Breaking News

BigTv News

ʼಬಿಗ್‌ ಬಾಸ್‌ʼ ನಿರೂಪಣೆ ಮಾಡಲು ಖಡಕ್‌ ಕಂಡಿಷನ್ಸ್‌!!

ಕಳೆದ ಬಿಗ್‌ ಬಾಸ್‌ ಸೀಸನ್‌ ದೊಡ್ಡದಾಗಿ ಸದ್ದು ಮಾಡಿತ್ತು. ದೊಡ್ಮನೆ ಆಟ ಮನೆಯೊಳಗೆ ಮಾತ್ರವಲ್ಲದೆ, ಹೊರಗೂ ಸುದ್ದಿಯಾಗಿತ್ತು.ʼಬಿಗ್‌ ಬಾಸ್‌ ಸೀಸನ್‌ -12ʼಕ್ಕೆ ನಿರೂಪಕರಾಗಿ ಕಿಚ್ಚ ಸುದೀಪ್‌ ಅವರೇ ಮುಂದುವರೆಯುತ್ತಾರಂತೆ ಎನ್ನುವ ಮಾತು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದೆ. ಮೂಲಗಳ ಪ್ರಕಾರ ಆಯೋಜಕರು ಕಿಚ್ಚ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುದೀಪ್‌ ಅವರು ಕೆಲವು ಕಂಡಿಷನ್ಸ್‌ಗಳನ್ನು ಹಾಕಿದ್ದು, ಆ ಕಂಡಿಷನ್ಸ್‌ಗಳನ್ನು ಆಯೋಜಕರು ಒಪ್ಪಿದರೆ ಖಂಡಿತ ಸುದೀಪ್‌ ಅವರೇ ಮುಂದಿನ ಸೀಸನ್‌ಗೆ ಹೋಸ್ಟ್‌ ಆಗಿ ಬರುತ್ತಾರೆ …

Read More »

ಬಳ್ಳಾರಿ ಚುನಾವಣೆಗೆ 21 ಕೋಟಿ ಹಣ ಬಳಕೆ! ಸಂಸದ ಇ ತುಕರಾಂ ED ವಶಕ್ಕೆ!

ಬಳ್ಳಾರಿ ಚುನಾವಣೆ ಬರೋಬ್ಬರಿ 21 ಕೋಟಿ ರೂ. ಬಳಕೆ ಮಾಡಿದ ಆರೋಪದಲ್ಲಿ ಕಾಂಗ್ರೆಸ್ ಸಂಸದ ಇ ತುಕರಾಂ ಅವರನ್ನು ಇಡಿ ವಶಕ್ಕೆ ಪಡೆದುಕೊಂಡಿದೆ. ಇಂದು ಬೆಳಿಗ್ಗೆಯೇ ಇಡಿ ಅಧಿಕಾರಿಗಳು ಸಂಸದರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಚುನಾವಣೆ ವೇಳೆ ಭಾರೀ ಹಣ ಖರ್ಚು ಮಾಡಿರುವ ಆರೋಪದ ಮೇಲೆ ಇ ತುಕರಾಂ ನಿವಾಸ, ಕಚೇರಿ ಮೇಲೆ ಇಡಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದರು.ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ ಎಂಬ …

Read More »

ಹನೂರು :ಗಾಂಜಾ ಸಾಗಾಣೆ; ಓರ್ವನ ಬಂಧನ!

ದಂಟಳ್ಳಿ ಗ್ರಾಮದ ನಾಗರಾಜು ಅಲಿಯಾಸ್ ಕಿವುಡ ಬಂಧಿತ. ಆರೋಪಿ ರಾತ್ರಿ 7.45ರಲ್ಲಿ ತಾಲೂಕಿನ ಚೆಂಗವಾಡಿ ಗ್ರಾಮದ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಸಾಗಾಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿದ ಹನೂರು ಪೊಲೀಸರು, ಇನ್ಸ್ಪೆಕ್ಟರ್ ಆನಂದಮೂರ್ತಿ ಮಾರ್ಗದರ್ಶನದಲ್ಲಿ ಸಿಪಿಐ ಮಂಜುನಾಥ್ ಪ್ರಸಾದ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದ್ದಾರೆ.ಹೊಸೂರು ಎ ವಿಲೇಜ್ ನ ನಾಗು ಅಲಿಯಾಸ್ ಹಾಲು ನಾಗ ಗಾಂಜಾವನ್ನು ನೀಡಿರುವುದಾಗಿ ಮಾಹಿತಿ ನೀಡಿದ್ದಾನೆ. ಬಂಧಿತನಿಂದ ಹೂ ಗೊಂಡೆ …

Read More »

ಬಹಿರ್ದೆಸೆಗೆ ಹೋಗಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ!

