ದಿಲೀಪ್ ಕುಮಾರ್ ತಮ್ಮ ಎರಡನೇ ಪತ್ನಿ ಅಮೃತ ಜೊತೆಗೆ ಬಲೋನೋ ಕಾರಿನಲ್ಲಿ ನೆಲಮಂಗಲಕ್ಕೆ ಆಗಮಿಸಿದ್ದರು. ಈ ವೇಳೆ, ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿ, ಲಾಂಗ್ ಮೂಲಕ ತೀವ್ರ ಹಲ್ಲೆ ಮಾಡಿ, ಅವರ ಕಾರಿನಲ್ಲೇ ದಿಲೀಪ್ ಕುಮಾರ್ ಅವರನ್ನು ಬಲವಂತವಾಗಿ ಕಿಡ್ನಾಪ್ ಮಾಡಿದ್ದಾರೆ.ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ನಾಕಬಂಧಿ ಜಾರಿಗೊಳಿಸಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.ಪೊಲೀಸರು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ …
Read More »ಭಟ್ಟರಹಳ್ಳಿ ಜಂಕ್ಷನ್ ಬಳಿ ಕಾರು-ಬೈಕ್ ಮಧ್ಯೆ ಡಿಕ್ಕಿ, ಹೋಟೆಲ್ ಕಾರ್ಮಿಕ ಸಾವು!!
ಭಟ್ಟರಹಳ್ಳಿ ಜಂಕ್ಷನ್ ಬಳಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದರಿಂದ ಕೆಳಕ್ಕೆ ಬಿದ್ದ ಕುಮಾರ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ಯವ ಮಾರ್ಗದಲ್ಲಿ ಕುಮಾರ್ ಮೃತಪಟ್ಟರು’ ಎಂದು ಮೂಲಗಳು ತಿಳಿಸಿವೆ.ಚಾಲಕ ಕಾರನ್ನು ನಿಲುಗಡೆ ಮಾಡದೇ ತೆರಳಿದ್ದಾನೆ. ಘಟನೆ ನಡೆದ ಸುತ್ತಮುತ್ತಲ ಪ್ರದೇಶದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ. ಕಾರಿನ ನೋಂದಣಿ ಸಂಖ್ಯೆ ಪತ್ತೆಯಾಗಿದ್ದು, ಚಾಲಕನನ್ನು ವಶಕ್ಕೆ ಪಡೆದು ಘಟನೆ ಕುರಿತು …
Read More »ಯಾದಗಿರಿ: ಸಿಲಿಂಡರ್ ಸ್ಫೋಟ, ಮನೆ ಬೆಂಕಿಗಾಹುತಿ!!
ಹೊಸ ಮನೆ ನಿರ್ಮಾಣಕ್ಕಾಗಿ ಪಕ್ಕದಲ್ಲಿ ಮಲ್ಲಯ್ಯ ಅವರು ಶೆಡ್ ನಿರ್ಮಿಸಿಕೊಂಡಿದ್ದರು. ಹೊಸ ಮನೆಯ ಗೃಹ ಪ್ರವೇಶಕ್ಕೆ ತಯಾರಿ ನಡೆಸಿದ್ದರು. ಶನಿವಾರ ಸಿಲಿಂಡರ್ ಸ್ಫೋಟಗೊಂಡಿದ್ದು, ಮನೆಯಲ್ಲಿದ್ದ ₹7 ಲಕ್ಷ ನಗದು, 100 ಗ್ರಾಂ ಚಿನ್ನ,150 ಗ್ರಾಂ ಬೆಳ್ಳಿಯ ಆಭರಣಗಳು, ಆಹಾರ ಧಾನ್ಯ ಸೇರಿ ಬೆಲೆ ಬಾಳುವ ವಸ್ತುಗಳು ಹಾನಿಯಾಗಿವೆ. ಸ್ಥಳಕ್ಕೆ ಕಂದಾಯ ಅಧಿಕಾರಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ‘ಮನೆ ಹಾನಿಯಿಂದ ದಂಪತಿ ಕಣ್ಣೀರು ಹಾಕುವಂತಾಗಿದೆ. ಸರ್ಕಾರ ಹೆಚ್ಚಿನ ಪರಿಹಾರ …
Read More »ತಂದೆ-ತಾಯಿಯನ್ನು ಟ್ರ್ಯಾಕ್ಟರ್ ಹಾಯಿಸಿ ಕೊಂದ ಮಗ!!
