Breaking News

BigTv News

ಕುಂದಗೋಳದಲ್ಲಿ ಶಂಕರಾಚಾರ್ಯ ಜಯಂತಿ ಆಚರಣೆ

ಕುಂದಗೋಳ: ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿಂದು ತಾಲೂಕು ಆಡಳಿತ ವತಿಯಿಂದ ಶ್ರೀ ಶಂಕರಾಚಾರ್ಯ ಜಯಂತಿಯನ್ನು ಆಚರಿಸಲಾಯಿತು . ತಹಶೀಲ್ದಾರ್ ಅಶೋಕ್ ಸಿಗ್ಗಾವ್ ಅವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು . ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯಶಾಮ ಸುಂದರ್ ದೇಸಾಯಿ , ಅಶೋಕ ಪಾಲಂದೆ , ರಾಘವೇಂದ್ರ ಸಪ್ರೆ , ಶೋಭಾ ಪಾಲಂದೆ ಇನ್ನು ಅನೇಕರಿದ್ದರು .

Read More »

ಅಣ್ಣಿಗೇರಿ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸಚಿವ ಭೇಟಿ

ಅಣ್ಣಿಗೇರಿ : ರೈಲ್ವೆ ನಿಲ್ದಾಣ ದಲ್ಲಿ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಮತ್ತು ಸಚಿವ ಶಂಕರ ಪಾಟೀಲ್ ಮುನೇನಕೊಪ್ಪಭೇಟಿ ನೀಡಿ ಪರಿಶೀಲಿಸಿದರು . ಈ ವೇಳೆಯಲ್ಲಿ ಕೆಲವೊಂದು ಮೂಲಸೌಕರ್ಯದ ಕೊರತೆ ಇದೆ ಎಂಬುದನ್ನು ಸ್ಥಳೀಯರು ಸಚಿವರುಗಳ ಗಮನಕ್ಕೆ ತಂದಿದ್ದು , ಕೂಡಲೇ ಭೇಟಿ ನೀಡಿ ಪರಿಶೀಲಿಸಿದರು . ಇದಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳ ಶೀಘ್ರ ಇತ್ಯಾರ್ಥಕ್ಕೆ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದರು .

Read More »

ಚೆಕ್ ಡ್ಯಾಮ್ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಚಾಲನೆ

ಹುಬ್ಬಳ್ಳಿ – ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ಸಂಖ್ಯೆ 28 ರ ಗಾಮನಗಟ್ಟೆ ಚೆಕ್ ಡ್ಯಾಮ್ ಕಾಮಗಾರಿಗೆ ಶಾಸಕ ಅರವಿಂದ್ ಬೆಲ್ಲದ್ ಭೂಮಿ ಪೂಜೆ ನೆರವೇರಿಸಿದರು . ಈ ಸಂದರ್ಭದಲ್ಲಿ , ಪಾಲಿಕೆ ಸದಸ್ಯರಾದ ಶ್ರೀ ಚಂದ್ರಶೇಖರ್ ಮುನಗುಂಡಿ , ಶ್ರೀಮತಿ ಜ್ಯೋತಿ ಪಾಟೀಲ್ , ಹಿರಿಯ ಮುಖಂಡರಾದ ಶ್ರೀ ಈಶ್ವರ್ ಮಾಳಣ್ಣನವರ್ , ಶ್ರೀ ಕರಿಯಪ್ಪ ಅವರಾಧಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು .

Read More »

ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಅಮೃತ್ ದೇಸಾಯಿ ಭೂಮಿ ಪೂಜೆ

ಧಾರವಾಡ: ಕವಲಗೇರಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನದಡಿ ಧಾರವಾಡ ತಾಲೂಕಿನ ಕವಲಗೇರಿ ಚಂದನಮಟ್ಟಿ ಜಿಲ್ಲಾ ಮುಖ್ಯ ರಸ್ತೆ ಕೀ ಮೀ 1.90 ರಿಂದ ಕಿ ಮೀ 4.65 ರ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಅಮೃತ್ ದೇಸಾಯಿ ಭೂಮಿ ಪೂಜೆ ನೆರವೇರಿಸಿದರು . ಈ ವೇಳೆ ಗುರುನಾಥ ಗೌಡ ಗೌಡರ , ಭೀಮಣ್ಣರಾಮದುರ್ಗ , ನಾಗಪ್ಪ ತಿರ್ಲಾಪೂರ , ಅಶೋಕ ನಾವಳ್ಳಿ , ಶಿವು ಬೇಳ್ಳಾರದ , ಬಸಣ್ಣಭೈರಪ್ಪನವರ …

Read More »

ಜೆಡಿಎಸ್ ಪಕ್ಷದ ಕುರಿತು ಭಾವುಕ ಮಾಡು ನುಡಿದ ಮಾಜಿ ಪ್ರಧಾನಿ

ಚಿಕ್ಕಮಗಳೂರು : ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಉಳಿಸಿ ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕು ಎಂಬ ರಾಜಕೀಯ ಹಠ ನನ್ನಲ್ಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ. ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಜೆಡಿಎಸ್‌ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 90ರ ಜೀವನದ ಕೊನೆ ಹಂತದಲ್ಲಿ ರಾಜ್ಯದಲ್ಲಿಪ್ರಾದೇಶಿಕ ಪಕ್ಷ ಉಳಿಸಿ ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕು ಎಂಬ ರಾಜಕೀಯ ಹಠ ನನ್ನಲ್ಲಿದೆ ಎಂದರು.