ಬಹಿರ್ದೆಸೆಗೆ ಹೋಗಿದ್ದ ವ್ಯಕ್ತಿಯ ಮೇಲೆ ಹುಲಿ ದಾಳಿ ನಡೆಸಿದ್ದು, ಗಾಯಾಳು ಸ್ಥಿತಿ ಗಂಭೀರವಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬೇಡುಗುಳಿ ಗ್ರಾಮದಲ್ಲಿ ನಡೆದಿದೆ.ರವಿ ಅವರ ತಲೆ, ಕೈಗಳಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುವನ್ನು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಹುಲಿ ದಾಳಿಯಿಂದಾಗಿ ಹಾಡಿ ಜನರು ಆತಂಕಕ್ಕೀಡಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಕೊಪ್ಪಳ : ರೈಲು ಹಳಿಯ ಬಳಿ ತೆರಳಿದ್ದಾಗ ರೈಲು ಹರಿದು ವ್ಯಕ್ತಿ ಸಾವು!

ಬಯಲು ಬಹಿರ್ದೆಸೆಗೆ ಹೊರಟಿದ್ದ ಕಲಬುರಗಿ ಮೂಲದ ಭಗವಂತ ಮಹಾದೇವಪ್ಪ ಪತ್ತಾರ ಎಂಬುವರು ಯಶವಂತಪುರ-ವಿಜಯಪುರ ರೈಲಿಗೆ ಸಿಕ್ಕು ಮೃತಪ‍ಟ್ಟಿದ್ದಾರೆ. ಒಂದೆಡೆ ಸರಕು ಸಾಗಣೆ ವಾಹನ ಇನ್ನೊಂದಡೆ ವಿಜಯಪುರ ರೈಲು ಎದುರು ಬದಲು ಒಟ್ಟಿಗೆ ಬಂದು ಈ ಅವಘಡ ಸಂಭವಿಸಿದೆ.ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಆಡಳಿತ ವ್ಯವಸ್ಥೆ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

Read More »

ಹೆಣ್ಣುಮಕ್ಕಳನ್ನು ಚುಂಬಿಸಿ ಪರಾರಿಯಾಗುತ್ತಿದ್ದ ಕಾಮುಕ ಅರೆಸ್ಟ್!!

ಬೆಂಗಳೂರಿನಲ್ಲಿ ಹೆಣ್ಣುಮಕ್ಕಳು ಕಂಡ ಕೂಡಲೇ ತಬ್ಬಿ, ಚುಂಬಿಸಿ ಪರಾರಿಯಾಗುತ್ತಿದ್ದ ವಿಕ್‌ಋತ ಕಾಮುಕನನ್ನು ಪುಲಕೇಶಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಆರೋಪಿ ಮದನ್ (37) ಎಂದು ಗುರುತಿಸಲಾಗಿದೆ. ಮಹಿಳೆಯರು ಒಬ್ಬಂಟಿಯಾಗಿ ಹೋಗುತ್ತಿರುವುದನ್ನು ಕಂಡರೆ ಹಿಂಬಾಲಿಸಿಕೊಂಡು ಬಂದು ಬಲವಂತದಿಂದ ತಬ್ಬಿ, ಮುತ್ತಿಟ್ಟು ಎಸ್ಕೇಪ್ ಆಗುತ್ತಿದ್ದ.

Read More »

ಪ್ರವಾಸಕ್ಕೆ ಬಂದಿದ್ದ ಎಂಟು ಮಂದಿ ಪ್ರವಾಸಿ ಯುವಕರು ನದಿಯಲ್ಲಿ ಮುಳುಗಿ ಸಾವು!!

ಬನಾಸ್‌ ನದಿಯಲ್ಲಿ ಸ್ನಾನ ಮಾಡಲು 25ರಿಂದ 30 ವರ್ಷ ವಯಸ್ಸಿನ 11 ಮಂದಿ ಯುವಕರು ಇಳಿದಿದ್ದಾರೆ.ಇದೇ ವೇಳೆ 8 ಮಂದಿ ನೀರುಪಾಲಾಗಿದ್ದಾರೆ.ನೀರುಪಾಲಾದ ಮೂವರನ್ನು ರಕ್ಷಿಸಲಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಸಂತಾಪ ವ್ಯಕ್ತಪಡಿಸಿದ್ದಾರೆ.

