ಅಮರಾವತಿ:ನಾಯಿಗಳಿಗೆ ಇರುವ ನಿಯತ್ತು, ಸ್ವಾಮಿನಿಷ್ಠೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಇಂತಹದ್ದೇ ಒಂದು ಘಟನೆ ಇದೀಗ ನೆರೆಯ ಆಂಧ್ರ ಪ್ರದೇಶದಲ್ಲಿ ನಡೆದಿದೆ. ತನ್ನ ಪ್ರೀತಿಯ ಮಾಲಕಿ ಜೊತೆ ಒಡನಾಟ ಹೊಂದಿದ್ದ ನಾಯಿ, ಆಕೆ ಸತ್ತಿರುವುದು ತಿಳಿಯದೇ ಅವಳ ಬರುವಿಕೆಗೆ ಚಪ್ಪಲಿ ಬಳಿಯೇ ರಾತ್ರಿಯೆಲ್ಲಾ ಕಾದು ಕುಳಿತ ಮನಕಲಕುವ ಘಟನೆ ನಡೆದಿದೆ. ಅಂಬೇಡ್ಕರ್ ಕೊನಸೀಮಾ ಜಿಲ್ಲೆಯಲ್ಲಿ ಕಳೆದ ಭಾನುವಾರ 22 ವರ್ಷದ ಯುವತಿ ತನ್ನ ಮುದ್ದು ನಾಯಿ ಜೊತೆ ವಾಕಿಂಗ್ ಹೋಗಿದ್ದಳು. ಸೂರ್ಯಾಸ್ತದ …
Read More »ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ.
ಮೈಸೂರು :ಮೈಸೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೆ ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ಪಿರಿಯಾಪಟ್ಟಣ ಬಳಿಯ ಕಂಪಲಾಪುರ ಗ್ರಾಮದ ಬಳಿ ಇಂದು ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸೌದೆ ತುಂಬಿಕೊಂಡು ನಿಂತಿದ್ದ ಟ್ರಾಕ್ಟರ್ಗೆ ಕಂಪಲಾಪುರ ಬಳಿ ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮುದಾಸಿರ್, ಮುಜಾಹಿದ್ ಹಾಗೂ ಅಹ್ಮದ್ ಪಾಷಾ …
Read More »ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ನಿಧನ.
ಬೆಂಗಳೂರು:ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನವಾಗಿದ್ದು, ಮೃತದೇಹವನ್ನು ಇಂದಿರಾ ನಗರದಲ್ಲಿರುವ ಅವರ ಸ್ನೇಹಿತ ಹಾಗು ಕೇರಳ ಕಾಂಗ್ರೆಸ್ ಮುಖಂಡರಾಗಿದ್ದ ದಿವಂಗತ ಟಿ.ಜಾನ್ ಮನೆಗೆ ಕೊಂಡೊಯ್ಯಲಾಗಿದೆ. ಇಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪಕ್ಷದ ಹಿರಿಯ ನಾಯಕನ ಮೃತದೇಹವನ್ನು ಹುಟ್ಟೂರಿಗೆ ರವಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದಾರೆ. ಬೆಳಿಗ್ಗೆ 11 ಗಂಟೆಯ ನಂತರ ಹೆಚ್ಎಎಲ್ ಏರ್ಪೋರ್ಟ್ನಿಂದ ತಿರುವನಂತಪುರಂಗೆ ಮೃತದೇಹ ರವಾನೆಯಾಗಲಿದೆ.ಇಂದಿರಾನಗರದ …
Read More »ಭಾರತೀಯ ಸ್ಟಾರ್ಟಪ್ ಉದ್ಯಮಕ್ಕೆ ಬರುತ್ತಿದ್ದ ಫಂಡಿಂಗ್ ಕುಸಿತ
ನವದೆಹಲಿ : ಭಾರತೀಯ ಸ್ಟಾರ್ಟಪ್ ಉದ್ಯಮಕ್ಕೆ ಬರುತ್ತಿದ್ದ ಫಂಡಿಂಗ್ ಹಣಕಾಸು ವರ್ಷ 2023ರಲ್ಲಿ ಶೇ 70ರಷ್ಟು ಕುಸಿತ ಕಂಡು 15 ಶತಕೋಟಿ ಡಾಲರ್ಗೆ ತಲುಪಿದೆ. ಕಳೆದ ಹಣಕಾಸು ವರ್ಷ 2022ರಲ್ಲಿ ಸ್ಟಾರ್ಟಪ್ ಉದ್ಯಮದ ಫಂಡಿಂಗ್ ಗರಿಷ್ಠ ಮಟ್ಟಕ್ಕೇರಿ 50 ಶತಕೋಟಿ ಡಾಲರ್ಗೆ ತಲುಪಿತ್ತು. ಮಾರುಕಟ್ಟೆ ಸಂಶೋಧನಾ ಸಂಸ್ಥೆ ರೆಡ್ಸೀರ್ನ ವರದಿಯ ಪ್ರಕಾರ, ಬಂಡವಾಳ ಕುಸಿಯುತ್ತಿದ್ದಂತೆ, ಸ್ಟಾರ್ಟ್ಪ್ಗಳು ತಮ್ಮ ಖರ್ಚು ವೆಚ್ಚ ಕಡಿಮೆ ಮಾಡುತ್ತಿವೆ ಮತ್ತು ಲಾಭದಾಯಕತೆಯ ಹಾದಿಯನ್ನು ತ್ವರಿತಗೊಳಿಸುತ್ತಿವೆ. ಬಂಡವಾಳ …
Read More »ಐಎಎಸ್ ಅಧಿಕಾರಿ ವಿರುದ್ದ ವರದಕ್ಷಿಣೆ ಆರೋಪ.
