ಧಾರವಾಡ ; ಚಿಕ್ಕ ಮಕ್ಕಳು, ವಿದ್ಯಾರ್ಥಿಗಳು ಯುವಕರು ತಂಬಾಕು ಉತ್ಪನ್ನಗಳಿಗೆ, ಬೀಡಿ ಸಿಗರೇಟ ಸೇವನೆಗೆ ಅಂಟಿಕೊಳ್ಳದಂತೆ ನಗರಗಳಲ್ಲಿ, ಗ್ರಾಮಗಳಲ್ಲಿ ಹೆಚ್ಚಿನ ಅರಿವು ಜಾಗೃತಿ ಕಾರ್ಯಕ್ರಮ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಜರುಗಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಂಬಾಕು ಮುಕ್ತ …
Read More »ಬಡವರಿಗೆ ಹಿಂದುಳಿದ ವರ್ಗದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೊಸ ಸಂಘಟನೆ ಹುಟ್ಟುಹಾಕಲಾಗಿದೆ: ಕೆ.ಎಸ್.ಈಶ್ವರಪ್ಪ
ಹುಬ್ಬಳ್ಳಿ: ಹಿಂದೂಳಿದ, ದಲಿತ ಸೇರಿದಂತೆ ಎಲ್ಲ ಸಮಾಜದವರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ, ಧ್ವನಿಯಾಗಲು ಸಾಧುಸಂತರ ನೇತೃತ್ವದಲ್ಲಿ ನೂತನ ಸಂಘಟನೆಯನ್ನು ಹುಟ್ಟುಹಾಕಲು ಚಿಂತಿಸಲಾಗಿದೆ. ಅಕ್ಟೋಬರ್ 20ರಂದು ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಡವರಿಗೆ ಹಿಂದುಳಿದ ವರ್ಗದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಹೊಸ ಸಂಘಟನೆ ಹುಟ್ಟುಹಾಕಲಾಗಿದೆ. ಈ ಸಭೆಯಲ್ಲಿ 25 ಕ್ಕೂ ಹೆಚ್ಚು ಸಾಧು – ಸಂತರು, …
Read More »ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮ
ಕುಂದಗೋಳ: ದುಶ್ಚಟದಿಂದ ಮುಕ್ತಗೊಳಿಸಿ ಸನ್ಮಾರ್ಗದ ಜೀವನಕ್ಕೆ ಮಾರ್ಗದರ್ಶನ ಮಾಡುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮವೊಂದು ಕುಂದಗೋಳ ಪಟ್ಟಣದಲ್ಲಿ ಹಬ್ಬದಂತೆ ಜರುಗಿತು. ಕಳೆದ ಹಲವು ವರ್ಷಗಳಲ್ಲಿ 37 ಜಿಲ್ಲಾ ವೇದಿಕೆ ಸ್ಥಾಪಿಸಿ 10 ಸಾವಿರಕ್ಕೂ ಅಧಿಕ ಸ್ವಯಂಸೇವಕರ ನೇತೃತ್ವದಲ್ಲಿ 1.25 ಲಕ್ಷಕ್ಕೂ ಅಧಿಕ ಮದ್ಯ ವ್ಯಸನಿಗಳನ್ನು ವ್ಯಸನದಿಂದ ಮುಕ್ತಗೊಳಿಸಿ ಕುಂದಗೋಳದಲ್ಲಿ ಅಂತಹುದೇ ಮತ್ತೊಂದು ಕಾರ್ಯಕ್ರಮ ಏರ್ಪಡಿಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು ಅಭಿನವ …
