Breaking News

BigTv News

ಬೆಂಗಳೂರು ಮೆಟ್ರೋದಲ್ಲಿ ಉದ್ಯೋಗ.ಆಸಕ್ತರು ಹೀಗೆ ಅಪ್ಲಯ್ ಮಾಡಿ.

ಬೆಂಗಳೂರಿನಲ್ಲೇ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಸುವರ್ಣ ಅವಕಾಶ ಇದೆ.ಬೆಂಗಳೂರು ಮೆಟ್ರೋ ರೈಲು ನಿಗಮದಲ್ಲಿ ರೈಲು ಆಪರೇಟರ್ ಹುದ್ದೆಗಳು ಖಾಲಿ ಇವೆ. ಅರ್ಜಿ ಸಲ್ಲಿಕೆಗೆ ಮುಂದಿನ ತಿಂಗಳು ಏಪ್ರಿಲ್ 04 ಕೊನೆ ದಿನವೆಂದು ನಿಗದಿಪಡಿಸಲಾಗಿದೆ. ಹುದ್ದೆಗಳು: 50 ಹುದ್ದೆಗಳ ಹೆಸರು ರೈಲು ಆಪರೇಟರ್ ಅರ್ಜಿ ಸಲ್ಲಿಕೆ ವಿಧಾನ ಆಫ್‌ಲೈನ್.ಅರ್ಜಿ ಸಲ್ಲಿಸುವ ವಿಳಾಸ ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, ಕೆ.ಎಚ್. ​​ರಸ್ತೆ, …

Read More »

ಬೆಂಗಳೂರಲ್ಲಿ ವೃದ್ಧ ಅತ್ತೆ-ಮಾವನ ಮೇಲೆ ಹಲ್ಲೆ ಪ್ರಕರಣ. ವಿಕ್ಟೊರಿಯ ಆಸ್ಪತ್ರೆಯಲ್ಲಿ ದಾಖಲು.

ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿ ಪ್ರಿಯದರ್ಶಿನಿ ಎನ್ ಗೆ ಶೋಕಾಶ್ ನೋಟಿಸ್ ನೀಡಲಾಗಿದೆ. ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಡಾ. ಪ್ರಿಯದರ್ಶನಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮೊಹಮ್ಮದ್ ಮೊಹ್ಸಿನ್ ಸೂಚನೆಯ ಮೇರೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ನೋಟಿಸ್ ಗೆ ಲಿಖಿತ ಉತ್ತರ ನೀಡುವಂತೆ ಪ್ರಿಯದರ್ಶಿನಿ ಎನ್ ಗೆ ಸೂಚಿಸಲಾಗಿದೆ.ತಪ್ಪಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ನೋಟಿಸ್ ನಲ್ಲಿ ಎಚ್ಚರಿಕೆ …

Read More »

ಕುಡಿಯೋ ನೀರಿನಿಂದ ಮುರಿದುಬಿದ್ದ ಮದುವೆ ಬೆಳಗಾಗೋದ್ರಲ್ಲಿ ಮದುವೆ ಬೇಡ ಎಂದ ವಧು.

