Breaking News

BigTv News

ಕಾಂಗ್ರೆಸ್‌ ಹಗರಣಗಳನ್ನು ಹಂತ ಹಂತವಾಗಿ ಬಯಲಿಗೆ : ಸಿಎಂ

ಬೆಂಗಳೂರು: ಕಾಂಗ್ರೆಸ್‌ ಅವಧಿಯಲ್ಲಿ ನಡೆದ ಹಗರಣಗಳನ್ನು ಹಂತ ಹಂತವಾಗಿ ಬಯಲಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಗಾಂಧಿ ಹೆಸರನ್ನು ಬಹಳ ದುರುಪಯೋಗಪಡಿಸಿಕೊಂಡಿದ್ದಾರೆ.ಈ ದೇಶ ಅಧೋಗತಿಗೆ ಹೋಗಿರುವುದು ಕಾಂಗ್ರೆಸ್‌ನವರಿಂದ. ಕಾಂಗ್ರೆಸ್‌ ಕಾಲದಲ್ಲೊಂದು ಪಿಎಸ್‌ಐ ನೇಮಕಾತಿ ಪ್ರಕರಣ ಆಗಿತ್ತು. ಅದರಲ್ಲಿ ಡಿಐಜಿಯೊಬ್ಬರು ಶಾಮೀಲಾಗಿದ್ದರು. ಎಫ್‌ಐಆರ್‌ನಲ್ಲಿ ಡಿಐಜಿ ಹೆಸರು ಬಂದರೂ ಅವರನ್ನು ವಿಚಾರಣೆ ಮಾಡಿರಲಿಲ್ಲ. ಈಗ ನಾನು ಬಂದ ಬಳಿಕ ಕಾನೂನು ಕ್ರಮ ಜರಗಿಸಿದ್ದೇನೆ ಎಂದರು.

Read More »

ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ರಾಹುಲ್‌ ಗಾಂಧಿ ಆಗಮನ ಅನುಮಾನ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ನಡೆಯುವ ಸಿದ್ದರಾಮೋತ್ಸವದಲ್ಲಿ ಭಾಗಿಯಾಗಲು ಎಐಸಿಸಿ ನಾಯಕ ರಾಹುಲ್‌ ಗಾಂಧಿ ಒಪ್ಪಿಕೊಂಡಿದ್ದಾರೆ. ಈಗಾಗ್ಲೆ ದೆಹಲಿ ತೆರಳಿದ್ದ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರಿಗೆ ಆಹ್ವಾನಿಸಿ ಬಂದಿದ್ದಾರೆ. ಆದರೆ ಇದೀಗ ರಾಹುಲ್ ಗಾಂಧಿ ಕಚೇರಿಯಿಂದ ಮಾಹಿತಿ ಬಂದಿದ್ದು ಕೊನೆಗಳಿಗೆಯಲ್ಲಿ ಬದಲಾವಣೆ ಆಗಬಹುದು ಎಂದು ರಾಹುಲ್‌ ಗಾಂಧಿ ಕಚೇರಿಯಿಂದ ಮಾಹಿತಿ ರವಾನೆಯಾಗಿದೆ. ಆಗಸ್ಟ್ 3 ರಂದು ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ …

Read More »

ಭಾರತದಲ್ಲಿ ಮತ್ತೆ ಮುಂದುವರೆದ ಕೋವಿಡ್ ಅಟ್ಟಹಾಸ

ನವದೆಹಲಿ: ಭಾರತದಲ್ಲಿ 15 ಸಾವಿರದ 899 ಹೊಸ ಕೋವಿಡ್ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು ಕಳೆದ 24 ಗಂಟೆಗಳಲ್ಲಿ 38 ಮಂದಿ ಮೃತಪಟ್ಟಿದ್ದಾರೆ. ಹೊಸ ಕೋವಿಡ್ ಸೋಂಕಿತರ ಸಂಖ್ಯೆ ಮೊನ್ನೆಗಿಂತ ಕೊಂಚ ಕಡಿಮೆಯಾಗಿದೆ. ಆದರೆ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದ್ದು ಮೊನ್ನೆಗಿಂತ ಹತ್ತು ಮಂದಿ ಹೆಚ್ಚು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶದಿಂದ ತಿಳಿದುಬಂದಿದೆ. ದೇಶದಲ್ಲಿ ಪ್ರಸ್ತುತ 1 ಲಕ್ಷದ 22 ಸಾವಿರದ 335 ಮಂದಿ ಸೋಂಕಿತರಿದ್ದು ದಿನಂಪ್ರತಿ ಕೋವಿಡ್ ಸೋಂಕಿತರ …

Read More »

