Breaking News

BigTv News

ಸಮಾಜಸೇವಕ ಡಾ.ರಾಮಕೃಷ್ಣರಾವ್ ನಿಧನ

ಬೆಂಗಳೂರು : ವಯೋಸಹಜ ಕಾಯಿಲೆಯಿಂದ ಕನ್ನಡದ ಮಹಾನ್ ವಿಜ್ಞಾನ ಬರಹಗಾರ, ಪ್ರಾಧ್ಯಾಪಕ, ಸಮಾಜಸೇವಕ ಡಾ.ರಾಮಕೃಷ್ಣರಾವ್(87) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ​ ನಿಧನರಾಗಿದ್ದಾರೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳ ಮುಖ್ಯಸ್ಥರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರ ಸಂದರ್ಶಕ ಪ್ರಾಧ್ಯಾಪಕರಾಗಿ ಬೆಂಗಳೂರು ನಗರದ ಯುವ ವಿದ್ಯಾರ್ಥಿಗಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಬೆಂಗಳೂರು ಆಕಾಶವಾಣಿಯನ್ನು ಬಳಸಿಕೊಂಡು ವಿಜ್ಞಾನ ಪ್ರಸಾರದಲ್ಲಿ ಖಗೋಳಶಾಸ್ತ್ರ,ನಕ್ಷತ್ರಗಳು, ಗ್ರಹಗಳಿಗೆ ಸಂಬಂಧಿಸಿದ ನಕ್ಷತ್ರ ವೀಕ್ಷಣೆ, ಮುಂತಾದ ಕಾರ್ಯಕ್ರಮಗಳನ್ನು ಸತತವಾಗಿ ನಡೆಸಿಕೊಟ್ಟ …

Read More »

ತೆಲುಗು ಬಿಗ್‌ಬಾಸ್ ಬಗ್ಗೆ ಆಕ್ಷೇಪ ಎತ್ತಿದ್ದ ಸಿಪಿಐ ಮುಖಂಡ

ಆಂಧ್ರದ ಸಿಪಿಐ ಮುಖಂಡ ನಾರಾಯಣ ಅವರು ತೆಲುಗು ಬಿಗ್‌ಬಾಸ್ ಬಗ್ಗೆ ಆಕ್ಷೇಪ ಎತ್ತಿದ್ದು, ಒಟ್ಟಾರೆ ಬಿಗ್‌ಬಾಸ್ ಶೋ ಅನ್ನು ರದ್ದು ಮಾಡಬೇಕು ಎಂದಿದ್ದಾರೆ ಅಲ್ಲದೆ, ಬಿಗ್‌ಬಾಸ್ ಮನೆಯನ್ನು ವೇಶ್ಯಾಗೃಹಕ್ಕೆ ಹೋಲಿಸಿ ಮಾತನಾಡಿದ್ದಾರೆ. ಅಣ್ಣ-ತಮ್ಮಂದಿರಲ್ಲದೆ, ಅಕ್ಕ-ತಂಗಿಯರಲ್ಲದ, ಗಂಡ-ಹೆಂಡತಿಯರಲ್ಲದ ಒಟ್ಟಾರೆ ಏನೊಂದೂ ಸಂಬಂಧವಿಲ್ಲದವರನ್ನು ಒಂದು ಮನೆಯಲ್ಲಿ, ಒಂದು ಕೋಣೆಯಲ್ಲಿ ಇರಲು ಬಿಡುವುದು ಅದು ಹೇಗೆ ಸರಿಯಾಗುತ್ತದೆ. ಸಭ್ಯ ಸಮಾಜ ಈ ಶೋ ಅನ್ನು ವಿರೋಧಿಸಬೇಕು ಇದು ಒಳ್ಳೆಯ ಸಂಪ್ರದಾಯ ಅಲ್ಲ. ಅಂಥಹಾ ಮನೆಯೊಳಕ್ಕೆ …

Read More »

ನಿಯಂತ್ರಣ ತಪ್ಪಿ ಕಮರಿಗೆ ಬಿದ್ದ ಆಟೋ : ಚಾಲಕ‌ ಸಾವು

ಉಳ್ಳಾಲ: ಆಟೋ ರಿಕ್ಷಾ ಒಂದು ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾನೀರು ಎಂಬಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಮೃತರನ್ನು ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಬಳಿಯ ನಿವಾಸಿ ಆನಂದ್ ಸಫಲ್ಯ(70) ಎಂದು ಗುರುತಿಸಲಾಗಿದೆ.ಆನಂದ್ ಅವರು ನಿನ್ನೆ ರಾತ್ರಿ ಬಾಡಿಗೆಗೆ‌ ತೆರಳಿ ಹಿಂತಿರುಗುತ್ತಿರುವ ವೇಳೆ ಅವಘಡ ನಡೆದಿದೆ.ರಾತ್ರಿ 8.45 ರ ವೇಳೆಗೆ ಪಾನೀರು ಅಸ್ಸಿಸಿ ಶಾಲೆ …

