Breaking News

BigTv News

9 ಕೋಟಿ ಮೌಲ್ಯದ ಎಂಡಿಎಂಎ ಸೀಜ್.. ನಾಲ್ವರ ಬಂಧನ!

ಬೆಂಗಳೂರು : ಅಂತರರಾಷ್ಟ್ರೀಯ ಮಟ್ಟದ ಡ್ರಗ್ ಜಾಲವನ್ನು ಯಶವಂತಪುರ ಪೊಲೀಸರು ಬೇಧಿಸಿದ್ದಾರೆ. ಮಾದಕ ವಸ್ತುಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳಾದ ಸೈಯದ್ ಸುಹೇಲ್, ಮೊಹಮ್ಮದ್ ಸಮೀರ್, ಸಾದಿಕ್ ಪಾಷಾ ಮತ್ತು ಮೊಹಮ್ಮದ್ ಹಕ್​ರನ್ನು ಬಂಧಿಸಲಾಗಿದ್ದು, ಈ ನಾಲ್ವರಿಂದ 9 ಕೋಟಿ ರೂಪಾಯಿ ಮೌಲ್ಯದ 8 ಕೆಜಿ ಎಂಡಿಎಂಎ ಸೀಜ್ ಮಾಡಲಾಗಿದೆ. ಆರೋಪಿಗಳು ನೈಜೀರಿಯಾ ಪ್ರಜೆಗಳಿಂದ ಡ್ರಗ್ಸ್ ಖರೀದಿಸಿ ನಗರದಲ್ಲಿ ಸ್ಥಳೀಯರಿಗೆ ಪೂರೈಸುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತರಿಂದ ಒಂದು ಕಾರು ಹಾಗೂ …

Read More »

ನಡುರಸ್ತೆಯಲ್ಲೇ ಮದ್ಯ ಸೇವನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕಾನ್ಸ್‌ಟೇಬಲ್‌ ಮೇಲೆ ಹಲ್ಲೆ – ಇಬ್ಬರ ಬಂಧನ!

ಬೆಂಗಳೂರು : ನಗರದಲ್ಲಿ ತಡರಾತ್ರಿ ನಡುರಸ್ತೆಯಲ್ಲೇ ಮದ್ಯ ಸೇವನೆ ಮಾಡುತ್ತಿದ್ದ ಯುವಕರು ಪೊಲೀಸ್‌ ಕಾನ್ಸ್‌ಟೇಬಲ್‌ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಮೇ 1ರ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶವಾಣಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ನೈಟ್ ಬೀಟ್ ಡ್ಯೂಟಿಯಲ್ಲಿದ್ದ ಪೊಲೀಸ್ ಕಾನ್ಸ್‌ಟೇಬಲ್ ರುದ್ರಪ್ಪ ಅವರು ದಾಸರಹಳ್ಳಿ ಮುಖ್ಯರಸ್ತೆಯಲ್ಲಿ ಕಾರು ನಿಲ್ಲಿಸಿ ಮದ್ಯಪಾನ ಮಾಡುತ್ತಿದ್ದ ನಾಲ್ವರನ್ನು ಗಮನಿಸಿದ್ದಾರೆ. ಬಳಿಕ ಅವರ …

Read More »

ದೊಡ್ಡಬಳ್ಳಾಪುರ: ಅತಿಥಿ ಉಪನ್ಯಾಸಕಿ​​​ ಸರೋಜಾ ಕೊಲೆ ಕೇಸ್​ಗೆ ರೋಚಕ ಟ್ವಿಸ್ಟ್..!

