ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯುವ ಅಭ್ಯಾಸ ಹಲವರಲ್ಲಿದೆ. ಕಾಫಿ ಕುಡಿಯುವುದು ತುಂಬಾ ಒಳ್ಳೆಯ ಅಭ್ಯಾಸನೇ ಆದರೆ ಹಾಲು ಹಾಕಿದ ಕಾಫಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಅಷ್ಟು ಸರಿಯಲ್ಲ. ಬ್ಲ್ಯಾಕ್ ಕಾಫಿ ಆರೋಗ್ಯ ವೃದ್ಧಿಸುತ್ತದೆ, ಆದರೆ ಹಾಲು ಹಾಕಿದ ಕಾಫಿ ಕುಡಿಯುವುದು ಒಳ್ಳೆಯದಲ್ಲ, ಹಾಲು ಹಾಕಿ ಮಾಡಿದ ಕಾಫಿ ಕುಡಿಯುವುದರಿಂದ ಉಂಟಾಗುವ ಅಡ್ಡಪರಿಣಾಮಗಳೇನು.
ಜೀರ್ಣಕ್ರಿಯೆಗೆ ಒಳ್ಳೆಯದಲ್ಲ. ಹಾಲು ಹಾಕಿದ ಕಾಪಿ ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವುದು. ಇದರಿಂದ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಕಾಫಿ ಕುಡಿಯುವುದರಿಂದ ಎದೆಯುರಿ, ಬೇಧಿ ಈ ಬಗೆಯ ಸಮಸ್ಯೆ ಉಂಟಾಗುವುದು.ಉದ್ವೇಗ ಹೆಚ್ಚಾಗುವುದು ನೀವು ಹಾಲು ಹಾಕಿದ ಕಾಫಿ ಬೆಳಗ್ಗೆ ಹೊತ್ತಿನಲ್ಲಿ ಕುಡಿಯುವುದರಿಂದ ಒಂಥರಾ ಉದ್ವೇಗ, ಕಿರಿಕಿರಿ ಅನುಭವಿಸುವುರಿ. ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಕಾಫಿ ನಿಮ್ಮ ಮೂಡ್ ಹಾಳಾಗುವುದು.ವಿಪರೀತ ತಲೆನೋವು ಉಂಟಾಗುವುದು
ಖಾಲಿಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು, ಇದರಿಂದ ತಲೆನೋವು ಹೆಚ್ಚಾಗುವುದು.
ದೇಹವು ಪೋಷಕಾಂಶ ಸರಿಯಾಗಿ ಹೀರಿಕೊಳ್ಳುವುದಿಲ್ಲ.ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಕಾಫಿ ಕುಡಿದು ನಂತರ ಆಹಾರ ಸೇವಿಸಿದರೆ ನಾವು ಸೇವಿಸಿದ ಆಹಾರದಲ್ಲಿನ ಪೋಷಕಾಂಶಗಳನ್ನು ನಮ್ಮ ದೇಹವು ಸರಿಯಾಗಿ ಹೀರಿಕೊಳ್ಳುವುದಿಲ್ಲ. ಇದರ ಕುರಿತು ಇನ್ನಷ್ಟು ಅಧ್ಯಯನ ನಡೆಯುತ್ತಿದೆ.ನಿದ್ದೆಸರಿಯಾಗಿ ಬರಲ್ಲ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಹಾಕಿದ ಕಾಫಿ ಕುಡಿಯುವುದರಿಂದ ನಿದ್ರಾಹೀನತೆ ಉಂಟಾಗುವುದು ಎಂದು ಹೇಳಲಾಗುವುದು.
bigtvnews | Hubli Dharwad News | Kannada News | Karnataka News Hubli News | News In Hubli | Local news





