Breaking News

BigTv News

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಟಾಪನೆಗೆ ಒತ್ತಾಯಿಸಿ ಮೇಯರ್‌ಗೆ ಗಜಾನನ ಮೂರ್ತಿ ನೀಡಿ ಪ್ರತಿಭಟನೆ

ಹುಬ್ಬಳ್ಳಿ: ನಗರದ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವ ಆಚರಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ, ಗಜಾನನ ಮಹಾ ಮಂಡಳ ಮಹಾನಗರ ಪಾಲಿಕೆಯ ಮಹಾಪೌರರಿಗೆ ಕಚೇರಿ ಎದುರಿಗೆ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದರು. ಮಹಾನಗರ ಪಾಲಿಕೆಗೆ ಸ್ವತಃ ಗಣಪತಿ ಮೂರ್ತಿ ತೆಗೆದುಕೊಂಡು ಬಂದ ಮಂಡಳದ ಸದಸ್ಯರು ಪಾಲಿಕೆ ಮೇಯರ್ ಗೆ ನೀಡಿದರು.ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಪ್ರತಿವರ್ಷ ಮನವಿ ಸಲ್ಲಿಸಲಾಗುತ್ತಿದೆ. ಆದರೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ವರ್ಷವಾದರೂ ಸ್ವತಃ …

Read More »

ವಿಶಿಷ್ಟ ರೀತಿಯ ಪುನೀತ್ ರಾಜ್‍ಕುಮಾರ್ ಗಣಪನ ಮೂಲಕ ನಟನಿಗೆ ಗೌರವ ಶ್ರದ್ಧಾಂಜಲಿ

ಹುಬ್ಬಳ್ಳಿ : ವರನಟ, ಅಪ್ಪಾಜಿ‌ ಹಾಗೂ ಕನ್ನಡದ ಕಣ್ಮನಿ ಎಂದು ಕರುನಾಡ ಇತಿಹಾಸ ಪ್ರಸಿದ್ಧವಾಗಿರುವ ಮೂರನೇ ಪುತ್ರ ಪವರ್ ಸ್ಟಾರ್ ಎಂದು ಜನಮನ್ನಣೆ ಪಡೆದಿದ್ದ ಪುನೀತ್ ರಾಜ್‍ಕುಮಾರ್. ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ 10 ತಿಂಗಳು ಕಳೆಯುತ್ತ ಬಂದರು ಅವರ ನೆನಪುಗಳು ಮಾತ್ರ ಕನ್ನಡಿಗರಿಂದ ಹಾಗೂ ಅಭಿಮಾನಿಗಳಿಂದ ಮಾಸುತ್ತಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನೆನಪು ಸದಾ ಒಂದಿಲ್ಲೊಂದು ಕಾರಣದಿಂದ ಮತ್ತೆ ಮತ್ತೆ ನೆನಪುಸುತ್ತಿದೆ. ಅವರ ಮನೋಜ್ಞ ಅಭಿನಯದಿಂದ …

Read More »

ಹಾಡು ಹಚ್ಚಬೇಡ ಎಂದಿದ್ದಕ್ಕೆ ಬಿಯರ್ ಬಾಟಲ್ನಿಂದ ಹಲ್ಲೆ . !

ಹುಬ್ಬಳ್ಳಿ : ಬರ್ತ್‌ಡೇ ಸಂದರ್ಭದಲ್ಲಿ ಹಾಡು ಹಚ್ಚುವ ವಿಚಾರಕ್ಕೆ ವ್ಯಕ್ತಿ ಓರ್ವನಿಗೆ ಬಿಯರ್ ಬಾಟಲ್‌ನಿಂದ ಹೊಡೆದು ಕೊಲೆಗೆ ಯತ್ನಿಸಿದ ಪ್ರಕರಣ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ . ಹಳೇ ಹುಬ್ಬಳ್ಳಿಯ ನಿವಾಸಿ ಅಭಿಷೇಕ ಭಜಂತ್ರಿ ಹಲ್ಲೆಗೊಳಗಾದ ವ್ಯಕ್ತಿ . ಹಳೇ ಹುಬ್ಬಳ್ಳಿಯ ನಾಗರಾಜ ವಾಲ್ಮೀಕಿ ಹಾಗೂ ಆಕಾಶ ವಾಲ್ಮೀಕಿ ಹಲ್ಲೆ ನಡೆಸಿದವರು . ನಾಗರಾಜ ಜನ್ಮದಿನ ಪಾರ್ಟಿ ಸಮಯದಲ್ಲಿ ಅಭಿಷೇಕ್ ಹಾಡು ಯಾಕೇ ಹಾಕುತ್ತಿಯಾ ಎಂದು ಕೇಳಿದ್ದಾನೆ . ಇದಕ್ಕೆ …