ದೊಡ್ಡಬಳ್ಳಾಪುರ: ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಕಾರಿನಲ್ಲೇ ಸುಟ್ಟು ಕೊಲೆ ಮಾಡಿದ ಆರೋಪಿ, ಬಳಿಕ ತಾನೂ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಜಿಂಕೆಬಚ್ಚಹಳ್ಳಿ ಬಳಿ ನಡೆದಿದೆ. ದೇವನಹಳ್ಳಿಯ ಖಾಸಗಿ ಕಾಲೇಜಿನ ಅತಿಥಿ ಉಪನ್ಯಾಸಕಿ ಸರೋಜಾ (40) ಕೊಲೆಯಾದವರು. ಇವರಿಗೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದ ರಾಮಾಂಜಿ (45) ಎಂಬಾತ ಮದುವೆಯಾಗುವಂತೆ ಪೀಡಿಸುತ್ತಿದ್ದ. ವಿಚ್ಛೇದಿತೆಯಾಗಿದ್ದ ಸರೋಜಾ ಮದುವೆಗೆ ಒಪ್ಪದ ಕಾರಣ ಆಕ್ರೋಶಗೊಂಡ ರಾಮಾಂಜಿ, ಲಾಂಗ್ ಡ್ರೈವ್ ನೆಪದಲ್ಲಿ ಆಕೆಯನ್ನು ಜಿಂಕೆಬಚ್ಚಹಳ್ಳಿಯ …

Read More »

ಮರಳು ಲಾರಿ ತಡೆದ ಅಧಿಕಾರಿಗಳಿಗೆ ಬೆದರಿಕೆ: ವ್ಯಕ್ತಿ ಬಂಧನ

ಔರಾದ್: ಇಲ್ಲಿಗೆ ಸಮೀಪದ ಮಹಾರಾಷ್ಟ್ರದ ಗಡಿಯಲ್ಲಿ ಮರಳು ಲಾರಿ ತಡೆದು ವಿಚಾರಣೆ ನಡೆಸುತ್ತಿದ್ದ ಗಣಿ ಮತ್ತು ಭೂವಿಜ್ಞಾನ (ಮೈನ್ಸ್) ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಭಾನುವಾರ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ. ತಾಲ್ಲೂಕಿನ ಬಸವನವಾಡಿ ತಾಂಡಾದ ಚಂದರ್ ಪವಾರ್ ಬಂಧಿತ ಆರೋಪಿ. ಅವರು ಭಾನುವಾರ ವನಮಾರಪಳ್ಳಿ ಬಳಿ ಮರಳು ಲಾರಿ ತಪಾಸಣೆ ಮಾಡುತ್ತಿದ್ದ ಇಬ್ಬರು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಅಧಿಕಾರಿಗಳು ನೀಡಿದ …

Read More »

ನೇಪಾಳದ ಮೂಲಕ ಭಾರತಕ್ಕೆ ನುಗ್ಗಲು ಯತ್ನಿಸುತ್ತಿದ್ದ ಚೀನಾ ಪ್ರಜೆ ಬಂಧನ!

ನವದೆಹಲಿ – ನೇಪಾಳದ ಮೂಲಕ ಭಾರತಕ್ಕೆ ನುಗ್ಗಲು ಯತ್ನಿಸುತ್ತಿದ್ದ ಚೀನಾದ ಪ್ರಜೆಯನ್ನು ಗಡಿ ಭದ್ರತಾ ಪಡೆಯ (BSF) ಸೈನಿಕರು ಬಂಧಿಸಿದ್ದಾರೆ. ಬಂಧಿತನನ್ನು ಚೀನಾದ ಹುನಾನ್ ಪ್ರಾಂತ್ಯದ ನಿವಾಸಿ ಝೌ ಹುವಾನ್ (41 ವರ್ಷ) ಎಂದು ಗುರುತಿಸಲಾಗಿದೆ. ಹುವಾನ್ ನೇಪಾಳದ ವಿರಾಟನಗರದಿಂದ ನೇಪಾಳಿ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಜೋಗ್ಬನಿ ತಪಾಸಣಾ ಚೌಕಿಗೆ ಬಂದಿದ್ದನು. ಆತನ ಚಲನವಲನಗಳ ಬಗ್ಗೆ ಅನುಮಾನಗೊಂಡ ಸೈನಿಕರು ಆತನನ್ನು ತಡೆದು ನಿಲ್ಲಿಸಿದರು. ಪ್ರಾಥಮಿಕ ತನಿಖೆಯಲ್ಲಿ ಆತನ ಬಳಿ …

Read More »

ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಪುತ್ರಿಯರ ವಿರುದ್ಧ ಅವಹೇಳನಕಾರಿ ಸಂದೇಶ: ದೂರು ದಾಖಲು

ಬೆಂಗಳೂರು: ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರ ಪುತ್ರಿಯರ ವಿರುದ್ಧ ಅವಹೇಳನಕಾರಿ ಮತ್ತು ಪ್ರಚೋದನಾಕಾರಿ ಸಂದೇಶ ಹಾಕಿದ ವ್ಯಕ್ತಿ ವಿರುದ್ಧ ಹೈಗ್ರೌಂಡ್ಸ್ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಾಮಾಜಿಕ ಜಾಲತಾಣ ವಾಟ್ಸಾಪ್ ಗ್ರೂಪ್ ವೊಂದರಲ್ಲಿ ಪೊನ್ನಣ್ಣ ಅವರ ಪುತ್ರಿಯರ ವಿರುದ್ಧ ಪ್ರಚೋದನಾಕಾರಿ ಸಂದೇಶ ಹಾಕಿದ್ದ ಬಗ್ಗೆ ಕೆಪಿಸಿಸಿ ಪದಾಧಿಕಾರಿ ಬಿ.ಎನ್. ಆನಂದ್ ದೂರು ನೀಡಿದ್ದಾರೆ. ಇದರ ಅನ್ವಯ ದೊರೆ ಎಂಬತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ …

Read More »

ಜುಗಾರಿ ಆಡುತ್ತಿದ್ದವರನ್ನು ವಶಕ್ಕೆ ಪಡೆದ ಪೊಲೀಸರು

ಮಣಿಪಾಲ: ಸಗ್ರಿ ನೋಳ ಪೆರಂಪಳ್ಳಿ ಹೋಗುವ ರಸ್ತೆ ಬದಿಯ ಹಾಡಿಯಲ್ಲಿ ಹಣ ಪಣಕ್ಕಿಟ್ಟು ಜುಗಾರಿ ಆಟವಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಣಿಪಾಲ ಠಾಣೆಯ ಉಪನಿರೀಕ್ಷಕ ತಿಮ್ಮೇಶ್‌ ಬಿ.ಎನ್‌. ಅವರಿಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ದಾಳಿ ನಡೆಸಿ ಹಣ ಪಣವಾಗಿಟ್ಟುಕೊಂಡು ಇಸ್ಪೀಟ್‌ ಎಲೆಗಳ ಸಹಾಯದಿಂದ ಅಂದರ್‌ ಬಾಹರ್‌ ಜುಗಾರಿ ಆಟ ಆಡುತ್ತಿದ್ದ ಅಂಬಾಗಿಲಿನ ರುದ್ರಯ್ಯ, ಉದ್ಯಾವರದ ಕೃಷ್ಣ ಗಾಣಿಗ, ನಿಟ್ಟೂರಿನ ಸಿಂದೂರಪ್ಪ ಹಿರೇಮನಿ, 80 ಬಡುಗಬೆಟ್ಟುವಿನ ಶರತ್‌ ಕುಮಾರ್‌ ರನ್ನು …

Read More »

ಆನ್‌ಲೈನ್ ಟ್ರೇಡಿಂಗ್ ಆಮಿಷಕ್ಕೆ 18.81 ಲಕ್ಷ ರೂಪಾಯಿ ಕಳೆದುಕೊಂಡ 75 ವರ್ಷದ ಹಿರಿಯ ನಾಗರಿಕ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಆಕರ್ಷಕ ಜಾಹೀರಾತುಗಳನ್ನು ನಂಬುವ ಮುನ್ನ ಎಚ್ಚರ! ಕೇಂದ್ರ ಹಣಕಾಸು ಸಚಿವರ ವಿಡಿಯೋ ಬಳಸಿ ನಡೆದ ನಕಲಿ ಆನ್‌ಲೈನ್ ಟ್ರೇಡಿಂಗ್ ದಂದೆಗೆ ಸಿಲುಕಿ 75 ವರ್ಷದ ಹಿರಿಯ ನಾಗರಿಕರೊಬ್ಬರು ಬರೋಬ್ಬರಿ 18.81 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಕಳೆದ ಡಿಸೆಂಬರ್‌ನಲ್ಲಿ ಸಂತ್ರಸ್ತರು ಫೇಸ್‌ಬುಕ್‌ನಲ್ಲಿ ಹಣಕಾಸು ಸಚಿವರ ಭಾಷಣವಿರುವ ಆನ್‌ಲೈನ್ ಟ್ರೇಡಿಂಗ್ ಕುರಿತ ವಿಡಿಯೋವೊಂದನ್ನು ನೋಡಿದ್ದರು. ಇದನ್ನು ನಿಜವೆಂದು ನಂಬಿದ ಅವರು ವಿಡಿಯೋ ಕೆಳಗಿದ್ದ …

