Breaking News

BigTv News

ಕಡಬದ ವ್ಯಾಪಾರಿಗೆ ಹಣಕ್ಕೆ ಬೇಡಿಕೆ, ಜೀವ ಬೆದರಿಕೆ

ಕಡಬ: ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ ಆರೋಪದಡಿ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟ್ರುಪ್ಪಾಡಿ ಗ್ರಾಮದ ಕೆ.ಎಂ. ಮ್ಯಾಥ್ಯೂ ಅವರಿಗೆ ಕೋಡಿಂಬಾಳದ ಅನೀಸ್ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟು, ಕಡಬ ಪೇಟೆಗೆ ಬರುವಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅದರಂತೆ ಪುತ್ರ ರಕ್ಷಿತ್ ಮಾಣಿ ಜೊತೆ ಕಡಬ ಪೇಟೆಗೆ ಬಂದಾಗ, ಕಾರಿನಲ್ಲಿ ಬಂದ ವಿಕ್ಟರ್ ಮಾರ್ಟಿಸ್ ಮತ್ತು ಅನೀಸ್ ಹಲ್ಲೆಗೆ ಮುಂದಾಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿ …

Read More »

ವಿಜಯಪುರ: ಜಮೀನು ವಿವಾದಕ್ಕೆ ಇಬ್ಬರ ಬಲಿ; ಎರಡು ಗುಂಪುಗಳ ನಡುವೆ ಮಾರಾಮಾರಿ, ಇಬ್ಬರಿಗೆ ಗಂಭೀರ ಗಾಯ

ವಿಜಯಪುರ: ಜಮೀನು ಲೀಸ್ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ನಡೆದಿದೆ. ಹನುಮವ್ವ ಮೇಟಿ ಅವರಿಗೆ ಸೇರಿದ 10 ಎಕರೆ ಜಮೀನನ್ನು ಸಾಲೋಟಗಿ ಕುಟುಂಬದವರು ಲೀಸ್‌ಗೆ ಪಡೆದು ಕಬ್ಬು ಬೆಳೆದಿದ್ದರು. ಜಮೀನಿನ ಪಾಲಿನ ವಿಚಾರವಾಗಿ ಹನುಮವ್ವ ಅವರ ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಕಬ್ಬು ಕಟಾವು ಮಾಡಲು ತೆರಳಿದಾಗ ಎರಡೂ ಗುಂಪುಗಳ ನಡುವೆ …

Read More »

ಮಂಗಳೂರು: ನಕಲಿ ಟ್ರಾಫಿಕ್ ಚಲನ್ ಎಪಿಕೆ ಲಿಂಕ್ ಕಳುಹಿಸಿ ಟ್ರಕ್ ಚಾಲಕನ ಖಾತೆಯಿಂದ ₹4.26 ಲಕ್ಷ ಲಪಟಾಯಿಸಿದ ಸೈಬರ್ ವಂಚಕರು

ಬೆಂಗಳೂರು, ನವೆಂಬರ್ 13: ಟ್ರಾಫಿಕ್ ದಂಡದ ಹೆಸರಿನಲ್ಲಿ ನಕಲಿ ಲಿಂಕ್ ಕಳುಹಿಸಿ, ಎಪಿಕೆ ಆಯಪ್ ಡೌನ್‌ಲೋಡ್ ಮಾಡಿಸಿಕೊಂಡು ಟ್ರಕ್ ಚಾಲಕರೊಬ್ಬರಿಗೆ ಸೈಬರ್ ವಂಚಕರು ₹4.26 ಲಕ್ಷ ವಂಚಿಸಿರುವ ಘಟನೆ ನಡೆದಿದೆ. ಅಕ್ಟೋಬರ್ 31ರಂದು ಚಾಲಕನ ಮೊಬೈಲ್‌ಗೆ ಬಂದಿದ್ದ ಟ್ರಾಫಿಕ್ ದಂಡದ ಸಂದೇಶದಲ್ಲಿನ ಲಿಂಕ್ ಕ್ಲಿಕ್ ಮಾಡಿದ್ದರಿಂದ ನಕಲಿ ಆಯಪ್ ಡೌನ್‌ಲೋಡ್ ಆಗಿತ್ತು. ಇದರಿಂದ ಮೊಬೈಲ್ ಹ್ಯಾಕ್ ಮಾಡಿದ ವಂಚಕರು ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡಿದ್ದಾರೆ. ನವೆಂಬರ್ 10ರಂದು ಖಾತೆಯಿಂದ ₹4,26,434 …

