ಧಾರವಾಡ: ಸೆಪ್ಟೆಂಬರ್ 17ರಂದು ಭಗವಾನ್ ಶ್ರೀ ವಿಶ್ವಕರ್ಮ ಜಯಂತಿಯ ಅಂಗವಾಗಿ ತಾಲೂಕ್ ಕಛೇರಿಯ ಸಭಾಭವನದಲ್ಲಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮೇಯರ್ ಬಡಗೇರ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಜರುಗಿತು. ಈ ಸಭೆಯಲ್ಲಿ, ಸಮಾಜದ ಮುಖಂಡರ ಹಾಗೂ ತಾಲೂಕ್ ಕಛೇರಿ ಅಧಿಕಾರಿಗಳ ಜೊತೆ ಸಲಹೆ ಸೂಚನೆಗಳನ್ನು ಚರ್ಚಿಸಿದರು. ಈ ಸಂದರ್ಭದಲ್ಲಿ ವಿಶ್ವ ಕರ್ಮ ಸಮಾಜದ ಮುಖಂಡರು ಗುರು ಹಿರಿಯರು ಭಾಗಿಯಾಗಿದ್ದರು.
Read More »ಸಿಲಿಂಡರ್ ಸ್ಪೋಟಗೊಂಡು ಮನೆಗೆ ಎಂ ಆರ್ ಪಾಟಿಲ್ ಭೇಟಿ
ಕುಂದಗೋಳ : ತಾಲೂಕಿನ ರೊಟ್ಟಿಗವಾಡ ಗ್ರಾಮದ ತೀರ್ಥಯ್ಯ ಹಿರೇಮಠ ಮನೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಮನೆಯ ನಾಲ್ಕು ಸದಸ್ಯರಿಗೆ ಬೆಂಕಿ ತಗುಲಿ ಗಾಯಗೊಂಡ ಹಿನ್ನಲೆಯಲ್ಲಿ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎಂ ಆರ್ ಪಾಟಿಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಗಾಯಾಳುಗಳು ಹುಬ್ಬಳ್ಳಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡಿಯುತ್ತಿದ್ದು, ಆಸ್ಪತ್ರೆ ಹಿರಿಯ ವೈದ್ಯಾಧಿಕಾರಿಗಳಿಗೆ ಮಾತನಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ಈ ವೇಳೆ ತಾಲೂಕು ಆಡಳಿತ ಅಧಿಕಾರಿಗಳು ಹಾಗೂ ಗ್ರಾಮಸ್ಥರು …
Read More »ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಗೌಪ್ಯ ಸಭೆ
ಹುಬ್ಬಳ್ಳಿ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ರಾಯಣ್ಣ ಬ್ರಿಗೇಡ್ ಸಂಘಟನೆಗೆ ಮರು ಜೀವ ಕೊಡುವ ಲಕ್ಷಣಗಳು ಕಾಣುತ್ತಿವೆ. ಹುಬ್ಬಳ್ಳಿಯ ಹೊರವಲಯದ ಖಾಸಗಿ ಹೋಟೆಲ್ವೊಂದರಲ್ಲಿ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ನಡೆದ ಗೌಪ್ಯ ಸಭೆ ಇದಕ್ಕೆ ಪುಷ್ಠಿ ನೀಡುತ್ತಿದೆ. ರಾಜ್ಯಾದ್ಯಂತ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಕುರಿತು ಚರ್ಚೆ ನಡೆಯುತ್ತಿದ್ದು, ಸೆಪ್ಟೆಂಬರ್ 22ರಂದು ಕೂಡಲಸಂಗಮದಲ್ಲಿ ಸಂಘಟನಾ ಸಭೆಗೆ ನಿರ್ಧಾರ ಮಾಡಲಾಗಿದೆ. ಯಾವುದೇ ರೀತಿಯ ಭಿನ್ನಾಭಿಪ್ರಾಯ ಅಧಿಕಾರದ ಲಾಲಸೆಗೆ ಒಳಗಾಗದಂತೆ ಸಂಘಟನೆಗೆ ಕೆಲವರು ಸಲಹೆ ನೀಡಿದ್ದಾರೆ. …
Read More »ಪತ್ರಕರ್ತ ರಾಜು ಅಂಗಡಿ ನಿಧನ : ಪತ್ರಕರ್ತ ಸಂಘದಿಂದ ಸಂತಾಪ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ದಲ್ಲಿ ಬಿಗ್ ಟಿವಿ ನ್ಯೂಸ್ ಹಾಗೂ ಹಲವಾರು ವಾಹಿನಿಯಲ್ಲಿ ಕೆಲಸ ಹಾಗೂ ಕೊಪ್ಪಳದಲ್ಲಿ ಟಿವಿ 5 ಕ್ಯಾಮೆರಾ ಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜು ಅಂಗಡಿ ಇಂದು ಮುಂಜಾನೆ ನಿಧನರಾಗಿದ್ದಾರೆ. ಇನ್ನೂ ಇವರಿಗೆ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆ ದಾಖಲು ಮಾಡಿದ್ದರು, ಆದರೆ ಇಂದು ಚಿಕಿತ್ಸೆ ಫಲಕಾರಿ ಆಗದೆ ನಿಧನರಾಗಿದ್ದು, ಇವರ ಆತ್ಮಕ್ಕೆ ಶಾಂತಿ ಸಿಗಲೆಂದು ಧಾರವಾಡ ಜಿಲ್ಲಾ ಪತ್ರಕರ್ತ ಸಂಘದಿಂದ ಸಂತಾಪ ಸೂಚಿಸಿದ್ದಾರೆ.