ಭೂಮಿಯನ್ನು ತಮ್ಮ ಮಗಳು ರಾಧಾಗೆ ನೀಡಿದರು. ಇದನ್ನು ತಿಳಿದ ಮಗ ರಾಜಶೇಖರ್, ನೋಂದಾಯಿಸಿದ್ದ ಭೂಮಿಯನ್ನು ಹಿಂದಿರುಗಿಸುವಂತೆ ರಾಧಾ ಜೊತೆ ಆಗಾಗ ಜಗಳವಾಡುತ್ತಿದ್ದ. ಆದಾಗ್ಯೂ, ಅಪ್ಪಲನಾಯ್ಡು ಮಾತ್ರ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಇದೇ ಸಂದರ್ಭದಲ್ಲಿ, ಸಾಲದ ಹೊರೆಯನ್ನು ಹೊರಲು ಸಾಧ್ಯವಾಗದೆ, ತಂದೆ ಅಪ್ಪಲನಾಯ್ಡು ಬಳಿಯಿದ್ದ ಭೂಮಿಯನ್ನು ಮಾರಾಟ ಮಾಡಲು ರಾಜಶೇಖರ್ ನಿರ್ಧರಿಸಿದ. ಹೀಗಾಗಿ, ಜೆಸಿಬಿ ಮತ್ತು ಟ್ರ್ಯಾಕ್ಟರ್ ಸಹಾಯದಿಂದ ಜಮೀನಿನಲ್ಲಿ ಕೆಲಸ ಮಾಡಿ ಭೂಮಿಯನ್ನು ಸಮತಟ್ಟು ಮಾಡುತ್ತಿದ್ದ.ಮಗಳು ರಾಧಾಗೆ ನೀಡಿದ್ದ ಜಮೀನನ್ನು …
Read More »ಆನೇಕಲ್: ಕ್ಷುಲಕ ಕಾರಣಕ್ಕೆ ಗಲಾಟೆ, ಕೊಲೆಯಲ್ಲಿ ಅಂತ್ಯ!!
ಸುರೇಶ್ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ. ಶುಕ್ರವಾರ ರಾತ್ರಿ ಬಾರ್‌ನಲ್ಲಿ ಮದ್ಯ ಸೇವಿಸುತ್ತಿದ್ದಾಗ ಕಾಂತರಾಜು ಎಂಬುವವರೊಂದಿಗೆ ಕ್ಷುಲಕ ಕಾರಣಕ್ಕೆ ಗಲಾಟೆಯಾಗಿದೆ. ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದ ಕಾಂತರಾಜು ಮತ್ತು ಸ್ನೇಹಿತರಿಗೆ ಸುರೇಶ್ ನಿಧಾನವಾಗಿ ಮಾತನಾಡುವಂತೆ ತಿಳಿಸಿದ್ದಾರೆ. ಇದೇ ವಿಷಯಕ್ಕೆ ಜಗಳ ಪ್ರಾರಂಭವಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ನಂತರ ಮನೆಗೆ ತೆರಳಿದ ಸುರೇಶ್ ಅವರನ್ನು ಹಿಂಬಾಲಿಸಿ ಕಾಂತರಾಜು ಮತ್ತು ಸ್ನೇಹಿತರು, ಸುರೇಶ್ ಅವರ ಪತ್ನಿ ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ನುಗ್ಗಿ ಚಾಕುವಿನಿಂದ …
Read More »ಶಿಗ್ಗಾವಿ: ಬಾಲಕಿ ಮೇಲೆ ಅತ್ಯಾಚಾರ ಆರೋಪ, ವೃದ್ಧನ ಬಂಧನ!!
