ದೆಹಲಿ: ಸ್ವರೂಪ್ ನಗರದಲ್ಲಿ 16 ವರ್ಷದ ಬಾಲಕಿ ಮೇಲೆ ನಾಲ್ವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿ, ಬಳಿಕ ಚಾಕುವಿನಿಂದ 8 ಬಾರಿ ಇರಿದು ಕೊಲೆ ಮಾಡಿದ ಘಟನೆ ಸೆ.12ರಂದು ನಡೆದಿದೆ. ಮೃತದೇಹವನ್ನು ಬಯಲು ಪ್ರದೇಶದಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು 50ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ಸರಕು ಸಾಗಣೆ ಟೆಂಪೋವೊಂದರ ಜಾಡು ಹಿಡಿದಿದ್ದಾರೆ. ಸೆ.15-16ರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಮೂವರು ಅಪ್ರಾಪ್ತರು ಹಾಗೂ 19 …
Read More »ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಬೆಂಗಳೂರಲ್ಲಿ 13 ವರ್ಷದ ಬಾಲಕನ ಕಿಡ್ನ್ಯಾಪ್ ಮಾಡಿ ಬರ್ಬರ ಹತ್ಯೆ!
ಬೆಂಗಳೂರು: ಹಣಕ್ಕಾಗಿ 13 ವರ್ಷದ ಬಾಲಕನನ್ನು ಅಪಹರಿಸಿ, ಕೊಲೆ ಮಾಡಿರುವ ಘಟನೆ ಯಲಹಂಕದಲ್ಲಿ ನಡೆದಿದೆ. ವಿನಾಯಕನಗರದ ಪ್ರಜ್ವಲ್ (13) ಮೃತ ಬಾಲಕ. ಪ್ರಕರಣಕ್ಕೆ ಸಂಬಂಧಿಸಿ ಆತನ ನೆರೆಮನೆಯ ಭಾಸ್ಕರ್ ರೆಡ್ಡಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಗಣಪತಿ ಮೆರವಣಿಗೆಗೆ ಪಟಾಕಿ ತರಬೇಕೆಂದು ನಂಬಿಸಿ ಬಾಲಕನನ್ನು ಕಾರಿನಲ್ಲಿ ಕರೆದೊಯ್ದ ಆರೋಪಿ, ಪೋಷಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಬಾಲಕನಿಗೆ ಬೆದರಿಕೆ ವಿಡಿಯೋ ಮಾಡಿಸಿ ಕಳುಹಿಸಿ, ಹಾಲೋಬ್ರಿಕ್ಸ್ ಕಲ್ಲಿನಿಂದ ಹೊಡೆದು ಕಾರಿನಲ್ಲೇ ಕೊಲೆ ಮಾಡಿದ್ದಾನೆ. …
Read More »ಅಕ್ರಮ ಗಣಿಗಾರಿಕೆ: ಸಚಿವ ರುದ್ರಪ್ಪ ಲಮಾಣಿಗೆ ₹ 3 ಕೋಟಿ ದಂಡ
ಹಾವೇರಿ: ಪರವಾನಗಿ ನಿಯಮ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದಡಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಸುಮಾರು ₹3 ಕೋಟಿ ದಂಡ ವಿಧಿಸಿ ನೋಟಿಸ್ ನೀಡಲಾಗಿದೆ. ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಪುತ್ರ ಪುಲಿಕೇಶಿ ಹಾಗೂ ತಮ್ಮ ಪರಮೇಶ್ವರಪ್ಪ ಅವರ ಕ್ವಾರಿ-ಕ್ರಷರ್ಗಳಿಗೂ ನಿಯಮ ಉಲ್ಲಂಘನೆ ಆರೋಪದಡಿ ತಲಾ ಸುಮಾರು ₹50 ಲಕ್ಷ ದಂಡ ವಿಧಿಸಲಾಗಿದೆ. ದಂಡ ವಿಧಿಸಿರುವುದನ್ನು ಖಂಡಿಸಿ ಕಲ್ಲು ಕ್ವಾರಿ-ಕ್ರಷರ್ ಮಾಲೀಕರ ಸಂಘ ಸೆ.18ರಿಂದ ರಾಜ್ಯಾದ್ಯಂತ ಕ್ವಾರಿ-ಕ್ರಷರ್ ಬಂದ್ …
