Breaking News

Shaikh BigTv

ಬೆಳಗಿನ ಜಾವ ಹುಬ್ಬಳ್ಳಿಯಲ್ಲಿ ಗುಂಡಿನ ಸದ್ದು : ದರೋಡೆಕೋರ ಪೋಲಿಸರ್ ಬಲೆಗೆ

ಹುಬ್ಬಳ್ಳಿ: ದರೋಡೆಕೋರನ ಮನೆ ದರೋಡೆಗೆ ಯತ್ನಿಸಿದ ಹಿನ್ನಲೆ ಅವರ ಕಾಲಿಗೆ ಗೋಕುಲ ಠಾಣೆಯ ಪೊಲೀಸರು ಗುಂಡೇಟು ನೀಡಿ ಬಂಧಿಸಿದ ಘಟನೆ ಇಂದು ಬೆಳಗಿನ ಜಾವ ಗೋಕುಲದಲ್ಲಿ ನಡೆದಿದೆ. ಗೋಕುಲ ಗ್ರಾಮದ ಮನೆಯೊಂದರಲ್ಲಿ ದರೊಡೆಕೋರ ಮಾಡಲು ಸೀತಾರಾಮ ಕಾಳೆ ಮುಂದಾಗಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗಿದ್ದರು. ಈ ವೇಳೆ ಆರೋಪಿ ಸೀತಾರಾಮ ಕಾಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾಗಿದ್ದ.ಕೂಡಲೇ ಗೋಕುಲ …

Read More »

ಶ್ರೀಮಹರ್ಷಿ ವಾಲ್ಮೀಕಿ ಜಯಂತಿ :ಅಧಿಕಾರಿಗಳಿಗೆ ತಹಶೀಲ್ದಾರ ಸುಧೀರ ಸಾಹುಕಾರ ಸೂಚನೆ

ನವಲಗುಂದ: ತಾಲೂಕಾ ಮಟ್ಟದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಹಶೀಲ್ದಾರ ಸುಧೀರ ಸಾಹುಕಾರ ಸೂಚನೆ ನೀಡಿದರು. ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯ ಸಂಬಂಧ ತಾಲೂಕಾಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಾ ಆಡಳಿತ ವತಿಯಿಂದ ಅ.17 ರಂದು 11 ಗಂಟೆಗೆ ತಹಶೀಲ್ದಾರ್ ಕಚೇರಿಯಿಂದ ಮೆರವಣಿಗೆ ಹೊರಟು ಪಟ್ಟಣದ ಹೊರವಲಯದಲ್ಲಿರುವ …

Read More »

ಶಿಕ್ಷಾದೀಪ ವಿದ್ಯಾರ್ಥಿ ವೇತನ ವಿತರಣಾ ಹಾಗೂ ಪಾಲಕರ ಸಭೆ

ನವಲಗುಂದ: ಹಮಾಲಿ ಹಾಗೂ ಇತರ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ಬೆಂಗಳೂರಿನ ಪಿ. ಸಿಂಫ್ಟಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ನೀಡಲಾಗುತ್ತಿರುವ ಶಿಕ್ಷಾದೀಪ ವಿದ್ಯಾರ್ಥಿ ವೇತನ ವಿತರಣಾ ಹಾಗೂ ಪಾಲಕರ ಸಭೆಯು ಹುಬ್ಬಳ್ಳಿ ಎಪಿಎಂಸಿ ಸಭಾಭವನದಲ್ಲಿ ಜರುಗಿತು. ಸಭೆಯಲ್ಲಿ ನವಲಗುಂದ ಹಾಗೂ ಅಣ್ಣಿಗೇರಿ ತಾಲ್ಲೂಕಿನ ಹಮಾಲಿ ಕೂಲಿ ಕಾರ್ಮಿಕರ ಮಕ್ಕಳಾದ ಮೌಲಾಸಾಬ್ ಅಣ್ಣಿಗೇರಿ, ಪವಿತ್ರಾ ಸುಳ್ಳದ, ಸುಕನ್ಯಾ ಬೆಲಕೊಪ್ಪ, ರೂಪ ಕುಂಬಾರಗೌಡ್ರ, ಬಸಮ್ಮ ಕುಂಬಾರಗೌಡ್ರ ನಾಶಿರಬಾನು ಧಾರವಾಡ, ಪ್ರಭಾವತಿ ಮಾವಿನಕಾಯಿ, ಜನ್ನತಬಿ ಆದೋನಿ, …

