ಉದ್ಯೋಗ ಅರಸಿ ಮಧ್ಯ ಆಫ್ರಿಕಾದ ಗಬಾನ್ ದೇಶಕ್ಕೆ ತೆರಳಿರುವ ಚನ್ನಗಿರಿ ತಾಲೂಕಿನ ಗೋಪನಾಳ್-ಅಸ್ತಾಪನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಹಕ್ಕಿ-ಪಿಕ್ಕಿ ಜನಾಂಗದ ನಾಟಿ ವೈದ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಮ್ಮ ಪಾಸ್ಪೋರ್ಟ್ ವಶಕ್ಕೆ ಪಡೆದು ತೊಂದರೆ ನೀಡುತ್ತಿದ್ದು, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಇಲ್ಲಿನ ಕುಟುಂಬದ ಸದಸ್ಯರಿಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿದೇಶಾಂಗ ಇಲಾಖೆ ಗಮನ ಹರಿಸುವಂತೆ ಸಂಕಷ್ಟದಲ್ಲಿ ಸಿಲುಕಿರುವ ಕುಟುಂಬಸ್ಥರು ಮನವಿ …
Read More »ಕಾಶ್ಮೀರ ವ್ಯಾಪ್ತಿಯ ಜೇಳಂ ನದಿಯಲ್ಲಿ ತೆಲುತ್ತಿದ್ದ ಇಬ್ಬರು ಭಾರತೀಯರ ಮೃತದೇಹಗಳು, ಭಾರತಕ್ಕೆ ಹಸ್ತಾಂತರ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ ವ್ಯಾಪ್ತಿಯ ಜೇಳಂ ನದಿಯಲ್ಲಿ ತೆಲುತ್ತಿದ್ದ ಇಬ್ಬರು ಭಾರತೀಯರ ಮೃತದೇಹಗಳನ್ನು ಭಾರತೀಯ ಅಧಿಕಾರಿಗಳಿಗೆ ಪಿಒಕೆ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ. ಮೃತರನ್ನು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯ ಬುಗ್ರಾನ್ ಪ್ರದೇಶದ ಯಾಸಿರ್ ಹುಸೈನ್ ಶಾ ಮತ್ತು ಕುಂಡಿ ಬರ್ಜಾಲಾ ಪ್ರದೇಶದ ಆಸಿಯಾ ಬಾನೋ ಎಂದು ಗುರುತಿಸಲಾಗಿದೆ. ಇಂದು ಉರಿ ಪ್ರದೇಶದಲ್ಲಿ ಸಭೆ ನಡೆಸಿ, ಮೃತದೇಹಗಳನ್ನು ಹಸ್ತಾಂತರಿಸಲಾಯಿತು. ಈ ವೇಳೆ ಉಭಯ ರಾಷ್ಟ್ರಗಳ ಅಧಿಕಾರಿಗಳು, ಮೃತರ …
Read More »ಸಾರಿಗೆ ಬಸ್ ಗೆ ಬೈಕ್ ಡಿಕ್ಕಿ – ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು.!
ಬಸ್ ಬೈಕ್ಗೆ ಡಿಕ್ಕಿಯಾದ ಪರಿಣಾಮ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, KSRTC ಬಸ್ ಬೈಕ್ಗೆ ಡಿಕ್ಕಿಯಾದ ಪರಿಣಾಮ ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಲಾಗಿದೆ.
Read More »ಕಲಘಟಗಿ ರೋಡ್ ನಲ್ಲಿ ಘೋರ ಅಪಘಾತ : ಓರ್ವ ಯುವಕ ಸಾವು.!
ಇತ್ತೀಚಿಗೆ ಯುವಕರು ಹೆಲ್ಮೆಟ್ನಿ ಧರಿಸುವದನ್ನು ಬಿಟ್ಟೆ ಬಿಟ್ಟಿದ್ದಾರೆ. ಪೋಲೀಸರ ಭಯಕ್ಕೆ ಮಾತ್ರ ಹಾಕಿಕೊಳ್ಳುತ್ತಾರೆ. ಆದರೆ ಇದೆ ಕಾರಣದ ನಿರ್ಲಕ್ಷದಿಂದ ನಿನ್ನೆ ಸಾಯಂಕಾಲ ಕಲಘಟಗಿ ರಸ್ತೆಯಲ್ಲಿ ಯುವಕ ಒಬ್ಬ ಬೈಕ್ ನಲ್ಲಿ ತೆರಳುತ್ತಿರುವಾಗ ಓವರ್ಟೇಕ್ ಮಾಡಲು ಹೋಗಿ ಲಾರಿ ಒಂದು ಯುವಕನ ಮೇಲೆ ಹರಿದು ಹೋಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಯುವಕನ ಹೆಸರು ಪ್ರಶಾಂತ್ ಹಳೆ ಹುಬ್ಬಳ್ಳಿಯ ಬಾಣತಿ ಕಟ್ಟಿ ನಿವಾಸಿಯಾಗಿದ್ದನು. ತಕ್ಷಣ ಸ್ಥಳೀಯರು ಪ್ರಶಾಂತನನ್ನು ಆಸ್ಪತ್ರೆಗೆ ಸೇರಿಸಲು ಹೊರಟಿದ್ದರು …
Read More »ಜಮಖಂಡಿಯ ಪ್ರಸಿದ್ಧ ಹೊಸ ಬಬಲಾದಿ ಮಠದ ಸದಾಶಿವ ಸ್ವಾಮೀಜಿ ಅರೆಸ್ಟ್.!
