Breaking News

Shaikh BigTv

ಸಿಬಿಎಸಿ ಸೌತ್ ಜೋನ್ 2 ಸ್ಕೆಟಿಂಗ್ ಸ್ಪರ್ಧೆಯಲ್ಲಿ ಹುಬ್ಬಳ್ಳಿ ವಿದ್ಯಾರ್ಥಿಯರ ಸಾಧನೆ

ಹುಬ್ಬಳ್ಳಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್‌ (ಸಿಬಿಎಸಿ) ಸಿಬಿಎಸಿ ಸೌತ್ ಜೋನ್ 2 ಸ್ಕೆಟಿಂಗ್ ಸ್ಪರ್ಧೆ 2024-2025 ಬೆಳಗಾವಿಯ ಗುಡ್ ಶೆಪರ್ಡ್ ಸೆಂಟ್ರಲ್ ಸ್ಕೂಲ್‌ನಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿ ರೋಲರ್ ಸ್ಟೇಟಿಂಗ್ ಅಕಾಡೆಮಿಯ ಇನ್ಸೆನ್ ವಿಭಾಗದ ಸ್ಕೆಟರ್ ಕುಮಾರಿ ಸಾನ್ವಿ ಸಾಂಬ್ರಾಣಿ ( ಕೆ. ಎಲ್. ಇ ಆಂಗ್ಲ ಮಾಧ್ಯಮ ಶಾಲೆ ಮಂಜುನಾಥ್ ನಗರ ) ಒಂದು ಚಿನ್ನದ ಪದಕ, ಒಂದು ಬೆಳ್ಳಿಯ ಪದಕ ಗೆದ್ದಿದ್ದು, ಹಾಗೂ …

Read More »

ಅಕಾಡೆಮಿ ಅಧ್ಯಕ್ಷ ಬಬಲೇಶ್ವರ ಅವರ ಮಕ್ಕಳ ಬಗೆಗಿನ ಕಾಳಜಿ ಅನನ್ಯವಾದದ್ದು : ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ

ಧಾರವಾಡ: ಮಕ್ಕಳ ಸೇವೆಯಲ್ಲಿ ಭಗವಂತನನ್ನು ಕಾಣುವ, ಮಕ್ಕಳ ಬಗೆಗೆ ಅಪಾರ ಕಾಳಜಿ ಕಕ್ಕುಲತೆಯನ್ನು ಹೊಂದಿರುವ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರ ಕಾರ್ಯ ಅನನ್ಯವಾದದ್ದು. ನಾಡಿನ ಬಾಲಮಂದಿರದ ಮಕ್ಕಳನ್ನು ನಿಸರ್ಗದ ಮಡಿಲಿನಲ್ಲಿ ಕರೆತಂದು, ಮಕ್ಕಳ ಸೃಜನಶೀಲ ವ್ಯಕ್ತಿತ್ವ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಸಂಗಮೇಶ್ ಅವರದ್ದು ಇತರರಿಗೆ ಮಾದರಿಯಾದ ವ್ಯಕ್ತಿತ್ವವಾಗಿದೆ. ನಿಜವಾದ ಸಾಮಾಜಿಕ ಕಾಳಜಿ ಇರುವ ಇಂತವರಿಗೆ ಮತ್ತಷ್ಟು ಅವಕಾಶಗಳು ಸೀಗಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. …

Read More »

ಅದ್ಧೂರಿಯಾಗಿ ಸ್ವಾಗತಿದ ಕನ್ನಡ ಜ್ಯೋತಿ ರಥ

ಧಾರವಾಡ: ಮಂಡ್ಯ ಜಿಲ್ಲೆಯಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ರಥವು ಧಾರವಾಡ ನಗರಕ್ಕೆ ಆಗಮಿಸಿದ್ದು, ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಧಾರವಾಡ ಜಿಲ್ಲಾಧಿಕಾರಿ ಕಚೇರಿಯಿಂದ ಸಕಲ ವಾದ್ಯ ಮೇಳದ ಮೂಲಕ ಕನ್ನಡ ಜ್ಯೋತಿ ರಥವನ್ನು ಧಾರವಾಡ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಧಾರವಾಡ ಕನ್ನಡ ಸಾಹಿತ್ಯ ಪರಿಷತ್‌ ಸರ್ವ ಸದಸ್ಯರು ಅದ್ದೂರಿಯಾಗಿ ಕನ್ನಡ ಜ್ಯೋತಿ ರಥವನ್ನು ಸ್ವಾಗತ ಮಾಡಿಕೊಂಡು, ಕನ್ನಡ ತಾಯಿ ಭುವನೇಶ್ವರಿಗೆ ಜಯಘೋಷ …

