Breaking News

BigTv News

ಟ್ರಂಪ್ ಟ್ಯಾಕ್ಸ್ ತರಲೆಯಿಂದ ಭಾರತದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ – ಯುಎಸ್ ಆಡಳಿತ ವಾರ್ನಿಂಗ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇತ್ತೀಚೆಗೆ ಭಾರತದಿಂದ ಆಮದಾಗುವ ವಸ್ತುಗಳಿಗೆ 50% ರಷ್ಟು ಭಾರೀ ಸುಂಕವನ್ನು ವಿಧಿಸುವ ಮೂಲಕ ಶಾಕ್‌ ನೀಡಿದ್ದಾರೆ. ಇದೀಗ ಟ್ರಂಪ್‌ ಅವರ ನಿರ್ಧಾರ ಭಾರತ ಹಾಗೂ ಅಮೆರಿಕದ ಸ್ನೇಹಮಯ ಸಂಬಂಧಕ್ಕೆ ದೊಡ್ಡ ಹಾನಿಯನ್ನು ಉಂಟುಮಾಡುವ ಅಪಾಯವಿದೆ ಎಂದು ಅಮೆರಿಕದ ಅಧಿಕಾರಿಗಳೇ ಎಚ್ಚರಿಕೆ ನೀಡಿದ್ದಾರೆ.ಅಮೆರಿಕ ಇಷ್ಟು ದೊಡ್ಡ ಮಟ್ಟದಲ್ಲಿ ಸುಂಕ ಹೇರಿರುವುದು ಭಾರತಕ್ಕೆ ದೀರ್ಘಕಾಲದವರೆಗೆ ನೆನಪಿಸುವಂತೆ ಮಾಡುವುದಂತೂ ಖಚಿತ. ಇದು ಭಾರತಕ್ಕೆ ಅಮೆರಿಕ ಒಂದು ವಿಶ್ವಾಸಾರ್ಹ ಪಾಲುದಾರ …

Read More »

ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ರೂ ಕಳೆದುಕೊಂಡ ವೃದ್ಧ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲು!

ನಿವೃತ್ತಿ ಜೀವನದಲ್ಲಿದ್ದ 80 ಹರೆಯದ ವೃದ್ಧರೊಬ್ಬರು ಹಾಯಾಗಿ ಜೀವನ ಸಾಗಿಸುತ್ತಿದ್ದರು. ಬ್ಯಾಂಕ್‌ನಲ್ಲಿ ತಮ್ಮ ಜೀವನದ ಉಳಿತಾಯದ ಹಣ, ಪ್ರತಿ ದಿನ ಮೊಬೈಲ್‌ನಲ್ಲಿ ಒಂದಷ್ಟು ಹೊತ್ತು ಜಾಲಾಡುತ್ತಾ ಕಾಲ ಕಳೆಯುತ್ತಿದ್ದರು. ಇದರ ನಡುವೆ ಬಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಬರೋಬ್ಬರಿ 9 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.ನಾಲ್ಕು ಹೆಸರಿನಲ್ಲಿ ಕರೆ ಮಾಡಿ, ಚಾಟಿಂಗ್ ಮಾಡಿ ವೃದ್ಧನ ಖೆಡ್ಡಾಗೆ ಬೀಳಿಸಿದ್ದಾರೆ. ಚಾಟಿಂಗ್ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾರೆ. ಅಶ್ಲೀಲ ಫೋಟೋಗಳನ್ನು ಕಳುಹಿಸಿರುವ ಸ್ಕ್ರೀನ್ …

Read More »

ಸಾಲ ಭಾದೆ ತಾಳಲಾರದೇ ಲಾರಿ ಮಾಲೀಕ ಆತ್ಮಹತ್ಯೆ!

ಸಂಘ-ಸಂಸ್ಥೆ ಹಾಗೂ ಖಾಸಗಿ ಫೈನಾನ್ಸ್ ನವರ ಕಿರುಕುಳದಿಂದ ಬೇಸತ್ತ ಲಾರಿ ಮಾಲಕರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಗ್ಗೆ ಬೈಲು ಸಮೀಪ ತೀರ್ಥಹಳ್ಳಿಯಲ್ಲಿ ನಡೆದಿದೆ.ಮಂಜುನಾಥ್ ಹೆಚ್. (ಟಿಪ್ಪರ್ ಮಂಜು) (37) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

Read More »

ನಾಸಿಕ್: ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆ!

ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಸಿಕ್​​ನಲ್ಲಿ ನಡೆದಿದೆ. ಇಗತ್ಪುರಿ ತಾಲೂಕಿನ ಪ್ರಮುಖ ಮಾರುಕಟ್ಟೆ ಸ್ಥಳವಾದ ನಾಸಿಕ್​​ನ ಘೋಟಿಯಾ ಸುಧಾನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ 6 ರಂದು ಸಂಜೆ 7.45 ರ ಸುಮಾರಿಗೆ ನಡೆದಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

Read More »

ಆಂಜನೇಯ ದೇಗುಲ ನಿರ್ಮಾಣಕ್ಕೆ 1.83 ಲಕ್ಷ ದೇಣಿಗೆ ನೀಡಿದ ಭಿಕ್ಷುಕಿ: ಜನರ ದುಡ್ಡು ಜನರಿಗೆ ತಲುಪಿಸಿದ ಹೃದಯವಂತೆ!