ತಲೆಯ ಮೇಲೆ ಸೌದೆ ಬಿದ್ದು ಕಾರ್ಮಿಕ ಸಾವು

ಕುಣಿಗಲ್ : ಬಾಯ್ಲರ್‌ಗೆ ಸೌದೆ ಹಾಕುತ್ತಿದ್ದ ವ್ಯಕ್ತಿಯೋರ್ವನ ತಲೆಯ ಮೇಲೆ ಸೌದೆ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ, ತಾಲೂಕಿನ ಅಮೃತೂರು ಹೋಬಳಿ ಹೆಗ್ಗತಿಹಳ್ಳಿ ಜೆಪಿ ಡಿಸ್ಟಲರಿ ಕಾರ್ಖಾನೆಯಲ್ಲಿ ನಡೆದಿದೆ, ಹೆಗ್ಗತ್ತಿಹಳ್ಳಿ ಗ್ರಾಮದ ಕುಮಾರ್ (48) ಮೃತ ವ್ಯಕ್ತಿ.ಹೆಗ್ಗತ್ತಿಹಳ್ಳಿ ಜೆಪಿ ಜೆಪಿ ಡಿಸ್ಟಲರಿ ಕಾರ್ಖಾನೆಯಲ್ಲಿ ಕುಮಾರ್ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಬುಧವಾರ ಲಾರಿಯಿಂದ ಸೌದೆ ಇಳಿಸಿ ಬಾಯ್ಲರ್‌ಗೆ ಹಾಕುವ ವೇಳೆ ಸೌದೆ ತುಂಡು ಕುಮಾರನ ತಲೆಗೆ ಬಿದ್ದ ಕಾರಣ …

Read More »

ಭೀಕರ ರಸ್ತೆ ಅಪಘಾತ : ತಾಯಿ-ಮಗ ಸಾವು

ಹಾಸನ: ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಎಲೆಕ್ಟ್ರಿಕ್‌ ಬೈಕ್‌ ಗೆ ಲಾರಿ ಗುದ್ದಿ ಸ್ಥಳದಲ್ಲೇ ತಾಯಿ-ಮಗ ಸಾವನ್ನಪ್ಪಿರುವ ಘಟನೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ೩೮ ವರ್ಷದ ಸೀಮಾ ಹಾಗೂ ೧೦ ವರ್ಷದ ಮಯೂರ ಮೃತ ದುರ್ದೈವಿಗಳು. ಮಗನನ್ನು ಶಾಲೆಗೆ ಬಿಡುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಮಯೂರ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಓದುತ್ತಿದ್ದನು. ಶಾಲೆಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಪಿಎಸ್‌ಐ ಅಕ್ರಮ : “ಸಮಾಜದ ಪಾಲಿಗೆ ಭಯೋತ್ಪಾದಕ ಕೃತ್ಯ’

ಬೆಂಗಳೂರು: ಪಿಎಸ್‌ಐ ನೇಮಕ ಅಕ್ರಮ “ಸಮಾಜದ ಪಾಲಿಗೆ ಭಯೋತ್ಪಾದಕ ಕೃತ್ಯ’ ಎಂದು ತೀಕ್ಷ್ಣ ವಾಗಿ ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಇದರಲ್ಲಿ ಭಾಗಿಯಾದವರು ಮತ್ತು ಅದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ಕಾನೂನು ರೀತಿ ಶಿಕ್ಷೆ ಆಗಬೇಕು ಎಂದು ಹೇಳಿದೆ. ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಎಡಿಜಿಪಿ ಅಮೃತ್‌ ಪೌಲ್‌ ಬಂಧನಾನಂತರದ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ಸಂದರ್ಭದಲ್ಲಿ ನ್ಯಾ| ಎಚ್‌.ಪಿ. ಸಂದೇಶ್‌ ಈ ಅಭಿ ಪ್ರಾಯ ಪಟ್ಟರು. ಪ್ರಕರಣದ ಆರೋಪಿಗಳಾದ ಸಿ.ಎನ್‌. ಶಶಿಧರ್‌ ಮತ್ತು ಇತರರು …

Read More »

ಜುಲೈ 9ರಿಂದ ಮದ್ಯ ಮಾರಾಟ ಬಂದ್

ಬೆಂಗಳೂರು: ಮದ್ಯ ಪೂರೈಕೆ ವ್ಯವಸ್ಥೆಯಲ್ಲಿನ ಲೋಪಗಳನ್ನು ರಾಜ್ಯ ಸರ್ಕಾರ ಸರಿಪಡಿಸದಿದ್ದರೆ ಜುಲೈ 9ರಿಂದ ಮದ್ಯ ಮಾರಾಟ ಬಂದ್ ಮಾಡಲಾಗುವುದು ಎಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಸ್.ಗುರುಸ್ವಾಮಿ ಎಚ್ಚರಿಸಿದ್ದಾರೆ. ಕೆ ಎಸ್ ಬಿ ಸಿ ಎಲ್ ಅಕೌಂಟ್ ಗೆ ಹಣ ಹಾಕಿದರೆ ಮೊದಲು ನಮಗೆ ಬೇಕಾದ ಮದ್ಯ ಸುಲಭವಾಗಿ ಸಿಗುತ್ತಿತ್ತು. ಬಿಲ್ಲಿಂಗ್ ವ್ಯವಸ್ಥೆ ಮ್ಯಾನ್ಯುವಲ್ ಆಗಿ ಇತ್ತು. ಆದರೆ ಏಪ್ರಿಲ್ 4ರಿಂದ ಹೊಸ ಪದ್ಧತಿ ಆರಂಭವಾಗಿದೆ. ವೆಬ್ …

Read More »

ಇಂದು ಪಂಜಾಬ್ ಜನರ​ ಪಾಲಿಗೆ ವಿಶೇಷ ದಿನ… ಯಾಕೆ ಗೊತ್ತಾ!

