Breaking News

BigTv News

ಫಾಸ್ಟ್‌ಗಮ್ ಚಟಕ್ಕೆ ದಾಸನಾದ ಯುವಕನಿಂದ ಅಜ್ಜಿಯ ಕೊಲೆ: ಅಪ್ಪ ಅಮ್ಮನ ಸ್ಥಿತಿ ಗಂಭೀರ

ಫಾಸ್ಟ್ ಗಮ್ ವಾಸನೆ ಎಳೆದುಕೊಳ್ಳುವ ಚಟಕ್ಕೆ ಬಿದ್ದ ಯುವಕನೋರ್ವ ತನ್ನ ಅಜ್ಜಿಯನ್ನೇ ಯಮಪುರಿಗೆ ಕಳುಹಿಸಿದ್ದಾನೆ. ಜೊತೆಗೆ ಈತ ತನ್ನ ಪೋಷಕರ ಮೇಲೆಯೂ ಹಲ್ಲೆ ಮಾಡಿದ್ದು, ಅವರ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ಘಟನೆ ನಡೆದಿರುವುದು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿ ಎಂಬಲ್ಲಿ ಈ ಫಾಸ್ಟ್ ಗಮ್ ರಾಸಾಯನಿಕದ ಪ್ರಭಾವದಲ್ಲಿ ಇದ್ದ ಯುವಕ ಚಾಕುವಿನಿಂದ ತನ್ನ ಅಜ್ಜಿ ಹಾಗೂ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಅಜ್ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಈತನ …

Read More »

ಚಿಂತಾಮಣಿ | ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ!

ನಗರ ವ್ಯಾಪ್ತಿಯ ವೆಂಕಟಗಿರಿಕೋಟೆಯಲ್ಲಿ ಕ್ಷುಲ್ಲಕ ಕಾರಣದಿಂದ ಗುಂಪು ಶುಕ್ರವಾರ ಮನೆಗೆ ನುಗ್ಗಿ ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ. ಹಲ್ಲೆಗೆ ಒಳಗಾದ ಮಹಿಳೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವೆಂಕಟಗಿರಿಕೋಟೆಯ ನಿವಾಸಿ ಫರಹನಾಜ್ ಬಾನು (35) ಹಲ್ಲೆಗೆ ಒಳಗಾಗಿರುವ ಮಹಿಳೆ.ಹಲ್ಲೆ ನಡೆಸಿರುವ ಮಹಿಳೆಯರು ಚಿಂತಾಮಣಿ ನಗರದ ಶಾಂತಿನಗರದ ನಿವಾಸಿಗಳಾದ ನಸ್ರೀನ್ ತಾಜ್, ಬತುಲ್, ನಾಝಿಮ್ ಎಂಬುವರು ಎನ್ನಲಾಗಿದೆ.ವಿಷಯ ತಿಳಿದ ತಕ್ಷಣ ನಗರ ಪೊಲೀಸ್ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ …

Read More »

ಬೈಕ್ ಸವಾರನಿಗೆ ಹಲ್ಲೆ – ಕುಡ್ಲ ರಾಂಪೇಜ್ ಯುಟ್ಯೂಬರ್ ಸೇರಿ ಮೂವರ ಮೇಲೆ ಎಫ್‌ಐಆರ್!

ಸವಾರನನ್ನು ಅಡ್ಡಗಟ್ಟಿ ಅವನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಕುಡ್ಲ ರಾಂಪೇಡ್ ಯುಟ್ಯೂಬರ್ ಮತ್ತು ಇನ್ನಿತರ ಇಬ್ಬರ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯುಟ್ಯೂಬ್ ಚಾನೆಲ್ ನ ವರದಿಗಾರ ಮತ್ತು ಇಬ್ಬರು ಬೈಕ್ ನ್ನು ನಿಲ್ಲಿಸಿ ಧರ್ಮಸ್ಥಳ ಪರಿಸರದಲ್ಲಿ ಹೆಣಗಳನ್ನು ಹೂತಿರುವ ಬಗ್ಗೆ ವಿಚಾರಿಸಿದ್ದಾರೆ.ಈ ವೇಳೆ ಮಾತಿಗೆ ಮಾತು ಬೆಳೆದು ಕುಡ್ಲಾ ರಾಂ ಪೇಜ್‌ ಎಂಬ ಯೂ ಟ್ಯೂಬರ್‌ ಹಾಗು ಆತನೊಂದಿಗೆ ಇದ್ದ ಇನ್ನಿಬ್ಬರು ಏಕಾಏಕಿ ಬೈಕ್ …

Read More »

ಯುವಕನನ್ನು ಮನೆಗೆ ಕರೆಸಿ ಸ್ಕ್ರೂಡ್ರೈವರ್‌ನಿಂದ ಹಿಂಸಿಸಿ ದಂಪತಿಗಳಿಂದ ಕೊಲೆ!