ರಾಯಚೂರು ತಾಲೂಕಿನ ಬಿಜನಗೇರಾ ಆಂಜನೇಯ ದೇಗುಲ ನಿರ್ಮಾಣಕ್ಕಾಗಿ ವಯಸ್ಸಾದ ಭಿಕ್ಷುಕಿಯೊಬ್ಬರು1.83 ಲಕ್ಷ ರೂ. ದೇಣಿಗೆ ನೀಡಿಗಮನಸೆಳೆದಿದ್ದಾಳೆ. ಬಿಜನಗೇರಾ ಗ್ರಾಮದ 60 ವರ್ಷದ ರಂಗಮ್ಮಬಿಕ್ಷೆಎತ್ತಿದ್ದಬರೋಬ್ಬರಿ 1.83 ಲಕ್ಷ ರೂಪಾಯಿಹಣವನ್ನುಊರಿನಆಂಜನೇಯ ದೇವಸ್ಥಾನ ಜೀರ್ಣೋದ್ಧಾರಕ್ಕೆನೀಡಿದ್ದಾಳೆ. ಈಮೂಲಕಭಿಕ್ಷಾಟನೆ ಹಣದಲ್ಲಿ ಮಜಾ ಉಡಾಯಿಸೋರ ಮಧ್ಯೆ ಜನರ ದುಡ್ಡು ಜನರಿಗೆ ತಲುಪಿಸಿದ ಹೃದಯವಂತೆಎನಿಸಿಕೊಂಡಿದ್ದಾಳೆ. ಕಳೆದ ಆರು ವರ್ಷಗಳಿಂದ ಬಿಕ್ಷಾಟನೆಯಿಂದ ಬಂದಿದ್ದ ಹಣವನ್ನು ಮೂರು ಗೋಣಿ ಚೀಲದಲ್ಲಿ ಸಂಗ್ರಹಿಸಿಟಿದ್ದ ನೋಟುಗಳು, ಚಿಲ್ಲರೆ ಹಣವನ್ನು 20 ಕ್ಕು ಹೆಚ್ಚು ಜನರು ಬರೋಬ್ಬರಿ …

Read More »

ಅಧಿಕಾರಿಗಳ ನಿರ್ಲಕ್ಷ : ಜಾನುಕೂಂಡ ಗ್ರಾ.ಪಂ.ಗೆ ಗ್ರಾಮಸ್ಥರಿಂದ ಬೀಗ.!

ಅಧಿಕಾರಿಗಳ ನಿರ್ಲಕ್ಷತನದಿಂದ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕ ಕೆಲಸಗಳು ನಡೆಯುತ್ತಿಲ್ಲವೆಂದು ಆರೋಪಿಸಿ ಗ್ರಾಮದ ಯುವಕರು ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಜಾನುಕೊಂಡದಲ್ಲಿ ನಡೆದಿದೆ. ಚಿತ್ರದುರ್ಗ ತಾಲೂಕಿನ ಜಾನುಕೊಂಡ ಗ್ರಾಮ ಪಂಚಾಯಿತಿಗೆ ಶುಕ್ರವಾರ ಬೀಗ ಹಾಕಿ ಗ್ರಾಮದ ಯುವಕರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ,ಸ್ಥಳಕ್ಕೆ ತಾಲೂಕ್ ಪಂಚಾಯಿತಿ ಇಓ ಆಗಮಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.

Read More »

ರಸ್ತೆ ಬದಿ ಮೂತ್ರ ವಿಸರ್ಜಿಸಲು ಹೋದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ!

ಒಡಿಶಾದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಇಲ್ಲಿನ ಅಂಗುಲ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಾನುವಾರ ಬುಡಕಟ್ಟು ಸಮುದಾಯದ ಮಹಿಳೆಯ ಮೇಲೆ ಮೂವರು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.ಒಂಟಿಯಾಗಿದ್ದಾಗ ಟ್ರ್ಯಾಕ್ಟರ್‌ನಲ್ಲಿ ಮೂವರು ಪುರುಷರು ಬಂದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಮಹಿಳೆ ಮನೆಗೆ ತಲುಪಿ ಈ ಘಟನೆಯ ಬಗ್ಗೆ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾಳೆ. ಆಗಸ್ಟ್ 5ರಂದು ಮಹಿಳೆ ಪೊಲೀಸ್ ದೂರು ದಾಖಲಿಸಿದ್ದಾರೆ. ಆಗಸ್ಟ್ 6ರಂದು ದೂರು ದಾಖಲಾದ 24 ಗಂಟೆಗಳ …

Read More »

ರಸ್ತೆಯುದ್ದಕ್ಕೂ ಮನುಷ್ಯನ ಕೈ, ಕಾಲುಗಳು ಪತ್ತೆ, 30 ಕಿ.ಮೀ ದೂರದಲ್ಲಿ ಸಿಕ್ತು ರುಂಡ!

