Breaking News

BigTv News

ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ: ಕೋರ್ಟ್ ತೀರ್ಪು

ಶಿರಸಿ: ದಾಂಡೇಲಿ ನಗರದ ಹಿರಿಯ ವಕೀಲ ಅಜಿತ ನಾಯ್ಕ ಅವರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪಾಂಡುರಂಗ ಮಾರುತಿ ಕಾಂಬಳೆ ಅಲಿಯಾಸ್ ದೀಪ್ಯಾನಿಗೆ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಕೋರ್ಟ್ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಧೀಶ ಕಿರಣ ಕಿಣಿ ಅವರು ಅಪರಾಧಿಗೆ ಶಿಕ್ಷೆಯೊಂದಿಗೆ ₹25 ಸಾವಿರ ದಂಡ ಹಾಗೂ ಮೃತರ ಕುಟುಂಬಕ್ಕೆ ₹50 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.ಜಮೀನಿನ ವಿಚಾರದಲ್ಲಿ ರಾಮಕುಮಾರ ಮಾಳಗೆ ಪರವಾಗಿ ವಕೀಲ …

Read More »

ಬೆಂಗಳೂರಲ್ಲಿ ಮೆಟ್ರೋ ಕಾಮಗಾರಿ ವೇಳೆ ಆಯತಪ್ಪಿ ಬಿದ್ದ ಬೃಹತ್ ಕ್ರೇನ್ : ತಪ್ಪಿದ ಭಾರಿ ಅನಾಹುತ!

ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ವೇಳೆ ಘೋರ ದುರಂತ ಒಂದು ಸಂಭವಿಸಿದೆ. ಕಾಮಗಾರಿಯ ವೇಳೆ ಬೃಹತ್ ಕ್ರೇನ್ ಒಂದು ಆಯತಪ್ಪಿ ಬಿದ್ದಿದೆ. ಮೆಟ್ರೋ ಗರ್ಡರ್ ಜೋಡಿಸುವಾಗ ಈ ಒಂದು ಘಟನೆ ಸಂಭವಿಸಿದೆ.ಮೆಟ್ರೋ ಸಿಲ್ಕ್ ಬೋರ್ಡ್ ಟು ಏರ್ಪೋರ್ಟ್ ಮಾರ್ಗದಲ್ಲಿ ನೀಲಿ ಮಾರ್ಗದಲ್ಲಿ ಕಾಮಗಾರಿ ನಡೆಯುವಾಗ ಈ ಒಂದು ಘಟನೆ ಸಂಭವಿಸಿದೆ.ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ರೀತಿಯಾದ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Read More »

ಕೆನಡಾದ ಅತಿದೊಡ್ಡ ದರೋಡೆ ಕೇಸ್: ಭಾರತೀಯ ಮೂಲದ ಆರೋಪಿ ಸೆರೆ

ಕೆನಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 180 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳತನ ಮಾಡಿದ ಆರೋಪದಡಿ ಭಾರತ ಮೂಲದ ವ್ಯಕ್ತಿಯನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅರ್ಸಲಾನ್ ಚೌಧರಿ ಎಂದು ಗುರುತಿಸಲಾಗಿದ್ದು, ದುಬೈನಿಂದ ಹೊರಟು ಕೆನಡಾ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣವೇ ‘ಪ್ರಾಜೆಕ್ಟ್ 24ಕೆ’ ಎಂಬ ಕಾರ್ಯಾಚರಣೆಯಡಿ ಈತನನ್ನು ಬಂಧಿಸಲಾಗಿದೆ.ಕೆನಡಾದ ಇತಿಹಾಸದಲ್ಲೇ ಅತಿದೊಡ್ಡ ಚಿನ್ನದ ದರೋಡೆ ಪ್ರಕರಣ ಇದಾಗಿದ್ದು, ಸ್ವಿಜರ್ಲೆಂಡ್‌ನಿಂದ ವಿಮಾನದ ಮೂಲಕ ಕೆನಡಾ ತಲುಪಿದ್ದ 400 ಕೇಜಿ ತೂಕದ …

Read More »

ಜಗಳದ ವೇಳೆ ತಂದೆಗೆ ಚಾಕುವಿನಿಂದ ಇರಿದ ಪುತ್ರ

ಬೆಳಗಾವಿ: ಸಹೋದರರ ಗಲಾಟೆಯ ವೇಳೆ ತಂದೆಗೆ ಚಾಕುವಿನಿಂದ ಇರಿಯಲಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಘಟನೆ ನಡೆದಿದೆ.ಜಗಳ ವಿಕೋಪಕ್ಕೆ ತಿರುಗಿ ತಂದೆಗೆ ಪುತ್ರ ಚಾಕುವಿನಿಂದ ಇರಿದಿದ್ದಾನೆ. ಬಸಯ್ಯ ಏಣಗಿಮಠ(65) ಅವರಿಗೆ ಐದು ಕಡೆ ವಿಜಯ್ ಇರಿದಿದ್ದಾನೆ.ತಂದೆಯ ಜೊತೆಗೆ ಕಿರಿಯ ಮಗ ವಿಜಯ್ ಜಗಳವಾಡುತ್ತಿದ್ದ. ಈ ವೇಳೆ ಮಧ್ಯ ಪ್ರವೇಶಿಸಿದ ಸಹೋದರ ಹಾಗೂ ಪತ್ನಿ ಗಲಾಟೆ ಬಿಡಿಸಲು ಮುಂದಾಗಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ತಂದೆಗೆ ಚಾಕು ಇರಿದು ವಿಜಯ್ ಪರಾರಿಯಾಗಿದ್ದಾನೆ. ಗಾಯಾಳು …