ಒಬ್ಬ ಯುವಕನನ್ನು ದಂಪತಿಗಳು ಕ್ರೂರವಾಗಿ ಕೊಂದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆದಿದೆ. ಮನೆಗೆ ಕರೆಸಿ ಸ್ಕ್ರೂಡ್ರೈವರ್, ಪ್ಲೈಯರ್‌ಗಳಿಂದ ಚುಚ್ಚಿ ಹಿಂಸಿಸಿ ಕೊಲೆ ಮಾಡಲಾಗಿದೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಯುವಕ ಮೃತಪಟ್ಟಿದ್ದ.ರಾತ್ರಿ ತಡವಾಗಿ ಅನೀಸ್ ಸಾವನ್ನಪ್ಪಿದ ಬಗ್ಗೆ ಮಾಹಿತಿ ಬಂದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿಯುತ್ತಿದೆ ಎಂದವರು ಹೇಳಿದ್ದಾರೆ. ವಿಚಾರಣೆ ವೇಳೆ ಅನೀಸ್ ಮತ್ತು ಸಿತಾರಾ ನಡುವೆ …

Read More »

ಅಫಜಲಪುರ: ಕೋಟಿ ಸುರಿದರೂ ರೈತರ ಜಮೀನುಗಳಿಗೆ ಹರಿಯದ ನೀರು!

ಸೊನ್ನ ಭೀಮಾ ಏತ ನೀರಾವರಿ ಯೋಜನೆ ಪೂರ್ಣಗೊಂಡು 20 ವರ್ಷ ಕಳೆದರೂ ಈವರೆಗೂ ಕಾಲುವೆಯ ಕೊನೆಯ ಭಾಗದ ರೈತನಿಗೆ ನೀರು ತಲುಪಿಲ್ಲ.ತಾಲ್ಲೂಕಿನಲ್ಲಿ ರೈತರು ಮುಂಗಾರು ಬಿತ್ತನೆ ಮಾಡಿದ್ದಾರೆ. ಸಧ್ಯ ಕಾಲುವೆಗೆ ನೀರು ಬಿಟ್ಟಿದ್ದು, ತಾಲ್ಲೂಕಿನ ಮಲ್ಲಾಬಾದ್ ಗ್ರಾಮದ ವರೆಗೆ ಮಾತ್ರ ಕಾಲುವೆಗೆ ನೀರು ಬಂದಿದೆ. ಮುಂದಿನ 20 ಹಳ್ಳಿಗಳಿಗೆ ನೀರು ಬಂದಿಲ್ಲ. ಜಮೀನಿನಲ್ಲಿ ಕಾಲುವೆ ಹಾಯ್ದು ಹೋದರು ನೀರಿಲ್ಲ ಎನ್ನುತ್ತಾರೆ ರೈತ ಮುಖಂಡರಾದ ಲತೀಪ ಪಟೇಲ ಹಾಗೂ ಮಹಿಬೂಬ್ ನದಾಫ್ …

Read More »

ಅಪಘಾತದಲ್ಲಿ ಮೃತಪಟ್ಟ ಪತ್ನಿಯ ಮೃತದೇಹವನ್ನು ‘ಬೈಕ್’ ಗೆ ಕಟ್ಟಿ ಸಾಗಿಸಿದ ಪತಿ

ನಾಗ್ಪುರದಿಂದ ಒಂದು ಆತಂಕಕಾರಿ ವಿಡಿಯೋ ಹೊರಬಿದ್ದಿದ್ದು, ಸಾರ್ವಜನಿಕರಿಂದ ಯಾವುದೇ ಸಹಾಯ ದೊರೆಯದ ಕಾರಣ ವ್ಯಕ್ತಿಯೊಬ್ಬ ತನ್ನ ಮೃತ ಪತ್ನಿಯ ಶವವನ್ನು ಮೋಟಾರ್ ಸೈಕಲ್ಗೆ ಕಟ್ಟಿ ಸಾಗಿಸುತ್ತಿದ್ದಾನೆ.ಶವವನ್ನು ಸಾಗಿಸಲು ಯಾವುದೇ ಸಹಾಯ ಸಿಗದ ಕಾರಣ, ಹತಾಶನಾದ ಅಮಿತ್ ತನ್ನ ಪತ್ನಿಯ ಶವವನ್ನು ಬೈಕ್ ಗೆ ಕಟ್ಟಿ ಮಧ್ಯಪ್ರದೇಶದಲ್ಲಿರುವ ತಮ್ಮ ಊರಿಗೆ ಕೊಂಡೊಯ್ಯಲು ನಿರ್ಧರಿಸಿದನು. ಈ ದಂಪತಿಗಳು ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯವರಾಗಿದ್ದರೂ, ಕಳೆದ 10 ವರ್ಷಗಳಿಂದ ನಾಗ್ಪುರದ ಕೊರಾಡಿ ಬಳಿಯ ಲೋನಾರಾದಲ್ಲಿ ವಾಸಿಸುತ್ತಿದ್ದರು. …

Read More »

ಬಂಡೀಪುರದಲ್ಲಿ ‘ಸೆಲ್ಪಿ’ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನನ್ನು ಅಟ್ಟಾಡಿಸಿ ತುಳಿದ `ಕಾಡಾನೆ!