Read More »

ಹೂವಿನ ದರ ದಿಢೀರ್ ಕುಸಿತ: ಧಾರವಾಡದಲ್ಲಿ ಪ್ರತಿಭಟನೆ

ಧಾರವಾಡ: ಹೂವಿನ ದರ ದಿಢೀರ್ ಕುಸಿತ ಕಂಡಿದ್ದು, ಧಾರವಾಡ ಸುಪರ್ ಮಾರುಕಟ್ಟೆಯಲ್ಲಿ ಹೂವು ಬೆಳೆದ ರೈತರು ಪ್ರತಿಭಟನೆ ನಡೆಸಿದರು. ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಧಾರವಾಡದಲ್ಲಿ ಹೂವು ಮಾರಾಟ ಮಾಡಲಾಗುತ್ತಿದ್ದು, ಸ್ಥಳೀಯ ಹೂವು ಖರೀದಿಸಲು ಏಜೆಂಟರು ಕಡಿಮೆ ದರ ಹೇಳುತ್ತಾರೆ ಎಂದು ಸ್ಥಳೀಯ ರೈತರು ಅಳಲು ತೋಡಿಕೊಂಡರು. ಸೇವಂತಿಗೆ ಹೂವು, ಗುಲಾಬಿ ಹೂವು, ಚೆಂಡು ಹೂವು, ಸುಗಂಧಿ ಹೂವು ಸೇರಿದಂತೆ ಎಲ್ಲ ಹೂವಿನ ಖರೀದಿಯಲ್ಲಿ ರೈತರಿಗೆ ನಷ್ಟ ಮಾಡಲಾಗುತ್ತಿದೆ ಎಂದು …

Read More »

ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಜಿಲ್ಲಾ ಪ್ರವಾಸ

ಧಾರವಾಡ : ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಎಸ್. ಲಾಡ್ ಅವರು ಅಕ್ಟೋಬರ್ 2 ರಂದು ಧಾರವಾಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಅಕ್ಟೋಬರ್ 2 ರಂದು ಬೆಳಿಗ್ಗೆ 7. 35 ಗಂಟೆಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ನಂತರ ಅವರು ಬೆಳಿಗ್ಗೆ 9 ಗಂಟೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮತ್ತು ಅವರು ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸುವರು.

Read More »

ಸ್ವಚ್ಚತಾ ಅಭಿಯಾನ ಕಾರ್ಯಕ್ರಮ

ಧಾರವಾಡ: ಮಹಾತ್ಮ ಗಾಂಧಿ ಅವರ ಜಯಂತಿ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಆಹಾರ ಇಲಾಖೆ ಮತ್ತು ಉಪವಿಭಾಗಾಧಿಕಾರಿಗಳ ಕಚೇರಿಯ ಅಧಿಕಾರಿ, ಸಿಬ್ಬಂದಿಗಳು ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದ್ದರು.

Read More »

