ಹುಬ್ಬಳ್ಳಿ: ಗಣಿ ಧಣಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ವಾಣಿಜ್ಯನಗರಿ ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರ ಮಠಕ್ಕೆ ಭೇಟಿ ನೀಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಈಗಾಗಲೇ ರಾಜಕೀಯ ಚಟುವಟಿಕೆಗಳಿಗೆ ಹೊಸ ಆಯಾಮವನ್ನು ಕಲ್ಪಿಸುವ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಂಡಿರುವ ಗಾಲಿ ಜನಾರ್ದನ ರೆಡ್ಡಿ ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢರ ಹಾಗೂ ಗುರುನಾಥರೂಢರ ದರ್ಶನ ಪಡೆಯುವ ಮೂಲಕ ಹೊಸ ಸಂಚಲನ ಸೃಷ್ಟಿಸುವಂತೆ ಮಾಡಿದ್ದಾರೆ. ಇನ್ನೂ ಸೋಮವಾರ ದಿನವೇ ಸಿದ್ಧಾರೂಢರ ಮಠಕ್ಕೆ ತಮ್ಮ …
Read More »ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿಯ ಮೇಲೆ ಹಲ್ಲೆ : ಯುವಕ ಸಾವು
ಗದಗ: ಅತಿಥಿ ಶಿಕ್ಷಕನೊಬ್ಬ ವಿದ್ಯಾರ್ಥಿಯ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. ಹದ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ ಎಂಬಾತ 10 ವರ್ಷದ ವಿದ್ಯಾರ್ಥಿ ಭರತ್ ಮೇಲೆ ಹಲ್ಲೆ ನಡೆಸಿದ್ದಾನೆ. ಶಿಕ್ಷಕನಿಂದ ಏಟು ತಿಂದ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಕೊನೆಯುಸಿರೆಳೆದಿದ್ದಾನೆ …
Read More »ಒಳಚರಂಡಿ ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯೆ ಸುನಿತಾ ಪ್ರಕಾಶ್ ಬುರಬುರೆ ಚಾಲನೆ
ಹುಬ್ಬಳ್ಳಿ : ಇಲ್ಲಿಯ ವಾರ್ಡ್ ನಂಬರ್ 65 ರಲ್ಲಿ ಬರುವ ವಿಕ್ಟೋರಿಯಾ ರೋಡ ಸಾಲ ಓಣಿ ಮತ್ತು ಹೊಸ ಮೇದಾರ್ ಓಣಿ ಬಂಬು ಮಾರ್ಕೆಟ್ ನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅನುದಾನದ ಅಡಿಯಲ್ಲಿ 10.50 ಲಕ್ಷ.ದ ಒಳಚರಂಡಿ ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯೆ ಸುನಿತಾ ಪ್ರಕಾಶ್ ಬುರಬುರೆ ಚಾಲನೆ ನೀಡಿದರು . ಈ ಸಂದರ್ಭದಲ್ಲಿ , ಬಸವರಾಜ್ ಕುಂದಗೋಳ . ಮಹಾಬಲೇಶ್ವರ ಕುರುಡಿಕೆರೆ , ಪ್ರಕಾಶ ಬುರಬುರೆ, ಶ್ರೀನಿವಾಸ್ …
Read More »ರೈತರ ಆರೋಗ್ಯ ಮತ್ತು ಸಬಲತೆಗೆ ಹೈನುಗಾರಿಕೆ ಆರ್ಥಿಕ ಸಹಕಾರಿಯಾಗಿದೆ : ಶಾಸಕ ಸಿ.ಎಂ. ನಿಂಬಣ್ಣವರ
ಕಲಘಟಗಿ : ರೈತರ ಆರೋಗ್ಯ ಮತ್ತು ಸಬಲತೆಗೆ ಹೈನುಗಾರಿಕೆ ಆರ್ಥಿಕ ಸಹಕಾರಿಯಾಗಿದೆ. ಹೈನುಗಾರಿಕೆ ಮಾಡಲು ಗ್ರಾಮೀಣ ಸಶಕ್ತರಾಗಿದ್ದು , ಮಹಿಳೆಯರು ವೈಜ್ಞಾನಿಕವಾಗಿ ಹೈನುಗಾರಿಕೆಯನ್ನು ಉದ್ದಿಮೆಯನ್ನಾಗಿ ಸಿಕೊಂಡಲ್ಲಿ ಆರ್ಥಿಕ ಸಬಲೀಕರಣವಾಗಲಿದೆ ಎಂದು ಶಾಸಕ ಸಿ.ಎಂ. ನಿಂಬಣ್ಣವರ ಹೇಳಿದರು. ತಾಲೂಕಿನ ದಾಸ್ತಿಕೊಪ್ಪ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಹಾಲು ಕೇಂದ್ರದ ಕಟ್ಟಡಕ್ಕೆ ಸಂಸ್ಕರಣಾ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಮಾತನಾಡಿ , ದಾಸ್ತಿಕೊಪ್ಪದಲ್ಲಿರುವ ಸಹಕಾರಿ …
Read More »ಏಕಾಏಕಿ ಕೆಲಸದಿಂದ ವಜಾ : ನೌಕರರಿಂದ ಅರೆಬೆತ್ತಲೆ ಪ್ರತಿಭಟನೆ
ಹುಬ್ಬಳ್ಳಿ : ಸುಮಾರು ದಿನಗಳಿಂದ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದ ಗುತ್ತಿಗೆ ಆಧಾರದ ನೌಕರರನ್ನು , ಏಕಾಏಕಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ನೌಕರರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು . ನಗರದ ಚನ್ನಮ್ಮ ವೃತ್ತದಿಂದ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದವರೆಗೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಗುತ್ತಿಗೆ ಆಧಾರದ ಕಾರ್ಮಿಕರು , ಕೂಡಲೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು .
