ಹುಬ್ಬಳ್ಳಿ: ಸೌಜನ್ಯ ಕೊಲೆ ಪ್ರಕರಣದಲ್ಲಿ ಧರ್ಮಸ್ಥಳದ ಕುರಿತು ತೇಜೋವಧೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಬೇಕು ಎಂದು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ಮುಖ್ಯಸ್ಥ ಗುರುನಾಥ್ ಉಳ್ಳಿಕಾಶಿ ಆಗ್ರಹಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಧರ್ಮದ ಹೆಸರಲ್ಲಿ ಧರ್ಮಸ್ಥಳವಾಗಿದೆ. ಈಗ ಅದರ ಹೆಸರು ಕೆಡಿಸುವ ಕೆಲಸವಾಗುತ್ತಿದೆ. ಸಿಬಿಐ ನ್ಯಾಯಾಲಯ ಸಂತೋಷ ರಾವ್ ನಿರಪರಾಧಿ ಎಂಬ ಆದೇಶ ನೀಡಿತು. ಆದರೆ ಆರೋಪಿ ಯಾರು ಎಂದಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಆರೋಪ ಮಾಡಲಾಗುತ್ತಿದೆ ಎಂದರು.
ದೇಶದಲ್ಲಿ ಸಿಬಿಐ ತನಿಖೆ ಮಾಡಿದರೂ ಸಹಿತ ಆರೋಪಿಗಳು ಹೊರಗಡೆ ಬಂದಿದ್ದಾರೆ. ಯಾಕೇ ಧರ್ಮಸ್ಥಳವನ್ನು ಗುರಿ ಮಾಡಲಾಗುತ್ತಿದೆ ಎಂಬ ಪ್ರಶ್ನೆ ಕಾಡುತ್ತಿದೆ. ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಸಂಸ್ಥೆಗಳ ವಿರುದ್ಧ ಮಾನಹಾನಿ ಆಗಬಾರದು ಎಂಬ ಆದೇಶ ಹೊರಡಿಸಿತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ. ಈ ನಿಟ್ಟಿನಲ್ಲಿ ನಾಯ್ಯಾಂಗ ನಿಂದನೆ ಪ್ರಮಾದ ಆಗುತ್ತಿದೆ ಎಂದರು.ಸಾಕ್ಷಿ ಆಧಾರಗಳಿದ್ದಲ್ಲಿ ಮತ್ತೆ ನ್ಯಾಯಾಲಯಕ್ಕೆ ಹೋಗಲು ಅವಕಾಶಗಳಿವೆ. ನ್ಯಾಯಾಲಯ ೧೦೦ ರಷ್ಟು ಕ್ರಮ ಕೈಗೊಳ್ಳಲಿದೆ.
ಲಕ್ಷಾಂತರ ಜನ ಧರ್ಮಸ್ಥಳಕ್ಕೆ ಹೋಗುತ್ತಿದ್ದಾರೆ. ಈಗ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆ ಪ್ರಕರಣಕ್ಕೂ ನ್ಯಾಯ ದೊರೆಯಲ್ಲ. ಕ್ಷೇತ್ರದ ಹೆಸರು ಹಾಳಾಗುತ್ತಿದೆ. ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ರೇವಣಸಿದ್ದಪ್ಪ ಹೊಸಮನಿ, ರವಿ ಕದಂ, ಮಂಜಣ್ಣ ಉಳ್ಳಿಕಾಶಿ, ಲೋಹಿತ ಗಾಮನಗಟ್ಟಿ, ದೇವೇಂದ್ರಪ್ಪ ಇಟಗಿ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