Read More »

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಆಟೋ ಚಾಲಕರ ಪ್ರತಿಭಟನೆ

ಹುಬ್ಬಳ್ಳಿ : ಧಾರವಾಡದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರ್.ಟಿ.ಓ ಹಾಗೂ ಪೊಲೀಸ್ ಇಲಾಖೆಯ ಜೊತೆ ಆಟೋ ರಿಕ್ಷಾ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಹು-ಧಾ ಅವಳಿ ನಗರದ ಆಟೋ ರಿಕ್ಷಾ ಚಾಲಕರ ಸಂಘಟನೆಗಳ ಪದಾಧಿಕಾರಿಗಳನ್ನು ಕರೆಯದೇ ಏಕಾಏಕಿ ೩೦ ರೂಪಾಯಿ ದರ ನಿಗದಿ ಮಾಡಿದ್ದು ಖಂಡನೀಯ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಮಿನಿ ವಿಧಾನ ಸೌಧದಲ್ಲಿಂದು ತಹಶಿಲ್ದಾರ ಮೂಲಕ …

Read More »

ಮತ್ತೆ ಮುಂದುವರಿದ ರಕ್ಕಸ ಮಳೆ, ಜನಜೀವನ ಅಸ್ತವ್ಯಸ್ತ,ತುಂಬಿ ತುಳುಕುತ್ತಿವೆ ಬೆಣ್ಣೆ, ತುಪ್ಪರಿ ಹಳ್ಳ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯಿತಿದ್ದು ಬೆಣ್ಣೆ ಹಾಗೂ ತುಪ್ಪರಿ ಹಳ್ಳಗಳು ತುಂಬಿ ತುಳುಕಿದರೆ ಜನಜೀವನ ಅಸ್ತವ್ಯಸ್ತವಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ, ಕಲಘಟಗಿ, ಹುಬ್ಬಳ್ಳಿ, ಧಾರವಾಡ, ಕುಂದಗೋಳ, ಅಣ್ಣೆಗೇರಿ ,ಅಳ್ನಾವರ ಸೇರಿದಂತೆ ಎಲ್ಲಡೆ ಭಾರೀ ಮಳೆ ಸುರಿದು ಜಮೀನುಗಳು ಜಲಾವೃತವಾಗುವುದರೊಂದಿಗೆ ಬೆಳೆದ ಪೈರುಗಳು ನಾಶವಾಗಿವೆ. ಬಹುತೇಕ ಕಡೆಗಳಲ್ಲಿ ಮನೆಗಳಿಗೂ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ವ್ಯಾಪಕ ಮಳೆಯಿಂದ ಬೆಣ್ಣೆಹಳ್ಳ …

Read More »

ಕ್ಯೂಆರ್‌ ಕೋಡ್‌ ಕಳುಹಿಸಿ ₹8.98 ಲಕ್ಷ ವಂಚನೆ

ಹುಬ್ಬಳ್ಳಿ: ಮೀಸೋ ಆ್ಯಪ್‌ನಲ್ಲಿ ಲಕ್ಕಿ ಡ್ರಾ ಬಂದಿದೆ ಎಂದು ಲಿಂಗರಾಜ ನಗರದ ಲಕ್ಷ್ಮಿಬಾಯಿ ಅವರ ಮೊಬೈಲ್‌ಗೆ ಸಂದೇಶ ಕಳುಹಿಸಿದ ವ್ಯಕ್ತಿ, ಅವರಿಂದ ₹8.98 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಮೀಸೋ ಆ್ಯಪ್‌ನಲ್ಲಿ ಲಕ್ಷ್ಮಿಬಾಯಿ ತರಕಾರಿ ಖರೀದಿಸುತ್ತಿದ್ದರು. ಅಲ್ಲಿಂದ ಅವರ ಮಾಹಿತಿ ಪಡೆದ ವಂಚಕ, ಆ್ಯಪ್‌ನಿಂದ ₹12 ಲಕ್ಷ ಲಕ್ಕಿ ಡ್ರಾ ಬಂದಿದ್ದು, ಖಾತೆಗೆ ವರ್ಗಾಯಿಸಲು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ನಂಬಿಸಿದ್ದಾನೆ. ನಂತರ, ಅವರ ವಾಟ್ಸ್‌ಆ್ಯಪ್‌ಗೆ ಕ್ಯೂಆರ್‌ ಕೋಡ್‌ ಕಳುಹಿಸಿ ಸ್ಕ್ಯಾನ್‌ ಮಾಡುವಂತೆ …

Read More »

ಪೊಲೀಸ್ ಅಧಿಕಾರಿ ಕರ್ತವ್ಯದ ಜೊತೆಗೆ, ದೊಡ್ಡಾಟ ಪ್ರದರ್ಶನ..!

