Breaking News

Shaikh BigTv

ಅಂಜುಮನ್ ಇಸ್ಲಾಂ ಸಂಸ್ಥೆಗೆ ನಾಮ ನಿರ್ದೇಶನ ಸದಸ್ಯರ ನೇಮಕ

ಹುಬ್ಬಳ್ಳಿ: ನಗರದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಸಂಸ್ಥೆಗೆ ನಾಮ ನಿರ್ದೇಶನ ಸದಸ್ಯರಾಗಿ ನೇಮಕಗೊಂಡರು. ರಾಜ್ಯ ಸರ್ಕಾರದ ಕಲಘಟಗಿ ಹಾಗೂ ಇತರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಬ್ದುಲ್ ಗನಿ ವಲಿಅಹ್ಮದ ಅವರಿಗೆ ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ್‌ ಮಹಾದೇವಪ್ಪನವ‌ರ್ ನೇತೃತ್ವದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕಲಂದ‌ರ್ ಮುಲ್ಲಾ, ಸತ್ಯಪ್ಪ ಕಂಡೆಕರ್, ಅಹಮದ್‌ ಮುಲ್ಲಾ, ಸಮೀ‌ರ್ ಖಾನ್, ಇಮ್ರಾನ್ ಖಾನ್, ಉಪಸ್ಥಿತರಿದ್ದರು.

Read More »

ಅಕ್ರಮವಾಗಿ ಮಣ್ಣು ತೆಗೆದು ವಂಚನೆ: ತನಿಖೆ ಮಾಡುವಂತೆ ಒತ್ತಾಯ

ನವಲಗುಂದ : ನವಲಗುಂದ ಕ್ಷೇತ್ರದಲ್ಲಿ ಚಕ್ಕಡಿ ದಾರಿಯ ನೆಪದಲ್ಲಿ ಸರಕಾರಿ ಸ್ವಾಮ್ಯದ ಗುಡ್ಡ ಮತ್ತು ಭೂಮಿಯಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸರಕಾರಕ್ಕೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಮಾಜಿ ಸಚಿವ. ಶಂಕರಪಾಟೀಲ ಮುನೇನಕೊಪ್ಪ ಒತ್ತಾಯಿಸಿದ್ದಾರೆ. ನವಲಗುಂದ ಪಾರಂಪರಿಕ ಗುಡ್ಡದ ಮಣ್ಣು ಹಾಗೂ ನೀರಾವರಿ ಇಲಾಖೆಯ ಮಣ್ಣು ತೆಗೆದಿರುವ ಬಗ್ಗೆ ದಾಖಲೆಗಳ ಸಮೇತ ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ವಿವರಿಸಿದರು.

Read More »

ಅಗ್ನಿ ಅವಘಡದಿಂದ ರಕ್ಷಣೆ ಪಡೆಯುವ ತಂತ್ರಗಳ ಬಗ್ಗೆ ಪ್ರಾತ್ಯಾಕ್ಷಿತೆ

ಕುಂದಗೋಳ : ಹಿರೆನೇರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗ್ನಿ ಅವಘಡ ಸಂದರ್ಭ ಭಯ ಪಡದೆ ಅಗ್ನಿ ಅವಘಡದಿಂದ ರಕ್ಷಣೆ ಪಡೆಯುವ ತಂತ್ರಗಳ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಅದರ ಕುರಿತು ಪ್ರಾತ್ಯಾಕ್ಷಿತೆ ನಡೆಸಿದರು. ಮೊದಲು ಶಾಲೆ ತರಗತಿ ಕೊಠಡಿಗಳಲ್ಲಿ ಮಕ್ಕಳಿಗೆ ಶಿಕ್ಷಕರು ಪಾಠ ಮಾಡುವ ರೀತಿಯಲ್ಲಿಯೆ ಅಗ್ನಿಶಾಮಕ ದಳದ ಅಧಿಕಾರಿಗಳು ಅಗ್ನಿ ಅವಘಡ ಹೇಗೆ ? ಸಂಭವಿಸುತ್ತದೆ ಅದಕ್ಕೆ ಕಾರಣಗಳೇನು ? ಅಗ್ನಿ ಅವಘಡದಿಂದ ಪಾಲಾಗುವ ಮುನ್ಸೂಚನೆ ತಿಳಿಸಿದರು. …

Read More »

ಬ್ಯಾಂಕ್ ವ್ಯವಹಾರಗಳ ಕುರಿತು ವಿಭಿನ್ನ ರೀತಿಯಲ್ಲಿ ಅರಿವು

ಧಾರವಾಡ: ನಗರದ ಮುಖ್ಯ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾದ ತರಬೇತಿ ಕೇಂದ್ರದ ನೂತನ ತರಬೇತಿದಾರ ಸಿಬ್ಬಂದಿಗಳಿಂದ ಬ್ಯಾಂಕ್ ವ್ಯವಹಾರಗಳ ವಿವಿಧ ಯೋಜನೆಗಳು ಹಾಗೂ ಅರ್ಥಿಕತೆ ಕುರಿತು ಕೆಸಿಡಿ ಹತ್ತಿರ ಬೀದಿ ನಾಟಕ ಮೂಲಕ ಅರಿವು ಕಾರ್ಯಕ್ರಮಗಳನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

Read More »

ಮೀಟರ್ ಬಡ್ಡಿ ದಂಧೆಗೆ ಬೇಸತ್ತು ಬಡಜೀವ ಬಲಿ: ಆತ್ಮಹತ್ಯೆ ದಾರಿ ಹಿಡಿದ ಸುಜಿತ್..!

