Breaking News

BigTv News

ಬೈಕ್-ಕಾರ್ ಮುಖಾಮುಖಿ ಡಿಕ್ಕಿ: ಗದಗದಲ್ಲಿ ಮೂವರು ಸವಾರರು ದುರ್ಮರಣ

ಗದಗ: ಬೈಕ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಬಳಿ ನಡೆದಿದೆ. ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಮೃತರನ್ನು ಜಂತಲಿ ಗ್ರಾಮದ ಶಿವು ಪಾಟ್ಲಿ (28), ಆನಂದ ಲಕ್ಷ್ಮೇಶ್ವರಮಠ (30) ಹಾಗೂ ಮುತ್ತು ಮುದುಗಣ್ಣವರ್ (30) ಎಂದು ಗುರುತಿಸಲಾಗಿದೆ. ಮುಂಡರಗಿಯಿಂದ ಜಂತ್ಲಿಶಿರೂರು …

Read More »

5 ಲಕ್ಷ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ: ನಕಲಿ ಪತ್ರಕರ್ತ ಅರೆಸ್ಟ್

ಹಾವೇರಿ: 5 ಲಕ್ಷ ರೂಪಾಯಿ ಸಾಲ ಕೊಡಿಸುವುದಾಗಿ ಮಹಿಳೆಯನ್ನು ನಂಬಿಸಿ ಅತ್ಯಾಚಾರ ಎಸಗಿದ ಬಳಿಕ ಖಾಸಗಿ ಕ್ಷಣದ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ನಕಲಿ ಪತ್ರಕರ್ತನನ್ನು ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.ದೀಪಕ್ ಉಪಳೆ ಬಂಧಿತ ಆರೋಪಿ. ಮಹಿಳೆಗೆ 5 ಲಕ್ಷ ರೂ ಸಾಲ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ ಲಾಡ್ಜ್ ಸೇರಿದಂತೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿ ಖಾಸಗಿ ವಿಡಿಯೋ ಮಾಡಿಕೊಂಡಿದ್ದಾನೆ. …

Read More »

ಸ್ಕೂಟಿ ಡಿಕ್ಕಿಯಲ್ಲಿಟ್ಟಿದ್ದ 3.15 ಲಕ್ಷ ರೂ. ದೋಚಿದ ಖದೀಮ

ರಾಣೆಬೆನ್ನೂರ: ಪರಿಚಯದವರಂತೆ ಮಾತನಾಡಿಸಿದ ಖದೀಮನೊಬ್ಬ ಸ್ಕೂಟಿ ಡಿಕ್ಕಿಯಲ್ಲಿಟ್ಟಿದ್ದ 3.15 ಲಕ್ಷ ರೂ.ಅನ್ನು ದೋಚಿರುವ ಟನೆ ನಗರದ ಯೂನಿಯನ್ ಬ್ಯಾಂಕ್ ಎದುರು ಗುರುವಾರ ನಡೆದಿದೆ. ತಾಲೂಕಿನ ಜೋಯಿಸರಹರಳಹಳ್ಳಿ ಗ್ರಾಮದ ಯುವಕ ಪ್ರವಿಣ ಕೊಂಡಜ್ಜಿ ಎಂಬುವರ ಹಣ ದೋಚಿರುವುದು. ಇವರು ಬ್ಯಾಂಕಿನ ವ್ಯವಹಾರ ಸಲುವಾಗಿ 3.15 ಲಕ್ಷ ರೂ. ತೆಗೆದುಕೊಂಡು ಸ್ಕೂಟಿಯ ಡಿಕ್ಕಿಯಲ್ಲಿಟ್ಟುಕೊಂಡು ಬಂದಿದ್ದರು. ಬ್ಯಾಂಕ್ ಎದುರು ಹಣವನ್ನು ಡಿಕ್ಕಿಯಿಂದ ಹೊರಗೆ ತೆಗೆದು ನೋಡಿ ಮತ್ತೇ ಅದರಲ್ಲಿಯೆ ಇಟ್ಟಿದ್ದರು. ಇದನ್ನು ಗಮನಿಸಿದ ಖದೀಮ …

Read More »

ಆಂಧ್ರಪ್ರದೇಶ : ಕ್ಯಾಂಟರ್ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ; ಒಂದೇ ಕುಟುಂಬದ ಐವರು ಮೃತ್ಯು

