Breaking News

BigTv News

ಸಾಲ ಮಾಡಿ ತಂದಿದ್ದ ‘ಕನಸಿನ ಬೈಕ್’ ಕೊಂಡ ರಾತ್ರಿಯೇ ಕಳ್ಳತನ! ಕೆಟಿಎಂ ಬೈಕ್ ಕಳವಿನ ಕೃತ್ಯ ಸಿಸಿಟಿವಿಲಿ ಸೆರೆ

ನೆಲಮಂಗಲ: ಯುವಕನೊಬ್ಬ ಕಷ್ಟಪಟ್ಟು ಹಣ ಉಳಿಸಿ, ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಅದೇ ದಿನ ರಾತ್ರಿ ಕಳ್ಳತನವಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಬೈಕ್ ಮಾಲೀಕ ಚಂದು ಈಗ ಕಂಗಾಲಾಗಿದ್ದಾರೆ. ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಮನೆಯ ಮುಂದೆ ಚಂದು ತನ್ನ ಕೆಟಿಎಂ ಬೈಕ್ ಅನ್ನು ಸುರಕ್ಷಿತವಾಗಿ ಲಾಕ್ ಮಾಡಿ ನಿಲ್ಲಿಸಿದ್ದರು. ಆದರೆ, ಮಧ್ಯರಾತ್ರಿ ಬೇರೆ ಬೈಕ್‌ನಲ್ಲಿ ಬಂದ ಕಳ್ಳರ ಗ್ಯಾಂಗ್, ಯಾರ ಭಯವೂ ಇಲ್ಲದೆ ಕ್ಷಣಾರ್ಧದಲ್ಲಿ ಲಾಕ್ ಓಪನ್ …

Read More »

ತೀರ್ಥಹಳ್ಳಿ ಮಹಿಳೆಗೆ 12.52 ಲಕ್ಷ ರೂ. ವಂಚನೆ |

ಶಿವಮೊಗ್ಗ:ಫೇಸ್‌ಬುಕ್‌ನಲ್ಲಿ ಪರಿಚಿತ ವ್ಯಕ್ತಿಯೊಬ್ಬ ಹಣಕಾಸಿನ ಸಹಾಯ ಮಾಡುವುದಾಗಿ ನಂಬಿಸಿ ತೀರ್ಥಹಳ್ಳಿಯ ಮಹಿಳೆಗೆ ಬರೋಬ್ಬರಿ 12.52 ಲಕ್ಷ ರೂ. ವಂಚಿಸಿದ್ದಾನೆ. ಫೇಸ್‌ಬುಕ್‌ನಲ್ಲಿ ಡಾ. ಅಲೆಕ್ಸ್ ಚಾರ್ಲ್ಸ್ ಎಂಬಾತ 44 ವರ್ಷದ ಮಹಿಳೆಗೆ ಫೇಸ್‌ಬುಕ್ ಮೂಲಕ ಪರಿಚಿತನಾಗಿದ್ದ. 110,000 ವಿದೇಶದ ನಂಬರ್‌ನಿಂದ ಮೆಸೇಜ್ ಮಾಡಿ ಹಣಕಾಸಿನ ಸಹಾಯ ಮಾಡುವುದಾಗಿ ನಂಬಿಸಿ ಮಹಿಳೆಯ ಯೂನಿಯನ್ ಬ್ಯಾಂಕ್‌ನ ಮಾಹಿತಿ ಪಡೆದಿದ್ದ. ಬಳಿಕ ಕ್ಯಾಪಿಟಲ್ ಸ್ಟರ್ಲಿಂಗ್ ಯುಕೆ ಬ್ಯಾಂಕ್‌ನ ಮ್ಯಾನೇಜರ್ ಎಂದು ಹೇಳಿಕೊಂಡು ಕರೆ ಮಾಡಿದ್ದ ವಂಚಕರು, …

Read More »