Read More »ಹುಬ್ಬಳ್ಳಿಯಲ್ಲಿ ಮಹತ್ವದ ಸಭೆ ಕರೆದ ಮಾಜಿ ಉಪಮುಖ್ಯಮಂತ್ರಿ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಹತ್ವದ ಸಭೆ ಕರೆದ ಮಾಜಿ ಉಪಮುಖ್ಯಮಂತ್ರಿ, ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಬಗ್ಗೆ ಮಹತ್ವದ ಸಭೆ ನಡೆಸಿದ್ದಾರೆ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಇದೀಗ ರಾಯಣ್ಣ ಚೆನ್ನಮ್ಮ ಬ್ರಿಗೇಡ್(ಆರ್ಸಿಬಿ) ಸ್ಥಾಪಿಸಿಸಲು ಹೊರಟಿದ್ದಾರೆ. ರಾಜ್ಯದ 40ಕ್ಕೂ ಪ್ರಮುಖರ ನೇತೃತ್ವದಲ್ಲಿ ನಡೆಯುತ್ತಿರುವ ಪೂರ್ವಭಾವಿ ಸಭೆಯು ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿದೆ. ಈಗಾಗಲೇ ರಾಜ್ಯಾದ್ಯಂತ ಬ್ರಿಗೇಡ್ ಸ್ಥಾಪನೆ ಬಗ್ಗೆ …
Read More »543 ಪೌರಕಾರ್ಮಿಕರ ನೇರ ನೇಮಕಾತಿಗೆ ಪಾಲಿಕೆ ಅಧಿಕಾರಿಗಳು ಕ್ರಮವಹಿಸಬೇಕು: ಪ್ರಸಾದ್ ಅಬ್ಬಯ್ಯ
ಕುಂದಗೋಳ: ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ 543 ಪೌರಕಾರ್ಮಿಕರ ನೇರ ನೇಮಕಾತಿಗೆ ಪಾಲಿಕೆ ಅಧಿಕಾರಿಗಳು ಕ್ರಮ ವಹಿಸಬೇಕು. ಮೊದಲ ಹಂತದ 134ಪೌರಕಾರ್ಮಿಕರ ನೇಮಕಾತಿ ಅಂತಿಮ ಪಟ್ಟಿಯನ್ನು ನಾಲ್ಕು ದಿನದಲ್ಲಿ ಬಿಡುಗಡೆ ಮಾಡುವುದು ಮತ್ತು ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಮ್ಮುಖದಲ್ಲಿ ನೇಮಕಾತಿ ಪತ್ರ ವಿತರಣೆಗೆ ಕ್ರಮವಹಿಸಲು ಇಂದು ಶಾಸಕ ಪ್ರಸಾದ್ ಅಬ್ಬಯ್ಯ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
Read More »ಮಂಗಳಾರತಿ ಪುಸ್ತಕ ಬಿಡುಗಡೆ: ಮಹೇಶ್ ಟೆಂಗಿನಕಾಯಿ ಭಾಗಿ
ಹುಬ್ಬಳ್ಳಿ: ಗೋಕುಲ ರಸ್ತೆಯ ಕ್ಯೂಬಿಕ್ಸ್ ಹೊಟೇಲ್ ನಲ್ಲಿ ಇಂದು ಶ್ರೀ ನಾಗರಾಜ ಪಟ್ಟಣ ಹಾಗೂ ಮಿತ್ರವೃಂದದಿಂದ ಸತತ 08 ನೇ ವರ್ಷದ ಮಂಗಳಾರತಿ ಪುಸ್ತಕ ಬಿಡುಗಡೆ ಹಾಗೂ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಭಾಗವಹಿಸಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮೂರುಸಾವಿರ ಮಠದ ಪರಮಪೂಜ್ಯರಾದ ಡಾ. ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಮಾಜಿ ಶಾಸಕ ಅಶೋಕ ಕಾಟವೆ ಸೇರಿದಂತೆ ಅನೇಕರು ಇದ್ದರು.