Read More »

ಕಾರ್ ನಡುವೆ ಟಿಂಪೋ ಡಿಕ್ಕಿ : 3 ಜನ ಸಾವು

ತುಮಕೂರು: ಕಾರ್ ಮತ್ತು ಟಿಂಪೋ ಟ್ರಾವೆಲ್ (ಟಿ.ಟಿ) ಮಧ್ಯೆ ನಡೆದ ಅಪಘಾತದಲ್ಲಿ ಮೂರು ಮಂದಿ ಮೃತಪಟ್ಟ ಘಟನೆ ಕುಣಿಗಲ್ ತಾಲ್ಲೂಕಿನ ಬೇಗೂರು ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ. ಮೃತರನ್ನು ಬೆಂಗಳೂರು ಸಂಜಯನಗರ ನಿವಾಸಿಗಳಾದ ವಿಜಯ್, ರಾಘು, ಸಂತೊಷ ಎಂದು ಗುರುತಿಸಲಾಗಿದೆ. ಐದು ಜನ ಗಾಯಗೊಂಡಿದ್ದಾರೆ. ಎಲ್ಲರು ಬೆಂಗಳೂರಿನಿಂದ ಕಾರ್ ನಲ್ಲಿ ಹಾಸನದ ಕಡೆ ಹೋಗುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಕಾರ್, ರಸ್ತೆ ವಿಭಜಕಕ್ಕೆ …

Read More »

ಮಾಧ್ಯಮ ಮುಂದೆ ಪ್ರಿಯಾಂಕ್ ಖರ್ಗೆ ಬೂಕಾಳಿ ಬಿಡುತ್ತಿದ್ದಾರೆ : ಆರಗ ಜ್ಞಾನೇಂದ್ರ

ಶಿವಮೊಗ್ಗ: ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಪ್ರಿಯಾಂಕ್ ಖರ್ಗೆ ಅವರಿಗೆ ಮೂರು ಬಾರಿ ನೋಟಿಸ್ ನೀಡಲಾಗಿದೆ. ಹೀಗಿದ್ದರೂ ಅವರು ಮಾಹಿತಿ ನೀಡುತ್ತಿಲ್ಲ ಎಂದು ಹೇಳಿದ್ದಾರೆ. ಮಾಹಿತಿ ಕೊಡದೆ ಮಾಧ್ಯಮಗಳ ಬಂದು ಮುಂದೆ ಪ್ರಿಯಾಂಕ್ ಖರ್ಗೆ ಬೂಕಾಳಿ ಬಿಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಎಪಿಪಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಅದರ …

Read More »

ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಾಗೇಶ್

ಬೆಂಗಳೂರು: ಮಾಜಿ ಸಚಿವ ನಾಗೇಶ್ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ನಾಗೇಶ್, ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುಗಳೂ ಅಲ್ಲ, ಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ನನಗೆ ಬೇಸರವೂ ಇಲ್ಲ ಎಂದು ಹೇಳಿದ್ದಾರೆ.

Read More »

ಮೇ 14ರ ವರೆಗೆ ಮಳೆ ಯಾಗುವ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ನಾಲ್ಕು ದಿನ, ಮೇ 14ರ ವರೆಗೆ ಮಳೆ ಯಾಗುವ ಸಾಧ್ಯತೆಗಳಿವೆ ಎಂದು ಹವಾ ಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ನೆರೆಯ ರಾಜ್ಯಗಳಂತೆ ಭಾರೀ ಮಳೆಯಾಗದು ಎಂದು ಇಲಾಖೆ ತಿಳಿಸಿದೆ. ಒಂದು ವಾರದಿಂದ ರಾಜ್ಯದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡು ಪ್ರದೇಶದಲ್ಲಿ ಮಳೆಯಾಗುತ್ತಿದೆ. ಇದು ಮುಂದಿನ ನಾಲ್ಕು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿಸಿಲು, ಚಂಡಮಾರುತದ ಪರಿಣಾಮ ದಿಂದ …

Read More »

148 ವರ್ಷ ದ ನಾಗಲಾವಿ ಬಾಬಾ ನಿಧನ

ಧಾರವಾಡ : ನಾಗಲಾವಿ ಬಾಬಾ ‘ ಎಂದೇ ಪ್ರಸಿದ್ಧರಾಗಿದ್ದ ಖ್ಯಾತ ಸೂಫಿ ಸಂತ ಧಾರವಾಡ ತಾಲೂಕಿನ ಸ್ಟೇಶನ್ ನಾಗಲಾವಿ ಬಳಿಯ ಹಜರತ್ ಮೆಹಬೂಬಸುಭಾನಿ ದರ್ಗಾ ಶರೀಫನ ಹಜರತ್ ಹಾಜಿ ಮೆಹಬೂಬ ಅಲಿಶಾ ಅಹಲೇ ರಫಾಯಿ ಖಾದ್ರಿ ಗುರುಗಳು ( 148 ) ಇಂದು ಪೈಗಂಬರವಾಸಿಗಳಾಗಿದ್ದಾರೆ. ಬಾಬಾ ಅವರ ಅಗಲಿಕೆಯಿಂದ ಸಹಸ್ರ ಸಹಸ್ರ ಭಕ್ತರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಬಾಬಾ ಅವರ ಅಂತ್ಯಸಂಸ್ಕಾರ ವಿಧಿ – ವಿಧಾನಗಳೊಂದಿಗೆ ಸ್ಟೇಶನ್ ನಾಗಲಾವಿಯಲ್ಲಿ ಇಂದು …

Read More »