ಬಾಗಲಕೋಟೆಯ ಜಮಖಂಡಿ ನಗರದಲ್ಲಿರುವ ಹೊಸ ಬಬಲಾದಿ ಮಠಕ್ಕೆ ಆಗಮಿಸಿದ ಸಿಐಡಿ ಅಧಿಕಾರಿಗಳ ತಂಡ ಸದಾಶಿವ ಮುತ್ಯಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುತ್ಯಾ ಅವರು ಇತ್ತೀಚೆಗೆ ಕೆಲವು ವರ್ಷಗಳಿಂದ ಕಾಲಜ್ಞಾನ ಹೇಳುತ್ತಾ ಬಂದಿದ್ದು, ಭಕ್ತರು ಕೂಡ ಅವರು ಹೇಳುವ ಕಾಲಜ್ಞಾನ ನಿಜವಾಗುತ್ತೆ ಎಂದು ನಂಬಿದ್ದಾರೆ. ಬೆಳಗಾವಿಯ ಗೋಕಾಕ್ ನ ಮಹಾಲಕ್ಷ್ಮಿ ಸಹಕಾರಿ ಬ್ಯಾಂಕ್ನಲ್ಲಿದ್ದ ಗ್ರಾಹಕರ ಹಣವನ್ನು ವಂಚಿಸಿದ ಆರೋಪದಡಿ ಬಂಧಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ರೂ.60 ಲಕ್ಷಕ್ಕೂ ಅಧಿಕ ಹಣ ವಂಚನೆ ನಡೆದಿದೆ …
Read More »ಲಕ್ನೋ : ಆಟೋ ಚಾಲಕನನ್ನು ಎನ್ಕೌಂಟರ್ನಲ್ಲಿ ಗುಂಡಿಕ್ಕಿ ಕೊಂದ ಪೋಲಿಸರು.!
ಮಹಿಳೆಯನ್ನು ಅಪಹರಿಸಿ ಕತ್ತು ಹಿಸುಕಿ ಕೊಲೆ ಮಾಡಿದ ಆರೋಪದ ಮೇಲೆ ಆಟೋರಿಕ್ಷಾ ಚಾಲಕನನ್ನು ಲಕ್ನೋ ಪೊಲೀಸರು ಶುಕ್ರವಾರ ಗುಂಡಿಕ್ಕಿ ಕೊಂದಿದ್ದಾರೆ. ಆರೋಪಿ ಅವಳ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿರಬಹುದು ಮತ್ತು ಅವಳು ಪ್ರತಿರೋಧಿಸಿದಾಗ ಅವಳನ್ನು ಕೊಂದಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಅಜಯ್ ಕುಮಾರ್ ವಿರುದ್ಧ 23 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಆತನ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ್ದರು.ಪೊಲೀಸರು ದಿನೇಶ್ ಬಳಿಯಿಂದ ಸಂತ್ರಸ್ತೆಯ ಶೈಕ್ಷಣಿಕ …
Read More »ಅಪಘಾತದಲ್ಲಿ 17 ಹಲ್ಲುಗಳನ್ನ ಕಳೆದುಕೊಂಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ.!
ಅಪಘಾತದಲ್ಲಿ 17 ಹಲ್ಲುಗಳನ್ನ ಕಳೆದುಕೊಂಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಭುವನಕೋಟೆ ಸಮೀಪದ ಸಾಲುಮರ ಗ್ರಾಮದಲ್ಲಿ ನಡೆದಿದೆ. ಮೃತನನ್ನ ವಿಘ್ನೇಶ್ ಎಂದು ಗುರುತಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Read More »ಜನರ ಮಧ್ಯೆಯೇ ಲಾಂಗ್ ಹಿಡಿದು ಓಡಾಡಿದ ಮಹಿಳೆ.!
