Breaking News

BigTv News

ನಡುರಸ್ತೆಯಲ್ಲೇ ಔಷಧ ಅಂಗಡಿ ಮಾಲಕನ ಹತ್ಯೆ

ಬೆಂಗಳೂರು: ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡು ರಸ್ತೆಯಲ್ಲೇ ಮೆಡಿಕಲ್ ಸ್ಟೋರ್ ಮಾಲಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸೊಹೇಲ್ ಮೃತ ವ್ಯಕ್ತಿ. ಮಂಗಮ್ಮನ ಪಾಳ್ಯ ನಿವಾಸಿಯಾಗಿದ್ದ ಸೊಹೇಲ್ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ರಾತ್ರಿ 9.30ರ ಸುಮಾರಿಗೆ ಅಂಗಡಿ ಮುಚ್ಚಿ ಬೈಕ್‌ನಲ್ಲಿ ಮಡಿವಾಳದಿಂದ ಕೋರಮಂಗಲದತ್ತ ತೆರಳುತ್ತಿದ್ದಾಗ, ಟ್ರಾಫಿಕ್‌ನಿಂದಾಗಿ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಎರಡು ಬೈಕ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಸುಮಾರು ನಾಲ್ವರು ದುಷ್ಕರ್ಮಿಗಳು ಸಾರ್ವಜನಿಕರ ಮುಂದೆಯೇ ಏಕಾಏಕಿ ದಾಳಿ …

Read More »

ಭೂತ ಬಿಡಿಸುವುದಾಗಿ ಹೇಳಿ ಯುವತಿಗೆ ಚಿತ್ರಹಿಂಸೆ: ಸತೀಶ್ ಪಾತ್ರಿ ವಿರುದ್ಧ ದೂರು ದಾಖಲು

ಚಿಕ್ಕಮಗಳೂರು: ದೈವಾರಾಧನೆ ಹೆಸರಿನಲ್ಲಿ ಭೂತ ಬಿಡಿಸುವ ನೆಪದಲ್ಲಿ ಸತೀಶ್ ಪಾತ್ರಿ ಎಂಬಾತ ಯುವತಿಗೆ ಚಿತ್ರಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವಿಡಿಯೋ, ಆಡಿಯೋ ತುಣುಕುಗಳು ವೈರಲ್ ಆಗಿವೆ. ವಿಡಿಯೋದಲ್ಲಿ ಯುವತಿಯನ್ನು ಹೆದರಿಸಿ, ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಿ, ಕರ್ಪೂರದ ಬೆದರಿಕೆ ಹಾಕಿರುವ ದೃಶ್ಯಗಳಿವೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಎನ್.ಆರ್.ಪುರ ಠಾಣೆಗೆ ದೂರು ನೀಡಲಾಗಿದೆ. ಆದರೆ ಆರೋಪಗಳನ್ನು …

Read More »

ಆನ್​ಲೈನ್​ ಲಾಟರಿ ಆಮಿಷಕ್ಕೆ 27.06 ಲಕ್ಷ ರೂ. ಕಳೆದುಕೊಂಡ ಮಹಿಳೆ

ಉಡುಪಿ: ಫೇಸ್‌ಬುಕ್‌ನಲ್ಲಿ ಆನ್‌ಲೈನ್ ಲಾಟರಿ ಜಾಹೀರಾತು ನೋಡಿ ಟಿಕೆಟ್ ಖರೀದಿಸಿದ ಜುಲಿಯಾನ ಎಂಬ ಮಹಿಳೆ ಸೈಬರ್ ವಂಚಕರ ಬಲೆಗೆ ಬಿದ್ದು ₹27,06,862 ಕಳೆದುಕೊಂಡಿದ್ದಾರೆ. ಲಾಟರಿ ಬಹುಮಾನ ಬಂದಿದ್ದು, ಅದನ್ನು ಪಡೆಯಲು ಪ್ರೊಸೆಸಿಂಗ್, ಶಿಪ್ಪಿಂಗ್ ಹಾಗೂ ಇತರೆ ಶುಲ್ಕ ಪಾವತಿಸುವಂತೆ ವಂಚಕರು ತಿಳಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಏಪ್ರಿಲ್‌ನಿಂದ ಜುಲೈ 31ರವರೆಗೆ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ. ಬಳಿಕ ಬಹುಮಾನವೂ ಬಾರದೆ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಕುರಿತು ಸೆನ್ ಠಾಣೆಯಲ್ಲಿ ಪ್ರಕರಣ …