ಕೋಲಾರ: ತಿರುಪತಿ ದರ್ಶನಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ-ಪಲಮನೇರು ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಪಲಮನೇರು ತಾಲೂಕಿನ ಗಂಗಾವರಂ ಹೋಬಳಿಯ ವೈಎಸ್‌ಆರ್ ಜಂಕ್ಷನ್ ಸಮೀಪ ಚಲಿಸುತ್ತಿದ್ದ ಕ್ಯಾಂಟರ್ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ರಾಜಾಜಿನಗರ ನಿವಾಸಿಗಳಾದ ಮೋಹನ್ ದಾಸ್ (70), …

Read More »

ಎಥಿನಾಲ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಬೆಂಕಿ; ಚಾಲಕ ಪಾರು

ರಾಣೆಬೆನ್ನೂರ: ಎಥಿನಾಲ್ ತುಂಬಿಕೊಂಡು ಹೋಗುತ್ತಿದ್ದ ಲಾರಿ ಪಲ್ಟಿಯಾಗಿ ಧಗಧಗನೆ ಹೊತ್ತಿ ಉರಿದ ಟನೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ&48ರಲ್ಲಿ ಗುರುವಾರ ನಡೆದಿದೆ. ಲಾರಿಯು ಹುಬ್ಬಳ್ಳಿಯಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಸರ್ವೀಸ್ ರಸ್ತೆ ದಾಟಿ ಜಮೀನುವೊಂದರ ಬಳಿ ಬಿದ್ದು ನಿಂತಿದೆ. ಇದರಿಂದ ಬೆಂಕಿ ಹತ್ತಿಕೊಂಡಿದ್ದು ಕೆಲ ಹೊತ್ತಿನಲ್ಲಿ ಧಗಧಗನೆ ಉರಿಯಲು ಶುರುವಾಗಿದೆ. ಚಾಲಕ ಕೂಡಲೇ ಪಾರಾಗಿದ್ದು, ಟನಾ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ …

Read More »

ಬಸ್ ಡಿಕ್ಕಿ ಕಾರು ಚಾಲಕ ಸಾವು

ಯಲ್ಲಾಪುರ: ಕಾರೊಂದು ಬಸ್ ಗೆ ಡಿಕ್ಕಿ ಹೊಡೆದು ಕಾರ್ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಮಳಲಗಾಂವ ಕ್ರಾಸ್ ಬಳಿ ನಡೆದಿದೆ. ಕುಂದಾಪುರದ ಮುಖೇಶ ಶೆಟ್ಟಿ (40) ಮೃತ ವ್ಯಕ್ತಿ. ಸಿದ್ದಾಪುರ ಕಡೆಯಿಂದ ಬೆಳಗಾವಿಗೆ ಮದುವೆಗೆಂದು ಹೊರಟಿದ್ದ ಬಸ್ ಗೆ ಕಲಘಟಗಿಯಿಂದ ಶಿರಸಿ ಕಡೆಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.ಕಾರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ಹಾಗೂ ಕಾರಿನಲ್ಲಿ ಇದ್ದ ಪ್ರಯಾಣಿಕರಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದ್ದು, ಬಸ್ ನ …

Read More »

ಮಂಗಳೂರು| ಲೈಂಗಿಕ ಕಿರುಕುಳ ಆರೋಪ: ನೈರ್ಮಲ್ಯ ನಿರೀಕ್ಷಕನ ವಿರುದ್ಧ ಪ್ರಕರಣ ದಾಖಲು

ಮಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕೆಗೆ ನೈರ್ಮಲ್ಯ ನಿರೀಕ್ಷಕ ಲೈಂಗಿಕ ಕಿರುಕುಳ ಮಾಡಿದ್ದಾನೆ ಎಂದು ಆರೋಪಿಸಲಾಗಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾನು ಕಂಕನಾಡಿಯ ವಾರ್ಡ್‌ನಲ್ಲಿ ಖಾಯಂ ಪೌರ ಕಾರ್ಮಿಕೆಯಾಗಿದ್ದು, 10 ದಿನ ರಜೆ ಬೇಕು ಎಂದು ಮನಪಾ ನೈರ್ಮಲ್ಯ ನಿರೀಕ್ಷಕ ಭಾಸ್ಕರ ಎಂಬಾತನ ಬಳಿ ಕೇಳಿದಾಗ 2025ರ ಜೂ.22ರಂದು ಬೆಳಗ್ಗೆ 10ಕ್ಕೆ ಕಚೇರಿಗೆ ಬರಲು ತಿಳಿಸಿದ್ದು, ಅದರಂತೆ ಆ ದಿನ ತಾನು ಕಚೇರಿಗೆ ಹೋದಾಗ ನನ್ನ ಕೈಗೆ 1 …