ಮನೆಯಲ್ಲಿ ಆಟವಾಡುತ್ತಿದ್ದ ಏಳು ವರ್ಷದ ಬಾಲಕಿಗೆ ಹಣ್ಣು ಕೊಡಿಸುವ ಆಸೆ ತೋರಿಸಿ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಆರೋಪದ ಮೇಲೆ ಮರ್ದಾನ ಪಟೇಲ್ ಸಣ್ಣ ಮಹಬೂಬಗೌಡ ಪಾಟೀಲರನ್ನು(66)ಹುಲಗೂರ ಪೊಲೀಸರು ಬಂಧಿಸಿದ್ದಾರೆ. ಪೋಕ್ಸೊ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ’ ಎಂದು ಪಿಎಸ್‌ಐ ಪಿ.ಎಫ್.ನೀರೋಳ್ಳಿ ತಿಳಿಸಿದ್ದಾರೆ.
Read More »ಸಹೋದರಿಯರ ಮೇಲೆ ಅತ್ಯಾಚಾರ, ಇಸ್ಲಾಂ ಮತಾಂತರಕ್ಕೆ ಒತ್ತಡ, ಇಬ್ಬರು ಅರೆಸ್ಟ್!
ಭೋಪಾಲ್ ಸಹೋದರಿಯರ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ ಖಾಸಗಿ ವಿಡಿಯೋವನ್ನು ತೋರಿಸಿ ಮತಾಂತರಗೊಳ್ಳುವಂತೆ ಬ್ಲ್ಯಾಕ್ ಮೇಲ್ ಮಾಡಿದ್ದ ಆರೋಪದಡಿ ಫರ್ಹಾನ್ ಮತ್ತು ಇನ್ನೋರ್ವನನ್ನು ಅರೆಸ್ಟ್ ಮಾಡಲಾಗಿದೆ.ಒಂದು ದಿನ ಫರ್ಹಾನ್ ತನ್ನನ್ನು ಜಹಾಂಗೀರಾಬಾದ್‌ನಲ್ಲಿರುವ ಅವನ ಸ್ನೇಹಿತನ ಮನೆಗೆ ಕರೆದೋಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಫರ್ಹಾನ್ ಆ ಕೃತ್ಯ ರೆಕಾರ್ಡ್ ಮಾಡಿದ್ದಾನೆ. ನಂತರ ವಿಡಿಯೋ ಇಟ್ಟುಕೊಂಡು ಬೆದರಿಸಿ ಇಸ್ಲಾಂಗೆ ಮತಾಂತರಗೊಂಡು ಅವರ ಪದ್ಧತಿಗಳನ್ನ ಅನುಸರಿಸುವಂತೆ ಒತ್ತಡ ಹೇರಿದ್ದ. ತನ್ನ ಮಾತು ಕೇಳದಿದ್ದರೆ ವಿಡಿಯೋ ವೈರಲ್ …
Read More »ಬೆಂಗಳೂರು :ಟೆರಾಸ್ ಮೇಲಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು!!
ಕೆ.ಆರ್.ಪುರದ ದೇವಸಂದ್ರದ ನೇತ್ರಾವತಿ ಲೇಔಟ್‌ನಲ್ಲಿರುವ ತಮ್ಮ ಮೂರು ಅಂತಸ್ತಿನ ಮನೆಯಲ್ಲಿ ಪಾಲಕರೊಂದಿಗೆ ವಾಸವಾಗಿದ್ದರು. ಶುಕ್ರವಾರ ರಾತ್ರಿ ಸಹೋದರಿ ಮತ್ತು ಪಾಲಕರ ಜತೆ ಊಟ ಮಾಡಿದ ಬಳಿಕ ಟೆರಾಸ್ ಮೇಲೆ ಎಲ್ಲರೂ ಕುಳಿತುಕೊಂಡಿದ್ದರು. ಬಳಿಕ ಕೆಲ ಹೊತ್ತು ವಾಯುವಿವಾರ ಮಾಡಿದ್ದ ಗೋಪಾಲ್ ಸಿಂಗ್, ಮೇಲಿನ ಬಾಗಿಲು ಹಾಕಿಕೊಂಡು ಬರುತ್ತೇನೆ. ನೀವು ಹೋಗಿ ಎಂದು ಪಾಲಕರನ್ನು ಕೆಳಗೆ ಕಳುಹಿಸಿದ್ದಾನೆ.ಬಳಿಕ ಟೆರಾಸ್ ಮೇಲೆ ಸ್ವಲ್ಪ ಹೊತ್ತು ಮನೆ ವಾಯುವಿಹಾರ ಮಾಡಲು ಮುಂದಾಗಿದ್ದು, ಈ ವೇಳೆ …
Read More »ಸೊಳ್ಳೆ ಬತ್ತಿ ಹಚ್ಚಿದ್ದ ಕಾರಣ ಉಸಿರುಗಟ್ಟಿ 4 ವರ್ಷದ ಮಗು ಸಾವು.!