Read More »

ಕುಡಿದ ಮತ್ತಿನಲ್ಲಿ ಬೈದಿದ್ದಕ್ಕೆ ತೋಟದ ಕಾವಲುಗಾರನ ಕೊಲೆ ಪ್ರಕರಣ: ಕೊನೆಗೂ ಸಿಕ್ಕಿಬಿದ್ದ ಆರೋಪಿ

ಚಿಕ್ಕಮಗಳೂರು: ಕಡೂರು ತಾಲೂಕಿನ ಕರಿಚಿರನಹಳ್ಳಿ ಸಮೀಪದ ಅಡಿಕೆ ತೋಟದ ಮನೆಯಲ್ಲಿ ಕಾವಲುಗಾರನನ್ನು ಕೊಲೆ ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನವೀನ್ ಎಂಬಾತನನ್ನು ಬಂಧಿಸಿದ್ದಾರೆ. ಮೃತನನ್ನು ಹಾಸನ ಜಿಲ್ಲೆಯ 52 ವರ್ಷದ ಲಕ್ಷ್ಮಣ್ ಎಂದು ಗುರುತಿಸಲಾಗಿದೆ. ಹಿಂದಿನ ವೈಷಮ್ಯದ ಹಿನ್ನೆಲೆಯಲ್ಲಿ ನವೀನ್, ಲಕ್ಷ್ಮಣ್ ಇದ್ದ ತೋಟದ ಮನೆಗೆ ತೆರಳಿದ್ದ. ಇಬ್ಬರೂ ಮದ್ಯ ಸೇವಿಸಿದ ವೇಳೆ ಮಾತಿನ ಚಕಮಕಿ ನಡೆದಿದ್ದು, ಆಕ್ರೋಶಗೊಂಡ ನವೀನ್ ಆಯುಧದಿಂದ ಹಲ್ಲೆ ನಡೆಸಿ ಲಕ್ಷ್ಮಣ್‌ನನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. …

Read More »

ದಾವಣಗೆರೆ : ಕುಡಿಯೋದಕ್ಕೆ ಹಣ ಕೊಡಲಿಲ್ಲವೆಂದು ದೊಣ್ಣೆಯಿಂದ ಹೊಡೆದು, ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ!

ದಾವಣಗೆರೆ: ಕುಡಿಯಲು ಹಣ ನೀಡದ ಕಾರಣಕ್ಕೆ ಪುತ್ರನೊಬ್ಬ ದೊಣ್ಣೆಯಿಂದ ಹೊಡೆದು ಹೆತ್ತ ತಾಯಿಯನ್ನೇ ಕೊಲೆ ಮಾಡಿರುವ ಘಟನೆ ಚೆನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ. ಮುಳ್ಳಮ್ಮ ಕೊಲೆಯಾದ ತಾಯಿ. ಸ್ನೇಹಿತನ ಕೊಲೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಆರೋಪಿ ಹನುಮಂತಪ್ಪ ಎರಡು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಬಳಿಕ ಕುಡಿಯಲು ಹಣ ನೀಡುವಂತೆ ತಾಯಿಯನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಹಣ ನೀಡದಿದ್ದಾಗ ದೊಣ್ಣೆಯಿಂದ ಹೊಡೆದು ತಾಯಿಯನ್ನು ಕೊಲೆ ಮಾಡಿದ್ದಾನೆ. ಸದ್ಯ …

Read More »