ಮಳೆ ಬೆಳೆಗಾಗಿ ಸಿದ್ದರೂಢರ ಮಠದಲ್ಲಿ ಸ್ವಾಮೀಜಿಯಿಂದ ಗಾಳಿ ಸೇವನೆ ಮೂಲಕ ವ್ರತ

ಕಲಘಟಗಿ : ತಾಲ್ಲೂಕಿನ ಸಿದ್ದರೂಢರ ಮಠದಲ್ಲಿ ರಮಾನಂದ ಸ್ವಾಮೀಜಿಯವರು 11 ದಿನಗಳ ಕಾಲ ನೀರು ಅನ್ನ ಹಾಲು ಹಣ್ಣುಗಳು ಸೇವಿಸದೆ ಕೇವಲ ಗಾಳಿ ಸೇವನೆ ಮೂಲಕ ವಿಶೇಷ ವ್ರತವನ್ನು ಶ್ರದ್ದೆಯಿಂದ ಆಚರಿಸುವ ಮೂಲಕ ಮಳೆ ಬೆಳೆ ಚೆನ್ನಾಗಿ ಬರಲೇಂದು ದೇವರಲ್ಲಿ ಬೇಡಿಕೊಂಡರು. ಈ ಸಂದರ್ಭದಲ್ಲಿ ನಿನ್ನೆ ಕೊನೆ ದಿನ ಆಗಿರುವುದರಿಂದ ವಿವಿಧ ಮಠದ ಸ್ವಾಮೀಜಿಯವರಿಗೆ ಗ್ರಾಮಸ್ಥರು ಹಾಗೂ ತಾಲೂಕಿನ ಜನರು ವಿಶೇಷ ಗೌರವ ಹಾಗೂ ಸತ್ಕಾರ ಮಾಡಿ ಕಾರ್ಯಕ್ರಮಕ್ಕೆ ಮೆರಗು …

Read More »

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಧಾರವಾಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ನಿವೃತ್ತ ನೌಕರರ ವೇದಿಕೆ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಧಾರವಾಡ ನಗರದಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಿವೃತ್ತ ನೌಕರರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ, ಏಳನೇ ವೇತನ ಆಯೋಗದ ನಿವೃತ್ತಿ ಸೌಲಭ್ಯ ಒದಗಿಸಿ, ನಿವೃತ್ತಿ ಸೌಲಭ್ಯ ಜೊತೆಗೆ ಆರ್ಥಿಕ ಸೌಲಭ್ಯ ನೀಡಿ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

Read More »

ಎಡಿಜಿಪಿ ಎಂ.ಚಂದ್ರಶೇಖ‌ರ್ ಅವರು ಬಳಸಿದ ಪದಗಳನ್ನು ವಿರೋಧಿಸಿ ಪ್ರತಿಭಟನೆ

ಧಾರವಾಡ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಕುರಿತು ಎಡಿಜಿಪಿ ಎಂ.ಚಂದ್ರಶೇಖ‌ರ್ ಅವರು ಬಳಸಿದ ಪದಗಳನ್ನು ವಿರೋಧಿಸಿ ಧಾರವಾಡದಲ್ಲಿ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಧಾರವಾಡ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್‌ ಕಾರ್ಯಕರ್ತರು, ಎಡಿಜಿಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಒಬ್ಬ ಕೇಂದ್ರ ಸಚಿವರಿಗೆ ಇವರು ಕೆಟ್ಟ ಪದಗಳನ್ನು ಬಳಕೆ ಮಾಡಿ ಮಾತನಾಡುತ್ತಾರೆ. ಇಂತಹ ಅಧಿಕಾರಿ ಮೇಲೆ ಕೇಂದ್ರ ಗೃಹ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕು. ಅವರ …

Read More »

ಯುವಕನ ಮೇಲೆ ಪುಡಿ ರೌಡಿಗಳು ಹಲ್ಲೆ: ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ : ಯುವಕನೊಬ್ಬನ ಮೇಲೆ ನಾಲೈದು ಪುಡಿ ರೌಡಿಗಳ ಗುಂಪು ಶೆಡ್‌’ಕರೆದೊಯ್ದು ರಾಡ್ ನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿದ ಪರಿಣಾಮ ಯುವಕನ ಕೈ ಕಾಲು ಮುರಿದು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿರುವ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನ ವಿನಾಯಕ ಅಂತಾ ತಿಳಿದು ಬಂದಿದ್ದು ಈತ ಅಭಿಷೇಕ ಸಿದ್ದಾಪುರ ಎಂಬಾತನ ಬಳಿಯಲ್ಲಿ 5000 ಸಾವಿರ ಸಾಲವನ್ನು ಮಾಡಿದ್ದ,ಆದ್ರೆ ಕಳೆದ ಎರಡು ತಿಂಗಳುಗಳಿಂದ …

Read More »