ಚಂಡೀಗಢ: ಇಂದು ಪಂಜಾಬ್ ಜನರ​ ಪಾಲಿಗೆ ವಿಶೇಷ ದಿನ. ಏಕೆಂದರೆ, ಇಡೀ ರಾಜ್ಯನ್ನು ಪ್ರತಿನಿಧಿಸುವ ಹಾಗೂ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರ ವಿವಾಹದ ದಿನ. ಅಂದಹಾಗೆ ಪಂಜಾಬ್​ ಸಿಎಂಗೆ ಇದು ಎರಡನೇ ಮದುವೆ. ಇಷ್ಟು ಕೇಳಿದ ಮೇಲೆ ನಿಮ್ಮ ಮನಸ್ಸಿನಲ್ಲಿ ವಧು ಯಾರು? ಮತ್ತು ವಧುವಿನ ವಯಸ್ಸೆಷ್ಟು? ಎಂಬಿತ್ಯಾದಿ ಪ್ರಶ್ನೆಗಳು ಮೂಡುವುದು ಸಹಜ. ನಿಮ್ಮ ಪ್ರಶ್ನೆಗಳಿಗೆ ಸಂಪೂರ್ಣ ಉತ್ತರವನ್ನು ನಾವು ಕೊಡುತ್ತೇವೆ. ಹೀಗಾಗಿ ಓದುವುದನ್ನು ಮುಂದುವರಿಸಿ… …

Read More »

ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರಗೆ ಜಾಮೀನು ಷರತ್ತು ಮಂಜೂರು

ಹುಬ್ಬಳ್ಳಿ :ಯುವತಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ತನ್ನ ಪತ್ನಿ ಸಹನಾಳನ್ನು ಆಕೆಯ ತಂದೆ ಶಿವು ಹಿರೇಕೆರೂರ, ತಾಯಿ ಜಯಲಕ್ಷ್ಮೀ ಹಾಗೂ ಅವಳ ಸಹೋದರ ಸಂಬಂಧಿ ಆಗಿರುವ ಪಾಲಿಕೆ ಸದಸ್ಯ ಚೇತನ್ ಅಪಹರಿಸಿದ್ದಾರೆ. ಎಂದು ನಿಖಿಲ್ ದಾಂಡೇಲಿ ಗೋಕುಲ ಪೊಲೀಸ್ ಠಾಣೆಯಲ್ಲಿ ಜೂ. 24 ರಂದು ಪ್ರಕರಣ ದಾಖಲಿಸಿದ್ದರು ಪೊಲೀಸರು ಸಹನಾ ಅವರನ್ನು …

Read More »

ಬಿ.ಆರ್. ಅಂಬೇಡ್ಕರ್ ಗೆ ಅಪಮಾನ : ಜು.8 ರಂದು ಉಪವಾಸ ಸತ್ಯಾಗ್ರಹ

ಹುಬ್ಬಳ್ಳಿ: ಸಂವಿಧಾನ‌ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರಿಗೆ ಪದೆ ಪದೇ ಅಪಮಾನ ಮಾಡಲಾಗುತ್ತಿದ್ದು, ಇದನ್ನು ಖಂಡಿಸಿ ಜು.8 ರಂದು ಉಪವಾಸ ಸತ್ಯಾಗ್ರಹ ನಗರದ ಅಂಬೇಡ್ಕರ್ ಮೂರ್ತಿ ಹತ್ತಿರ ಮಾಡಲಾಗುತ್ತಿದೆ ಎಂದು ಸಮಾಜ ಸೇವಕ ಲಕ್ಷ್ಮಣ ರೋಖಾ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕ್ಕೆ ಮಾದರಿ ಸಂವಿಧಾನ‌ ನೀಡಿದ ಮಹಾನ ವ್ಯಕ್ತಿಯ ಕುರಿತು ರಾಜಕಾರಣಿಗಳು, ಕಿಡಿಗೇಡಿಗಳು ಅಪಮಾನ ಮಾಡುತ್ತಿದ್ದಾರೆ. ಇದರಿಂದ‌ ಅಂಬೇಡ್ಕರ್ ಅವರ ಅಭಿಮಾನಿಗಳಿಗೆ ನೋವುಂಟಾಗಿದೆ ಎಂದು ತಿಳಿಸಿದರು. ಪ್ರಸ್ತುತ …

Read More »