ಚಿಕ್ಕಬಳ್ಳಾಪುರ : ಮುಸುಕುಧಾರಿ ಇಬ್ಬರು ಕಳ್ಳರು ಹಾಡಹಗಲೇ ಮಹಿಳೆಯೋರ್ವರ 30 ಗ್ರಾಂ ಸರಗಳವು ಮಾಡಿರುವ ಘಟನೆ ನಗರದ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದಿದೆ. ನಗರದ ವಾರ್ಡ್ 23ರ ನಿವಾಸಿ ಪ್ರಿಯ ಎಂಬ ಮಹಿಳೆಯೇ ಸರಕಳೆದುಕೊಂಡ ಮಹಿಳೆಯಾಗಿದ್ದು, ಪಲ್ಸರ್ 220 ಬೈಕ್ನಲ್ಲಿ ಬಂದ ಇಬ್ಬರು ಕಳ್ಳರು ಸರಗಳವು ಮಾಡಿದ್ದಾರೆ ಎನ್ನಲಾಗಿದೆ. ಮೇಲ್ಮಡಿಯಲ್ಲಿದ್ದ ಪ್ರಿಯಾ ಅವರು ತಳಮಹಡಿಗೆ ಸಂಪ್ ಪರೀಕ್ಷೆ ಮಾಡಲು ಬರುತ್ತಿದ್ದಂತೆ ಹೊಂಚುಹಾಕಿ ಕಾದಿದ್ದ ಕಳ್ಳರು ಸರಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಘಟನೆಯಾದ ಕೂಡಲೇ …
Read More »ಜಿಂಕೆ ಬೇಟೆ: ಆರೋಪಿ ಬಂಧನ
ಹನೂರು: ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿ ಜಿಂಕೆ ಬೇಟೆಯಾಡಿ ಮಾಂಸವನ್ನು ದ್ವಿ ಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ಆರೋಪದ ಮೇಲೆ ಹನೂರು ತಾಲೂಕಿನ ಜಲ್ಲಿಪಾಳ್ಯ ಗ್ರಾಮದ ಕನಕರಾಜು (46) ಎಂಬಾತನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ತಮಿಳುನಾಡು ಕರ್ನಾಟಕ ಅರಣ್ಯ ಗಡಿ ಪ್ರದೇಶದಲ್ಲಿ ಜಿಂಕೆ ಮಾಂಸವನ್ನು ದ್ವಿಚಕ್ರವಾಹದಲ್ಲಿ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹೂಗ್ಯಂ ವಲಯ ಅರಣ್ಯ ಅಧಿಕಾರಿಗಳ ತಂಡ ದಾಳಿ ನಡೆಸಿತು. ಮಾಂಸ ಸಾಗಾಣಿಗೆ ಬಳಸಿದ್ದ …
Read More »ಮದ್ದಯ್ಯನಹುಂಡಿ: ಲಾರಿ-ಕಾರು ಅಪಘಾತ- ಮೂವರು ಸಾವು
ಗುಂಡ್ಲುಪೇಟೆ: ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾನುವಾರ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಗುಂಡ್ಲುಪೇಟೆಯಿಂದ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿ ಮದ್ದಯ್ಯನಹುಂಡಿ ಸಮೀಪದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದು ಕೇರಳದ ಕಣ್ಣೂರು ಮೂಲದ ಕಾರು ಚಾಲಕ ಮುನೀರ್ (30), ಮುನಿರಾ (45) ಹಾಗೂ ಮೂರೂವರೆ ವರ್ಷದ ಬಾಲಕ ಮೋಹಿಜ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಾನಿಯಾ ಮಿರ್ಜಾ, ಸಾಹಿಲ್, ಬಿಲಾಜ್, ಪರ್ವಿನ್ ಎಂಬುವವರಿಗೆ ತೀವ್ರ …
Read More »ಕುಕನೂರಿನ ದ್ಯಾಂಪುರ ಗ್ರಾಮದ ಸರಕಾರಿ ಶಾಲೆ ಸಮೀಪ ನವಜಾತ ಶಿಶು ಪತ್ತೆ
ಕುಕನೂರು: ತಾಲೂಕಿನ ದ್ಯಾಂಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಸಮೀಪ ಭಾನುವಾರ ಬೆಳಿಗ್ಗೆ ನವಜಾತ ಗಂಡು ಶಿಶುವೊಂದು ಪತ್ತೆಯಾದ ಘಟನೆ ನಡೆದಿದೆ. ಹುಟ್ಟಿದ ಕೆಲವೇ ಗಂಟೆಗಳಾಗಿದ್ದ ಶಿಶುವನ್ನು ಅಪರಿಚಿತರು ಶಾಲೆಯ ಸಮೀಪ ಬಿಟ್ಟು ಹೋಗಿರುವುದು ತಿಳಿದು ಬಂದಿದೆ. ಸ್ಥಳೀಯರು ಶಿಶುವನ್ನು ಗಮನಿಸಿ ತಕ್ಷಣ ಅಂಗನವಾಡಿ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಂಗನವಾಡಿ ಕಾರ್ಯಕರ್ತೆ ಸ್ಥಳಕ್ಕೆ ಭೇಟಿ ನೀಡಿ ಶಿಶುವಿನ ಸ್ಥಿತಿ ಪರಿಶೀಲಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ …
Read More »ತೋಂಟದಾರ್ಯ ಮಠದ ಜಾತ್ರೆಯಲ್ಲಿ ಅವಘಡ: ಕಳಚಿ ಬಿದ್ದ ಜೋಕಾಲಿ, 20ಕ್ಕೂ ಹೆಚ್ಚು ಜನರಿಗೆ ಗಾಯ
ಗದಗ: ತೋಂಟದಾರ್ಯ ಮಠದ ಜಾತ್ರೆಯಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ಡ್ಯಾನ್ಸಿಂಗ್ ಫ್ಲೈ ಜೋಕಾಲಿಯ 20ಕ್ಕೂ ಹೆಚ್ಚು ತೊಟ್ಟಿಲುಗಳು ಏಕಾಏಕಿ ಕಳಚಿ ಬಿದ್ದಿದ್ದು, ಬ್ರೇಕ್ಡ್ಯಾನ್ಸ್ ಆಡುತ್ತಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಸದ್ಯ ಗಾಯಾಳುಗಳನ್ನ ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆಪೆ ಗುಣಮಟ್ಟದ ಬ್ರೇಕ್ಡ್ಯಾನ್ಸ್ ಅಳವಡಿಕೆ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಗದಗ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲನೆ …
Read More »ಜಬಲ್ಪುರ್ ದೋಣಿ ದುರಂತ: ಮೃತರ ಸಂಖ್ಯೆ 13ಕ್ಕೆ ಏರಿಕೆ
ಮಧ್ಯಪ್ರದೇಶದ ಜಬಲ್ಪುರ್ ದೋಣಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 13ಕ್ಕೆ ಏರಿದೆ. 5 ವರ್ಷದ ಬಾಲಕ ಮತ್ತು ಆತನ ದೊಡ್ಡಪ್ಪನ ಮೃತದೇಹ ಭಾನುವಾರ ಪತ್ತೆಯಾಗಿದೆ. ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಮೃತರನ್ನು ಮಯೂರಂ (5) ಹಾಗೂ ಕಾಮರಾಜ್ (50) ಎಂದು ಗುರುತಿಸಲಾಗಿದೆ. ಬಾರ್ಗಿ ಜಲಾಶಯದ ನದಿ ಪಾತ್ರದಲ್ಲಿ ಮೃತದೇಹಗಳು ತೇಲುತ್ತಿದ್ದನ್ನು ಗಮನಿಸಿ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ತಿಳಿಸಿದ್ದಾರೆ. ಇದರೊಂದಿಗೆ ದುರಂತದಲ್ಲಿ ನಾಪತ್ತೆಯಾಗಿದ್ದ …
Read More »ಉಡುಪಿ – ಅಪಘಾತಕ್ಕೀಡಾದ ಯುವಕರ ಮೇಲೆ ಗುಂಪು ಹಲ್ಲೆ ನಡೆಸಿ ಚಿನ್ನದ ಸರ ಲೂಟಿ ಆರೋಪ – ಪ್ರಕರಣ ದಾಖಲು
ಬೈಕ್ ಅಪಘಾತಕ್ಕೀಡಾದ ಯುವಕರು ಹಾಗೂ ಅವರ ಸಹಾಯಕ್ಕೆ ಬಂದ ಗೆಳೆಯರ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಚಿನ್ನದ ಸರ ಲೂಟಿ ಮಾಡಿರುವ ಘಟನೆ ಉಡುಪಿ ತಾಲೂಕಿನ ಕುಕ್ಕಿಕಟ್ಟೆ ಬಬ್ಬುಸ್ವಾಮಿ ದೇವಸ್ಥಾನದ ಬಳಿ ನಡೆದಿದೆ. ಉಡುಪಿಯ ಬಡಗುಬೆಟ್ಟು ನಿವಾಸಿ ವೈಭವ್ ಬಿ ನಾಯಕ್ ಅವರ ಗೆಳೆಯರಾದ ಅಭಯ್ ಸ್ಯಾಮುವೆಲ್ ಮತ್ತು ಶಾಶ್ವತ್ ಶೆಟ್ಟಿ ಮೇ 3ರಂದು ಮಧ್ಯರಾತ್ರಿ ಬೈಕ್ನಲ್ಲಿ ಹೊರಟಿದ್ದರು. ಕುಕ್ಕಿಕಟ್ಟೆ ಬಳಿ ನಾಯಿಯೊಂದು ಅಡ್ಡ ಬಂದ ಪರಿಣಾಮ ಆಯತಪ್ಪಿ ಇಬ್ಬರೂ …
Read More »ಘೋರ ಕೃತ್ಯ, ಎಣ್ಣೆಗೆ ನೀರು ತರಲು ನಿರಾಕರಿಸಿದ ಬಾಲಕನಿಗೆ ಗುಂಡಿಕ್ಕಿ ಕೊಂದ ಸಂಬಂಧಿಕ!