Read More »ಮಹದಾಯಿ, ಕಳಸಾ-ಬಂಡೂರಿ ಯೋಜನೆ : ಠರಾವು ಪಾಸ್
ಧಾರವಾಡ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿ ಧಾರವಾಡದ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರವು ಈ ಯೋಜನೆ ಜಾರಿ ಸಂಬಂಧ ಕಳುಹಿಸಿದ್ದ ಪ್ರಸ್ತಾವನೆಯನ್ನು ರಾಷ್ಟ್ರೀಯ ವನ್ಯ ಜೀವ ಮಂಡಳಿಯು ತಿರಸ್ಕಾರ ಮಾಡಿದೆ. ಆದರೆ ಅದೇ ಮಂಡಳಿಯು ಛತ್ತೀಸ್ಗಡ-ಗೋವಾ ವಿದ್ಯುತ್ ಮಾರ್ಗಕ್ಕೆ ಒಪ್ಪಿಗೆ ಕೊಟ್ಟಿದೆ. ಇದರಿಂದ …
Read More »ಕೆಡಿಪಿ ಸಭೆ : ಗರಂ ಆದ ಸಂತೋಷ ಲಾಡ್
ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯಿತು. ಈ ಸಭೆಯಲ್ಲಿ ಸಚಿವ ಸಂತೋಷ ಲಾಡ್ ಅವರು ಕೆಲ ಅಧಿಕಾರಿಗಳ ಮೇಲೆ ಅಕ್ಷರಶಃ ಗರಂ ಆದರು. ತೋಟಗಾರಿಕಾ ಇಲಾಖೆಯಲ್ಲಿ ಸಿಬ್ಬಂದಿ ಬಗ್ಗೆ ದಿನಚರಿ ಬರೆದಿಡುವ ವಿಚಾರಕ್ಕೆ ಸಂಬಂಧಿಸಿದಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳನ್ನು ಸಚಿವರು ಫುಲ್ ತರಾಟೆಗೆ ತೆಗೆದುಕೊಂಡರು. ಇಲಾಖೆಯಲ್ಲಿ ಸರಿಯಾಗಿ ದಿನಚರಿ ಬರೆದಿಡದ ಹಿನ್ನೆಲೆ ಅಧಿಕಾರಿಗಳು ಸಚಿವರಿಗೆ ಸಬೂಬು ಹೇಳಲು …
Read More »ಪೋಲಿಸ್ ಸಿಬ್ಬಂದಿ ಧ್ವನಿಯಲ್ಲಿ ಮೂಡಿ ಬಂದ ಬೊಂಬೆ ಹೇಳುತೈತೆ
ಹುಬ್ಬಳ್ಳಿ: ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಠಾಣೆಯ ಸಿಬ್ಬಂದಿ ಡಾ.ಪುನೀತ್ ರಾಜಕುಮಾರ್ ಅವರ ರಾಜಕುಮಾರ ಸಿನಿಮಾದ ಬೊಂಬೆ ಹೇಳುತೈತೆ ಹಾಡನ್ನು ಹಾಡುವ ಮೂಲಕ ವಿಶೇಷವಾಗಿ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲದೇ ನಟ ಡಾ. ವಿಷ್ಣುವರ್ಧನ್ ಅವರ ನೂರೊಂದು ನೆನಪು, ಎದೆಯಾಳದಿಂದ ಎಂಬ ಹಾಡನ್ನು ಹಾಡಿ ವಿಶೇಷವಾಗಿ ಹಬ್ಬವನ್ನು ಆಚರಿಸಿದ್ದಾರೆ. ಇನ್ನೂ ಪೊಲೀಸ್ ಸಿಬ್ಬಂದಿ ಹಾಡಿರುವ ಹಾಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ …
Read More »ಜಿ ಪರಮೇಶ್ವರ ಹೇಳಿಕೆಗೆ ಕಿಡಿಕಾರಿದ ಜೋಶಿ