ಪತ್ನಿಯಿದ್ದರೂ ಎರಡು ಮಕ್ಕಳ ತಾಯಿಯನ್ನು ಗುಟ್ಟಾಗಿ ಮದುವೆಯಾದ ಪತಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ತಿಳಿಯದಂತೆ ಇಬ್ಬರು ಮಕ್ಕಳ ತಾಯಿಯನ್ನು ಎರಡನೇ ಮದುವೆಯಾಗಿರುವ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ಮೊಹಮ್ಮದ್ ಸದಾಕತ್ ಅಲಿ ವಿರುದ್ಧ ಪತ್ನಿ ದೂರು ನೀಡಿದ್ದಾರೆ. 10 ವರ್ಷಗಳ ಹಿಂದೆ ಪರಿಚಯವಾಗಿ ಪ್ರೀತಿಸುತ್ತಿದ್ದ ಇಬ್ಬರೂ, ಐದು ವರ್ಷಗಳ ಹಿಂದೆ ಕಾನೂನುಬದ್ಧವಾಗಿ ಮದುವೆಯಾಗಿದ್ದರು. ಆದರೆ ಕಳೆದ ಒಂದು ತಿಂಗಳಿಂದ ಪತಿ ಮನೆಗೆ ಬರುವುದನ್ನು ನಿಲ್ಲಿಸಿದ್ದ ಎನ್ನಲಾಗಿದೆ. ಪ್ರಶ್ನಿಸಿದಾಗ ಮತ್ತೊಂದು ಮದುವೆಯಾಗಿರುವುದಾಗಿ ಪತಿ ತಿಳಿಸಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾರೆ. ಹೆಣ್ಣೂರು ಠಾಣೆಗೆ …

Read More »

ಹಾಡಹಗಲೇ ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ

ರಾಜಧಾನಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಗೌಡ (39) ಅವರನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ. ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಮೀಪ ಶುಕ್ರವಾರ ಬೆಳಗ್ಗೆ ಕುಟುಂಬದವರೊಂದಿಗೆ ಬಂದಿದ್ದ ಚರಣ್ ಗೌಡ ಅವರ ಮೇಲೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ತೀವ್ರ ಹಲ್ಲೆಯಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಳೆಯ ದ್ವೇಷ ಅಥವಾ ರಿಯಲ್ ಎಸ್ಟೇಟ್ ಉದ್ಯಮದ ವೈಷಮ್ಯ ಕೊಲೆಗೆ ಕಾರಣವಾಗಿರಬಹುದು …

Read More »

ಅಂಡಾಣು ಮಾರಾಟ | ಬಡ ಮಹಿಳೆಯರನ್ನು ಕರೆತಂದು ಅಂಡಾಣು ಸಂಗ್ರಹ ಮಾಡುತ್ತಿದ್ದ ಐವಿಎಫ್ ಹಗರಣ ಬಹಿರಂಗ

ಹೈದರಾಬಾದ್ ಮತ್ತು ಸಿಕಂದರಾಬಾದ್‌ನ ಐದು ಕಡೆಗಳಲ್ಲಿ ಅಕ್ರಮ ಅಂಡಾಣು ಸಂಗ್ರಹ ಜಾಲದ ಮೇಲೆ ಪೊಲೀಸರು ದಾಳಿ ನಡೆಸಿ 43 ಮಹಿಳೆಯರನ್ನು ರಕ್ಷಿಸಿದ್ದಾರೆ. ಬಡ ಮಹಿಳೆಯರಿಗೆ ಹಣದ ಆಮಿಷವೊಡ್ಡಿ ಅಂಡಾಣು ಸಂಗ್ರಹ ಮಾಡುತ್ತಿದ್ದ ಜಾಲವನ್ನು ಮಲ್ಕಾಜ್‌ಗಿರಿ ಪೊಲೀಸರು ಪತ್ತೆಹಚ್ಚಿದ್ದಾರೆ. ಮಹಿಳೆಯರಿಗೆ ₹30 ಸಾವಿರದಿಂದ ₹50 ಸಾವಿರದವರೆಗೆ ಹಣ ನೀಡುವುದಾಗಿ ನಂಬಿಸಿ ಹಾಸ್ಟೆಲ್‌ಗಳಲ್ಲಿ ಇರಿಸಲಾಗಿತ್ತು. ಈ ಸಂಬಂಧ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಈ ಜಾಲವು ಹಲವು ರಾಜ್ಯಗಳಿಗೆ ವ್ಯಾಪಿಸಿದ್ದು, ಕಳೆದ ಎರಡು ವರ್ಷಗಳಿಂದ …

Read More »