ಮಹಿಳೆಯೊಬ್ಬರು ಕೈಯಲ್ಲಿ ಲಾಂಗ್ ಹಿಡಿದು ಓಡಾಡಿದ ಘಟನೆ ಹಾಸನದಲ್ಲಿ ನಡೆದಿದೆ.ಇಲ್ಲಿನ ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಮಹಿಳೆ ಲಾಂಗ್ ಹಿಡಿದು ಓಡಾಡುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ. ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ.ಇನ್ನು ಹೀಗೆ ಲಾಂಗ್ ಹಿಡಿದು ಓಡಾಡಿರುವ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ.ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಈ ಆರೋಪಿಗಳ ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.
Read More »ಜೈಪುರದ ಮಹಾರಾಜ ಕಾಲೇಜಿನ ಗೋಖಲೆ ಹಾಸ್ಟೆಲ್ನಲ್ಲಿ ಆತಂಕಕಾರಿ ಪರಿಸ್ಥಿತಿ.ಏನಿದು ರಾತ್ರಿ ಕಳೆದ ಘಟನೆ.!
ಜೈಪುರದ ಮಹಾರಾಜ ಕಾಲೇಜಿನ ಗೋಖಲೆ ಹಾಸ್ಟೆಲ್ನಲ್ಲಿ ಆತಂಕಕಾರಿ ಪರಿಸ್ಥಿತಿ ಉಂಟಾಗಿದ್ದು, ಕಾಲೇಜಿನ ಆಡಳಿತ ಮತ್ತು ಹಾಸ್ಟೆಲ್ ಮೇಲ್ವಿಚಾರಣೆಯ ಬಗ್ಗೆ ಗಂಭೀರ ಕಾಳಜಿಗಳನ್ನು ಹುಟ್ಟುಹಾಕಿದೆ. ಮಹಿಳಾ ವಿದ್ಯಾರ್ಥಿನಿಯೊಬ್ಬಳು ಬಾಲಕರ ಹಾಸ್ಟೆಲ್ನಲ್ಲಿ ರಾತ್ರಿ ಕಳೆದಿದ್ದಾಳೆ ಎಂದು ವರದಿಯಾಗಿದೆ. ಆಕೆ ಮುಂಜಾನೆ ಆವರಣದಿಂದ ಹೊರಗೆ ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಈ ಸತ್ಯ ಬಹಿರಂಗವಾಗಿದೆ. ಸುಮಾರು ಒಂದು ವಾರದ ಹಿಂದೆ ವೈರಲ್ ಆದ ಈ ವಿಡಿಯೋ ಈಗ ಕಾಲೇಜು ಅಧಿಕಾರಿಗಳನ್ನು ತಲುಪಿದೆ. ಆದಾಗ್ಯೂ, …
Read More »ಮಹಿಳಾ ವೈದ್ಯೆಯೊಬ್ಬಳ ಮೃತದೇಹ ಭೋಪಾಲ್ ಮನೆ ಕೋಣೆಯಲ್ಲಿ ಪತ್ತೆ.ತೋಳಿನ ಮೇಲೆ ಸೂಜಿ ಚುಚ್ಚಿದ ಗುರುತು.!
ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಿಳಾ ವೈದ್ಯೆಯೊಬ್ಬಳ ಮೃ*ತದೇಹ ಭೋಪಾಲ್ ನಲ್ಲಿರುವ ಮನೆಯ ಕೋಣೆಯಲ್ಲಿ ಪತ್ತೆಯಾಗಿದ್ದು ಆಕೆಯ ತೋಳಿನ ಮೇಲೆ ಸೂಜಿ ಚುಚ್ಚಿದ ಗುರುತು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ರಿಚಾ ಅವರ ಕೈಯಲ್ಲಿ ಚುಚ್ಚುಮದ್ದಿನ ಗುರುತುಗಳು ಕಂಡುಬಂದಿದ್ದು, ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ಕಾರಣವನ್ನು ಖಚಿತಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ರಿಚಾ ಅವರು ಮೃತಪಟ್ಟಿರುವ ವಿಚಾರವನ್ನು ಅವರ ಕುಟುಂಬಕ್ಕೆ ತಿಳಿಸಲಾಗಿದ್ದು, ಕುಟುಂಬಸ್ಥರು ಬಂದ ಬಳಿಕ ಮರಣೋತ್ತರ ಪರೀಕ್ಷೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