ಹುಬ್ಬಳ್ಳಿ: ನಾಗಮಂಗಲದಲ್ಲಿ ಶ್ರೀಗಣೇಶ ವಿಸರ್ಜನೆ ಸಂದರ್ಭದಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಹೋಮ್ ಮಿನಿಸ್ಟರ್ ಜಿ ಪರಮೇಶ್ವರ ಅವರ ಈ ಗಲಾಟೆ ಸಣ್ಣ ಮಟ್ಟದ್ದು ಎಂಬ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು. ನೆಲಮಂಗಲದಲ್ಲಿ ಸಾಕಷ್ಟು ಅಂಗಡಿಗಳು ಬೆಂಕಿಗೆ ಆಹುತಿಯಾಗಿದೆ. ತಲ್ವಾರ್ ಹಾಗೂ ಮಾರಕಾಸ್ತ್ರಗಳು ಓಡಾಡಿವೆ. ಹಲವು ಜನರಿಗೆ ಗಾಯವಾಗಿದೆ. ಇಷ್ಟೆಲ್ಲ ಆದ್ರೂ ಹೋಮ್ ಮಿನಿಸ್ಟರ್ ಇದೊಂದು ಸಣ್ಣ ಗಲಾಟೆ ಎಂದು ಹೇಳ್ತಾರೇ! ಎಂದು ಜೋಶಿ ಖಂಡಿಸಿದರು. …
Read More »ನಾಳೆ ಅದ್ದೂರಿಯಾಗಿ ನಡೆಯಲಿರುವ ಗಣೇಶನ ವಿಸರ್ಜನಾ ಮೆರವಣಿಗೆ
ಹುಬ್ಬಳ್ಳಿ: ವಿದ್ಯಾನಗರದ ಲೋಕಪ್ಪನ ಹಕ್ಕಲದಲ್ಲಿ ಶ್ರೀ ವರಸಿದ್ದಿ ವಿನಾಯಕ ಯುವಕ ಮಂಡಳದಿಂದ ಪ್ರತಿಷ್ಟಾಪಿಸಲಾಗಿರುವ ಗಣೇಶನ ವಿಸರ್ಜನಾ ಮೆರವಣಿಗೆ ನಾಳೆ ಶುಕ್ರವಾರ ವೈಭವದಿಂದ ನಡೆಯಲಿದೆ. ಮಂಟಪದಿಂದ ಸಂಜೆ 5ರಿಂದ ವಿಸರ್ಜನಾ ಮೆರವಣಿಗೆ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ. ಲೋಕಪ್ಪನ ಹಕ್ಕಲದ ಗಣೇಶ ಭಕ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Read More »ಕೆಡಿಪಿ ಸಭೆ ಅಪೂರ್ಣ ಮಾಹಿತಿ ತಂದ ಅಧಿಕಾರಿಗಳಿಗೆ ತರಾಟೆ
ಧಾರವಾಡ: ಕೆಡಿಪಿ ಸಭೆಯು, ಜಿಲ್ಲೆಯಲ್ಲಿ ಅನುμÁ್ಠನದಲ್ಲಿರುವ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಮತ್ತು ಜಿಲ್ಲೆಯ ಸಮಸ್ಯೆಗಳ ಬಗ್ಗೆ ಆಧ್ಯತೆ ಮೇಲೆ ಚರ್ಚೆ ಆಗಬೇಕು. ಅಧಿಕಾರಿಗಳು ಸಭೆಗೆ ಅಪೂರ್ಣ ಮಾಹಿತಿ ತಂದರೆ, ಸಭೆಯ ಉದ್ದೇಶ ಈಡೆರುವುದಿಲ್ಲ. ರೈತರ ಬಗ್ಗೆ, ಬಡವರ ಬಗ್ಗೆ ಕಳಕಳಿ ಇರಬೇಕು. ಅಧಿಕಾರಿಗಳು ಜವಾಬ್ದರಿಯಿಂದ ಸಭೆಗೆ ಸರಿಯಾದ ಮಾಹಿತಿ ಮತ್ತು ಉತ್ತರ ನೀಡಬೇಕೆಂದು ಸಚಿವ ಸಂತೋಷ ಲಾಡ್ ಅವರು ಖಡಕ್ ಎಚ್ಚರಿಕೆ ನೀಡಿದರು. ಅವರು ಇಂದು ಬೆಳಿಗ್ಗೆ ಧಾರವಾಡ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