Read More »ದೇವರ ಮೂರ್ತಿ ಭಗ್ನ :ಕಮಿಷನರ್ ಎನ್. ಶಶಿಕುಮಾರ್ ಭೇಟಿ
ಹುಬ್ಬಳ್ಳಿ: ದೇಶಪಾಂಡೆ ನಗರದ ಅಪರ್ಣಾ ಅಪಾರ್ಟೆಂಟ್ ನಲ್ಲಿನ ದೇವಸ್ಥಾನದಲ್ಲಿ ದತ್ತಾತ್ರೇಯ ದೇವರ ಮೂರ್ತಿಯನ್ನು ಭಗ್ನ ಗೊಳಿಸಿದ ಮಾಹಿತಿ ಬೆನ್ನಲ್ಲೇ ಕಮಿಷನರ್ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶನಿವಾರ ತಡರಾತ್ರಿ ಈ ಹೀನ ಕೃತ್ಯ ನಡೆದಿದೆ. ದೇವಸ್ಥಾನದಲ್ಲಿದ್ದ ದತ್ತಾತ್ರೇಯ ದೇವರ ಮೂರ್ತಿಯ ನಾಲ್ಕು ಕೈಗಳನ್ನು ಮುರಿದಿದ್ದು, ಇಂದು ಬೆಳಿಗ್ಗೆ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ಸ್ಥಳದಲ್ಲಿ ಬಿದ್ದಿರುವ ರಾಡ್ ಹಾಗೂ ದೇವಸ್ಥಾನದ …
Read More »ಚಿಗರಿ ಬಸ್ ಡಿಕ್ಕಿ : ವ್ಯಕ್ತಿ ಸಾವು
ಧಾರವಾಡ: ಚಿಗರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಧಾರವಾಡದ ಗಾಂಧಿನಗರದ ಬಳಿ ಸಂಭವಿಸಿದೆ.ರಾಜಸ್ಥಾನ ಮೂಲದ ವಿಜಯದಾನ್ (52) ಎಂಬಾತನೇ ಈ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ. ಬಡಿಗತನ ಕೆಲಸ ಮಾಡುತ್ತಿದ್ದ ಈತ, ಗೋಪನಕೊಪ್ಪದಲ್ಲಿ ಮನೆ ಮಾಡಿಕೊಂಡು ವಾಸವಿದ್ದ. ಜೆಎಸ್ಎಸ್ ಕಾಲೇಜಿನಲ್ಲಿ ನಡೆಯುತ್ತಿದ್ದ ಕೆಲಸ ಮುಗಿಸಿಕೊಂಡು ಮರಳಿ ಮನೆ ಕೊಡೆ ಹೊರಟಿದ್ದ ಸಂದರ್ಭದಲ್ಲಿ ಜವರಾಯನ ರೂಪದಲ್ಲಿ ಬಂದ ಚಿಗರಿ ಬಸ್ಸು ಆತನ ಜೀವ ಬಲಿ ಪಡೆದಿದೆ. ಬಸ್ಸಿನ ಕೆಳಭಾಗದಲ್ಲಿ …
Read More »ಸಿದ್ದರಾಮಯ್ಯನವರು ತಮ್ಮ ಕೇಸ್ ಜೊತೆ ಇನ್ನೊಬ್ಬರ ಕೇಸ್ ಹೋಲಿಕೆ ಮಾಡಬಾರದು : ಶೆಟ್ಟರ್
ಧಾರವಾಡ: ಭೂ ವಂಚನೆ ಸಂಬಂಧ ಈಗಾಗಲೇ ವಿಪಕ್ಷ ನಾಯಕ ಆರ್.ಅಶೋಕ್ ಕೋರ್ಟ್ನಿಂದ ಎಲ್ಲವೂ ಬಗೆಹರಿದಿದೆ ಎಂದಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಕೇಸ್ ಜೊತೆ ಇನ್ನೊಬ್ಬರ ಕೇಸ್ ಹೋಲಿಕೆ ಮಾಡಬಾರದು ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಅಶೋಕ್ ಅವರು ತಮ್ಮ ಪ್ರಕರಣದ ಬಗ್ಗೆ ಸ್ಪಷ್ಟಿಕರಣ ಸಹ ಕೊಟ್ಟಿದ್ದಾರೆ. ಕೋರ್ಟ್ನಲ್ಲೇ ಅಶೋಕ ಅವರ ತಪ್ಪಿಲ್ಲ ಎಂದು ಸಾಬೀತಾಗಿದೆ. ಈಗ ಮುಡಾ ಹಗರಣ ಎದ್ದಿದೆ. ತನಿಖೆಗೆ ಆದೇಶ ಕೂಡ …
Read More »ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಹಾಗೂ ಬಸ್ ನಡುವೆ ಅಪಘಾತ
ಕಲಘಟಗಿ : ತಾಲೂಕಿನ ಧಾರವಾಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಟೋದಲ್ಲಿದ್ದ ಚಾಲಕನ ಮಗಳು ಹಾಗೂ ಮಗನಿಗೂ ಗಾಯಗಳಾಗಿವೆ. ಆಟೋ ಚಾಲಕ ಕಲಘಟಗಿ ಮೂಲದವನಾಗಿದ್ದು ಗಣೇಶ ಭಾಪಶೇಟ್ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯಲ್ಲಿ ವಾಸವಾಗಿದ್ದ ಇವರು ಮಕ್ಕಳನ್ನು ಕರೆದುಕೊಂಡು ಕಲಘಟಗಿ ಬಂದು ಹೋಗುತ್ತಿರುವಾಗ ಘಟನೆ ಸಂಭವಿಸಿದೆ. ಗಾಯಗೊಂಡ ಮೂವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