ಕೊರಟಗೆರೆ ಹಾಗೂ ಕೊಳಾಲ ವ್ಯಾಪ್ತಿಯಲ್ಲಿ ಮೃತದೇಹದ ತುಂಡುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಸತತ ಹುಡುಕಾಟದ ಬಳಿಕ ರುಂಡ ಹಾಗೂ ಮುಂಡ ಪತ್ತೆಯಾಗಿವೆ. ಚಿಂಪುಗಾನಹಳ್ಳಿಯ ಮುತ್ಯಾಲಮ್ಮ ದೇವಸ್ಥಾನದಿಂದ ವೆಂಕಟಾಪುರದವರೆಗೆ ದೇಹದ ಕೈ ಹಾಗೂ ಕರುಳು ಪತ್ತೆಯಾಗಿತ್ತು.ಪತ್ತೆಯಾದ ಮೃತದೇಹದ ಭಾಗಗಳು ಮಹಿಳೆಯದ್ದು ಎಂಬ ಅನುಮಾನ ವ್ಯಕ್ತವಾಗಿದೆ.ಸರಿ ಸುಮಾರು 30 ಕಿ.ಮಿ ವ್ಯಾಪ್ತಿಯಲ್ಲಿ ರಸ್ತೆಯ ಪಕ್ಕದಲ್ಲಿ ದೇಹದ ತುಂಡುಗಳ ಪತ್ತೆಯಾಗಿವೆ. ಒಟ್ಟಾರೆಯಾಗಿ 8 ಕ್ಕೂ ಅಧಿಕ ಸ್ಥಳಗಳಲ್ಲಿ ದೇಹದ ವಿವಿಧ ಭಾಗಗಳು ಕವರ್​ಗಳಲ್ಲಿ …

Read More »

ರಾತ್ರೋರಾತ್ರಿ ವಿಷ್ಣುವರ್ಧನ್ ಸ್ಮಾರಕ ನೆಲಸಮ; ಹಬ್ಬದ ದಿನವೇ ನೋವಿನ ಸುದ್ದಿ

ನ ಟ ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರವಾಗಿ ಮೊದಲಿನಿಂದಲೂ ಅಭಿಮಾನಿಗಳಿಗೆ ಬೇಸರ ಇತ್ತು. ಈಗ ಇನ್ನೊಂದು ನೋವಿನ ಘಟನೆ ನಡೆದಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ ಅವರ ಸ್ಮಾರಕವನ್ನು ನೆಲಸಮ ಮಾಡಲಾಗಿದೆ.ನಮ್ಮ ದೇವರ ಗುಡಿಯನ್ನು ಇಂದು ನೆಲಸಮ ಮಾಡಿದ್ದಾರೆ. ಇದು ನನ್ನ ಯಜಮಾನರು ಮಲಗಿದ್ದಂತಹ ಜಾಗ. ಅಲ್ಲೊಂದು ಪುಟ್ಟ ಗುಡಿ ಇತ್ತು. ಸಣ್ಣ ಗೋಪುರ ಇತ್ತು. ಆ ಗೋಪುರವನ್ನು ರಾತ್ರೋರಾತ್ರಿ ನೆಲಸಮ ಮಾಡಿದ್ದಾರೆ. ನಮ್ಮ ಯಜಮಾನರನ್ನು ನೋಡಲು ಬಂದರೆ …

Read More »

ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡ ಆಟೋ ಡ್ರೈವರ್, ತೀಟೆ ತೀರಿಸಿಕೊಂಡು ಕೈಕೊಟ್ಟ!

ಆಟೋಚಾಲಕನೋರ್ವ ಮದ್ವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಇದೀಗ ಕೈಕೊಟ್ಟಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾರುಕೇರಿ ನಿವಾಸಿಯಾಗಿರುವ ಆಟೋ ಡ್ರೈವರ್ ಗಣೇಶ್ ಕೃಷ್ಣ ಗೊಂಡ ಎಂಬಾತ, ನೂಝ ನಿವಾಸಿ ಯುವತಿಯೋರ್ವಳನ್ನು ಮದುವೆಯಾಗವುದಾಗಿ ನಂಬಿಸಿ ಲವ್ ಬಲೆಗೆ ಬೀಳಿಸಿಕೊಂಡಿದ್ದಾನೆ . ಬಳಿಕ ಪ್ರೀತಿಯ ನಾಟಕವಾಡಿ ದೈಹಿಕವಾಗಿ ಬಳಿಸಿಕೊಂಡು ಇದೀಗ ಕೈಕೊಟ್ಟಿದ್ದು , ಯುವತಿ ಕಂಗಾಲಾಗಿದ್ದಾಳೆ .ಆರೋಪಿ ಗಣೇಶ ಕೃಷ್ಣ ಗೊಂಡ ಕೊನೆಗೆ ಕಳೆದ ಒಂದು ವಾರದ ಹಿಂದೆ ಬೇರೊಂದು …

Read More »