ಮಣಿಪಾಲ: ಕೆಎಂಎಫ್ ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ; ಅಪಾರ ನಷ್ಟ

ಮಣಿಪಾಲ ಎಪ್ರಿಲ್ 20: ಈಶ್ವರ ಮತ್ತೆ ನಗರದಲ್ಲಿರುವ ಕರ್ನಾಟಕ ಹಾಲು ಒಕ್ಕೂಟದ (KMF) ಹಳೆಯ ಹಾಲು ಸಂಸ್ಕರಣಾ ಘಟಕದಲ್ಲಿ ಸೋಮವಾರ ಬೆಳಿಗ್ಗೆ ಬೆಂಕಿ ಅಕಸ್ಮಿಕ ಸಂಭವಿಸಿದೆ. ಘಟಕದಲ್ಲಿ ನಡೆಯುತ್ತಿದ್ದ ವೆಲ್ಡಿಂಗ್ ಕೆಲಸದ ವೇಳೆ ಉಂಟಾದ ಕಿಡಿ ಬೆಂಕಿಗೆ ಕಾರಣವಾಗಿದ್ದು, ಘಟಕಕ್ಕೆ ಅಪಾರ ಹಾನಿಯಾಗಿದೆ ಎಂದು ತಿಳಿದುಬಂದಿದೆ.ಸೋಮವಾರ ಬೆಳಿಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ಘಟಕದಲ್ಲಿ ವೆಲ್ಡಿಂಗ್ ಕಾರ್ಯ ನಡೆಯುತ್ತಿತ್ತು.ಈ ಸಂದರ್ಭದಲ್ಲಿ ಹಾರಿದ ಬೆಂಕಿಯ ಕಿಡಿಯು ಸಮೀಪದಲ್ಲಿದ್ದ ಆಯಿಲ್ ಮೇಲೆ ಬಿದ್ದಿದೆ. …

Read More »

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಆರ್‌ಟಿಒ ಅಧಿಕಾರಿಗೆ ಜೀವ ಬೆದರಿಕೆ: ಪ್ರಕರಣ ದಾಖಲು

ಬೆಂಗಳೂರು : ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಅಪರಿಚಿತನೊಬ್ಬ ಕರೆ ಮಾಡಿ ಮಹಾರಾಷ್ಟ್ರದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ(ಆರ್‌ಟಿಒ) ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿದೆ.ಪ್ರಸಾದ್ ಶಿವದಾಸ್ ನಾಲ್ವಡೆ ಎಂಬವರು ನೀಡಿದ ದೂರಿನನ್ವಯ ಅಪರಿಚಿತನ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಇದಕ್ಕೂ ಮುನ್ನ, ಪ್ರಸಾದ್ ಶಿವದಾಸ್ ನಾಲ್ವಡೆ ನೀಡಿದ ದೂರಿನಂತೆ ಮಹಾರಾಷ್ಟ್ರದ ಕಾಶಿಗಾಂವ್ ಠಾಣೆಯ ಪೊಲೀಸರು ಶೂನ್ಯ …

Read More »

ಮನೆಯೊಳಗೆ ನುಗ್ಗಿ ಕೀ ಕದ್ದು ಸ್ಕೂಟರ್‌ನೊಂದಿಗೆ ಪರಾರಿಯಾದ ಕಳ್ಳರು!

ಕಾರ್ಕಳ, ಎ.20: ಮನೆಯೊಳಗೆ ನುಗ್ಗಿದ ಕಳ್ಳರು ಕಳವಿಗೆ ಯತ್ನಿಸಿ, ಬಳಿಕ ಅಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವು ಮಾಡಿಕೊಂಡು ಹೋದ ಘಟನೆ ಕಾರ್ಕಳ ಕರಿಯಕಲ್ಲು ಎಂಬಲ್ಲಿ ನಡೆದಿದೆ.ಉಜಿರೆಯಲ್ಲಿ ಕೆಲಸ ಮಾಡಿಕೊಂಡಿದ್ದ ಹರೀಶ್ ಶೆಟ್ಟಿ ಎಂಬವರು ಎ.16ರಂದು ಮನೆಗೆ ಬೀಗ ಹಾಕಿ ಹೋಗಿದ್ದು, ಎ.19ರಂದು ಬೆಳಗ್ಗೆ ಮನೆಯಲ್ಲಿ ಕಳವು ನಡೆದಿರುವುದು ಕಂಡುಬಂದಿದೆ. ಈ ಅವಧಿಯಲ್ಲಿ ಮನೆಯ ಮುಖ್ಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನೊಳಗಿದ್ದ ಬಟ್ಟೆಯನ್ನು ಚೆಲ್ಲಾಪಿಲ್ಲಿ ಮಾಡಿದ್ದು, ನಂತರ ಮನೆಯ ಒಳಗಡೆ …

