ಇಂದು ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ ಇವರು, ಕಾಂಗ್ರೆಸ್ ತಮ್ಮ ಅಧಿಕಾರದಲ್ಲಿದ್ದಾಗ ಸೈನ್ಯವನ್ನು ಗಟ್ಟಿ ಮಾಡೋ ಕೆಲಸ ಮಾಡಲಿಲ್ಲ.ಎಚ್ ಎ ಎಲ್ ಸೇರಿದಂತೆ ಅನೇಕ ಸಂಸ್ಥೆಗಳಿಗೆ ಹಣ ಕಡಿಮೆ ಮಾಡಿತ್ತು.ಭಾರತೀಯ ಸೈನ್ಯ ಇಂದು ಸ್ವಾವಲಂಭಿಯಾಗಿದೆ.ಇಂದು ಕಾಂಗ್ರೆಸ್ ಅನವಶ್ಯಕ ಆರೋಪ ಮಾಡುತ್ತಿದೆ.ಸಿದ್ದರಾಮಯ್ಯ ನವರು ಯುದ್ದ ಯಾಕೆ ಬೇಕು ಅಂತ ಹೇಳಿದ್ರು.ಈ ಮಾತುಗಳು ನಿಮ್ಮ ಹೈಕಮಾಂಡ್ ಸೂಚನೆ ಮೇರಿಗೆ ಮಾತನಾಡ್ತಿದ್ದೀರಾ..?. ಭಾರತೀಯ ಸೇನೆಗೆ ಯಾವುದೇ ಸೌಲಭ್ಯ ಒದಗಿಸಲಿಲ್ಲ ಉರಿ ಘಟನೆ …
Read More »ಹುಬ್ಬಳ್ಳಿ : ಕಾಂಗ್ರೆಸ್ ಯಾವಾಗಲೂ ದೇಶದ ಪರವಾಗಿ ನಿಂತಿಲ್ಲ, ಸಚಿವೆ ಶೋಭಾ ಕರಂದ್ಲಾಜೆ ಕಿಡಿ..!
ಹುಬ್ಬಳ್ಳಿ: ದೇಶ ಸಂಕಷ್ಟ ಮತ್ತು ಸಾಧನೆ ಸಮಯದಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಮಾತನಾಡುತ್ತದೆ. ಅಧಿಕಾರದಲ್ಲಿದ್ದಾಗ ಸೈನ್ಯವನ್ನು ಗಟ್ಟಿ ಮಾಡೋ ಕೆಲಸ ಮಾಡಲಿಲ್ಲಾ. ಕಾಂಗ್ರೆಸ್ ಎಚ್ ಎ ಎಲ್ ಸೇರಿದಂತೆ ಅನೇಕ ಸಂಸ್ಥೆಗಳಿಗೆ ಹಣ ಕಡಿಮೆ ಮಾಡಿತ್ತು. ಮೋದಿಯವರ ನೇತೃತ್ವದಲ್ಲಿ ಭಾರತೀಯ ಸೈನ್ಯ ಇಂದು ಸ್ವಾವಲಂಭಿಯಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ನಗರದ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು,ಇಂದು ಕಾಂಗ್ರೆಸ್ ಅನವಶ್ಯಕ ಆರೋಪ ಮಾಡುತ್ತಿದೆ. …
Read More »ಬೆಂಗಳೂರು :ವರ್ಕ್ ಫ್ರಮ್ ಹೋಂ ನೆಪದಲ್ಲಿ ವಂಚನೆ, 12 ಆರೋಪಿಗಳ ಸೆರೆ!!
ವರ್ಕ್ ಫ್ರಮ್ ಹೋಂನಲ್ಲಿ ಪ್ರಾಜೆಕ್ಟ್ ಇರುವುದಾಗಿ ಹೇಳಿ ವಂಚನೆ ಮಾಡುತ್ತಿದ್ದ 12 ಸೈಬರ್ ಕಳ್ಳರ ಗ್ಯಾಂಗ್ ಅನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.ಮಹಿಳೆಗೆ ನಂಬಿಸಿ ಸ್ಕೋರ್ ಬ್ಯಾಲೆನ್ಸ್ಶೀಟ್ನಲ್ಲಿ 10,82,502 ರೂ. ತೋರಿಸಿದ್ದು, ವಿತ್ಡ್ರಾಗೆ 5 ಲಕ್ಷ ರೂ. ಪಾವತಿಸುವಂತೆ ಸೂಚಿಸಿದ್ದ.ದುರಾಸೆಗೆ ಬಿದ್ದ ಮಹಿಳೆ, ಹಂತ ಹಂತವಾಗಿ ಅಪರಿಚಿತ ಹೇಳಿದ ಬ್ಯಾಂಕ್ ಖಾತೆಗಳಿಗೆ 5 ಲಕ್ಷ ರೂ. ಜಮೆ ಮಾಡಿದ್ದರು. ಇನ್ನೂ 3.24 ಲಕ್ಷ ರೂ. ಜಮಾ ಮಾಡಿದಾಗ ಮಾತ್ರ 10 ಲಕ್ಷ …
Read More »ತುಮಕೂರು :ನಕಲಿ ಬಿಲ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚನೆ!