Read More »

ಫ್ರೀಯಾಗಿ ಎಣ್ಣೆ ಕೊಡೋ..- ಬಾರ್‌ನಲ್ಲಿ ನಾಡ ಬಂದೂಕು ಹಿಡಿದು ವ್ಯಕ್ತಿ ಹೈಡ್ರಾಮಾ!

ಬಾರ್ ನಲ್ಲಿ ಫ್ರೀಯಾಗಿ ಮದ್ಯ ಕೊಡಲು ನಿರಾಕರಿಸಿದ ಸಿಬ್ಬಂದಿಗೆ ವ್ಯಕ್ತಿಯೊಬ್ಬ ಬಂದೂಕು ಹಿಡಿದು ಬೆದರಿಸಿರುವ ಶಾಕಿಂಗ್‌ ಘಟನೆ ನಗರದ ಹೊಸಕೋಟೆಯಲ್ಲಿರುವ ಬಾರ್‌ ಒಂದರಲ್ಲಿ ನಡೆದಿದೆ.ಹೊಸಕೋಟೆ ತಾಲೂಕಿನ ಬಂಡಹಳ್ಳಿ ಗ್ರಾಮದ ಬಳಿಯ ಬಾರ್‌ನಲ್ಲಿ ಈ ಘಟನೆ ನಡೆದಿದೆ. ನೆನ್ನೆ‌ ಸಂಜೆ ವಾಹಿದ್ ಖಾನ್ ಎಂಬಾತ ಎಸ್‌ಎಸ್‌ ಬಾರ್‌ ಬಳಿ‌ ಬಂದು ಕ್ಯಾಷಿಯರ್‌ ಬಳಿ ಫ್ರೀಯಾಗಿ ಮದ್ಯ ನೀಡುವಂತೆ ಕೇಳಿದ್ದಾನೆ. ಆದರೆ ಸಿಬ್ಬಂದಿ ಕೊಡದೇ ಹೋಗಿದ್ದಕ್ಕೆ ನಾಡ ಬಂದೂಕು ತಂದು ಬಾರ್‌ ಬಳಿ …

Read More »

ಊಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ

ಹಳೇಹುಬ್ಬಳ್ಳಿ ಗಬ್ಬೂರ ಸರ್ಕಲ್‌ನ ಕಟ್ಟೆ ಮೇಲೆ ಊಟ ಮಾಡುತ್ತಿದ್ದ ವ್ಯಕ್ತಿಗೆ ಮೂವರು ಸೇರಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.ವಿಜಯಪುರದ ಇಂಡಿ ಮೂಲದ ರಾಜು ಹೊಸಮನಿ ಎಂಬಾತನಿಗೆ ಹಲ್ಲೆ ಮಾಡಲಾಗಿದೆ. ಇಂಡಿಯಿಂದ ಕೆಲಸ ಅರಸಿ ಹುಬ್ಬಳ್ಳಿಗೆ ಬಂದಿದ್ದು, ಗಬ್ಬೂರ ಸರ್ಕಲ್‌ನಲ್ಲಿ ರಾತ್ರಿ 11.30ರ ಸುಮಾರಿಗೆ ಹೋಟೆಲ್‌ನಿಂದ ತಂದ ಊಟ ಮಾಡುತ್ತಿದ್ದ ವೇಳೆ ಹಲ್ಲೆ ಮಾಡಲಾಗಿದೆ ಎಂದು ರಾಜು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Read More »

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಸರ ಕಿತ್ತು ಎಸ್ಕೇಪ್! ಆರೋಪಿ ಅರೆಸ್ಟ್

ಬೆಂಗಳೂರು: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಸರಗಳ್ಳನನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಯಶವಂತ್ (26) ಎಂದು ಗುರುತಿಸಲಾಗಿದ್ದು, ಡಿಸೆಂಬರ್ 24 ರಂದು ಈ ಘಟನೆ ಸಂಭವಿಸಿತ್ತು.ಧನಲಕ್ಷೀ ಎಂಬ ಮಹಿಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ, ಹೊಂಚು ಹಾಕಿ ಕುಳಿತಿದ್ದ ಆರೋಪಿ ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. …

Read More »

ಬೆಂಗಳೂರಲ್ಲಿ ಮಹಿಳೆಯನ್ನ ಕೊಡಲಿಯಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದ ಆರೋಪಿ ಆತ್ಮಹತ್ಯೆಗೆ ಶರಣು!

