Breaking News

BigTv News

ಮಕ್ಕಳ ಆಟದ ನೋಟು ತೋರಿಸಿ ವಂಚನೆಗೆ ಯತ್ನ; ಸಿಸಿಬಿ ಬಲೆಗೆ ಬಿದ್ದ ಖದೀಮರು!

ಬೆಳಗಾವಿಯಲ್ಲಿ ₹3 ಕೋಟಿ ನಗದು ನೀಡಿದರೆ ₹5 ಕೋಟಿ ಆನ್‌ಲೈನ್ ಮೂಲಕ ವರ್ಗಾವಣೆ ಮಾಡುವುದಾಗಿ ನಂಬಿಸಿ ಪರಸ್ಪರ ವಂಚಿಸಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಿವಲಿಂಗಯ್ಯ ಗಣಾಚಾರಿ, ಸಾಗರ ಕಿಳ್ಳಿಕೇತ, ವಿನಾಯಕ ನೋಕರೆ ಹಾಗೂ ಶಿವಾನಂದ ಮುನವಳ್ಳಿ ಬಂಧಿತ ಆರೋಪಿಗಳು. ಮಾರ್ಸ್ ಇನ್‌ಫ್ರಾ ಕಂಪನಿಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್ ಸೃಷ್ಟಿಸಿ ಹಣ ವರ್ಗಾವಣೆ ಮಾಡುವುದಾಗಿ ಮೂವರು ಆರೋಪಿಗಳು ನಂಬಿಸಿದ್ದರು. ಮತ್ತೊಂದೆಡೆ ಶಿವಾನಂದ ಕೂಡ ₹3 …

Read More »

ಅನೈತಿಕ ಸಂಬಂಧ ಪ್ರಶ್ನಿಸಿದ ಮಗನನ್ನು ಕೊ*ಲೆ ಮಾಡಿಸಿದ ಹೆತ್ತ ತಾಯಿ!

ಬೆಳಗಾವಿಯಲ್ಲಿ ತಾಯಿಯ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದ 24 ವರ್ಷದ ಮಗನನ್ನು ತಂಪು ಪಾನೀಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ಕುಡಿಸಿ, ಬಳಿಕ ಶಾಲಿನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ ಭೀಕರ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ತಾಯಿ ಸೇರಿದಂತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅಪ್ರಾಪ್ತನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ನವೆಂಬರ್ 3ರಂದು ಕೆಎಲ್‌ಇ ಛತ್ರಿ ಸಮೀಪದ ಗಟಾರದಲ್ಲಿ ವಿಜಯ ನಾರಾಯಣ (24) ಎಂಬಾತನ ಶವ ಪತ್ತೆಯಾಗಿತ್ತು. ತನಿಖೆ ವೇಳೆ …

Read More »

ನಿಲ್ಲಿಸಿದ್ದ ಕಾರಿಗೆ ಏಕಾಏಕಿ ಬೆಂಕಿ; ಸಂಪೂರ್ಣ ಸುಟ್ಟು ಭಸ್ಮ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ನಿಲ್ಲಿಸಿದ್ದ ಕಾರಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ. ಊರಿಗೆ ತೆರಳಿ ವಾಪಸ್ ಬಂದ ಚಾಲಕ ಕಾರು ನಿಲ್ಲಿಸಿ ಕೆಳಗಿಳಿದ ಕೆಲವೇ ಕ್ಷಣಗಳಲ್ಲಿ ಈ ಅವಘಡ ಸಂಭವಿಸಿದೆ. ಕಾರಿನಿಂದ ಹೊಗೆ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಕಾರು ಸಂಪೂರ್ಣ ಸುಟ್ಟುಹೋಗಿತ್ತು. ಅದೃಷ್ಟವಶಾತ್ …

Read More »

ಪೆಟ್ರೋಲ್ ಬಂಕ್ ಮಾಲಕರ ಸಂಬಂಧಿ ಮೇಲೆ ಐವರಿಂದ ಹಲ್ಲೆ; ಪ್ರಕರಣ ದಾಖಲು

ಉಡುಪಿ: ಗುಂಡಿಬೈಲ್‌ನ ಪೆಟ್ರೋಲ್ ಬಂಕ್‌ನಲ್ಲಿ ಮದ್ಯಪಾನ ಮಾಡದಂತೆ ಎಚ್ಚರಿಸಿದ್ದಕ್ಕೆ ಬಂಕ್ ಮಾಲಕರ ಸಂಬಂಧಿ ಆಶಿಶ್ ಶೆಟ್ಟಿ (44) ಮೇಲೆ ಐವರು ಹಲ್ಲೆ ನಡೆಸಿದ್ದಾರೆ. ಖಾಸಗಿ ಬಸ್ ಚಾಲಕ ಆಕಾಶ್ ಬಂಕ್ ಆವರಣದಲ್ಲಿ ಮದ್ಯಪಾನ ಮಾಡುತ್ತಿದ್ದುದನ್ನು ಆಶಿಶ್ ಪ್ರಶ್ನಿಸಿದ್ದರು. ಇದರಿಂದ ಮಾತಿನ ಚಕಮಕಿ ನಡೆದಿದ್ದು, ಸ್ವಲ್ಪ ಸಮಯದ ಬಳಿಕ ನಾಲ್ವರು ಕಾರಿನಲ್ಲಿ ಹಾಗೂ ಓರ್ವ ಲಾರಿಯಲ್ಲಿ ಬಂಕ್‌ಗೆ ಮರಳಿದ್ದಾರೆ. ಬಳಿಕ ಆಶಿಶ್ ಮೇಲೆ ಹಲ್ಲೆ ನಡೆಸಿ, ಪುನೀತ್ ಎಂಬಾತ ಕಡಗದಿಂದ ತಲೆಗೆ …