ಚಿತ್ರದುರ್ಗದ ಹಿರಿಯೂರಿನ ಬಲಿಜ ಕಲ್ಯಾಣ ಮಂಟಪದಲ್ಲಿ ಜಗಳೂರು ಮೂಲದ ಮನೋಜ್ ಕುಮಾರ್, ಶಿರಾ ಮೂಲದ ಯುವತಿ ಮದುವೆ ನಿಶ್ಚಯಾಗಿತ್ತು. ರಾತ್ರಿ ವರನ ಕಡೆಯವರಿಗೆ ವಧು ಕಡೆಯವರು ಕುಡಿಯಲು ನೀರು ಕೊಡದೆಯಿರುವ ವಿಚಾರಕ್ಕೆ ಕಿರಿಕ್ ಆಗಿದ್ಯಂತೆ.ಈ ವಿಚಾರವಾಗಿ ಎರಡು ಕಡೆಯವರ ನಡುವೆ ಜಗಳ ಜೋರಾಗಿ ಮನಸ್ತಾಪ ಏರ್ಪಟ್ಟಿದೆ.ಇದೇ ನೆಪವೊಡ್ಡಿ ಮದುವೆಗೆ ವಧು ನಿರಾಕರರಿಸುವುದಾಗಿ ತಿಳಿದುಬಂದಿದೆ.ಮದುವೆಗೆ ಒಪ್ಪುವಂತೆ ವರನ ಕಡೆಯವರು ಕೇಳಿಕೊಂಡರೂ ಒಪ್ಪಲಿಲ್ಲ. ವರ ಮನೋಜ್‌ಕುಮಾರ್‌ ಮತ್ತು ವಧು ಅನಿತಾ ಬೆಂಗಳೂರಿನ ಖಾಸಗಿ …

Read More »

ಟಿಪ್ಪರ್ ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವು!

ಆಂಧ್ರಪ್ರದೇಶದ ಮಚಲಿಪಟ್ನಂ ಬೈಪಾಸ್ ರಸ್ತೆಯಲ್ಲಿ ಗಂಭೀರ ಅಪಘಾತ ಸಂಭವಿಸಿದೆ. ಟಿಪ್ಪರ್ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ವಾಹನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಬೈಪಾಸ್ ರಸ್ತೆಯಲ್ಲಿ ನಿಧಾನವಾಗಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದರು. ಈ ಸಂದರ್ಭದಲ್ಲಿ, ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಅವರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

Read More »

ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಬಾಲಕ ಸಾವು!

ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಬಾಲಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ. ಮಂಗಳೂರಿನ ಮೇರಿಹಿಲ್‌ನಲ್ಲಿರುವ ಮಾತಾ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನಲ್ಲಿ ಈ ದುರಂತ ಸಂಭವಿಸಿದೆ.ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Read More »

ಹುಣಸೂರು ಅರಣ್ಯ :ತೋಟದ ಬೇಲಿಗೆ ಸಿಲುಕಿ ಗಂಡು ಜಿಂಕೆ ಸಾವು.

ನಾಗರಹೊಳೆ ಅರಣ್ಯದಂಚಿನ ತಾಲ್ಲೂಕಿನ ಚಿಕ್ಕಹೆಜ್ಜೂರು ಗ್ರಾಮದಲ್ಲಿ ಹೊಲಕ್ಕೆ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ಸುಮಾರು 3 ರಿಂದ 4 ವರ್ಷದ ಗಂಡು ಜಿಂಕೆ ಮೃತಪಟ್ಟಿದದೆ.ವಿಷಯ ತಿಳಿದ ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದಾಗ ಸ್ಥಳಕ್ಕೆ ಸಿಬ್ಬಂದಿ ನವೀನ್ ಭೇಟಿ ನೀಡಿ ಪರಿಶೀಲಿಸಿ ಬಳಿಕ ಅಂತ್ಯಸಂಸ್ಕಾರ ನೆರವೇರಿಸಿದರು.

Read More »

ಬೋಳು ತಲೆಯವ ಎಂದು ಹೆಂಡ್ತಿ ಅಪಹಾಸ್ಯ ಮಾಡಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆ!

ತಲೆಯಲ್ಲಿ ಕೂದಲಿಲ್ಲ, ಬೋಳು ತಲೆಯವ ಎಂದು ಪತ್ನಿ ಅಪಹಾಸ್ಯ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಚಾಮರಾಜನಗರದಲ್ಲಿ ನಡೆದಿದೆ. ಪರಶಿವಮೂರ್ತಿ ಹೊರಗೆ ಹೋದರೆ ನನಗೆ ನಾಚಿಕೆ ಆಗುತ್ತದೆ, ಎಲ್ಲರೂ ಅಪಹಾಸ್ಯ ಮಾಡುತ್ತಾರೆ, ನನ್ನ ಗಂಡ ಅಂತ ಹೇಳೋಕೆ ಮುಜುಗರ ಆಗುತ್ತದೆ ಎಂದು ಪತ್ನಿ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.ಮೃತ ದೇಹಗಳನ್ನು ಶಹಾಪುರ ಸಮುದಾಯ ಆಸ್ಪತ್ರೆಗೆ ರವಾನಿಸಲಾಗಿದೆ .