ಬೆಂಗಳೂರಲ್ಲಿ ಮಹಿಳೆಯನ್ನು ಕೊಚ್ಚಿ ಕೊಂದಿದ್ದ ಆರೋಪಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕೋಳೂರಿನಲ್ಲಿ ನಡೆದಿದೆ. ಕೊಡಲಿಂದ ಕೊಚ್ಚಿ ಕೊಂದಿದ್ದ ಆರೋಪಿ ವೀರಭದ್ರಯ್ಯ ಆತ್ಮಹತ್ಯೆಗೆ ಶರಣಾಗಿದ್ದಾನೆ.ಕೊಳುರಿನಲ್ಲಿ ವೀರಭದ್ರಯ್ಯ (60) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಕಳೆದ ಶನಿವಾರ ದಾಕ್ಷಾಯಿಣಮ್ಮ ಅವರನ್ನು ವೀರಭದ್ರಯ್ಯ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದ. ಮಹಿಳೆಯನ್ನು ಕೊಂದ ಬಳಿಕ ವೀರಭದ್ರಯ್ಯ ಪರಾರಿಯಾಗಿದ್ದ. ಆರೋಪಿಗಾಗಿ ಪೊಲೀಸರು ಹುಡುಕಾಡಿದ್ದರು. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಠಾಣೆ ಪೊಲೀಸ್ರು ಭೇಟಿ ನೀಡಿ …

Read More »

ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಅಡಿಕೆ ಕಳ್ಳರು ಅರೆಸ್ಟ್

ಬೆಂಗಳೂರು: ಹಲವು ದಿನಗಳಿಂದ ರೈತರ ನಿದ್ದೆಗೆಡಿಸಿದ್ದ ಮೂವರು ಅಡಿಕೆ ಕಳ್ಳರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಕುದೂರು ಸಮೀಪದ ಬಿಸ್ಕೂರು, ಕೋಡಿಹಳ್ಳಿ ಗ್ರಾಮಸ್ಥರು ಸೋಮವಾರ ರಾತ್ರಿ ಮೂವರು ಅಡಿಕೆ ಕಳ್ಳರನ್ನು ಹಿಡಿದಿದ್ದಾರೆ. ತಿಪ್ಪಸಂದ್ರದ ಪ್ರವೀಣ್(19), ಬೆಂಗಳೂರಿನ ಮತ್ತಿಕೆರೆಯ ಕಿರಣ್(19), ನಾಗೇಂದ್ರ(45) ಬಂಧಿತ ಆರೋಪಿಗಳು.ಪ್ರಕರಣದ ನಾಲ್ಕನೇ ಆರೋಪಿ ಬೆಂಗಳೂರಿನ ಯಶವಂತಪುರದ ಪುನೀತ್(20) ಪರಾರಿಯಾಗಿದ್ದಾನೆ. ಕಳೆದ ಒಂದು ವಾರದಿಂದ ಕೋಡಿಹಳ್ಳಿ, ಬಿಸ್ಕೂರು ಗ್ರಾಮಗಳ ಸುತ್ತಮುತ್ತ ಪ್ರದೇಶಗಳಲ್ಲಿ ರಾತ್ರಿ ವೇಳೆ ತೋಟಕ್ಕೆ ನುಗ್ಗಿ ಬಾಳೆಗೊನೆ, ಅಡಿಕೆ …

Read More »

ಕಾರವಾರ: ಅಕ್ರಮವಾಗಿ ಸಾಗಿಸುತ್ತಿದ್ದ ₹1.26 ಲಕ್ಷ ಮೌಲ್ಯದ ಗೋವಾ ಮದ್ಯ ವಶ

ಜೀಪ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹1.26ಲಕ್ಷ ಮೌಲ್ಯದ ಗೋವಾ ಮದ್ಯವನ್ನು ತಾಲ್ಲೂಕಿನ ಚೆಂಚೆವಾಡಾದ ಐಸ್ ಫ್ಯಾಕ್ಟರಿ ಸಮೀಪ ಸೋಮವಾರ ರಾತ್ರಿ ಚಿತ್ತಾಕುಲ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಗೋವಾದಿಂದ ಅಕ್ರಮವಾಗಿ ವಾಹನದಲ್ಲಿ ಸಾಗಿಸುತ್ತಿದ್ದ ವಿವಿಧ ಬ್ರ್ಯಾಂಡುಗಳ ಮದ್ಯ ದಾಸ್ತಾನನ್ನು ವಶಕ್ಕೆ ಪಡೆಯಲಾಗಿದೆ.ಸಾಗಾಟ ಮಾಡುತ್ತಿದ್ದ ಹುಬ್ಬಳ್ಳಿಯ ನೆಹರು ನಗರದ ನಾರಾಯಣ ಗಜಾನನ ದಲಬಂಜನ್ (30) ಎಂಬಾತನನ್ನು ಬಂಧಿಸಲಾಗಿದೆ. ಆತ ಸಾಗಾಟಕ್ಕೆ ಬಳಸಿದ್ದ ವಾಹನ ಮತ್ತು ಮದ್ಯ ದಾಸ್ತಾನನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

Read More »