Read More »

ದೇವರ ಮೂರ್ತಿ ಕೈ ಕತ್ತಿರಿಸಿದ ಕಿಡಿಗೇಡಿಗಳ ವಿರುದ್ಧ ಎಸ್.ಎಸ್ ಶಂಕರಣ್ಣ ಕಿಡಿ

ಹುಬ್ಬಳ್ಳಿ: ಹುಬ್ಬಳ್ಳಿಯ ದೇಶಪಾಂಡೆ ನಗರದ ದತ್ತಾತ್ರೇಯ ದೇವಸ್ಥಾನದಲ್ಲಿನ ದೇವರ ವಿಗ್ರಹದ ನಾಲ್ಕು ಕೈಗಳನ್ನು ಕಿಡಿಗೇಡಿಗಳು ಮುರಿದು ವಿರೂಪಗೊಳಿಸಿರುವುದು ಖಂಡನೀಯ. ಈ ವಿಕೃತ ಮನಸ್ಸು ಹೊಂದಿದವರನ್ನು ಪೊಲೀಸರು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಉತ್ತರ ಕರ್ನಾಟಕ ಜನಶಕ್ತಿ ಸೇನಾ ಸಂಸ್ಥಾಪಕ ಎಸ್.ಎಸ್ ಶಂಕರಣ್ಣ ಒತ್ತಾಯಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯ ದೇವರಲ್ಲಿ ಚನ್ನಾಗಿಡಪ್ಪ ಎಂದು ಅಂಗಲಾಚಿ ಬೇಡಿಕೊಳ್ಳುತ್ತಾನೆ. ಆದ್ರೆ ಯಾರೋ ವಿಕೃತಿ ಹೊಂದಿದ ದುಷ್ಕರ್ಮಿಗಳು ದೇವರ ಮೂರ್ತಿಯ ಕೈ ಕತ್ತರಿಸಿ ಉದ್ವಿಗ್ನ ಸ್ಥಿತಿ …

Read More »

ಮನೆ ಮುಂದೆ ನಿಲ್ಲಿಸಿದ್ದ ಆಟೊಕ್ಕೆ ಏಕಾಏಕಿ ಬೆಂಕಿ

ಧಾರವಾಡ: ಮನೆ ಮುಂದೆ ನಿಲ್ಲಿಸಿದ್ದ ಆಟೊಕ್ಕೆ ಏಕಾಏಕಿ ಬೆಂಕಿ ತಗುಲಿ ಆಟೊ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಧಾರವಾಡದ ರಾಜೀವಗಾಂಧಿ ನಗರದಲ್ಲಿ ಸಂಭವಿಸಿದೆ. ಮಹ್ಮದ್ ಅಬೂಬಕರ ಎಂಬುವವರಿಗೆ ಸೇರಿದ ಆಟೊ ಸುಟ್ಟು ಕರಕಲಾಗಿದೆ. ಈ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಗೊತ್ತಾಗಿಲ್ಲ.ರಾತ್ರೋರಾತ್ರಿ ಆಟೊಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಮನೆಯವರು ನೋಡುವಷ್ಟರಲ್ಲಿ ಎಂಜಿನ್ ಸಮೇತ ಆಟೊ ಹೊತ್ತಿ ಉರಿದಿದೆ. ಧಾರವಾಡ ವಿದ್ಯಾಗಿರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Read More »

