ಲಕ್ಷ್ಮೇಶ್ವರ: ಪಕ್ಷದ ಮೂಲಕ ದೇಶದ ಅತ್ಯುನ್ನತ ಹುದ್ದೆಯನ್ನ ಏರಬಹುದು. ಆ ಹುದ್ದೆಗಳು ಮಾಜಿಯಾಗುತ್ತವೆ. ಆದರೆ, ಕಾರ್ಯಕರ್ತರು ಎಂದು ಮಾಜಿ ಆಗುವುದಿಲ್ಲ ಎಂಬ ಸತ್ಯ ಪ್ರತಿಯೊಬ್ಬ ಕಾರ್ಯಕರ್ತನಿಗೂ ಅರ್ಥವಾಗಿರಬೇಕು ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು. ಗದಗ ಜಿಲ್ಲೆಯ ಶಿರಹಟ್ಟಿ ಮಂಡಲ ವ್ಯಾಪ್ತಿಯ ಲಕ್ಷ್ಮೇಶ್ವರ ತಾಲೂಕಿನ ಬಿಜೆಪಿ ಸದಸ್ಯತ್ವ ಅಭಿಯಾನ-2024 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ನಾನು ಮಾಜಿ ಮಂತ್ರಿಯಾಗಿ ಇಲ್ಲಿಗೆ ಬಂದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಬಂದಿದ್ದೇನೆ. ಪಕ್ಷದ …
Read More »ಮನೆ ಮನೆಗೆ ತೆರಳಿ ಸದಸ್ಯತಾ ಅಭಿಯಾನ
ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿ ಸದಸ್ಯತಾ ಅಭಿಯಾನ ಮಹಾಸಂಪರ್ಕದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ವಾರ್ಡ್ ನಂ. 39 ರ ಶಕ್ತಿ ಕಾಲೋನಿಯಲ್ಲಿ ಮನೆ ಮನೆಗೆ ತೆರಳಿ ಸದಸ್ಯತಾ ಅಭಿಯಾನವನ್ನು ನಡೆಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ, ರಘು ಧಾರವಾಡಕರ, ಎಚ್. ಎಸ್. ಕಿರಣ, ಶ್ರೀಮತಿ ಅರ್ಚನಾ ಕೆ, ಲೋಕೇಶ, ಮುರಳಿ ಗಲಗಲಿ ಹಾಗೂ ಸ್ಥಳೀಯ ಗುರುಹಿರಿಯಯರು ಉಪಸ್ಥಿತರಿದ್ದರು.
Read More »ಹೆಸರು ಖರೀದಿ ಕೇಂದ್ರದ ಉದ್ಘಾಟಿಸಿದ ಕೋನರೆಡ್ಡಿ
ಅಣ್ಣಿಗೇರಿ: ತಾಲೂಕಿನ ಅಣ್ಣಿಗೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ, ರೈತರು ಇದರ ಸದೋಪಯೋಗ ಪಡಿಸಿಕೊಳ್ಳಲು ಶಾಸಕ ಎನ್. ಎಚ್. ಕೋನರೆಡ್ಡಿ ತಿಳಿಸಿದರು. ಈ ಸಂದರ್ಭದಲ್ಲಿ ಕೆ. ಸಿ. ಸಿ. ಬ್ಯಾಂಕ್ ನ ಮಾಜಿ ಅಧ್ಯಕ್ಷ ಶ್ರೀ ಬಾಪೂಗೌಡ್ರ ಪಾಟೀಲ, ಸಹಕಾರಿ ದುರೀಣರದ ಬಸವಗೌಡ್ರ ಕುರಹಟ್ಟಿ, ವಿ. ಎಸ್. ಸೊಸೈಟಿಯ ಚೇರಮನ್ನರಾದ ನಿಜಗುಣೆಪ್ಪ ಅಕ್ಕಿ, ಉಪಸ್ಥಿತರಿದ್ದರು.