ಹುಬ್ಬಳ್ಳಿ: ತಮ್ಮ ಬಿಜಿ ಶಡ್ಯೂಲನಲ್ಲಿ ಪೊಲೀಸ್ ಅಧಿಕಾರಿ ಕರ್ತವ್ಯದ ಜೊತೆಗೆ, ದೊಡ್ಡಾಟ ಪ್ರದರ್ಶನ ಮಾಡಿ ಕೆಲಸದ ಜೊತೆಗೆ ದೇಶದ ರಕ್ಷಣೆ ಜೊತೆಗೆ ಸಂಸ್ಕೃತಿ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಕೈಯಲ್ಲಿ ಧನಸ್ಸು ಹಿಡಿದು ಎದುರಾಳಿ ಎದೆ ನಡುಗುವಂತೆ ಸಂಭಾಷಣೆ ನಡೆಸಿರುವ ಇವರು ಜೆ.ಎಮ್.ಕಾಲಿಮಿರ್ಚಿ ಹುಬ್ಬಳ್ಳಿಯ ಗೋಕುಲರಸ್ತೆ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್. ತಮ್ಮ ಶಿಸ್ತು ಬದ್ದ ಕಾರ್ಯದಿಂದ ಅಪರಾಧಿಗಳ ಹೆಡೆಮುರಿ ಕಟ್ಟಿ ಜೈಲಿಗೆ ಅಟ್ಟುವ ಕೆಲಸ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.ಇದೀಗ …

Read More »

ಇಂದು ಮುರುಘಾಶರಣರ ಜಾಮೀನು ಅರ್ಜಿ ವಿಚಾರಣೆ

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾಶರಣರ ಜಾಮೀನು ಅರ್ಜಿ ವಿಚಾರಣೆ ಇಂದು ಎರಡನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ನಲ್ಲಿ ನಡೆಯಲಿದೆ. ಸ್ವಾಮೀಜಿಗೆ ಜೈಲು ವಾಸ ಮುಂದುವರಿಕೆ, ಜಾಮೀನು ಅಥವಾ ಆಸ್ಪತ್ರೆಗೆ ಸ್ಥಳಾಂತರ ಮಾಡುವ ಬಗ್ಗೆ ಇಂದು ನಿರ್ಧಾರವಾಗಲಿದೆ. ಸೆ. 14 ರವರೆಗೆ ಸ್ವಾಮೀಜಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಹೃದಯ ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆಗೆ ಸ್ಥಳಾಂತರಿಸಲು ಸ್ವಾಮೀಜಿ ಪರ ವಕೀಲರು ಮನವಿ ಮಾಡಿದ್ದು, ಸಮೀಪದ …

Read More »

ಇಂದಿನಿಂದ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಪ್ರಾರಂಭ

ಬೆಂಗಳೂರು: ಇಂದಿನಿಂದ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ನಡೆಯಲಿದ್ದು, ಕಲಾಪದಲ್ಲಿ ಸರ್ಕಾರದ ಮೇಲಿನ 40% ಕಮಿಷನ್ ಭ್ರಷ್ಟಾಚಾರ ಆರೋಪ ಪ್ರಸ್ತಾಪಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಇದೇ ವೇಳೆ ಸಿದ್ದರಾಮಯ್ಯ ಅವಧಿಯಲ್ಲಿನ ಅಕ್ರಮಗಳ ಪ್ರಸ್ತಾಪಿಸಲು ಬಿಜೆಪಿ ರೆಡಿಯಾಗಿದೆ. ಅತಿವೃಷ್ಟಿ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಪ್ರಸ್ತಾಪ, ಪಠ್ಯಪುಸ್ತಕ ಪರಿಷ್ಕರಣೆ ಎಡವಟ್ಟು, ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ, ವಿವಿಧೆಡೆ ಹತ್ಯೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಬಿಜೆಪಿ ಸರ್ಕಾರದ ವಿವಿಧ ಲೋಪಗಳನ್ನು …

Read More »

ಹವಾಮಾನ ಇಲಾಖೆಯಿಂದ ಮಹತ್ವದ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರದವರೆಗೆ ಭರ್ಜರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಕೇಂದ್ರ ನೀಡಿದೆ. ಸೋಮವಾರ ಬೆಳಗ್ಗೆ 8.30ರ ತನಕ ಬೆಳಗಾವಿ ಜಿಲ್ಲೆಗೆ ಅತಿ ಭಾರಿ ಮಳೆಯ ಆರೆಂಜ್‌ ಅಲರ್ಟ್‌ ನೀಡಲಾಗಿದೆ. ಉಳಿದಂತೆ ಉತ್ತರ ಒಳನಾಡಿನ ಬೀದರ್‌, ಕಲಬುರಗಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಯೆಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ. ಸೋಮವಾರದಿಂದ ಮಂಗಳವಾರ …

Read More »