Read More »

ರಾಜಸ್ಥಾನ ರಿಫೈನರಿ ಉದ್ಘಾಟನೆ ಮುಂದೂಡಿಕೆ: ಅಗ್ನಿ ಅವಘಡದ ಬೆನ್ನಲ್ಲೇ ಕೇಂದ್ರದ ತೀರ್ಮಾನ; ಭದ್ರತಾ ಲೋಪದ ಬಗ್ಗೆ ತನಿಖೆಗೆ ಆದೇಶ!

ಬಲೋತ್ರಾ (ರಾಜಸ್ಥಾನ): ನಾಳೆ (ಏಪ್ರಿಲ್ 21, 2026) ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಯಾಗಬೇಕಿದ್ದ ಪಚಪಾದ್ರದ ಎಚ್‌ಪಿಸಿಎಲ್ ರಾಜಸ್ಥಾನ ರಿಫೈನರಿಯ (HRRL) ಉದ್ಘಾಟನಾ ಸಮಾರಂಭವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಇಂದು ಮಧ್ಯಾಹ್ನ ರಿಫೈನರಿಯ ಪ್ರಮುಖ ಘಟಕದಲ್ಲಿ ಸಂಭವಿಸಿದ ಬೆಂಕಿ ಅವಘಡವೇ ಈ ನಿರ್ಧಾರಕ್ಕೆ ಕಾರಣವಾಗಿದೆ.ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಅಧಿಕೃತವಾಗಿ ಉದ್ಘಾಟನೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದೆ. ಪರಿಸ್ಥಿತಿ ತಿಳಿಯಾದ ಬಳಿಕ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ. ರಿಫೈನರಿಯ …

Read More »

ಪಾಲಕ್ಕಾಡ್: ಕೋಳಿ ಸಾರು ಕೊಡದಿದ್ದಕ್ಕೆ ಸಿಟ್ಟಿನಿಂದ ಚಿಕ್ಕಪ್ಪನನ್ನು ಕೊಂದ ಯುವಕ

ಪಾಲಕ್ಕಾಡ್ ಎಪ್ರಿಲ್ 20: ಮನೆಯಲ್ಲಿ ತಯಾರಿಸಿದ ಕೋಳಿ ಸಾರನ್ನು ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೆರಳಿದ ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನು ಪೈಪ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಪಾಲಕ್ಕಾಡ್‌ನ ಕೌಂಡನೂರಿನಲ್ಲಿ ನಡೆದಿದೆ. ಸ್ಥಳೀಯ ಪೊಲೀಸರು ಆರೋಪಿ ಪ್ರಭಾಕರನ್ (45) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.ಮೃತಪಟ್ಟವರನ್ನು ಸೆಂಥಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ 6:30ರ ಸುಮಾರಿಗೆ ಈ ರಕ್ತಪಾತ ನಡೆದಿದೆ. ಮನೆಯಲ್ಲಿ ಕೋಳಿ ಸಾರು ತಯಾರಿಸಿದ್ದ ಸೆಂಥಿಲ್ ಕುಮಾರ್ ಅವರು ಅದನ್ನು …

Read More »

ಅಮರಾವತಿ ಲೈಂಗಿಕ ಹಗರಣ: ಐಷಾರಾಮಿ ಜೀವನ, ಕಾರು, ನಗದು ಪ್ರದರ್ಶಿಸುತ್ತಿದ್ದ ಅಯಾನ್ ಅಹ್ಮದ್ ಆಸ್ತಿಯ ಮೇಲೆ ಪೊಲೀಸರ ಕಣ್ಣು!