Read More »

ಜಮೀನು ವಿವಾದ, ವಾರಕಾಯುಧದಿಂದ ಹಲ್ಲೆ

ಉಪ್ಪಿನಂಗಡಿ: ಭೂ ವಿವಾದಕ್ಕೆ ಸಂಬಂಧಿಸಿ ನೆಲ್ಯಾಡಿ ಗ್ರಾಮದ ಹುಣ್ಸೆಬೆಟ್ಟು ಎಂಬಲ್ಲಿ ಎಚ್.ಸೂರ್ಯನಾರಾಯಣ ಜೋಗಿತ್ತಾಯ ಎಂಬುವರ ಮೇಲೆ ವಾಸುದೇವ ಗೌಡ ಎಂಬುವರು ವಾರಕಾಯುಧದಿಂದ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸೂರ್ಯನಾರಾಯಣ ಜೋಗಿತ್ತಾಯ ಲೋಕ ಅದಾಲತ್‌ನಲ್ಲಿ ಮಂಜೂರಾದ ಭೂಮಿಯಲ್ಲಿ ತಂತಿ ಬೇಲಿ ನಿರ್ಮಿಸಿ ಹುಲ್ಲು ತೆಗೆಯುತ್ತಿದ್ದ ಸಂದರ್ಭದಲ್ಲಿ ವಾಸುದೇವ ಗೌಡ ಅಕ್ರಮ ಪ್ರವೇಶಮಾಡಿ ಕೊಕ್ಕೆ ಕತ್ತಿ ಮತ್ತು ದೊಣ್ಣೆಯಿಂದ ಹಲ್ಲೆಗೆ ಯತ್ನಿಸಿ, ಕೊಲ್ಲುವುದಾಗಿ ಜೀವ …

Read More »

ಬಿರಿಯಾನಿ ಪಾತ್ರೆಯಲ್ಲಿತ್ತು ತುಂಡರಿಸಿದ ಮಹಿಳೆಯ ದೇಹದ ಭಾಗಗಳು: ಬೆನ್ನತ್ತಿದ ಪೊಲೀಸರಿ ಸಿಕ್ಕಿದ್ದು ಚೆನ್ನೈ ‘ಹಾರರ್ ಹೌಸ್’!

ಆಗ್ರಾದಲ್ಲಿ ರೈಲಿನಲ್ಲಿ ಪತ್ತೆಯಾದ ಕೆಂಪು ಸೂಟ್‌ಕೇಸ್‌ನಲ್ಲಿದ್ದ ಮಹಿಳೆಯ ತುಂಡರಿಸಿದ ದೇಹದ ಪ್ರಕರಣದ ತನಿಖೆ ಇದೀಗ ಚೆನ್ನೈವರೆಗೆ ತಲುಪಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಗುಡುವಂಚೇರಿಯ ಬಾಡಿಗೆ ಮನೆಯೊಂದನ್ನು ಪತ್ತೆಹಚ್ಚಿದ್ದು, ಅಲ್ಲಿಯೇ ಮಹಿಳೆಯನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆಗಸ್ಟ್ 6ರಂದು ಆಗ್ರಾ ಕ್ಯಾಂಟ್ ರೈಲು ನಿಲ್ದಾಣದಲ್ಲಿ ತಮಿಳುನಾಡು ಎಕ್ಸ್‌ಪ್ರೆಸ್‌ನ ಜನರಲ್ ಬೋಗಿಯಲ್ಲಿ ಸೂಟ್‌ಕೇಸ್ ಪತ್ತೆಯಾಗಿತ್ತು. ಅದರೊಳಗಿನ ‘ಚೆನ್ನೈ’ ಎಂದು ಬರೆದಿದ್ದ ಚೀಲದ ಸುಳಿವಿನಿಂದ ತನಿಖೆ ಮುಂದುವರಿದಿದ್ದು, ಚೆನ್ನೈ ಸೆಂಟ್ರಲ್‌ನ …

Read More »

ಜೆರಾಕ್ಸ್ ಅಂಗಡಿಯಲ್ಲಿ ದಾಖಲೆ ಸುಟ್ಟ ವಿಚಾರಕ್ಕೆ ಗಲಾಟೆ, ಪರಸ್ಪರ ಹಲ್ಲೆ: ಕೌಂಟರ್ ಕೇಸ್ ದಾಖಲು, ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದವರ ವಿರುದ್ಧವೂ ಪ್ರಕರಣ..!