ಮೂರು ದಿನಗಳ ಹಿಂದೆ ಚೀನಾ ಪ್ರವಾಸಕ್ಕೆ ತೆರಳಿರುವ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಡಿ.ರಾಜಶೇಖರ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿರುವುದು ದಾಳಿ ಸಮಯದಲ್ಲಿ ಬೆಳಕಿಗೆ ಬಂದಿದೆ.ಹಳೆ ಕಾಮಗಾರಿ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ₹2 ಕೋಟಿಗೂ ಅಧಿಕ ಮೊತ್ತ ಪಡೆದುಕೊಂಡಿರುವುದು, 2024-25ರಲ್ಲೂ ಹಳೆ ಕಾಮಗಾರಿಗಳಿಗೆ ನಕಲಿ ಬಿಲ್ ಸೃಷ್ಟಿಸಿ ₹3 ಕೋಟಿಗೂ ಅಧಿಕ ಮೊತ್ತ ಡ್ರಾ ಮಾಡಿಕೊಂಡಿದ್ದಾರೆ. …
Read More »ಬೆಂಗಳೂರು :ಸಾಲದ ಹಣ ವಾಪಸ್ ಕೇಳಿದಕ್ಕೆ ಚಾಕು ಇರಿದಿದ್ದ ಆರೋಪಿ ಸೆರೆ!
ಸಾಲ ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಆರೋಪಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹಣ ನೀಡುವಂತೆ ಆರೋಪಿಯನ್ನು ಕೇಳಿದ್ದು, ಈ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದಾಗ ಆರೋಪಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ದೂರು ನೀಡಿದ್ದರು. ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ …
Read More »ಮೈಸೂರು : ಮುಂದಿನ ಬಲಿ ನೀನೇ – ಪುನೀತ್ ಕೆರೆಹಳ್ಳಿಗೆ ಜೀವ ಬೆದರಿಕೆ!
ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪುನೀತ್ ಕೆರೆಹಳ್ಳಿಗೆ ಜೀವ ಬೆದರಿಕೆ ಕರೆಯೊಂದು ಬಂದಿರುವ ಘಟನೆ ಬೆಳಕಿಗೆ ಬಂದಿದ್ದು, ಇದೀಗ ಆರೋಪಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಉದಯಗಿರಿ ನಿವಾಸಿ ಅಕ್ರಮ್ ಖಾನ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಬಲೆಬೀಸಿದ್ದಾರೆ.
Read More »ಅಮ್ಮಾವ್ರ ಗಂಡ ದರ್ಶನ್! ಹೆಂಡತಿ ಬೆಂಗಾವಲಿನಲ್ಲಿ…
ನಟ ದರ್ಶನ್ ಖದರ್ ಕರಗಿ ತಿಂಗಳುಗಳೇ ಕಳೆದಿವೆ. ಒಂದೇ ಒಂದು ದೊಡ್ಡ ದುರಂತ ದಾಸನ ಗತ್ತು ದೌಲತ್ತನ್ನೆಲ್ಲಾ ರಕ್ತದಲ್ಲಿ ಕೊಚ್ಚಿ ಹೋಗೋ ಹಾಗೆ ಮಾಡಿದೆ. ದರ್ಶನ್ ಈಗೇನಿದ್ರು ಅಮ್ಮಾವ್ರ ಗಂಡ. ದಾಸನಿಗೆ ಹೆಂಡತಿಯೇ ಬೆಂಗಾವಲು.ದರ್ಶನ್ ಸುತ್ತ ಇದ್ದವರೆಲ್ಲಾ ಕಿರಾತಕರೆ. ಆದ್ರೆ ಈಗ ಆ ಕಿರಾತಕ ಗ್ಯಾಂಗ್ ಅನ್ನ ದಚ್ಚು ದೂರ ಇಟ್ಟಿದ್ದಾರೆ. ಡ್ಯಾಮೇಜ್ ಆಗಿರೋ ದಾಸನ ಇಮೇಜ್ ಅನ್ನ ಮತ್ತೆ ಕಟ್ಟಿಕೊಡೋಕೆ ಪತ್ನಿ ವಿಜಯಲಕ್ಷ್ಮೀ ಪಣ ತೊಟ್ಟಿದ್ದಾರೆ.ನಟ ದರ್ಶನ್ ಸಂಪೂರ್ಣ …
Read More »ಮಡಿಕೇರಿ :ಯುವಕರಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದ ಎಸ್ಐ, ಎಎಸ್ಐ ಅಮಾನತು!
