »

ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಮಾವೇಶ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಸೋಲಿನ ಪರಾಮರ್ಶೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಮಾವೇಶ ನಡೆಯಿತು.ಚಾಮರಾಜನಗರದ ಅಂಬೇಡ್ಕರ್ ಭವನದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಪರಾಮರ್ಶೆ ಮತ್ತು ಪಕ್ಷದ ಕಾರ್ಯಕರ್ತರ ಕೃತಜ್ನತಾ ಸಮಾವೇಶವನ್ನ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.ಕಾರ್ಯಕ್ರಮದ ಕೇಂದ್ರ ಬಿಂದು ಮಾಜಿ ಸಂಸದ ಆರ್.ದೃವನಾರಾಯಣ್ ಮೊದಲಿಗೆ ಮತದಾರರು ಮತ್ತು ಪಕ್ಷದ ಕಾರ್ಯಕರ್ತರಿಗೆ ಕೃತಜ್ನತೆಗಳನ್ನ ಅರ್ಪಿಸಿದರು. ಸೋಲಿನಿಂದ …

Read More »

ಎಲ್ಲೋ ಹುಟ್ಟಿ.. ಎಲ್ಲೋ ಬೆಳೆದು.. ಯಾರ ಹೆಗಲ ಮೇಲೆ ಅಂತಿಮ ಪಯಣ..

ಬಾಗಲೂರು: ಇಂದಿನ ದಿನಮಾನದಲ್ಲಿ ಕುಟುಂಬದವರನ್ನೇ ಕಡೆಗಣಿಸುವಂತ ಜನರು ಇದ್ದಾರೆ. ಅಂತವರ ನಡುವೆ ಅಪರಿಚಿತ ವ್ಯಕ್ತಿಯ ಶವಕ್ಕೆ ಅಂತ್ಯಸಂಸ್ಕಾರ ಕಾರ್ಯ ನೆರವೇರಿಸುವ ಮೂಲಕ ಬಾಗಲೂರು ಪೋಲೀಸರು ಮಾನವೀಯತೆ ಮೆರೆದಿದ್ದಾರೆ.ಬಾಗಲೂರು ಪೊಲೀಸ್ ಠಾಣೆಯ ಯುಡಿಆರ್ ನಂ 28/2019 ಕಲಂ 174 ಸಿ.ಆರ್.ಪಿ.ಸಿ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹವನ್ನು ಬಾಗಲೂರು ಪೊಲೀಸರು ಅಂತಿಮ ಸಂಸ್ಕಾರ ನೆರವೇರಿಸಿದರು. ಮಾನವೀಯತೆ ಎತ್ತಿಹಿಡಿದಿರುವ ನಮ್ಮ ಕರ್ನಾಟಕ ಪೊಲೀಸ್ ರವರ ಈ ಕಾರ್ಯಕ್ಕೆ ಹ್ಯಾಟ್ಸಪ್ ಹೇಳಲೇಬೇಕು.

Read More »

ಅವಲಹಳ್ಳಿ ಡ್ಯಾಂ ಗೆ ನುಗ್ಗಿದ ಕಾಡಾನೆಗಳು.

ಆನೇಕಲ್: ಕಾಡಿನಿಂದ ಆಹಾರ ಹಾಗೂ ನೀರನ್ನು ಅರಸಿ ಕರ್ನಾಟಕ ತಮಿಳುನಾಡು ಗಡಿ ಆನೇಕಲ್ ಸಮೀಪದ ಅವಲಹಳ್ಳಿ ಡ್ಯಾಂಗೆಕಾಡಾನೆಗಳು ಲಗ್ಗೆ ಇಟ್ಟಿರುವ ಪ್ರಕರಣ ನಡೆದಿದೆ.ರಾತ್ರಿ ವೇಳೆ ಎರಡು ಕಾಡಾನೆಗಳು‌ ಗ್ರಾಮದಲ್ಲಿ ಕಾಣಿಸಿಕೊಂಡಿವೆ. ಹಾಗೂ ಡ್ಯಾಂನಲ್ಲೆ ಕಾಲ ಕಳೆಯುತ್ತಾ ವಿಶ್ರಾಂತಿ ಪಡೆಯುತ್ತಿವೆ.‌ಕಾಡಾನೆಗಳು ಕೋಲಾರ ದಿಂದ‌ ತಮಿಳುನಾಡಿನ ಭಾಗಕ್ಕೆ ಬಂದಿರಬಹುದು ಎನ್ನಲಾಗಿದೆ.ಈ ವೇಳೆ ಗ್ರಾಮದ ಜನರು ಆನೆಗಳನ್ನು ನೋಡಲು ಮುಗಿಬಿದ್ದಿರುವ ದೃಶ್ಯ ಕಂಡು ಬಂದಿತು.ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಿಬ್ಬಂದಿಸಂಜೆಯ ವೇಳೆಗೆ ಕಾಡಿಗೆ ಓಡಿಸುವದಾಗಿ …