ಪುತ್ತೂರು: ದಾಖಲೆ ಲ್ಯಾಮಿನೇಷನ್ ವೇಳೆ ತಾಂತ್ರಿಕ ದೋಷದಿಂದ ದಾಖಲೆ ಸುಟ್ಟುಹೋದ ವಿಚಾರಕ್ಕೆ ಗ್ರಾಹಕರು ಹಾಗೂ ಅಂಗಡಿ ಮಾಲೀಕರ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡ ಘಟನೆ ದರ್ಭೆಯಲ್ಲಿ ನಡೆದಿದೆ. ಘಟನೆಯಲ್ಲಿ ಎರಡೂ ಕಡೆಯಿಂದ ದೂರು ಹಾಗೂ ಪ್ರತಿ ದೂರು ದಾಖಲಾಗಿದೆ. ಸುದರ್ಶನ್ ಪೈ ಅವರನ್ನು ಠಾಣೆಗೆ ಕರೆದೊಯ್ಯುವ ವೇಳೆ ಪೊಲೀಸರ ಕರ್ತವ್ಯಕ್ಕೆ ಕೆಲವರು ಅಡ್ಡಿಪಡಿಸಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತಿದೆ. ಅಂಗಡಿಯ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಕಾನೂನು ಕ್ರಮ …

Read More »

ಲಿಂಗಸುಗೂರು | ದಲಿತ ಮಹಿಳೆಯ ಕೊಲೆ ಪ್ರಕರಣ: ಆರೋಪಿಯ ಬಂಧನ

ಲಿಂಗಸುಗೂರು: ಕರಡಕಲ್ ಗ್ರಾಮದ ದಲಿತ ಮಹಿಳೆ ರಾಣಿಮ್ಮ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನೀರಲಕೇರಿ ಗ್ರಾಮದ ಅಮರೇಶ ಗಾಣಿಗನನ್ನು ಪೊಲೀಸರು ಬಂಧಿಸಿದ್ದಾರೆ. ಆ.19ರಂದು ಮನೆಯಿಂದ ಹೊರಹೋಗಿದ್ದ ರಾಣಿಮ್ಮ ಅವರ ಮೃತದೇಹ ಜಾಲಿಬೆಂಚಿ ಗ್ರಾಮದ ಹೊರವಲಯದ ಹೊಲದಲ್ಲಿ ಪತ್ತೆಯಾಗಿತ್ತು. ತನಿಖೆ ವೇಳೆ ರಾಣಿಮ್ಮ ಅವರನ್ನು ಅಮರೇಶ ಮೋಟಾರ್‌ಸೈಕಲ್‌ನಲ್ಲಿ ಕರೆದುಕೊಂಡು ಹೋಗಿದ್ದನ್ನು ಸಾಕ್ಷಿಯೊಬ್ಬರು ನೋಡಿರುವುದು ಹಾಗೂ ಹೊಲದ ಬಳಿ ಕಲ್ಲಿನಿಂದ ಹಲ್ಲೆ ನಡೆಸುತ್ತಿದ್ದುದನ್ನು ಮತ್ತೊಬ್ಬ ಸಾಕ್ಷಿ ಕಂಡಿರುವುದು ಪೊಲೀಸರಿಗೆ ಪ್ರಮುಖ ಸುಳಿವಾಗಿದೆ. ಡಿವೈಎಸ್ಪಿ …

Read More »

ಹೆತ್ತವರನ್ನು ಕೊಲ್ಲೇನೆಂದು ಹೇಳಿ ಒಂಬತ್ತನೇ ಕ್ಲಾಸ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ವೇಣೂರಿನಲ್ಲಿ ಆಟೋ ಚಾಲಕ ಬಂಧನ