Read More »

ಆನ್ಲೈನ್ ನಲ್ಲಿ ಅಂಗಾಂಗಗಳನ್ನು ಮಾರಾಟ ಮಾಡಲು ಬಾಲಕನ ಕೊಲೆಗೈದು ಪೈಶಾಚಿಕ ಕೃತ್ಯ

ಛತ್ತೀಸ್‌ಗಢದ ಜಶಪುರ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕನನ್ನು ಕೊಲೆ ಮಾಡಿ ಅಂಗಾಂಗಗಳನ್ನು ಹೊರತೆಗೆದಿರುವ ಭೀಕರ ಘಟನೆ ನಡೆದಿದೆ. ನಾಪತ್ತೆಯಾಗಿದ್ದ ಜಿತೇಂದ್ರ ರಾಮ್ ಎಂಬ ಬಾಲಕನ ಮೃತದೇಹ ಚೀಲದಲ್ಲಿ ತುಂಬಿದ ಸ್ಥಿತಿಯಲ್ಲಿ ಹೊಲದ ನೀರಿನ ಗುಂಡಿಯಲ್ಲಿ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 27 ವರ್ಷದ ಬಸುದೇವ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಸುದೇವ್ ಮೃತ ಬಾಲಕನ ಸಂಬಂಧಿಯಾಗಿದ್ದು, ಸಾಮಾಜಿಕ ಜಾಲತಾಣಗಳಿಂದ ಪ್ರಭಾವಿತನಾಗಿ ಅಂಗಾಂಗಗಳನ್ನು ಮಾರಾಟ ಮಾಡಿ ಹಣ ಗಳಿಸಲು ಸಂಚು ರೂಪಿಸಿದ್ದ ಎನ್ನಲಾಗಿದೆ. ನವೆಂಬರ್ …

Read More »

ಷೇರು ಹೂಡಿಕೆ ಹೆಸರಿನಲ್ಲಿ ಪ್ರಾಧ್ಯಾಪಕರಿಗೆ ₹1.19 ಕೋಟಿ ವಂಚನೆ!

ಬೆಂಗಳೂರು: ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡಿ ಸೈಬರ್ ವಂಚಕರು 65 ವರ್ಷದ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಿಗೆ ₹1.19 ಕೋಟಿ ವಂಚಿಸಿದ್ದಾರೆ. ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳ ಮೂಲಕ ಹೂಡಿಕೆ ಸಲಹೆ ನೀಡಿದ್ದ ವಂಚಕರು, ಲಾಭ ಗಳಿಸಿದ ನಕಲಿ ಸ್ಕ್ರೀನ್‌ಶಾಟ್‌ಗಳನ್ನು ತೋರಿಸಿ ನಂಬಿಕೆ ಮೂಡಿಸಿದ್ದರು. ಬಳಿಕ ಮೂರು ನಕಲಿ ಟ್ರೇಡಿಂಗ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಸಿ, ಹಂತ ಹಂತವಾಗಿ ಹಣ …

Read More »

ಅಪ್ರಾಪ್ತ ವಯಸ್ಕ ಬಾಲಕಿ ಮೇಲಿನ ದೌರ್ಜನ್ಯ ಕೇಸ್: ಗ್ರಾಮದಲ್ಲಿ ಉದ್ವಿಗ್ನ ವಾತಾವರಣ, ಆರೋಪಿ ಮನೆ ಮೇಲೆ ದಾಳಿ

ಮುಂಡಗೋಡ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯಾಗಿಸಿದ ಆರೋಪದ ಮೇಲೆ 65 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಗೆ ಆಕ್ರೋಶಗೊಂಡ ಗ್ರಾಮಸ್ಥರು ಶನಿವಾರ ರಾತ್ರಿ ಆರೋಪಿಯ ಮನೆ ಧ್ವಂಸಗೊಳಿಸಿದ್ದಾರೆ. ವಿಷಯ ತಿಳಿದು ಡಿವೈಎಸ್ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ಎಸ್ಪಿ ದೀಪನ್ ಎಂ.ಎನ್. ಕೂಡ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನು ಮನೆ ಧ್ವಂಸ ಮಾಡಿದವರ ವಿರುದ್ಧ …

Read More »

‘ಮುಂದೆ ಕಳ್ಳರಿದ್ದಾರೆ, ಆಭರಣ ಕೊಡಿ’- ಪೊಲೀಸರ ಸೋಗಿನಲ್ಲಿ ಬೈಕ್ ತಡೆದು ಚಿನ್ನ ದೋಚಿದ ಖದೀಮರು!