Read More »

ಮಂಗಳೂರು :ಹೆದ್ದಾರಿಯಲ್ಲಿ ಅಪಘಾತ,ಬೈಕ್ ಹಿಂಬದಿ ಸವಾರ ಸಾವು!

ಹೆದ್ದಾರಿಯು ಗುಂಡಿಮಯವಾಗಿದೆ. ಗುಂಡಿ ತಪ್ಪಿಸುವ ಭರದಲ್ಲಿ ಬೈಕ್ ಸವಾರರಿಬ್ಬರೂ ಹೆದ್ದಾರಿಗೆ ಬಿದ್ದಿದ್ದರು. ಹಿಂಬದಿ ಸವಾರ ಅಶ್ರಫ್ ಮೇಲೆ ಬುಲೆಟ್ ಟ್ಯಾಂಕರ್ ನ ಹಿಂಬದಿ ಚಕ್ರ ಹರಿದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಹೆದ್ದಾರಿಯನ್ನು ಮಳೆಗಾಲಕ್ಕೆ ಮುನ್ನ ಪೂರ್ಣ ಪ್ರಮಾಣದಲ್ಲಿ ದುರಸ್ತಿಗೊಳಿಸಿ, ಇಂತಹ ದಾರುಣ ಸಾವುಗಳಿಗೆ ಕಡಿವಾಣ ಹಾಕಿ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಒತ್ತಾಯಿಸಿತ್ತು. ಈ ಬೇಡಿಕೆ ಮುಂದಿಟ್ಟು, ಶಾಸಕರು, ಸಂಸದರನ್ನು ಒತ್ತಾಯಿಸಿ ಕೂಳೂರಿನಲ್ಲಿ ಧರಣಿ ನಡೆಸಿದ್ದಕ್ಕೆ ನಮ್ಮ …

Read More »

ಚಾಮರಾಜನಗರ: ವ್ಯಕ್ತಿಯ ಮೇಲೆ ಹುಲಿ ದಾಳಿ! ಗಂಭೀರ ಗಾಯ..

ಬೇಡುಗುಳಿ ಸಮೀಪದ ರಾಮಯ್ಯನ ಪೋಡಿನಲ್ಲಿ ಸೋಮವಾರ ರಾತ್ರಿ ಬಹಿರ್ದೆಸೆಗೆ ಹೋಗಿದ್ದ ಸಂದರ್ಭ ಏಕಾಏಕಿ ಹುಲಿ ದಾಳಿ ಮಾಡಿದ ಪರಿಣಾಮ ರವಿ ಎಂಬ ವ್ಯಕ್ತಿ ತಲೆಗೆ ಗಂಭೀರ ಗಾಯಗಳಾಗಿವೆ.ಕೂಡಲೇ ರವಿ ಅವರನ್ನು ಚಾಮರಾಜನಗರ ಸರ್ಕಾರಿ ಬೋಧನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಆಶ್ರಮ ಶಾಲೆಯಲ್ಲಿ ಆಶ್ರಯ ನೀಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

Read More »

ಗುಜರಾತ್ :ಮಾಡೆಲ್ ಶವ ಮನೆಯಲ್ಲಿ ಪತ್ತೆ!!

ಅಂಜಲಿಗೆ ನಿಶ್ಚಿತಾರ್ಥವಾಗಿತ್ತು, ಈ ವರ್ಷ ವಿವಾಹವೂ ನಿಗದಿಯಾಗಿತ್ತು. ಆದರೆ, ವರನ ತಾಯಿಯ ನಿಧನದಿಂದ ಮುಂದಿನ ವರ್ಷಕ್ಕೆ ಮದುವೆಯನ್ನು ಮುಂದೂಡಲಾಗಿತ್ತು. ಘಟನೆ ಸಂಭವಿಸಿದಾಗ ಅಂಜಲಿಯ ಕುಟುಂಬದವರು ಮನೆಯಲ್ಲಿ ಇರಲಿಲ್ಲ. ಮನೆಗೆ ಬಂದಾಗ ಕೊಠಡಿ ಒಳಗಿನಿಂದ ಲಾಕ್ ಆಗಿತ್ತು.ಸೂರತ್‌ ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಅಂಜಲಿ ಅಲ್ಪೇಶ್ ವರ್ಮೋರಾ ಎಂದು ಗುರುತಿಸಲಾಗಿದ್ದು, ಕಳೆದ ಕೆಲವು ವರ್ಷಗಳಿಂದ ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದರು.

Read More »