Breaking News

BigTv News

ಚಿಕ್ಕಮಂಗಳೂರ್ : ಪ್ಲಾಸ್ಟಿಕ್ ತಿಂದು ಪ್ರಾಣ ಬಿಟ್ಟ ಗೂಳಿ.

ಚಿಕ್ಕಮಂಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಸುಮಾರು 25 ಕೆಜಿಗು ಹೆಚ್ಚು ತೂಕದ ಪ್ಲಾಸ್ಟಿಕ್ ಅನ್ನು ತಿಂದ 15 ವರ್ಷದ ಗೂಳಿಯೊಂದು ಮೃತಪಟ್ಟಿದೆ. ಗೂಳಿ ಹೊಟ್ಟೆ ಊದಿ ಮಲಗಿರುವುದನ್ನು ಕಂಡು ಹಲವರು ಚಿಕಿತ್ಸೆಗೆ ಮುಂದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಸರಕಾರಿ ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಗೂಳಿ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಹೊರ ತೆಗೆದರು.

Read More »

ದೆಹಲಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ನೋಟುಗಳು ಪತ್ತೆ.

ನ್ಯಾಯಮೂರ್ತಿ ಯಶ್ವಂತ್ ವರ್ಮಾ ಅವರ ಮನೆ ಸಮೀಪ ಸುಟ್ಟ ಸ್ಥಿತಿಯಲ್ಲಿ ನೋಟುಗಳು ಪತ್ತೆಯಾಗಿದ್ದು ಹೊಸ ತಿರುವನ್ನು ನೀಡಿದೆ. ದೆಹಲಿ ಪಾಲಿಕೆ ಕಾರ್ಮಿಕರು ನ್ಯಾಯಾಂಗ ಬಡಾವಣೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದ ವೇಳೆ ನ್ಯಾಯಮೂರ್ತಿ ಯಶವಂತ್ ವರ್ಮ ಅವರ ಮನೆ ಸಮೀಪದಲ್ಲಿ 500 ಮುಖಬೆಲೆಯ ಸಾವಿರ ನೋಟುಗಳು ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ನ್ಯಾಯಮೂರ್ತಿ ಮನೆಗೆ ಬೆಂಕಿ ಬಿದ್ದಿದ್ದ ಪ್ರಕರಣದಲ್ಲಿ ಮಾಹಿತಿ ಇಲ್ಲದ ಕಾರ್ಮಿಕರು ಸುಟ್ಟ ನೋಟುಗಳನ್ನು ಕಸದ ಬುಟ್ಟಿಯಲ್ಲಿ ತುಂಬಿಕೊಂಡು ಹೋಗಿದ್ದಾರೆ. …

Read More »

ಯುಗಾದಿ, ರಂಜಾನ್ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳು.

ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್ ಹಾಗೂ ಚೆನ್ನೈನ ರಾಮಚಂದ್ರನ್ ಸೆಂಟ್ರಲ್ ರೈಲ್ವೆ ನಿಲ್ದಾಣದ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆಗೆ ರೈಲ್ವೆ ಮಂಡಳಿಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರು,ಚೆನ್ನೈ, ಕಲಬುರಗಿ ಕಾರವಾರಕ್ಕೆ ವಿಶೇಷ ರೈಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

Read More »

ಎಪ್ರಿ 30ರಂದು ಅಯೋಧ್ಯೆ ರಾಮ ಮಂದಿರಕ್ಕೆ ರಾಮ ದರ್ಬಾರ್ ವಿಗ್ರಹಗಳ ಪ್ರತಿಷ್ಠಾಪನೆ

ಅಯೋಧ್ಯೆಯ ರಾಮಮಂದಿರದ ಮೊದಲನೇ ಮಹಡಿ ಹಂತದ ನಿರ್ಮಾಣ ಅಂತಿಮ ಹಂತದಲ್ಲಿದ್ದು ಅಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುವ ರಾಮ ದರ್ಬಾರ್ ವಿಗ್ರಹಗಳು ಏಪ್ರಿಲ್ 30 ರಂದು ಅಯೋಧ್ಯೆಗೆ ಪ್ರವೇಶಿಸಲಿವೆ ಎಂದು ರಾಮ ಮಂದಿರದ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ರಾಮಮಂದಿರದಲ್ಲಿ ಆಕರ್ಷಿಕ ಸ್ಥಳವಾಗಿ ರಾಮ್ ದರ್ಬಾರ್ ವಿಗ್ರಹಗಳನ್ನು ಇರಿಸಲಾಗುತ್ತಿದೆ, ಸೀತಾದೇವಿ, ರಾಮ,ಹನುಮಂತ,ಸಹೋದರ ಲಕ್ಷ್ಮಣ,ಭರತ ಮತ್ತು ಶತ್ರುಘ್ನರ ವಿಗ್ರಹಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ರಾಜಸ್ತಾನಿನ ಮಕ್ರಾನ ಮಾರ್ಬಲ್ ನಿಂದ ವಿಗ್ರಹಗಳನ್ನು ಕೆತ್ತಿಸಲಾಗಿದೆ. …

Read More »

ಹೈವೆಯಲ್ಲಿ ಟಾಟಾ ಏಸ್ ನಡುವೆ ಡಿಕ್ಕಿ ಸ್ಥಳದಲ್ಲೇ ಇಬ್ಬರು ಮೃತ್ಯು.