Read More »

ಮಳೆ ಆರ್ಭಟ ಕುರಿತು ಹವಾಮಾನ ಇಲಾಖೆಯಿಂದ ಮಹತ್ವದ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ತಗ್ಗಿದ್ದ ಮಳೆಯ (RAIN) ಆರ್ಭಟ ಆ.23ರಿಂದ ಚುರುಕಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮಲೆನಾಡು ಹಾಗೂ ರಾಜ್ಯದ ಒಳನಾಡಿನಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಎಡೆಬಿಡದೆ ಮಳೆ ಸುರಿದು ಜನಜೀವನ ಅಸ್ತವ್ಯಸ್ಥಗೊಂಡಿತ್ತು. ಹಲವೆಡೆ ಭೂಕುಸಿತ, ಸಂಚಾರ ಕಡಿತ, ಮನೆ ಕುಸಿತ, ಜೀವಹಾನಿ, ಬೆಳೆ ನಷ್ಟ ಸಂಭವಿಸಿತ್ತು. ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿಯು ಉಂಟಾಗಿ ಜನರು ತತ್ತರಿಸುವಂತಾಗಿತ್ತು. ಆ.12ರಿಂದ …

Read More »

ಸಿಎಂ ನ್ನು ಭೇಟಿಮಾಡಿದ ಡಾ. ರಾಜ್‌ಕುಮಾರ್ ಕುಟುಂಬದ ಸದಸ್ಯರು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಇಂದು ಚಿತ್ರ ನಟ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಡಾ. ರಾಜ್‌ಕುಮಾರ್ ಕುಟುಂಬದ ಸದಸ್ಯರು ಬೆಂಗಳೂರಿನ ರೇಸ್ ಕೋರ್ಸ್ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ವರನಟ ಡಾ. ರಾಜಕುಮಾರ್ ಸಮಾಧಿ ಅಭಿವೃದ್ಧಿಗೆ ಸಂಬಂಧಪಟ್ಟಂತೆ ರಾಘವೇಂದ್ರ ರಾಜಕುಮಾರ್ ಅವರು ಸಿಎಂ ಜೊತೆ ಚರ್ಚೆ ನಡೆಸಿದರು. ಇದಕ್ಕೆ ಸಂಬಂಧಪಟ್ಟಂತೆ ಸಿದ್ಧಪಡಿಸಲಾಗಿರುವ ಯೋಜನೆಯ ಪಿಪಿಟಿಯನ್ನು ಸಿಎಂ ಬೊಮ್ಮಾಯಿ ಅವರು ವೀಕ್ಷಣೆ ಮಾಡಿದರು. ಯೋಜನೆಗೆ …

Read More »

ಇಂಡಿಯಾ ಪೋಸ್ಟ್ ನಲ್ಲಿ‌ 98000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ: ಇಂಡಿಯಾ ಪೋಸ್ಟ್ ನೇಮಕಾತಿ 2022: indiapost.gov.inನಲ್ಲಿ ದೇಶದ 23 ವಲಯಗಳಲ್ಲಿರುವ 98000 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಂಡಿಯಾ ಪೋಸ್ಟ್ಮ್ಯಾನ್, ಮೇಲ್ ಗಾರ್ಡ್ಗಳು ಮತ್ತು ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ವೆಬ್ಸೈಟ್ನಿಂದ ನೇಮಕಾತಿ ಅಧಿಸೂಚನೆಯನ್ನು ಓದಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟು 98,083 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ರಾಷ್ಟ್ರದಾದ್ಯಂತ ಇರುವ ಸರಿ ಸುಮಾರು ೨೩ ವಲಯಗಳಲ್ಲಿರುವ …

Read More »