ಬೆಂಗಳೂರು: ಪತ್ನಿ ಮತ್ತು ಆಕೆಯ ಕುಟುಂಬಸ್ಥರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ ಮಾನಸಿಕ ಕಿರುಕುಳ ನೀಡುತ್ತಿರುವ ಆರೋಪದಡಿ ಐಎಎಸ್ ಅಧಿಕಾರಿಯೊಬ್ಬರ ವಿರುದ್ದ ಕೊಡಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಕೊಡಗು ಜಿಲ್ಲಾ ಪಂಚಾಯತ್ನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ವಿರುದ್ಧ ಅವರ ಪತ್ನಿ ಡಾ. ವಂದನಾ ಈ ಆರೋಪ ಮಾಡಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಟಿ ಆರ್ ಸುರೇಶ್ ಅವರ ಪುತ್ರಿ …
Read More »ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಟ್ರೀ ಪಾರ್ಕ್ಗಳ ನಿರ್ಮಾಣ:ಈಶ್ವರ ಖಂಡ್ರೆ
ಮೈಸೂರು:ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಸಸ್ಯೋದ್ಯಾನ (ಟ್ರೀ ಪಾರ್ಕ್) ಇಲ್ಲವೋ ಅಲ್ಲಿ ಸಾಲುಮರದ ತಿಮ್ಮಕ್ಕ ಟ್ರೀಪಾರ್ಕ್ಗಳನ್ನು ನಿರ್ಮಿಸುವಂತೆ ರಾಜ್ಯ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮೈಸೂರಿನ ಅರಣ್ಯ ಭವನದಲ್ಲಿ ಭಾನುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಇಂದಿನ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯ ತಡೆಗೆ ವೃಕ್ಷ ಸಂಪತ್ತಿನ ಹೆಚ್ಚಳ ಅನಿವಾರ್ಯ ಎಂದರು. …
Read More »ಚಪ್ಪಲಿ ಕಳುವಾಗಿದೆ ಎಂದು ದೂರು ನಿಡಿದ ಭೂಪ.
ಬೆಂಗಳೂರು : ಇದನ್ನು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಅನ್ನಬೇಕೋ, ಅಥವಾ ಪೊಲೀಸ್ ಸಿಬ್ಬಂದಿಯ ಅಸಹಾಯಕತೆ ಅನ್ನಬೇಕೋ ಗೊತ್ತಿಲ್ಲ. ಸಂಕಷ್ಟದಲ್ಲಿರುವವರಿಗೆ ತಕ್ಷಣ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಲು ಅನುಕೂಲವಾಗಲಿ ಎಂದು ಚಾಲ್ತಿಯಲ್ಲಿರುವ 112 ಸಹಾಯವಾಣಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಚಪ್ಪಲಿ ಕಳೆದು ಹೋಗಿದೆ. ಹುಡುಕಿಕೊಡಿ ಎಂದು ದೂರು ನೀಡಿರುವ ವಿಚಿತ್ರ ಘಟನೆ ತಡರಾತ್ರಿ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ತಡರಾತ್ರಿ ಪೊಲೀಸ್ ನಿಯಂತ್ರಣ ಕೋಣೆಯ ಸಹಾಯವಾಣಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ …
Read More »ನಗರದ ಖಾಸಗಿ ಹೊಟೆಲನಲ್ಲಿ ಕಾಂಗ್ರೆಸ್ ರಾಷ್ರಿಯ ಪ್ರತಿಪಕ್ಷ ಸಭೆ.