ಬೆಳ್ತಂಗಡಿ: 14 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವೇಣೂರು ಪೊಲೀಸರು ಆಟೋ ರಿಕ್ಷಾ ಚಾಲಕ ಜಮಾಲುದ್ದೀನ್‌ನನ್ನು ಬಂಧಿಸಿದ್ದಾರೆ. 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಬಾಲಕಿಯನ್ನು ಆರೋಪಿ ಕೆಲ ತಿಂಗಳಿಂದ ಆಟೋದಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದ. ಈ ವೇಳೆ ಅನುಚಿತವಾಗಿ ವರ್ತಿಸಿ, ವಿರೋಧಿಸಿದರೆ ಹೆತ್ತವರನ್ನು ಕೊಲ್ಲುವುದಾಗಿ ಬೆದರಿಸುತ್ತಿದ್ದ ಎನ್ನಲಾಗಿದೆ. ಆಗಸ್ಟ್ 13ರಂದು ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ಅಕ್ರಮವಾಗಿ ನುಗ್ಗಿದ ಆರೋಪಿ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ …

Read More »

ಚಿರತೆ ಕೊಂದು ಸುಟ್ಟ ಕೇಸ್ ನಲ್ಲಿ ಬೇಟೆಗಾರರ ಜಾಲದ ಶಂಕೆ!

ತುಮಕೂರಿನಲ್ಲಿ ಉರುಳಿಗೆ ಸಿಲುಕಿದ ಚಿರತೆಯನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಇದರ ಹಿಂದೆ ವ್ಯವಸ್ಥಿತ ವನ್ಯಜೀವಿ ಬೇಟೆಗಾರರ ತಂಡವಿರುವ ಶಂಕೆ ವ್ಯಕ್ತವಾಗಿದೆ. ಸ್ಥಳ ಪರಿಶೀಲನೆ ವೇಳೆ ಚಿರತೆ ಸೇರಿದಂತೆ ಇತರೆ ವನ್ಯಜೀವಿಗಳ ಕಳೆಬರಹಗಳು ಪತ್ತೆಯಾಗಿರುವ ಅನುಮಾನ ವ್ಯಕ್ತವಾಗಿದ್ದು, ಬನ್ನೇರುಘಟ್ಟ ವನ್ಯಜೀವಿ ವಿಭಾಗದ ತಂಡವೂ ತನಿಖೆ ನಡೆಸಿದೆ. ಭದ್ರಾ ಟೈಗರ್‌ ರಿಸರ್ವ್‌ನಿಂದ ಕರೆಸಿದ ಡಾಗ್‌ ಸ್ಕ್ವಾಡ್‌ ಪರಿಶೀಲನೆ ವೇಳೆ ನಾಲ್ಕೈದು ಉರುಳುಗಳು ಹಾಗೂ ತೋಟವೊಂದರಲ್ಲಿ ಬೇಟೆಗೆ ಬಳಸಲಾಗುತ್ತದೆ ಎನ್ನಲಾದ …

Read More »

ಮಾದಕ ವಸ್ತು ಸೇವನೆ: ನಾಲ್ಕು ಮಂದಿ ಬಂಧನ

ಮಂಗಳೂರು: ವಿವಿಧ ಠಾಣೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣದಲ್ಲಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಸಬಾ ಬೆಂಗ್ರೆಯಲ್ಲಿ ಆ.20ರಂದು ರಾತ್ರಿ ಮಾದಕ ವಸ್ತು ನಶೆಯಲ್ಲಿದ್ದ ಇಬ್ಬರನ್ನು ಪಣಂಬೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ವಳಚ್ಚಿಲ್ ನಿವಾಸಿ ಮೌಶುಕ್ ಸುಹಾನ್ (23) ಮತ್ತು ಬಂದರ್ ನೆಲ್ಲಿಕಾಯಿ ರಸ್ತೆ ನಿವಾಸಿ ಮೊಹಮ್ಮದ್ ಅಬ್ಜಲ್ (29) ಬಂಧಿತ ಆರೋಪಿಗಳು. ಇನ್ನೊಂದು ಪ್ರಕರಣದಲ್ಲಿ ಕಸಬಾ ಬೆಂಗ್ರೆಯ ಸೂಪರ್ ಸ್ಟಾರ್ ಮೈದಾನದ ಬಳಿ ಅಡ್ಯಾರ್ ನಿವಾಸಿ ರಿಯಾಜ್ …

Read More »