Read More »ಡಿ.20ರಂದು ಬೃಹತ ರೈತ ಪ್ರತಿಭಟನೆ : ಮಾಜಿ ನವಲಗುಂದ ಸಚಿವ ಕೆ .ಎನ್. ಗಡ್ಡಿ
ನವಲಗುಂದ : ಡಿಸೆಂಬರ್ 20 ರಂದು ಮಂಗಳವಾರ ನಗರದ ರೈತ ಭವನದಿಂದ ಬೆಳಿಗ್ಗೆ 11 ಗಂಟೆಗೆ ಬೃಹತ ರೈತ ಪ್ರತಿಭಟನೆ ಹಮ್ಮಿಕೊಂಡಿದ್ದು , ಅಂದಾಜು ಐದು ಸಾವಿರ ರೈತರು ಹಾಗೂ ಜನಸಾಮಾನ್ಯರು ಭಾಗವಹಿಸಲಿದ್ದಾರೆ . ತಾಲೂಕಿನ ಹಾಗೂ ಸುತ್ತಲಿನ ಗ್ರಾಮಗಳಿಗೆ ಮನೆ ಮನೆ ಭೇಟಿ ಮಾಡಿ ಪ್ರತಿಭಟನೆ ಮಾಡಲು ಮನವಿ ಮಾಡಲಾಗಿದೆ ಎಂದು ಮಾಜಿ ನವಲಗುಂದ ಸಚಿವ ಕೆ ಎನ್ ಗಡ್ಡಿ ಹೇಳಿದರು . ಅತಿವೃಷ್ಠಿ ಹಾಗೂ ನೆರೆ ಹಾವಳಿಯಿಂದ …
Read More »ನೀರು ಸರಬರಾಜು ಕಾರ್ಮಿಕರನ್ನು ಪುನರ್ ನೇಮಕಾತಿಗೆ ಆಗ್ರಹಿಸಿ ಪ್ರತಿಭಟನೆ
ಧಾರವಾಡ : ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆಯ ನೀರು ಸರಬರಾಜು ವಿಭಾಗದ 579 ಕಾರ್ಮಿಕರನ್ನು ಪುನರ್ ನೇಮಕಾತಿ ಮಾಡಿಕೊಳ್ಳುವಂತೆ ಹಾಗೂ ಏಳು ತಿಂಗಳ ಸಂಬಳ ತುರ್ತಾಗಿ ಬಿಡುಗಡೆಗೊಳಿಸುವ ಮೂಲಕ ಅವಳಿನಗರದ ಜನತೆಗೆ ಸಮರ್ಪಕ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಕೊರವರ ನೇತೃತ್ವದಲ್ಲಿ ಕಾಮಿ೯ಕರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅಪಿ೯ಸಿದರು. ಹುಬ್ಬಳ್ಳಿ-ಧಾರವಾಡ ಮಹನಾಗರ ಪಾಲಿಕೆಯ ನೀರು ಸರಬರಾಜು ವಿಭಾಗದ 579 ಕಾರ್ಮಿಕರನ್ನು …
Read More »ಫೆಬ್ರವರಿಯಲ್ಲಿ ವಿಶ್ವ ವಿಪ್ರ ಮಹಾಹಬ್ಬ; ಪೂರ್ವ ಸಿದ್ದತಾ ಸಭೆ
ಹುಬ್ಬಳ್ಳಿ: ವಿಶ್ವ ವಿಪ್ರ ಸಮಾವೇಶ-2023 ನ್ನು ಅತ್ಯಂತ ಯಶಸ್ವಿಯಾಗಿ ಹುಬ್ಬಳ್ಳಿಯಲ್ಲಿ, ಮಾಡಲು ವಿಶ್ವ ವಿಪ್ರ ಸೇವಾ ಟ್ರಸ್ಟ್ ಪೂರ್ವ ಸಿದ್ಧತಾ ಸಭೆಯನ್ನು ನಗರದ ವಿದ್ಯಾನಗರದ ಸುಧರ್ಮ ಸಭಾಂಗಣದಲ್ಲಿ ಆಯೋಜಿಸಿತ್ತು. ಈ ಸಭೆಯಲ್ಲಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆ, ತಾಲ್ಲೂಕುಗಳಿಂದ ಪ್ರತಿನಿಧಿಗಳು ಆಗಮಿಸಿ, ಸುಮಾರು 20 ರಿಂದ 25 ಸಾವಿರ ಜನರನ್ನು ಸೇರಿಸಿ ವಿಪ್ರ ಮಹಾ ಸಮಾವೇಶ-2023 ಯಶಸ್ವಿಯಾಗಿ ಫೆಬ್ರುವರಿ ಮೊದಲನೇ ವಾರದಲ್ಲಿ ಹುಬ್ಬಳ್ಳಿಯಲ್ಲಿ ನೆರವೇರಿಸಲು ತೀರ್ಮಾನಿಸಲಾಯಿತು. ಎಲ್ಲ ವೃತ್ತಿಪರರನ್ನು, ಉದ್ಯಮಿಗಳನ್ನು, …