ಬೆಂಗಳೂರು: ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಕಾಂಗ್ರೆಸ್ ನೇತೃತ್ವದಲ್ಲಿ ರಾಷ್ಟ್ರೀಯ ಪ್ರತಿಪಕ್ಷಗಳ ಎರಡನೇ ಹಂತದ ಸಭೆ ನಡೆಯಲಿದೆ. ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ, ಸಿದ್ಧತಾ ಕಾರ್ಯಗಳ ಪರಿಶೀಲನೆ ನಡೆಸಿದ್ದಾರೆ. ಯಾರೆಲ್ಲ ಭಾಗಿ?: ಕಾಂಗ್ರೆಸ್, ಎಎಪಿ, ಟಿಎಂಸಿ, ಡಿಎಂಕೆ, …
Read More »ಪ್ಲೆಕ್ಸ್ ಬ್ಯಾನರ್ ಹರಿದು ಹಾಕಿದ ಕನ್ನಡ ಪರ ಸಂಘಟನೆಗಳು.
ಬೆಂಗಳೂರು: ರಾಷ್ಟ್ರೀಯ ಮಟ್ಟದ ಮಹಾಘಟ್ ಬಂಧನ್ ನಾಯಕರು ಸೋಮವಾರದಿಂದ ಎರಡು ದಿನ ನಗರದಲ್ಲಿ ಮಹತ್ವದ ಸಭೆ ನಡೆಸಲಿದ್ದು, ಇದಕ್ಕಾಗಿ ಅಳವಡಿಸಿದ್ದ ಸ್ವಾಗತ ಕೋರುವ ಫ್ಲಾಗ್ ಹಾಗೂ ಬ್ಯಾನರ್ಗಳನ್ನ ಕನ್ನಡ ಪರ ಸಂಘಟನೆಗಳು ಹರಿದು ಹಾಕಿವೆ. ದೇಶದ ವಿವಿಧ ರಾಜ್ಯಗಳ ಬಿಜೆಪಿಯೇತರ ಪಕ್ಷಗಳು ನಾಳಿನ ಸಭೆಯಲ್ಲಿ ಭಾಗಿಯಾಗಲಿದ್ದು, ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಕರೆಗೆ ಬೆಂಬಲಿಸಿ ಹಲವು ನಾಯಕರು ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಿವಿದ ರಾಜ್ಯಗಳ ಹಾಲಿ ಹಾಗೂ ಮಾಜಿ …
Read More »ಮಹಿಳೆಯರಿಗೆ ತಂತ್ರಜ್ಞಾನ ದ ಸ್ಮಾರ್ಟ್ ಕಾರ್ಡ್ ನೀಡಲು ರಾಜ್ಯ ಸರ್ಕಾರ ಚಿಂತನೆ
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಭಾರಿ ಸ್ಪಂದನೆ ದೊರೆಯುತ್ತಿದ್ದು, ಈ ನಿಟ್ಟಿನಲ್ಲಿ ನಾಲ್ಕು ನಿಗಮದ ಬಸ್ಗಳಲ್ಲಿ ಸಂಚರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಮಹಿಳೆಯರ ಉಚಿತ ಪ್ರಯಾಣದ ವೇಳೆ ಪ್ರತಿ ಬಾರಿಯ ಕಿರಿಕಿರಿ ತಪ್ಪಿಸುವ ಸಲುವಾಗಿ ಟ್ಯಾಪ್ ಆ್ಯಂಡ್ ಟ್ರಾವೆಲ್ ತಂತ್ರಜ್ಞಾನದ ಸ್ಮಾರ್ಟ್ ಕಾರ್ಡ್ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿಂತಿಸಿದೆ. ಸದ್ಯ ಬಸ್ಗಳಲ್ಲಿ ಮಹಿಳೆಯರು ಆಧಾರ್ ಕಾರ್ಡ್ ಮತ್ತು ಇತರೆ ದಾಖಲೆಗಳನ್ನು ತೋರಿಸಿ ಉಚಿತವಾಗಿ ಸಂಚರಿಸುತ್ತಿದ್ದಾರೆ. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