ಪಡಿತರ ಅಕ್ಕಿ ಅಕ್ರಮವಾಗಿ ಸಾಗಾಟ : ಇಬ್ಬರು ಬಂಧನ

ವಿಜಯನಗರ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೂಡ್ಲಿಗಿ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಮೂಲದ ಗಣೇಶ್ (19) ಹಾಗೂ ಧರ್ಮರಾಜ್( 24) ಬಂಧಿತ ಆರೋಪಿಗಳು.ಆರೋಪಿಗಳು ವಿಜಯನಗರ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಂಗ್ರಹಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿದ ಕೂಡ್ಲಿಗಿ ಪೊಲೀಸರು, ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ₹66,828 ಮೌಲ್ಯದ 2,335 ಕೆ.ಜಿ ಅಕ್ಕಿ ಮತ್ತು ಮಿನಿ …

Read More »

ಮಾಜಿ ಸಿಎಂಗೆ ಬಿಜೆಪಿ ಯಲ್ಲಿ ಉನ್ನತ ಸ್ಥಾನ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಂಡು ರಾಜ್ಯದಲ್ಲಿ ಬಿಜೆಪಿ ಪಕ್ಷ ಸಂಘಟಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎನ್ನುವ ಬಿಜೆಪಿ ಹೈಕಮಾಂಡ್ ತಂತ್ರಗಾರಿಕೆ ವಿಫಲವಾಗಿದ್ದು ಮತ್ತೆ “ಹಳೆಯ ಗಂಡನ ಪಾದವೇ ಗತಿ” ಎನ್ನುವ ಗಾದೆ ಮಾತಿನಂತೆ ಯಡಿಯೂರಪ್ಪ ಅವರನ್ನ ವಿಶ್ವಾಸಕ್ಕೆ ತಗೆದುಕೊಂಡು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಮುಂದಾಗಿದೆ. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಸಿದ ನಂತರ ಬಿಜೆಪಿ ಹೈಕಮಾಂಡ್ ತಾನಂದುಕೊಂಡಂತೆ ಬಿಎಸ್​​ವೈ ಅವರಿಂದ ಅಂತರ …

Read More »

ಗಣೇಶ ಹಬ್ಬವನ್ನು ಚಾಮರಾಜಪೇಟೆ ಮೈದಾನದಲ್ಲಿ ಆಚರಣೆ ಕುರಿತು ಸಿಎಂ ಜೊತೆ ಚರ್ಚೆ : ಆರ್. ಅಶೋಕ್

ಬೆಂಗಳೂರು: ಕಳೆದ 75 ವರ್ಷದಲ್ಲಿ ರಾಷ್ಟ್ರ ಧ್ವಜ ಹಾರಿಸಿರದ ಚಾಮರಾಜಪೇಟೆ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿದೆ ಅದರಂತೆ ಮುಂಬರುವ ಗಣೇಶ ಹಬ್ಬವನ್ನು ಕೂಡಾ ಈ ಮೈದಾನದಲ್ಲಿ ಆಚರಿಸಲು ಸಿಎಂ ಜೊತೆ ಮಾತುಕತೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜ ಪೇಟೆ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆ ಮಾಡುವ ಕುರಿತು ಜಿಲ್ಲಾಡಳಿತಕ್ಕೆ ಮನವಿ ಪತ್ರಗಳು ಬಂದಿದ್ದು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ …

Read More »

ಮೈಸೂರು ಹೆಸರಾಂತ ವೈದ್ಯ ಡಾ.ಎಂ.ಸಿ. ವಿಶ್ವೇಶ್ವರ ನಿಧನ

ಮೈಸೂರು : ನಗರದ ಹೆಸರಾಂತ ವೈದ್ಯರು, ಭಾರತ್ ಕ್ಯಾನ್ಸರ್ ಆಸ್ಪತ್ರೆ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಎಂ.ಸಿ. ವಿಶ್ವೇಶ್ವರ ನಿಧನ. ಕಳೆದ ಕೆಲದಿನಗಳ ಹಿಂದಷ್ಟೆ ಅವರಿಗೆ ಪಿತ್ತಜನಕಾಂಗದ ಮರುಜೋಡಣೆ ಮಾಡಲಾಗಿತ್ತು. ಅದು ಅವರ ದೇಹಕ್ಕೆ ಹೊಂದದೆ ಆರೋಗ್ಯ ಸಮಸ್ಯೆ ಉಲ್ಭಣಿಸಿದ್ದು. ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.ತಮ್ಮ ಸೇವೆಯ ಮೂಲಕ ಸಾಕಷ್ಟು ಜನ ಮನ್ನಣೆ ಗಳಿಸಿದ್ದ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

Read More »