Read More »ಭಾರತೀಯ ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ
ತಮಿಳುನಾಡು: ಡಿಸೆಂಬರ್ 19 ರಿಂದ ಅಂದ್ರೆ, ಇಂದಿನಿಂದ ತಮಿಳುನಾಡಿನಲ್ಲಿ 4 ದಿನಗಳವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಪ್ರಾದೇಶಿಕ ಕೇಂದ್ರವು ಮುನ್ಸೂಚನೆ ನೀಡಿದೆ. IMD ಪ್ರಕಾರ, ತಮಿಳುನಾಡಿನಲ್ಲಿ ಗುಡುಗು ಮತ್ತು ಮಿಂಚು ಸಹಿತ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 21 ರಂದು ತಮಿಳುನಾಡಿನ ತೂತುಕುಡಿ, ರಾಮನಾಥಪುರಂ, ಪುದುಕ್ಕೊಟ್ಟೈ, ಶಿವಗಂಗಾ, ತಂಜಾವೂರು, ತಿರುವರೂರು, ನಾಗಪಟ್ಟಿಣಂ, ಮೈಲಾಡುತುರೈ ಮತ್ತು ತಮಿಳುನಾಡಿನ ಕಡಲೂರು ಮತ್ತು ಕಾರೈಕಲ್ …
Read More »2 ಬಾರಿ ಸಿಎಂ ಸ್ಥಾನದ ಅವಕಾಶ ಕೈತಪ್ಪಿದ್ದು, ಈ ಬಾರಿ ಅದೃಷ್ಟವಿದ್ದರೆ ಸಿಎಂ ಆಗಬಹುದು : ಡಾ : ಪರಮೇಶ್ವರ್
ಮಧುಗಿರಿ: ನಾನೊಬ್ಬ ವಿದ್ಯಾವಂತ ಕುಟುಂಬ ದಿಂದ ಬಂದವನು ಹಾಗೂ 30 ವರ್ಷಗಳಿಂದ ಜನಸೇವೆ ಯಲ್ಲಿದ್ದೇನೆ. 2 ಬಾರಿ ಸಿಎಂ ಸ್ಥಾನದ ಅವಕಾಶ ಕೈತಪ್ಪಿದ್ದು, ಈ ಬಾರಿ ಅದೃಷ್ಟವಿದ್ದರೆ ಸಿಎಂ ಆಗಬಹುದು. ಜಾತಿ ಆಧಾರದಲ್ಲಿ ಸಿಎಂ ಮಾಡುವ ಸಂಪ್ರದಾಯ ಕಾಂಗ್ರೆಸ್ನಲ್ಲಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ| ಪರಮೇಶ್ವರ್ ಹೇಳಿದರು. ತಾಲೂಕಿನ ಪುರವರ ಹೋಬಳಿಯ ಶ್ರೀರಾಮಕೃಷ್ಣ ಆಶ್ರಮದಲ್ಲಿ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಅವರು, ಈ ಭಾಗದ ಜನ ನನ್ನ ರಾಜಕೀಯದಲ್ಲಿ ಜತೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