ಕೊಳ್ಳೇಗಾಲದಲ್ಲಿ ತಿಥಿ ಕಾರ್ಯಕ್ಕೆ ಬಂದು ವಾಪಾಸ್ ಆಗುವಾಗ ಕೆಎಸ್ ಆರ್ ಟಿಸಿ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ಸಾವು, ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ‌ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಬಳಿ‌ ನಡೆದಿದೆ. ಪ್ರಕರಣ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಗುಜರಾತ್:ಸಂಬಂಧಿಕರ ಮನೆಗಳನ್ನು ನೆಲಸಮ ಮಾಡಿದ ಪ್ರಕರಣ.

ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಶಂಕಿಸಿ ವ್ಯಕ್ತಿ ಮತ್ತು ಆತನ ಸಂಬಂಧಿಕರ ಮನೆಗಳನ್ನು ನೆಲಸಮ ಮಾಡಿದ ಪ್ರಕರಣ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ.ವ್ಯಕ್ತಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಬುಲ್ಡೋಜರ್ ಚಾಲಕ ಸೇರಿದಂತೆ ಆರು ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

Read More »

ಹೆಂಡತಿಯನ್ನು ಕೊಂದು, ಆತ್ಮಹತ್ಯೆಗೆ ಶರಣಾದ ಪತಿ.

ಹೆಂಡತಿ ಮೇಘಾ ಸಿದ್ದಪ್ಪ ಹರನಾಳ ಎಂಬವಳನ್ನು ಹತ್ಯೆ ಮಾಡಿ, ಜಮೀನು ಪಕ್ಕದ ತೆಗ್ಗಿನಲ್ಲಿ ಬಿಸಾಕಿದ ಗಂಡ ಸಿದ್ದಪ್ಪ ಮಲ್ಲಪ್ಪ ಹರನಾಳ ತಾನೂ ಹತ್ತಿರದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಹೊಲದಲ್ಲಿ ಯಾರೂ ಇಲ್ಲದ ವೇಳೆ ಗಂಡ ಹೆಂಡತಿ ಮಧ್ಯೆ ಕಲಹ ಉಂಟಾಗಿ, ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುದ್ದೇಬಿಹಾಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Read More »

ಹಾವು ಕಚ್ಚಿದ್ರೂ ಬದುಕುಳಿದ ಮಹಿಳೆ. ಕಾನ್ಸ್ಟೇಬಲ್ ಬಂಧನ.

ಪತ್ನಿ ನಡುವಿನ ಸಂಬಂಧ ಹಳಸಿತ್ತು, ಇಬ್ಬರೂ ದೂರವಾಗುವ ಬದಲು ಆಕೆಯನ್ನು ಹತ್ಯೆ ಮಾಡಲು ಕಾನ್​ಸ್ಟೆಬಲ್​ ಆಲೋಚಿಸಿದ್ದ. ಹಾಗಾಗಿ ಬೇರೆ ರೀತಿ ಕೊಲೆ ಮಾಡಿದರೆ ಅನುಮಾನ ಬರಬಹುದೆಂದು ಹಾವಿನಿಂದ ಕಚ್ಚಿಸಿ ಹತ್ಯೆ ಮಾಡಬೇಕೆಂದುಕೊಂಡಿದ್ದ, ಆತನ ಆಲೋಚನೆ ಪ್ರಕಾರ ಹಾವು ಕೂಡ ಕಚ್ಚಿದೆ, ಆದರೂ ಆಕೆ ಬದುಕುಳಿದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಅಂಶಿಕಾಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಬಿಡುಗಡೆಯ ನಂತರ, ಅವರು ಮತ್ತು ಅವರ ತಂದೆ ಕಾನ್ಪುರದ …

Read More »

ಕೇರಳ :ಆತ್ಮಹತ್ಯೆಗೆ ಯತ್ನಿಸಿ ಕೋಮಾಗೆ ಜಾರಿದ್ದ ವಿದ್ಯಾರ್ಥಿನಿ ಸಾವು.

ಕೇರಳದ ಕೋಝಿಕ್ಕೋಡ್ ಹಾಸ್ಟೇಲ್ ನಲ್ಲಿ ಈ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಕೊಟ್ಟಾಯಂ ಮೂಲದ ಚೈತನ್ಯ ಕುಮಾರಿ ಎಂದು ಗುರುತಿಸಲಾಗಿದೆ. ಆಕೆ ಮಂಜೂರ್ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.ವಾರ್ಡನ್ ಮಾನಸಿಕ ಕಿರುಕುಳವೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಲು ಕಾರಣ ಎಂದು ಕುಟುಂಬದವರು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಪ್ರಕರಣ ಸಂಬಂಧ ವಾರ್ಡನ್ ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Read More »

ಕೈಕಟ್ಟಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ.!

ಬಲಿಯಾ ಜಿಲ್ಲೆಯಲ್ಲಿ 20 ವರ್ಷದ ಪೂಜಾ ಚೌಹಾಣ್ ಎಂಬ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕೆಯ ದೇಹವು ನೆಲದಿಂದ ಸುಮಾರು ಆರು ಅಡಿ ಎತ್ತರದಲ್ಲಿ ನೇತಾಡುತ್ತಿದ್ದು, ಆಕೆಯ ಎರಡು ಕೈಗಳನ್ನು ಬೆನ್ನಿನ ಹಿಂದೆ ಕಟ್ಟಲಾಗಿತ್ತು.ಪೊಲೀಸರು ಸಾವಿನ ಕಾರಣವನ್ನು ನಿರ್ಧರಿಸಲು ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ

Read More »