Read More »

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಸಿರುಗುಪ್ಪ: ನಗರದ ಹೊರವಲಯದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ನಗರದ ಪೊಲೀಸರು ಬಂಧಿಸಿದ ಘಟನೆ ಮಾ.4ರ ಬುಧವಾರ ನಡೆದಿದೆ. ನಗರದ 3ನೇ ವಾರ್ಡ್ ನಿವಾಸಿ ಇರ್ಫಾನ್ ಬಂಧಿತ ಆರೋಪಿ. ನಗರದ ಆದೋನಿ ರಸ್ತೆಯ ತಾಯಮ್ಮ ದೇವಸ್ಥಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇರ್ಫಾನ್ ನನ್ನು ಬಂಧಿಸಿ, 5 ಸಾವಿರ ಮೌಲ್ಯದ 50 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Read More »

ಗೋಕರ್ಣದಲ್ಲಿ ಹೋಂಸ್ಟೇ ನಿಯಮ ಉಲ್ಲಂಘನೆ: ವಿದೇಶಿ ಪ್ರವಾಸಿಗರ ಮಾಹಿತಿ ನೀಡದ ಮಾಲೀಕರ ವಿರುದ್ಧ ಪ್ರಕರಣ

ಕಾರವಾರ: ಜಿಲ್ಲೆಯ ಪ್ರವಾಸಿ ತಾಣವಾದ ಗೋಕರ್ಣದಲ್ಲಿ ವಿದೇಶಿ ಪ್ರವಾಸಿಗರು ತಂಗಿರುವ ಮಾಹಿತಿ ಪೊಲೀಸ್ ಇಲಾಖೆಗೆ ನೀಡದೆ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಹೋಂಸ್ಟೇ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಭೀಮಕೊಂಡ ಪ್ರದೇಶದಲ್ಲಿರುವ ವೈಲ್ಡ್ ವಿಲೇಜ್ ಹೋಮ್ ಸ್ಟೇ ಮಾಲೀಕ ಸೋಮಾ ಗಣಪು ಗೌಡ ಹಾಗೂ ವ್ಯವಸ್ಥಾಪಕ ಗಣೇಶ ಸೋಮಾ ಗೌಡ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ಹೋಂಸ್ಟೇನಲ್ಲಿ ಅರ್ಜೆಂಟೈನಾದ ಪ್ರವಾಸಿಗ ಸ್ಯಾಂಟಿಗೋ ಆಸ್ಕರ್ ಲ್ಯುಕೆ ಮೆರ್ಲೊ ಹಾಗೂ ಅವರ ತಾಯಿ ಕಳೆದ …

Read More »

ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದಿಂದ ಕಳವು

ಬಜಪೆ: ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದ ಹಿಂಬದಿಯ ಮರದ ಬಾಗಿಲನ್ನು ಕಲ್ಲಿನಿಂದ ಮುರಿದು ಮುರಿದು ದೊಡ್ಡ ಕಾಣಿಕೆ ಡಬ್ಬಿಯಲ್ಲಿದ್ದ ಹಣ ಹಾಗೂ ಇತರ ಎರಡು ಡಬ್ಬಿಗಳನ್ನು ಕಳವು ಮಾಡಿದ ಘಟನೆ ಮಾ.3ರಂದು ರಾತ್ರಿ ಸುಮಾರು 1.55ಕ್ಕೆ ನಡೆದಿದೆ. ದೊಡ್ಡ ಕಾಣಿಕೆ ಡಬ್ಬಿಯನ್ನು ಹೊರ ತಂದು ಅದನ್ನು ಒಡೆದು ಅದರಲ್ಲಿದ್ದ ಹಣ ಹಾಗೂ ಇತರ ಎರಡು ಕಾಣಿಕೆ ಡಬ್ಬಿಗಳನ್ನು ಕಳವು ಮಾಡಿರುವುದು ಅಲ್ಲಿದ್ದ ಸಿಸಿಕೆಮರಾದಲ್ಲಿ ಸೆರೆಯಾಗಿದೆ. ಸುಮಾರು 50 ಸಾವಿರ ರೂ. …

Read More »