ಹುಬ್ಬಳ್ಳಿಯಲ್ಲಿ ಐತಿಹಾಸಿಕ ದೇವಸ್ಥಾನದ ದೇವರ ವಿಗ್ರಹ ಭಗ್ನ

ಹುಬ್ಬಳ್ಳಿ: ಐತಿಹಾಸಿಕ ದೇವಸ್ಥಾನದ ದೇವರ ವಿಗ್ರಹವನ್ನು ಭಗ್ನಗೊಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಸ್ಥಳದಲ್ಲಿ ಉದಿಗ್ನ ವಾತಾವರಣ ನಿರ್ಮಾಣವಾಗಿದೆ. ಇಲ್ಲಿನ ದೇಶಪಾಂಡೆ ನಗರದಲ್ಲಿ ಈ ವೊಂದು ಘಟನೆ ನಡೆದಿದ್ದು, ಅಪರ್ಣಾ ಅಪಾರ್ಟೆಂಟ್ ಹತ್ತಿರದ ದತ್ತಾತ್ರೇಯ ದೇವಸ್ಥಾನದಲ್ಲಿನ ದತ್ತಾತ್ರೇಯ ದೇವರ ವಿಗ್ರಹದ ನಾಲ್ಕು ಕೈಗಳನ್ನು ಮುರಿದು ವಿರೂಪಗೊಳಿಸಿದ್ದಾರೆ. ಇನ್ನು ಸುಮಾರು 20 ವರ್ಷದ ಹಿಂದಿನ ಇತಿಹಾಸ ಹೊಂದಿರುವ ದೇವಸ್ಥಾನ ಇದಾಗಿದೆ. ಕಳೆದ ಶನಿವಾರ ರಾತ್ರಿ ನವರಾತ್ರಿ ಹಿನ್ನೆಲೆಯ ಸ್ಥಳೀಯ ನಿವಾಸಿಗಳು ದಾಂಡಿಯಾ ನೃತ್ಯ …

Read More »

ಸಾಫ್ಟವೇರ್ ಇಂಜಿನೀಯರಗೆ ನ್ಯಾಯ ದೊರೆಕಿಸಿದ ಗ್ರಾಹಕರ ಆಯೋಗ

ಧಾರವಾಡ ; ಕುಂದಗೋಳ ತಾಲೂಕಿನ ಇಂಗಳಿಗಿ ಗ್ರಾಮದ ಶರಣಕುಮಾರ ಹರವಿ ಅನ್ನುವ ಅವಿವಾಹಿತ ಸಾಫ್ಟವೇರ್ ಇಂಜಿನೀಯರ ದೈನಂದಿನ ತನ್ನ ಉಪಯೋಗಕ್ಕಾಗಿ ಬೆಂಗಳೂರ ರಾಮನಗರದ ಸ್ಟೋ ಕ್ರಾಫ್ಟ ಸಂಸ್ಥೆಯಿಂದ ಆನ್‍ಲೈನ್ ಮುಖಾಂತರ ರೂ.1,599/- ಕೊಟ್ಟು ಪಿಜನ್ ಫೇವರೆಟ್ ಇಂಡಕ್ಷನ್ ಕುಕ್ ಟಾಪ್ ಖರೀದಿಸಿದ್ದರು. ಅದು ಒಂದು ವರ್ಷ ವಾರಂಟಿ ಹೊಂದಿತ್ತು. ಖರೀದಿಸಿದ ಕೆಲವೇ ತಿಂಗಳುಗಳಲ್ಲಿ ಅದರಲ್ಲಿ ನ್ಯೂನ್ಯತೆಗಳು ಕಂಡುಬಂದು ಅದು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಎದುರುದಾರರಿಗೆ ಫೋನ್ ಹಾಗೂ ಮೇಲ್ ಮುಖಾಂತರ …

Read More »