ಲಕ್ಷ್ಮಿಪೂಜೆ’ ಹೆಸರಲ್ಲಿ ಬೆತ್ತಲೆ ಫೋಟೊ ಇಟ್ಟು ಬ್ಲಾಕ್‌ಮೇಲ್ – ವೇಶ್ಯಾವಾಟಿಕೆ ಜಾಲ ಭೇದಿಸಿದ ಬಳ್ಳಾರಿ ಅಕ್ಕಪಡೆ

ಬಳ್ಳಾರಿಯಲ್ಲಿ ಲಕ್ಷ್ಮಿಪೂಜೆ ಹಾಗೂ ಹಣದ ಆಮಿಷವೊಡ್ಡಿ ಬಡ ಮಹಿಳೆಯರು ಮತ್ತು ಅಪ್ರಾಪ್ತರನ್ನು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುತ್ತಿದ್ದ ಅಂತರರಾಜ್ಯ ದಂಧೆಯನ್ನು ಪೊಲೀಸರು ಭೇದಿಸಿದ್ದಾರೆ. ಅಕ್ಕಪಡೆಯ ಮೂವರು ಮಹಿಳಾ ಸಿಬ್ಬಂದಿ ತಾಯಿ-ಮಕ್ಕಳ ವೇಷದಲ್ಲಿ 45 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಜಾಲವನ್ನು ಬಯಲಿಗೆಳೆದಿದ್ದಾರೆ. ಆರೋಪಿಗಳು ಲಕ್ಷ್ಮಿಪೂಜೆಯ ನೆಪದಲ್ಲಿ ಯುವತಿಯರನ್ನು ಕರೆಸಿ, ಫೋಟೊ ಮತ್ತು ಅಶ್ಲೀಲ ವಿಡಿಯೊಗಳನ್ನು ಸೆರೆಹಿಡಿದು ಬ್ಲಾಕ್‌ಮೇಲ್ ಮಾಡಿ ವೇಶ್ಯಾವಾಟಿಕೆಗೆ ದೂಡುತ್ತಿದ್ದರು. ಈ ಸಂಬಂಧ 11 ಆರೋಪಿಗಳನ್ನು ಬಂಧಿಸಿ, ಮೂವರು ಸಂತ್ರಸ್ತೆಯರನ್ನು …

Read More »

ಕುಂದಾಪುರ : ದಾಖಲೆ ಕೇಳಿದ ಗೋಡಂಬಿ ಉದ್ಯಮಿಗೆ ಜೀವ ಬೆದರಿಕೆ : ಆಡಿಟರ್ ವಿರುದ್ಧ ಪ್ರಕರಣ ದಾಖಲು

ಕುಂದಾಪುರ: ಗೋಡಂಬಿ ಕಾರ್ಖಾನೆಗೆ ಸಂಬಂಧಿಸಿದ ವೈಯಕ್ತಿಕ ಹಾಗೂ ವ್ಯವಹಾರಿಕ ದಾಖಲೆಗಳನ್ನು ಹಿಂದಿರುಗಿಸುವಂತೆ ಕೇಳಿದ ಉದ್ಯಮಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಆಡಿಟರ್ ವಿರುದ್ಧ ಪ್ರಕರಣ ದಾಖಲಾಗಿದೆ. ಬೈಂದೂರಿನ ಪ್ರಭಾಕರ ಶೆಟ್ಟಿ (46) ಅವರು ಆಶೀರ್ವಾದ ಕ್ಯಾಶ್ಯೂ ಕಾರ್ಖಾನೆಯ ಲೆಕ್ಕಪರಿಶೋಧನೆ ಹಾಗೂ ತೆರಿಗೆ ಸಂಬಂಧಿತ ಕೆಲಸಗಳಿಗಾಗಿ ಎಸ್. ರಮಾನಂದ ಆಚಾರ್ಯ ಅವರನ್ನು ಆಡಿಟರ್ ಆಗಿ ನೇಮಿಸಿದ್ದರು. ಆಡಿಟರ್ ಅಗತ್ಯ ಮಾಹಿತಿಗಳನ್ನು ನೀಡದೆ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿರುವ ಪ್ರಭಾಕರ …

Read More »