ಅಮರಾವತಿ: ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಪರತ್ವಾಡದಲ್ಲಿ ನಡೆದ ಲೈಂಗಿಕ ಶೋಷಣೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಮುಖ್ಯ ಆರೋಪಿ 19 ವರ್ಷದ ಅಯಾನ್ ಅಹ್ಮದ್‌ನ ಅತಿಯಾದ ಐಷಾರಾಮಿ ಜೀವನದ ಬಗ್ಗೆ ಪೊಲೀಸರು ಈಗ ಗಮನ ಹರಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ ಆರೋಪಿಯು ದುಬಾರಿ ಕಾರುಗಳು, ಕಂತೆ ಕಂತೆ ನಗದು ಮತ್ತು ಮಾರಕಾಸ್ತ್ರಗಳನ್ನು ಪ್ರದರ್ಶಿಸುತ್ತಿರುವುದು ಕಂಡುಬಂದಿದೆ.ಸುಮಾರು 200 ಅಪ್ರಾಪ್ತ ಬಾಲಕಿಯರ ಲೈಂಗಿಕ ಶೋಷಣೆ ಮತ್ತು ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ತನಿಖೆಯ …

Read More »

ಮಂಗಳೂರು: 46 ಲಕ್ಷ ಮೌಲ್ಯದ MDMA ವಶ; ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ

ಮಂಗಳೂರು ಎಪ್ರಿಲ್ 19: ಜೆಪ್ಪಿನಮೊಗರು ಬಳಿ ಬೃಹತ್ ಪ್ರಮಾಣದ MDMA ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕಂಕನಾಡಿ ನಗರ ಪೊಲೀಸರು ರವಿವಾರ ಬಂಧಿಸಿದ್ದಾರೆ. ಬಂಧಿತರಿಂದ ₹46,50,000 ಮೌಲ್ಯದ 465.8 ಗ್ರಾಂ ಮಡ್ಮ ವಶಪಡಿಸಿಕೊಳ್ಳಲಾಗಿದೆ.ಬಂಧಿತರನ್ನು ಪಿಲಾರು ಹೊಸಗದ್ದೆ ನಿವಾಸಿ ಪರ್ವೇಜ್ ಅಲಿಯಾಸ್ ದಾವೂದ್ ಪರ್ವೇಜ್ (40) ಮತ್ತು ಈತನ ಸಹಚರ ನಜರತ್ ಅಲಿ (37) ಬಂಧಿತರು. ಆರೋಪಿಗಳು ಬೈಕ್‌ನಲ್ಲಿ ಮಾದಕ ವಸ್ತುವನ್ನು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ …

Read More »

ಮಹಾರಾಷ್ಟ್ರ| 5 ಕೋಟಿ.ರೂ. ಮೌಲ್ಯದ ಎಂಡಿಎಂಎ ಮಾತ್ರೆ ವಶ; ಮಹಿಳೆಯ ಬಂಧನ

ಕಲ್ಯಾಣ್ ಎ. 20: ಮಹಾರಾಷ್ಟ್ರದ ಕಲ್ಯಾಣ್ ತಾಲೂಕು ಪೊಲೀಸರ ನೆರವಿನೊಂದಿಗೆ ಮಾದಕ ದ್ರವ್ಯ ನಿಯಂತ್ರಣ ಬ್ಯುರೊ (ಎನ್‌ಸಿಬಿ)ದ ಮುಂಬೈ ಘಟಕ ಟಿಟ್ವಾಲದಲ್ಲಿ 35 ವರ್ಷದ ಮಹಿಳೆಯನ್ನು ಬಂಧಿಸಿ 5 ಕೋ.ರೂ.ಗೂ ಅಧಿಕ ಮೌಲ್ಯದ ಎಂಡಿಎಂಎ ಮಾತ್ರೆಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.ಮಹಿಳೆಯ ವಶದಲ್ಲಿ 2.3 ಕಿ.ಗ್ರಾಂ. ಎಂಡಿಎಂಎ ಇತ್ತು ಎಂದು ಪೊಲೀಸರು ಹೇಳಿದ್ದಾರೆ. ಮಹಿಳೆ ವಾಸಿಸುತ್ತಿದ್ದ ಟಿಟ್ವಾಲದಲ್ಲಿರುವ ಫ್ಲ್ಯಾಟ್‌ನಲ್ಲಿ ಎನ್‌ಸಿಬಿ ತಂಡ ಶನಿವಾರ ತಡ ರಾತ್ರಿ ಶೋಧ ಕಾರ್ಯಾಚರಣೆ …

Read More »