ಉತ್ತರಪ್ರದೇಶ: ಇಲ್ಲಿನ ಕಾಸಗಂಜ್ ಜಿಲ್ಲೆಯ ಯಾಕುತ್ಗಂಜ್ ಗ್ರಾಮದಲ್ಲಿ ನಡೆದ ನಾಮಕರಣ ಸಮಾರಂಭವೊಂದು ರಕ್ತಸಿಕ್ತವಾಗಿ ಅಂತ್ಯಗೊಂಡಿದೆ. ಮದ್ಯಪಾನ ಮಾಡುತ್ತಿದ್ದ ಧನೇಶ್ ಯಾದವ್ ಎಂಬ ವ್ಯಕ್ತಿ, ಕುಡಿಯಲು ನೀರು ಕೇಳಿದಾಗ ಒಂಬತ್ತು ವರ್ಷದ ಬಾಲಕ ಯಶ್ಪಾಲ್ ಅದನ್ನು ತರಲು ನಿರಾಕರಿಸಿದ್ದಾನೆ. ಇದರಿಂದ ಕೆರಳಿದ ಧನೇಶ್, ತನ್ನ ಬಳಿಯಿದ್ದ ಪಿಸ್ತೂಲಿನಿಂದ ಬಾಲಕನ ಹೊಟ್ಟೆಗೆ ನೇರವಾಗಿ ಗುಂಡು ಹಾರಿಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಯಶ್ಪಾಲ್ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಅಸುನೀಗಿದ್ದಾನೆ. ಈ ಘಟನೆ ನಡೆದ ಬೆನ್ನಲ್ಲೇ ಪರಾರಿಯಾಗಿದ್ದ …
Read More »ಖೋಟಾ ನೋಟು ಚಲಾವಣೆಗೆ ಯತ್ನ
ಪುಂಜಾಲಕಟ್ಟೆ: ಬಡಗಕಜೆಕ್ಕಾರು ಗ್ರಾಮದ ಪಾಂಡವರಕಲ್ಲು ಬಳಿಯ ಕೋಮಿನಡ್ಕ ಎಂಬಲ್ಲಿ 500 ರೂ. ಮುಖಬೆಲೆಯ ಖೋಟಾ ನೋಟು ಚಲಾವಣೆಗೆ ಯತ್ನಿಸಿದ ಇಬ್ಬರನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದು, ಕಾರ್ಯಾಚರಣೆ ವೇಳೆ ಒಬ್ಬ ಪರಾರಿಯಾಗಿದ್ದಾನೆ.ಇಲ್ಲಿನ ಮುಹಮ್ಮದ್ ಸಮೀರ್ (28) ಹಾಗೂ ಮಹಮ್ಮದ್ ಇರ್ಪಾನ್ (26) ಬಂಧಿತರಾಗಿದ್ದು, ರಶೀದ್ ಕುಂಡಡ್ಕ ಸದ್ಯ ತಲೆ ಮರೆಸಿಕೊಂಡಿದ್ದಾನೆ.ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು, 2.38 ಲಕ್ಷ ರೂ. ಮೌಲ್ಯದ 500 ರೂ. ಮುಖಬೆಲೆಯ ಖೋಟಾ ನೋಟುಗಳು, 3 ಮೊಬೈಲ್ ಪೋನ್ …
Read More »ಈಜಲು ಹೋಗಿದ್ದ ಇಬ್ಬರು ಬಾಲಕರ ದುರ್ಮರಣ
ಬೆಳಗಾವಿ: ಈಜಲು ಹೋಗಿದ್ದ ಇಬ್ಬರು ಬಾಲಕರು ದುರ್ಮರಣ ಹೊಂದಿದ ಘಟನೆ ಬೆಳಗಾವಿಯಲ್ಲಿ ರವಿವಾರ (ಮೇ.03) ಬೆಳಿಗ್ಗೆ ನಡೆದಿರುವ ದುರ್ಘಟನೆ. ನಗರದ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ಹೊಂಡದಲ್ಲಿ ಈಜಲು ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರಿನ ಆಳ ತಿಳಿಯದೆ ಮುಳುಗಿ ಸಾವನ್ನಪ್ಪಿದ್ದಾರೆ. ಪರಶುರಾಮ (11) ಮತ್ತು ಶಿವಂ (9) ಮೃತ ದುರ್ದೈವಿ ಬಾಲಕರು. ಬೇಸಿಗೆಯ ಬಿಸಿಲಿನ ಬೇಗೆಯಿಂದ ಪಾರಾಗಲು ಈ ಬಾಲಕರು ಗುಂಪಾಗಿ ಈಜಲು ಬಂದಿದ್ದರು ಎನ್ನಲಾಗಿದೆ. ಹೊಂಡಕ್ಕೆ ಇಳಿದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