ತೆಲಂಗಾಣದ ಹಯತ್‌ನಗರ ಸಿಐ ನಾಗರಾಜುಗೌಡ ಮಾತನಾಡಿ, ಅಬ್ದುಲ್ ಖಾದರ್ ಜಿಲಾನಿ ಅವರು ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ಪೆದ್ದ ಅಂಬರಪೇಟೆ ಪುರಸಭೆ ವ್ಯಾಪ್ತಿಯ ಭುವನೇಶ್ವರಿ ಕಾಲೋನಿಯಲ್ಲಿ ವಾಸವಾಗಿದ್ದಾರೆ. ಶನಿವಾರ ರಾತ್ರಿ, ಸೊಳ್ಳೆಗಳನ್ನು ದೂರವಿಡಲು ಅವರು ಸೊಳ್ಳೆ ಬತ್ತಿ ಹೆಚ್ಚಿದ್ದಾರೆ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಹಾಸಿಗೆಯ ಮೇಲೆ ಸುರುಳಿ ಬಿದ್ದು ಬೆಂಕಿ ಹೊತ್ತಿಕೊಂಡಿತು, ಇಡೀ ಕೋಣೆ ಹೊಗೆಯಿಂದ ತುಂಬಿತ್ತು. ಈ ಅಪಘಾತದಲ್ಲಿ, ಹಾಸಿಗೆಯ ಮೇಲೆ ಮಲಗಿದ್ದ ಬಾಲಕ ಅಬ್ದುಲ್ …
Read More »ಸಂತೋಷ್ ಲಾಡ್ ಪಹಲ್ಗಾಮ ಘಟನೆ ಬಗ್ಗೆ ವಾಗ್ದಾಳಿ!!
ಕಾರ್ಮಿಕ ಸಚಿವ ಸಂತೋಷ್ ಲಾಡ್ ಸುದ್ದಿಗೋಷ್ಟಿ ಮಾತನಾಡಿದ ಅವರು ಒಂದಿಷ್ಟು ಪ್ರಶ್ನೆಗಳನ್ನು ಹಂಚಿಕೊಂಡಿದ್ದಾರೆ. ದಾಳಿ ಬಗ್ಗೆ ಯಾರೂ ಚರ್ಚೆ ಮಾಡ್ತಿಲ್ಲ ಯಾಕೆ..? ಯಾಕೆ ಮೆರವಣಿಗೆ ಮಾಡ್ತೀರ,? ಹೆಜ್ಜೆ ಹೆಜ್ಜೆಗೂ ಚೆಕ್‌ಪೋಸ್ಟ್ ಇದೆ ಒಬ್ಬ ಸೆಕ್ಯೂರಿಟಿನೂ ಇಲ್ಲ ಯಾಕೆ..? ಅವರು ಹೇಗೆ ಬಂದ್ರು ಅದರ ಬಗ್ಗೆ ಚರ್ಚೆ ಮಾಡ್ತಿಲ್ಲ ಯಾಕೆ..? ಎಂದು ಸರ್ಕಾರದ ವಿರುದ್ಧ ಪ್ರಶ್ನೆಗಳನ್ನು ಹಾಕಿದ್ದಾರೆ. 20 ರಾಜ್ಯಗಳಲ್ಲಿ ನೀವೆ ಸಿಎಂ, ನೀವೆ ಪಿಎಂ ಬರೀ ಹಿಂದೂ ಮುಸ್ಲಿಂ ಬಿಟ್ರೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