Read More »

ಎಸ್.ಎಲ್.ವಿ ಫರ್ನೀಚರ್ಸ್ ಮಳಿಗೆಗೆ ಚಾಲನೆ ನೀಡಿದ ಕೆ.ಎಸ್.ಸಂತೋಷ್

ಮಂಡ್ಯ: ಮಂಡ್ಯ ಪಟ್ಟಣದ ಚನ್ನರಾಯಪಟ್ಟಣ ಮುಖ್ಯ ರಸ್ತೆಯಲ್ಲಿ ನೂತನವಾಗಿ ಆರಂಭವಾದ ಎಸ್.ಎಲ್.ವಿ ಫರ್ನೀಚರ್ಸ್ ಮತ್ತು ಇಂಟೀರಿಯರ್ ಮಾರಾಟ ಮಳಿಗೆಯನ್ನು ಪುರಸಭೆಯ ಸದಸ್ಯ ಕೆ.ಎಸ್.ಸಂತೋಷ್ ಕುಮಾರ್ ಉದ್ಘಾಟಿಸಿದರು. ಕೃಷ್ಣರಾಜಪೇಟೆ ತಾಲ್ಲೂಕಿನ ಜನತೆಗೆ ಅನುಕೂಲವಾಗಲಿರುವ ಎಸ್.ಎಲ್.ವಿ ಫರ್ನೀಚರ್ಸ್ ಮತ್ತು ಇಂಟೀರಿಯರ್ ಮಾರಾಟ ಮಳಿಗೆಯಲ್ಲಿ ಸೋಫಾಸೆಟ್ ಗಳು, ಡೈನಿಂಗ್ ಟೇಬಲ್ ಗಳು, ಡ್ರೆಸ್ಸಿಂಗ್ ಟೇಬಲ್, ಕ್ಯಾಶ್ ಟೇಬಲ್, ಟಿವಿ ಸ್ಟ್ಯಾಂಡ್, ಮಂಚಗಳು ಸೇರಿದಂತೆ ಅತ್ಯಾಧುನಿಕ ಶೈಲಿಯ ಗೃಹೋಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು ಸಾರ್ವಜನಿಕರು …

Read More »

ಸಾರಿಗೆ ಇಲಾಖೆ ಖಜಾನೆ ರಕ್ಷಕ ಶಂಕರ ಅವರಿಗೆ ಬಿಳ್ಕೊಡುಗೆ.

ಮಂಡ್ಯ: ಜಿಲ್ಲೆ ನಾಗಮಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಖಜಾನೆ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಂಕರ ಕಲ್ಲುದೇವನಹಳ್ಳಿ ಅವರು ವಯೋ ನಿವೃತ್ತಿ ಹೊಂದಿದ ಪ್ರಯುಕ್ತ ಶಂಕರ ಅವರಿಗೆ ಸನ್ಮಾನಿಸಿ ಅಭಿನಂದಿಸುವ ಮೂಲಕ ಬಿಳ್ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರು, ಸಾರ್ವಜನಿಕರು ,ಎಲ್ಲಾ ಚಾಲನ ತರಬೇತಿ ಶಾಲೆಯ ಮುಖ್ಯಸ್ಥರು , ವಾಹನ ಬಳಕೆದಾರರ ಪ್ರತಿನಿಧಿಗಳು, ವಾಹನ ಮಾರಾಟ ಮಳಿಗೆಯ ಮುಖ್ಯಸ್ಥರು ಹಾಜರಿದ್ದು ಶುಭ ಹಾರೈಸಿದರು .

Read More »