ಬಂಡೀಪುರದಲ್ಲಿ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಹೋದ ಪ್ರವಾಸಿಗನನ್ನು ಕಾಡಾನೆಯೊಂದು ಅಟ್ಟಾಡಿಸಿ ತುಳಿದಿರುವ ಘಟನೆ ನಡೆದಿದ್ದು, ಸದ್ಯ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ. ವಾಹನಗಳು ಮತ್ತು ಜನರಿಂದ ತುಂಬಿದ್ದ ರಸ್ತೆಯಲ್ಲಿ ನಿಂತಿದ್ದ ಆನೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗರ ಮೇಲೆ ಇದ್ದಕ್ಕಿದ್ದಂತೆ ಆನೆ ದಾಳಿ ನಡೆಸಿದೆ. ಕಾಡು ಆನೆಯನ್ನು ಕಂಡ ಆ ವ್ಯಕ್ತಿ ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವುದು ಕಂಡುಬರುತ್ತದೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.

Read More »

ತುಮಕೂರು | ಡಿಸಿಸಿ ಬ್ಯಾಂಕ್‌: ಸಚಿವ ರಾಜಣ್ಣ ನಾಮಪತ್ರ ಸಲ್ಲಿಕೆ!

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ) ಚುನಾವಣೆಗೆ ಭಾನುವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನ ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ಶಾಸಕರಾದ ಕೆ.ಷಡಕ್ಷರಿ, ಎಚ್‌.ವಿ.ವೆಂಕಟೇಶ್‌ ಸೇರಿ 15 ಮಂದಿ ನಗರದ ಡಿಸಿಸಿ ಬ್ಯಾಂಕ್‌ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು.

Read More »

ಮಾವಾ’ ಘಾಟಿನಲ್ಲಿ ಮುಳುಗಿರುವ ಜಮಖಂಡಿ!

ಒಂದು ಕಾಲಕ್ಕೆ ಜಮಖಂಡಿ ಆಧ್ಯಾತ್ಮ, ಕ್ರೀಡೆ, ಸಾಹಿತ್ಯ, ರಾಜ್ಯವೈಭವ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಒಂದಿಲ್ಲೊಂದು ಸಾಧನೆಗಳನ್ನು ಮಾಡುತ್ತಾ ರಾಜ್ಯದ ಗಮನವನ್ನು ಸೆಳೆಯುತ್ತಿತ್ತು. ಆದರೆ, ಇಂದು ಜಮಖಂಡಿ ‘ಮಾವಾ’ (ಗುಟಕಾದಂತಿರುತ್ತದೆ) ಮಾರಾಟದಿಂದ ಗುರುತಿಸಿಕೊಳ್ಳತೊಡಗಿದೆ.ಜಮಖಂಡಿ ವ್ಯಾಪ್ತಿಯಲ್ಲಿ 2020ರಿಂದ 2025ರವರೆಗೆ ಅಂದಾಜು 100ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆದರೆ, ಮಾವಾ ಉತ್ಪಾದನೆಯ ಸಂಪೂರ್ಣ ಜಾಲವನ್ನು ಭೇದಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಲವಾರು ಪ್ರಕರಣ ದಾಖಲು ಮಾಡಿ, ಬಿಟ್ಟು ಬಿಡುತ್ತಾರೆ. ಕೆಲ …

Read More »

ಮಾಜಿ ಸಚಿವ ‘ಅರವಿಂದ್ ಲಿಂಬಾವಳಿ’ಗೆ ಮಾತೃ ವಿಯೋಗ.!

ಬಿಜೆಪಿ ಮಾಜಿ ಶಾಸಕ, ಮಾಜಿ ಸಚಿವ ಅರವಿಂದ್ ಲಿಂಬಾವಳಿ ತಾಯಿ ಭೀಮಾಬಾಯಿ ಲಿಂಬಾವಳಿ ನಿಧನರಾಗಿದ್ದಾರೆ.ಈ ಕುರಿತು ಅರವಿಂದ್ ಲಿಂಬಾವಳಿ ಪೋಸ್ಟ್ ಹಂಚಿಕೊಂಡಿದ್ದು, ’84 ವರ್ಷದ ನನ್ನ ಮಾತೃಶ್ರೀಯವರಾದ ಶ್ರೀಮತಿ ಭೀಮಾಬಾಯಿ ವೆಂಕಟರಾವ ಲಿಂಬಾವಳಿ ಅವರು ಬಾಗಲಕೋಟೆಯ ನಮ್ಮ ಸ್ವಗೃಹದಲ್ಲಿ ಇಂದು ಬೆಳಗಿನ ಜಾವ 4:00 ಗೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇನೆ.

Read More »