Read More »

ಬೆಂಗಳೂರು | ಆಶ್ರಯ ಕೊಟ್ಟ ಮಾಲಕನ ಮನೆಯಲ್ಲೇ ಕಳ್ಳತನ: ದಂಪತಿ ಬಂಧನ

ಬೆಂಗಳೂರು : ಆಶ್ರಯ ನೀಡಿದ್ದ ಮಾಲಕನ ಮನೆಯಲ್ಲೇ ಕಳ್ಳತನ ಮಾಡಿದ ಪ್ರಕರಣದಡಿ ದಂಪತಿಯನ್ನು ಇಲ್ಲಿನ ಸಿ.ಕೆ.ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ಮಲ್ಲಿಕಾರ್ಜುನ್ ನಾಯ್ಡು ಎಂಬುವರ ಮನೆಯಲ್ಲಿ ಕೃತ್ಯ ಎಸಗಿದ್ದ ಐಶ್ವರ್ಯಾ(21) ಹಾಗೂ ಮಣಿಕಂಠ(26) ಬಂಧಿತರು ಎಂದು ಗುರುತಿಸಲಾಗಿದೆ.ಆರೋಪಿಗಳಿಂದ 14 ಲಕ್ಷ ರೂ. ನಗದು, 199 ಗ್ರಾಂ ಚಿನ್ನದ ಆಭರಣಗಳು, 730 ಗ್ರಾಂ ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದೂವರೆ ವರ್ಷದ ಪುಟ್ಟ ಮಗುವಿದ್ದ ದಂಪತಿಗೆ …

Read More »

ಪುಣೆ 4 ರ ಬಾಲಕಿ ಅತ್ಯಾಚಾರ-ಕೊಲೆ: ಉಸಿರುಗಟ್ಟಿಸಿದ್ದೇ ಸಾವಿಗೆ ಕಾರಣ

ಪುಣೆ : ಕಳೆದ ವಾರ ಪುಣೆಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಲಾಗಿತ್ತು ಎನ್ನಲಾದ ನಾಲ್ಕು ವರ್ಷದ ಬಾಲಕಿಯ ಸಾವಿಗೆ “ಉಸಿರುಕಟ್ಟುವಿಕೆ” ಕಾರಣ ಎಂದು ಶವಪರೀಕ್ಷೆ ವರದಿ ಸೂಚಿಸಿದೆ ಎಂದು ಪೊಲೀಸರು ಮಂಗಳವಾರ (ಮೇ 5)ತಿಳಿಸಿದ್ದಾರೆ. 65 ವರ್ಷದ ಆರೋಪಿಯು ಸಂತ್ರಸ್ತೆಯ ಬಾಯಿಗೆ ಬಟ್ಟೆಯನ್ನು ತುರುಕಿದ್ದಾನೆ, ಇದರಿಂದಾಗಿ ಉಸಿರುಗಟ್ಟಿದೆ ಎಂದು ಪೊಲೀಸರು ಹೇಳಿದರು. ಕಾರ್ಮಿಕನಾಗಿ ಕೆಲಸ ಮಾಡುವ ಆರೋಪಿಯ ಮೇಲೆ ಕ್ರಿಮಿನಲ್ ಹಿನ್ನೆಲೆ ಇದೆ. ಆತನ ಮೇಲೆ 1998 ಮತ್ತು …

Read More »