ಕೊಡಗು ಜಿಲ್ಲೆ ಸುಂಟಿಕೊಪ್ಪದಲ್ಲಿ ಮಫ್ತಿಯಲ್ಲಿ ಬಂದು ಲಾಂಗ್ ತೋರಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐ ಮತ್ತು ಎಎಸ್ಐ ಅವರನ್ನು ಅಮಾನತು ಮಾಡಲಾಗಿದೆ.ತಪ್ಪು ಮಾಡದೆ ಇದ್ದರೂ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದು ಶಂಕಾಸ್ಪದವಾಗಿದ್ದ ಕಾರಣ ಯುವಕರು ನೇರವಾಗಿ ಜಿಲ್ಲಾ ಪೊಲೀಸ್ ಅಧಿಕಾರಿನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಈ ಬಗ್ಗೆ ಎಸ್ಪಿ ತನಿಖೆಗೆ ಆದೇಶಿಸಿದ್ದು, ತೀರ್ಥಕುಮಾರ್ ದೂರವಾಣಿ ಮೂಲಕ ನಡೆದ ಘಟನೆ ಹಾಗೂ ಪಡೆದುಕೊಂಡ ಹಣದ ಬಗ್ಗೆ ಮಾತನಾಡಿರುವ ಆಡಿಯೋ ಇದ್ದು, …
Read More »ಜೈಪುರ್ :ಬೆಳ್ಳಿ ಬಳೆಗಾಗಿ ತಾಯಿಯ ಅಂತ್ಯಸಂಸ್ಕಾರವನ್ನು ನಿಲ್ಲಿಸಿದ ಮಗ !
ಶವವನ್ನು ಅವರ ಪುತ್ರರು ಮತ್ತು ಸಂಬಂಧಿಕರು ಅಂತಿಮ ವಿಧಿಗಳಿಗಾಗಿ ಹತ್ತಿರದ ಸ್ಮಶಾನಕ್ಕೆ ಕರೆದೊಯ್ದರು. ಚಿತೆಯ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿರುವಾಗ, ವಿವಾದ ಭುಗಿಲೆದ್ದಿತು.ಮೃತರನ್ನು ಚಿತೆಯ ಮೇಲೆ ಇಡುವ ಮೊದಲು, ಕುಟುಂಬದ ಹಿರಿಯರು ಅವಳ ಬೆಳ್ಳಿಯ ಬಳೆಗಳು ಮತ್ತು ಇತರ ಆಭರಣಗಳನ್ನು ಅವಳ ಹಿರಿಯ ಮಗ ಗಿರ್ಧಾರಿ ಲಾಲ್ಗೆ ಹಸ್ತಾಂತರಿಸಿದರು, ಅವರು ಜೀವಂತವಾಗಿದ್ದಾಗ ಅವಳನ್ನು ನೋಡಿಕೊಂಡರು. ಕಿರಿಯ ಮಗ ಓಂಪ್ರಕಾಶ್ ಕೋಪದಿಂದ ಪ್ರತಿಕ್ರಿಯಿಸಿದರು. ಆಘಾತಕಾರಿ ಕ್ರಮವೊಂದರಲ್ಲಿ, ಅವರು ಚಿತೆಯ ಮೇಲೆ ಮಲಗಿದರು ಮತ್ತು …
Read More »ಕುರಾನ್ ಪುಸ್ತಕಕ್ಕೆ ಬೆಂಕಿ ಪ್ರಕರಣ – ಕರ್ತವ್ಯ ಲೋಪದ ಆರೋಪಡಿಯಲ್ಲಿ ಸಿಪಿಐ ಅಮಾನತು!
ಕುರಾನ್ ಪುಸ್ತಕ ಕಳ್ಳತನ ಮಾಡಿ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ್ ಅವರನ್ನು ಕರ್ತವ್ಯಲೋಪದ ಆರೋಪದಡಿಯಲ್ಲಿ ಅಮಾನತುಗೊಳಿಸಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸಿಪಿಐ ಮಂಜುನಾಥ ಹಿರೇಮಠ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕರ್ತವ್ಯ ಲೋಪ ಆರೋಪದಲ್ಲಿ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ.ಈ ಬಗ್ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