ಅನ್ನ ಹಾಗೂ ಸಾಂಬಾರನ್ನು ಡಿಸಿ ಕಚೇರಿಗೆ ತಂದು ದಿಢೀರ್ ಪ್ರತಿಭಟನೆ

ಧಾರವಾಡ: ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ನೀಡಲಾಗುತ್ತಿರುವ ಊಟ ಸರಿಯಾಗಿಲ್ಲ ಎಂದು ಆರೋಪಿಸಿ ಸಪ್ತಾಪುರ ಪರಿಶಿಷ್ಟ ವರ್ಗದ ಮೆಟ್ರಿಕ್‌ ನಂತರದ ಹಾಸ್ಟೆಲ್‌ನ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ನೀಡಿದ ಅನ್ನ ಹಾಗೂ ಸಾಂಬಾರನ್ನು ಡಿಸಿ ಕಚೇರಿಗೆ ತಂದು ದಿಢೀರ್ ಪ್ರತಿಭಟನೆ ನಡೆಸಿದರು. ಹಾಸ್ಟೆಲ್‌ನ ಅನ್ನದ ಪಾತ್ರೆ, ಸಾಂಬಾರಿನ ಬಕೆಟ್ ಹಿಡಿದು ಬಂದ ವಿದ್ಯಾರ್ಥಿಗಳು, ಅವುಗಳನ್ನು ಡಿಸಿ ಕಚೇರಿ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು. ಹಾಸ್ಟೆಲ್‌ನಲ್ಲಿ ನೀಡುತ್ತಿರುವ ಊಟ ಕಳಪೆ ಗುಣಮಟ್ಟದ್ದಾಗಿದ್ದು, ಈ ಹಿಂದೆಯೇ ಈ …

Read More »

ಅ.11ರಂದು ಮಾರ್ಟಿನ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಹುಬ್ಬಳ್ಳಿ : ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ನಟನೆಯ ಮಾರ್ಟಿನ್ ಸಿನಿಮಾ ಫ್ರೀ ರಿಲೀಸ್‌ ಸಮಾರಂಭ ದಾವಣಗೆರೆಯಲ್ಲಿ ಅಕ್ಟೋಬ‌ರ್ 6ರಂದು ನಡೆಯಲಿದೆ. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಹಂಚಿಕೊಂಡ ಸಿನಿಮಾದ ನಟ ಧ್ರುವ ಸರ್ಜಾ, ಅಕ್ಟೋಬರ್ 11ರಂದು ಸಿನಿಮಾ ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ. ನಾನು ಹಿಂದೆ ನಟಿಸಿರುವ ಅದ್ಧೂರಿ, ಬಹದ್ದೂ‌ರ್, ಭರ್ಜರಿ ಸಿನಿಮಾಗಿಂತ ವಿಭಿನ್ನವಾಗಿದೆ. ಇದು ಆಕ್ಷನ್ ಸಿನಿಮಾ ಆಗಿದ್ದು, ಕುಟುಂಬ ಸಮೇತ ಎಲ್ಲರೂ …

Read More »

ಹುಬ್ಬಳ್ಳಿಗೆ ಆಗಮಿಸಿದ ಧ್ರುವ ಸರ್ಜಾಗೆ ಅದ್ದೂರಿ ಸ್ವಾಗತ

ಹುಬ್ಬಳ್ಳಿ : ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಹುಬ್ಬಳ್ಳಿಗೆ ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳು ವಾದ್ಯಗಳೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು. ಅಲ್ಲದೇ ಪುಷ್ಪ ಮಳೆಗರೆದು ಅಭಿನಂದನೆ ಸಲ್ಲಿಸಿದರು. ಹುಬ್ಬಳ್ಳಿಯ ಹೃದಯ ಭಾಗದಲ್ಲಿ ಹೃದಯಪೂರ್ವಕ ಅಭಿನಂದನೆ ಸಲ್ಲಿಸಿರುವುದು ಹುಬ್ಬಳ್ಳಿಗೆ ಆಗಮಿಸಿದ ಸ್ಟಾರ್ ನಟನಿಗೆ ಸಲ್ಲಿಸಿದ ಗೌರವ ಇದಾಗಿದೆ. ಅಲ್ಲದೆ ನಟ ಧ್ರುವ ಸರ್ಜಾ ಅವರು ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಿತ್ರದ ಯಶಸ್ಸಿಗೆ ಮನವಿ ಮಾಡಿದರು. …

Read More »