Read More »ಪ. ಪೂ. ಅಭಿಕ್ಷ ಭಾಸ್ಕರ ವಾತ್ಸಲ್ಯಮೂರ್ತಿ 108 ಪುಣ್ಯಸಾಗರ ಮುನಿಮಹಾರಾಜರ ಆರ್ಶೀವಾದ ಪಡೆದ ಶಾಸಕ ಎನ್. ಎಚ್. ಕೋನರೆಡ್ಡಿ
ಹುಬ್ಬಳ್ಳಿ: ದಕ್ಷಿಣ ಭಾರತ ಜೈನ ಸಭೆಯ ಅಂಗಸಂಸ್ಥೆ ದಿಗಂಬರ ಜೈನ ಬೋರ್ಡಿಂಗ್ ಹಾಗೂ ಬ್ರಹ್ಮಳಾ ಮಹಿಳಾ ಪರಿಷತ್ ದಿಗಂಬರ ಜೈನ ಸಮಾಜ ಹಾಗೂ ಸಮಸ್ತ ಜೈನ ಸಂಘಟನೆಗಳು ಇವರ ಸಂಯುಕ್ತಾಶ್ರಯದಲ್ಲಿ ಸ್ಟೇಶನ್ ರಸ್ತೆ ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಕ್ಷಮಾವಳಿ ಹಾಗೂ ಆರತಿ ಸಭಾ ಕಾರ್ಯಕ್ರಮದಲ್ಲಿ ಪ. ಪೂ. ಅಭಿಕ್ಷ ಭಾಸ್ಕರ ವಾತ್ಸಲ್ಯಮೂರ್ತಿ 108 ಪುಣ್ಯಸಾಗರ ಮುನಿಮಹಾರಾಜರ ಆರ್ಶೀವಾದವನ್ನ ಶಾಸಕ ಎನ್. ಎಚ್. ಕೋನರೆಡ್ಡಿ ಅವರು ಪಡೆದುಕೊಂಡರು. ಈ ಸಂದರ್ಭದಲ್ಲಿ ವಿ. …
Read More »ಸ್ವಚ್ಛತಾ ಸೇವೆಗೈಯುವ ಪೌರಕಾರ್ಮಿಕರಿಗೆ ಸನ್ಮಾನ
ಧಾರವಾಡ: ಪೌರಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ಧಾರವಾಡದ ಮಹಾತ್ಮ ಬಸವೇಶ್ವರ ನಗರದಲ್ಲಿ ಸೋಮವಾರ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸ್ವಚ್ಛತಾ ಸೇವೆಗೈಯುವ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಮಾತನಾಡಿ, ಪ್ರತಿನಿತ್ಯ ಪೌರಕಾರ್ಮಿಕರು ಮಾಡುವ ಸೇವೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಡಾ. ಎಸ್. ಆರ್ ರಾಮನಗೌಡರ, ಬಸವರಾಜ ಕೆಂಚನಳ್ಳಿ, ಶೇಕರ ಕವಳಿ, ಶ್ರೀಕಾಂತ ಕ್ಯಾತಪ್ಪನವರ, ಅಶೋಕ ಶೆಟ್ಟರ ಸೇರಿದಂತೆ ಹಲವರು ಇದ್ದರು.
Read More »ಸಿಡಿಲಿಗೆ ಓರ್ವ ರೈತ ಬಲಿ
ಧಾರವಾಡ: ಸಿಡಿಲಿಗೆ ಓರ್ವ ರೈತ ಬಲಿಯಾಗಿರುವ ಘಟನೆ ಧಾರವಾಡ ತಾಲೂಕಿನ ಹನುಮನಹಾಳ ಗ್ರಾಮದಲ್ಲಿ ನಡೆದಿದೆ. ಭೀಮನಗೌಡ ಮಲ್ಲನಗೌಡ ಪಾಟೀಲ (65) ಎಂಬುವವರೇ ಸಿಡಿಲಿಗೆ ಬಲಿಯಾದವರು. ಭೀಮನಗೌಡ ಅವರು ಆಕಳನ್ನು ತೆಗೆದುಕೊಂಡು ತಮ್ಮ ಹೊಲಕ್ಕೆ ಹೋಗಿ ಶೇಂಗಾ ಸೋಸುವ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ವಿಪರೀತ ಮಳೆಯಾಗಲು ಆರಂಭಿಸಿದ್ದರಿಂದ ಭೀಮನಗೌಡ ಅವರು ಆಕಳನ್ನು ತೆಗೆದುಕೊಂಡು ಮರಳಿ ಮನೆ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಅವರಿಗೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಗರಗ …
Read More »ಕೃಷಿ ಮೇಳದ ಉದ್ಘಾಟನೆಗೆ ಬರುವಂತೆ ಕುಲಪತಿಗಳು ಹೋಗಿ ಸಿಎಂಗೆ ಆಹ್ವಾನ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ : ಲಾಡ್