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ವೈಎಸ್‌ಆರ್ ಶಾಲೆ ಬಳಿ ನಕಲಿ ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ಖದೀಮರು ಬೈಕ್ ಸವಾರನನ್ನು ಅಡ್ಡಗಟ್ಟಿ ಚಿನ್ನಾಭರಣ ದೋಚಿದ್ದಾರೆ. ಜವಳಗೇರಾ ಗ್ರಾಮದ ಎಂ. ಅಮರೇಶ ಈ ವಂಚನೆಗೆ ಒಳಗಾದವರು. ತಾವು ಪೊಲೀಸರೆಂದು ಪರಿಚಯಿಸಿಕೊಂಡ ಆರೋಪಿಗಳು, ರಸ್ತೆಯಲ್ಲಿ ಕಳ್ಳರಿದ್ದಾರೆ ಎಂದು ನಂಬಿಸಿ ಆಭರಣಗಳನ್ನು ಸುರಕ್ಷಿತವಾಗಿ ಚೀಲದಲ್ಲಿ ಇಡುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ಅಮರೇಶ 2 ತೊಲೆಯ ಚಿನ್ನದ ಸರ ಹಾಗೂ 1 ತೊಲೆಯ ಉಂಗುರವನ್ನು ಅವರಿಗೆ …

Read More »

ರಾಜ್ಯದಲ್ಲಿ ಮತ್ತೊಂದು ಭೀಕರ ಕೊಲೆ : ಪತಿಯ ಮರ್ಮಾಂಗಕ್ಕೆ ಒದ್ದು, ರುಬ್ಬುಗಲ್ಲಿಂದ ಜಜ್ಜಿ ಹತ್ಯೆ : ಪತ್ನಿ, ಪ್ರಿಯಕರ ಅರೆಸ್ಟ್!

ಕಲಬುರಗಿ: ಪತಿಯ ಮರ್ಮಾಂಗಕ್ಕೆ ಒದ್ದು, ರುಬ್ಬುಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಪತಿ ಸಿದ್ದರಾಮನನ್ನು ಹತ್ಯೆ ಮಾಡಿ ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಪತ್ನಿ ಅಂಬಿಕಾ ಮತ್ತು ಆಕೆಯ ಪ್ರಿಯಕರ ಮಾರುತಿಯನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 3ರಂದು ರಾತ್ರಿ ಅಂಬಿಕಾ ಪತಿಗೆ ನಿದ್ರೆ ಮಾತ್ರೆ ನೀಡಿದ್ದಾಳೆ ಎನ್ನಲಾಗಿದೆ. ಬಳಿಕ ಪ್ರಿಯಕರ ಮಾರುತಿ ಮನೆಗೆ ಬಂದಿದ್ದಾನೆ. ನವೆಂಬರ್ 4ರಂದು ಬೆಳಗ್ಗೆ ಎಚ್ಚರಗೊಂಡ ಸಿದ್ದರಾಮ ಪತ್ನಿ ಮತ್ತು ಪ್ರಿಯಕರನನ್ನು …

Read More »

ಗ್ರಾಹಕರೇ ಹುಷಾರ್ – ಮಾರುಕಟ್ಟೆಗೆ ಕಾಲಿಟ್ಟಿದೆ ನಕಲಿ ಟಾಟಾ ಉಪ್ಪು!

ಬೆಂಗಳೂರು: ಪ್ರಸಿದ್ಧ ಟಾಟಾ ಸಾಲ್ಟ್ ಹೆಸರಿನಲ್ಲಿ ನಕಲಿ ಉಪ್ಪು ಮಾರಾಟ ಮಾಡುತ್ತಿದ್ದ ಜಾಲವೊಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಪತ್ತೆಯಾಗಿದೆ. ಅಧಿಕಾರಿಗಳು ದಾಳಿ ನಡೆಸಿ 840 ಪ್ಯಾಕೆಟ್ ನಕಲಿ ಉಪ್ಪು ಹಾಗೂ 1,850 ಕೆಜಿ ಸಡಿಲ ಉಪ್ಪನ್ನು ವಶಪಡಿಸಿಕೊಂಡಿದ್ದಾರೆ. ಟಾಟಾ ಸಾಲ್ಟ್ ಪ್ಯಾಕೆಟ್‌ನಂತೆಯೇ ನಕಲಿ ಪೊಟ್ಟಣಗಳನ್ನು ಸಿದ್ಧಪಡಿಸಿ, ಅದರಲ್ಲಿ ಕಳಪೆ ಗುಣಮಟ್ಟದ ಉಪ್ಪು ತುಂಬಿ ಮಾರಾಟ ಮಾಡಲಾಗುತ್ತಿತ್ತು. ಇಂತಹ ಉಪ್ಪಿನ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ. ಉಪ್ಪು ಖರೀದಿಸುವಾಗ …

Read More »