Read More »

ಚಿತ್ರದುರ್ಗ:ಕಾಲು ತೊಳೆಯಲೆಂದು ನಾಲೆಗೆ ಇಳಿದ ಶಿಕ್ಷಕಿ ಜಾರಿ ಬಿದ್ದು ಸಾವು!

ಲಕ್ಷ್ಮಮ್ಮ ಬಡಾವಣೆಯ ನಿವಾಸಿ ದೇವಿರಮ್ಮನಗರದ ವಿವಿ ಸಾಗರ ಬಲನಾಲೆಗೆ ಕಾಲು ತೊಳೆಯಲೆಂದು ದೇವಿರಮ್ಮ ಇಳಿದಿದ್ದಾರೆ.ದಂಡೆಯಲ್ಲಿ ಪಾಚಿಕಟ್ಟಿದ್ದರಿಂದ ಕಾಲು ಜಾರಿ ನಾಲೆಗೆ ಬಿದ್ದು ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ.ನಾಲೆಗೆ ಬಿದ್ದ ದೇವಿರಮ್ಮ ದೇಹವು ಪಟ್ರೇಹಳ್ಳಿವರೆಗೆ ಕೊಚ್ಚಿಕೊಂಡು ಹೋಗಿ ಪತ್ತೆಯಾಗಿದೆ. ಹಿರಿಯೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.

Read More »

ಸ್ಯಾಂಡಲ್ ವುಡ್ ಸಂಭ್ರಮ:ಮೊಮ್ಮಗನಿಗೆ ಹೆಸರಿಟ್ಟ ಸುಮಲತಾ ಅಂಬರೀಶ್.

ಸುಮಲತಾ ಅಂಬರೀಶ್ ಮೊಮ್ಮಗ, ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣ ಇಂದು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ರಾಜಕೀಯ ಮತ್ತು ಚಿತ್ರರಂಗದ ಹಲವು ಗಣ್ಯರು ಈ ನಾಮಕರಣ ಮಹೋತ್ಸವದಲ್ಲಿ ಭಾಗಿ ಆಗಿದ್ದರು.ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಡಲಾಗಿದೆ. ಪವರ್​ಫುಲ್ ಹೆಸರನ್ನೇ ಮಗನಿಗೆ ಆಯ್ಕೆ ಮಾಡಿದ್ದಾರೆ ದಂಪತಿ. ಇದರಲ್ಲಿ ಅಮರ್ ಎಂಬುದು ಅಂಬರೀಶ್ ಅವರ ಹೆಸರು. ಅಂಬರೀಶ್ ಅವರ ಮೂಲ ಹೆಸರು ಅಮರ್​ನಾಥ್. …

Read More »

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಹತ್ಯೆ, ಭೀಕರ ಕೊಲೆ.

ಕಲಬುರ್ಗಿ ನಗರದ ರಾಜಾಪುರ ಬಡಾವಣೆಯ ಹೊಟೇಲ್ ಎದುರಲ್ಲಿ ಮೂವರು ಯುವಕರು ಸೇರಿ ಯುವಕ ರೇವಣಸಿದ್ದಪ್ಪ ಪಾಳೇಕಾರ್​​​ಎಂಬುವವನನ್ನು ಕಲ್ಲಿನಿಂದ ಜಜ್ಜಿ-ಜಜ್ಜಿ ಭೀಕರವಾಗಿ ಮರ್ಡರ್ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Read More »