ಧಾರವಾಡ: ಕೃಷಿ ಮೇಳದ ಉದ್ಘಾಟನೆಗೆ ಬರುವಂತೆ ಕುಲಪತಿಗಳು ಹೋಗಿ ಸಿಎಂಗೆ ಆಹ್ವಾನ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಕೃಷಿ ಸಚಿವರು ವಾರಣಾಸಿಗೆ ಹೋಗಿರುವುದರಿಂದ ಅವರೂ ಬಂದಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿ ಕುಲಪತಿಗಳು ರಿಸರ್ಚ್ ಮಾಡಿದ್ದಾರೆ. ಅವರ ಬಳಿ ಅಂಕಿ ಸಂಖ್ಯೆ ಇರಬೇಕು. ಕೃಷಿ ವಿವಿಯಲ್ಲಿ ಎಷ್ಟು ಮೇಳಗಳು ಆಗಿವೆ. ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದರ …
Read More »ಧಾರವಾಡದಲ್ಲಿ ವಿಶ್ವ ಶಾಂತಿ” ಎಂಬ ಹೆಸರಿನಡಿ ಜಾಗೃತಿ ಜಾಥಾ
ಧಾರವಾಡ: ಧಾರವಾಡದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೆ.ಎಚ್.ಕಬ್ಬರ ತಾಂತ್ರಿಕ ಶಿಕ್ಷಣ ಸಂಸ್ಥೆ ವತಿಯಿಂದ “ವಿಶ್ವ ಶಾಂತಿ” ಎಂಬ ಹೆಸರಿನಡಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ಜಾಥಾ ಕೆಸಿಡಿ ಸರ್ಕಲ್ನಿಂದ ಆರಂಭವಾಗಿ ಜುಬ್ಲಿ ಸರ್ಕಲ್ ಮಾರ್ಗವಾಗಿ ಭಾರತೀಯ ರೆಡ್ ಕ್ರಾಸ್ ಕಚೇರಿವರೆಗೆ ಸಾಗಿತು. ಈ ಜಾಥಾದಲ್ಲಿ ಪಾಲ್ಗೊಂಡಿದ್ದ ಮನಗುಂಡಿಯ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ, ವಿಶ್ವ ಶಾಂತಿ, ಆರೋಗ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ …
Read More »ಸಿಂಪಲ್ ಆಗಿ ಕೃಷಿ ಮೇಳಕ್ಕೆ ಭೇಟಿ: ಜನರ ಮೆಚ್ಚುಗೆಗೆ ಪಾತ್ರರಾದ ಕಮಿಷನರ್ ಎನ್ ಶಶಿಕುಮಾರ್
ಧಾರವಾಡ: ನಗರದಲ್ಲಿ ಈ ವರ್ಷವೂ ರೈತರ ಜಾತ್ರೆ ಭರ್ಜರಿಯಿಂದ ನಡೆದಿದ್ದು, ಹುಬ್ಬಳ್ಳಿ ಧಾರವಾಡ ನಗರದ ಪೊಲೀಸ್ ಕಮಿಷನರ್ ಆಗಿರುವ ಶಶಿಕುಮಾರ್ ಕೃಷಿ ಮೇಳಕ್ಕೆ ಜನಸಾಮಾನ್ಯರ ರೀತಿಯಲ್ಲಿ ಬಂದು ಕೃಷಿ ಉಪಕರಣ ಹಾಗೂ ಕೃಷಿ ಬೆಳೆಗಳು ಹಾಗೂ ಕೃಷಿಯಲ್ಲಿ ಆಗಿರುವ ಆವಿಷ್ಕಾರದ ಬಗ್ಗೆ ಮಾಹಿತಿ ಪಡೆದರು.ನಮ್ಮ ಕಮಿಷನರ್ ಇಷ್ಟು ಸಿಂಪಲ್ ಆಗಿ ರೈತರ ಜಾತ್ರೆಗೆ ಭೇಟಿ ನೀಡಿದ್ದು ಜನರ ಮೆಚ್ಚುಗೆ ಪಾತ್ರವಾಗಿದೆ.
Read More »ಕೃಷಿ ವಿಜ್ಞಾನಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಸಂತೋಷ ಲಾಡ್
ಧಾರವಾಡ : ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಂಶೋಧನೆಗಳು ವೇಗವಾಗಿ ಬಳಕೆಯಾಗುತಿದ್ದರೂ ನಮ್ಮ ದೇಶ ಹಾಗೂ ರಾಜ್ಯದ ಕೃಷಿ ಇಳುವರಿ ಇತರೇ ದೇಶಗಳಿಗೆ ಹೋಲಿಸಿದರೆ ನಿಗದಿತ ಪ್ರಮಾಣದಲ್ಲಿ ಏರಿಕೆಯಾಗದೆ ಇರುವ ಬಗ್ಗೆ ಕೃಷಿ ವಿಜ್ಞಾನಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ರಾಜ್ಯ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋμï ಲಾಡ್ ಅವರು ಸಲಹೆ ನೀಡಿದರು. ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದು 24ನೇ ಸಾಲಿನ ಕೃಷಿ ಮೇಳವನ್ನು ಉದ್ಘಾಟಿಸಿ ಹಾಗೂ ಸಾಧಕ ಕೃಷಿಕರಿಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