Read More »ರಾಯಚೂರು: ಲಿಂಗಸುಗೂರಿನಲ್ಲಿ ಕ್ಷುಲ್ಲಕ ಜಗಳಕ್ಕೆ ಯುವಕನ ಕೊಲೆ
ಲಿಂಗಸುಗೂರು: ತಾಲ್ಲೂಕಿನ ಭೂಪೂರು (ರಾಂಪುರ) ಗ್ರಾಮದಲ್ಲಿ ಕ್ಷುಲ್ಲಕ ಜಗಳದ ಹಿನ್ನೆಲೆಯಲ್ಲಿ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ಗ್ರಾಮದ ಶಿವನಗೌಡ ಅಮರೇಗೌಡ ಗೌಡ್ರ (30) ಮೃತ ಯುವಕ. ಭೂಪೂರು ತಾಂಡಾಕ್ಕೆ ಬರಬೇಡ ಎಂಬ ವಿಚಾರಕ್ಕೆ ಲಕ್ಕಪ್ಪ, ಶಂಕ್ರಪ್ಪ, ಅನಿಲ್ ಹಾಗೂ ವೆಂಕಟೇಶ ಸೇರಿಕೊಂಡು ಶಿವನಗೌಡನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ …
Read More »ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿ ತಾಳಿ ಕಟ್ಟಿ ಕಿರುಕುಳ ನೀಡಿದವನಿಗೆ 3 ವರ್ಷ ಜೈಲು
ವಿಜಯನಗರ: ಬಾಲಕಿಯನ್ನು ಪುಸಲಾಯಿಸಿ ಅಪಹರಿಸಿ, ಬಲವಂತವಾಗಿ ತಾಳಿ ಕಟ್ಟಿ ಕಿರುಕುಳ ನೀಡಿದ ಪ್ರಕರಣದಲ್ಲಿ ಕೂಡ್ಲಿಗಿ ತಾಲ್ಲೂಕಿನ ವಿರುಪಾಪುರದ ಮಾರೇಶ ಎಂಬಾತನಿಗೆ ನ್ಯಾಯಾಲಯ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₹1.75 ಲಕ್ಷ ದಂಡ ವಿಧಿಸಿದೆ. 2019ರ ಮೇ 26ರಂದು ಬಾಲಕಿಯನ್ನು ಅಪಹರಿಸಿದ್ದ ಮಾರೇಶ, ಸಂಡೂರು ಹಾಗೂ ಗಾಣಗಟ್ಟೆ ದೇವಸ್ಥಾನಗಳಲ್ಲಿ ಇರಿಸಿ ಬಲವಂತವಾಗಿ ಮದುವೆಯಾಗಿದ್ದ. ಬಳಿಕ ದೈಹಿಕ ಕಿರುಕುಳ ನೀಡಿದ್ದ ಎಂದು ಪ್ರಕರಣ ದಾಖಲಾಗಿತ್ತು. ಕೂಡ್ಲಿಗಿ ಠಾಣೆಯಲ್ಲಿ ಪೋಕ್ಸೊ, ಬಾಲ್ಯ …
Read More »ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ತಮ್ಮನಿಂದಲೇ ಕೊಲೆ: ವಿಲವಿಲ ಅಂತಾ ಒದ್ದಾಡಿದ ಯುವತಿ.! CCTVಯಲ್ಲಿ ಸೆರೆ
ಯುವತಿಯೊಬ್ಬಳನ್ನು ರಸ್ತೆಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಭೀಕರ ದೃಶ್ಯ CCTVಯಲ್ಲಿ ಸೆರೆಯಾಗಿದೆ. ಜುಲೈ 13ರಂದು ನಡೆದ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಮೃತಾ, ಚಿಕಿತ್ಸೆ ಫಲಕಾರಿಯಾಗದೆ ಜುಲೈ 15ರಂದು ಮೃತಪಟ್ಟಿದ್ದಾರೆ. ಅಮೃತಾ ಹಾಗೂ ಧನುಷ್ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು, ಧನುಷ್ನ ಹಿಂದಿನ ಮದುವೆ ಹಾಗೂ ಮಗುವಿನ ವಿಚಾರ ತಿಳಿದ ಬಳಿಕ ಆತನಿಂದ ದೂರವಾಗಿದ್ದಳು ಎನ್ನಲಾಗಿದೆ. ಇದೇ ವಿಚಾರಕ್ಕೆ ಧನುಷ್ನ ಸಹೋದರ ಸೂರ್ಯ ಅಮೃತಾಳನ್ನು ಹತ್ಯೆ ಮಾಡಲು ನಿರ್ಧರಿಸಿದ್ದಾನೆ ಎಂದು ಆರೋಪಿಸಲಾಗಿದೆ. …
Read More »ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!
ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ರೈಲ್ವೆ ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರರು ಕೂಡ ಯುವತಿಗೆ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಕುಟುಂಬದ ಸಮಸ್ಯೆಯಿಂದ ಬೇಸತ್ತ ಯುವತಿ ಬೆಂಗಳೂರಿನಿಂದ ಯಾದಗಿರಿಗೆ ರೈಲಿನಲ್ಲಿ ಬಂದಿದ್ದು, ನಿಲ್ದಾಣದ ವೇಟಿಂಗ್ ರೂಮ್ನಲ್ಲಿ ಕುಳಿತಿದ್ದ ವೇಳೆ ಮಲ್ಲಪ್ಪ ಎಂಬಾತ ಪರಿಚಯ ಮಾಡಿಕೊಂಡಿದ್ದ. ನಂತರ …
Read More »₹50 ಲಕ್ಷ ಲಂಚ ಸ್ವೀಕರಿಸುವಾಗ ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ
ಧಾರವಾಡದಲ್ಲಿ ₹50 ಲಕ್ಷ ಲಂಚದ ಬೇಟೆ..! 1 ಎಕರೆ ಜಮೀನಿಗೂ ಬೇಡಿಕೆ — ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಲೋಕಾ ಬಲೆಗೆ..! “ಮಹಾನುಭಾವ” ತಹಶೀಲ್ದಾರ್ಗೆ ಲೋಕಾಯುಕ್ತ ಶಾಕ್..! ₹50 ಲಕ್ಷ ಲಂಚ ಸ್ವೀಕರಿಸುವಾಗ ಕೆಸಿಡಿ ಮೈದಾನದಲ್ಲಿ ಸಿಕ್ಕಿಬಿದ್ದ ಸಚ್ಚಿದಾನಂದ ಕುಚನೂರು..! ಧಾರವಾಡದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ, ₹50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ವಶಕ್ಕೆ ಪಡೆದಿದ್ದಾರೆ… ಬಾಗಲಕೋಟೆ ಜಿಲ್ಲೆಯ …
Read More »ಮನೆಯವರ ವಿರೋಧದ ನಡುವೆ ಪ್ರೇಮವಿವಾಹವಾಗಿ ಬೆಂಗಳೂರಲ್ಲಿ ನೆಲೆಸಿದ್ದ ಯುವತಿಯ ಅಪಹರಣ: ಕರೆದೊಯ್ಯುವಾಗ ಅಪಘಾತ!
ಬೆಂಗಳೂರು: ಕುಟುಂಬದ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ರಾಜಸ್ಥಾನ ಮೂಲದ 21 ವರ್ಷದ ಪೂಜಾಳನ್ನು ಅಪಹರಿಸಲು ಯತ್ನಿಸಿದ ಘಟನೆ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ. ನಾಲ್ವರು ಆರೋಪಿಗಳು ಆಕೆಯನ್ನು ಕಾರಿನಲ್ಲಿ ಕರೆದೊಯ್ಯುವಾಗ ಸಾರ್ವಜನಿಕರು ಬೆನ್ನಟ್ಟಿದ್ದು, ಕಾರು ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಆರು ಮಂದಿ ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ರಾಕೇಶ್, ಕರಣ್ ಹಾಗೂ ಅಯಾನ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಸದ್ದಾಂ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆ. …
Read More »ಟಿ.ನರಸೀಪುರ ಪ್ರಕರಣ: ತಾನೇ ಯೂಟ್ಯೂಬರ್ಗಳನ್ನು ಕರೆಸಿಕೊಂಡು ವಿಡಿಯೋ ಮಾಡಿಸಿ ಅವರ ವಿರುದ್ಧವೇ ಕೇಸ್ ದಾಖಲಿಸಿದ ಇನ್ಸ್ಪೆಕ್ಟರ್!
ಮೈಸೂರು, ಸೆ.17: ಟಿ.ನರಸೀಪುರ ಇನ್ಸ್ಪೆಕ್ಟರ್ ಧನಂಜಯ್ ಅವರ ವಿವಾದಿತ ಹೇಳಿಕೆಯ ವಿಡಿಯೋ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಿಡಿಯೋ ಚಿತ್ರೀಕರಿಸಿದ್ದ ಯೂಟ್ಯೂಬರ್ ಮಂಜು ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಆದರೆ, ತಮ್ಮನ್ನು ಠಾಣೆಗೆ ಕರೆಸಿ ಗಣಪತಿ ವಿಸರ್ಜನೆ ಸಂಬಂಧದ ಚರ್ಚೆಗಳನ್ನು ಚಿತ್ರೀಕರಿಸಲು ಸೂಚಿಸಿದ್ದೇ ಇನ್ಸ್ಪೆಕ್ಟರ್ ಧನಂಜಯ್ ಎಂದು ಮಂಜು ಆರೋಪಿಸಿದ್ದಾರೆ. ಕಾನ್ಸ್ಟೇಬಲ್ ಯಶ್ವಂತ್ ಮೂಲಕ ತಮ್ಮನ್ನು ಕರೆಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ವಿಡಿಯೋ ಅಪ್ಲೋಡ್ ಮಾಡುವಾಗ ಇನ್ಸ್ಪೆಕ್ಟರ್ ಯಾವುದೇ ಆಕ್ಷೇಪ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