Featured Video Play Icon

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮೀಟರ್ ದಂಧೆ ದೊಡ್ಡಮಟ್ಟದ ಬೇರು ಬಿಟ್ಟಿದೆ. ಅದೆಷ್ಟೋ ಬಡ ಕುಟುಂಬಗಳು ಮೀಟರ್ ಬಡ್ಡಿ ದಂಧೆಗೆ ಜೀವವನ್ನೆ ಕಳೆದುಕೊಂಡಿವೆ. ಈ ನಿಟ್ಟಿನಲ್ಲಿ ಪೊಲೀಸ್ ಕಮೀಷನರ್ ಮೀಟರ್ ಬಡ್ಡಿ ದಂಧೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಹೀಗಿದ್ದರೂ ಕೂಡ ಮೀಟರ್ ಬಡ್ಡಿ ದಂಧೆಯ ಕರಾಳತೆ ಮಾತ್ರ ಕಡಿಮೆಯಾಗಿಲ್ಲ.ಸಾಲಗಾರರ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬೆಂಗೇರಿಯ ಚೇತನಾ ಕಾಲೋನಿಯಲ್ಲಿ ನಡೆದಿದೆ. ಮೃತನನ್ನು ಜಮಖಂಡಿ ಮೂಲದ ಸುಜಿತ್ ಗುಳ್ಳಾದ್ …

Read More »

ಗಣೇಶ ಮೂರ್ತಿ ಪ್ರತಿಷ್ಠಾಪನೆ : ಮಹತ್ವದ ಸೂಚನೆ ನೀಡಿದ ಹೆಸ್ಕಾಂ

ನವಲಗುಂದ : ಶಹರ ಹಾಗೂ ತಾಲೂಕಿನ ಗ್ರಾಮಗಳಲ್ಲಿ ಸಾರ್ವಜನಿಕ ಗಣೇಶ ಮಂಡಳಿಯವರು ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ಹೆಸ್ಕಾಂ ಕಂಪನಿಯ ವಿದ್ಯುತ್ ಲೈನ್ ಕೆಳಗಡೆ ಹಾಗೂ ಲೈನಿನ ಅಕ್ಕಪಕ್ಕದಲ್ಲಿ ಪೆಂಡಾಲನ್ನು ಹಾಕಬಾರದು ಮತ್ತು ಸುರಕ್ಷತಾ ಅಂತರವನ್ನು ಕಾಯ್ದುಕೊಂಡು ಪೆಂಡಾಲ ಹಾಕಿಕೊಳ್ಳಬೇಕು ಎಂದು ಹೆಸ್ಕಾಂ ಶಾಖಾಧಿಕಾರಿ ಹಣಮರಡ್ಡಿ ರೋಗಿ ತಿಳಿಸಿದ್ದಾರೆ. ಗಣೇಶ ಮಂಡಳಿ ಆಯೋಜಕರು ಅನಧಿಕೃತವಾಗಿ ವಿದ್ಯುತ್ತನ್ನು ಬಳಸದೆ ತಾತ್ಕಾಲಿಕ ಸ್ಥಾವರವನ್ನು ಪಡೆದು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ವಿದ್ಯುತ್ತನ್ನು ಪಡೆಯಬಹುದು. …

Read More »

ಕೇಶ್ವಾಪೂರ ಭಾಗದಲ್ಲಿಯೂ ಮರುಳು ಮಾಫಿಯಾ ಜೋರು: ಅಧಿಕಾರಿಗಳೇ ಕಣ್ಣು ಬಿಟ್ಟು ನೋಡಿ…

Featured Video Play Icon

ಅಕ್ರಮ ಮರಳಿಗೆ ಸಕ್ರಮ ಪಾಲುದಾರಿಕೆ!!!!!! ಅವಳಿನಗರದ ಅನಧಿಕೃತ ಮರಳು ದಂಧೆ!!!!! ಟಫ್ ಕಮಿಷನರ್ ಬಂದ್ರು ಅವರ ಕಣ್ಣಿಗೆ ಉಸಕು ಚೆಲ್ಲುತ್ತಿರುವ ಖತರ್ನಾಖ್ ಪೊಲೀಸರು..???? ತಿಂಗಳ ಕಮಿಷನ್.. ಊರ ಹೊರಗೆ ವ್ಯವಹಾರ!!! ಮೀಡಿಯಾ ಪಾಲುದಾರರಿಗೆ ಇನ್ ಟೈಮ್ ಮುಟ್ಟುತ್ತೆ ಮಂತ್ಲಿ ಕಮಿಷನ್!!!! ಕೇಶ್ವಾಪೂರ ಹಾಗು ಗಬ್ಬೂರ್ ಬೈ ಪಾಸ್ ಮತ್ತು ಕಾರವಾರ ರೋಡ್ ನಲ್ಲಿ ಮರಳು ದಂಧೆಯ ಹೀರೋಗಳ ರಾತ್ರಿ ಡ್ಯೂಟಿ!!!! ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅನಧಿಕೃತ ಮರಳು ಮಾಫಿಯಾ …

Read More »

ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಸಿಎಂಗೆ ಮನವಿ ಸಲ್ಲಿಕೆ

ಹುಬ್ಬಳ್ಳಿ : ವಿವಿಧ ಬೇಡಿಕೆ ಹಾಗೂ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯ‌ರ್ ರಾಮಣ್ಣ ಬಡಿಗೇರ ಅವರು ಹುಬ್ಬಳ್ಳಿಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡರು. ನಂತರ ಸಿಎಂ ಅವರಿಗೆ ಸ್ವಾಗತ ಕೋರಿ ವಿಶೇಷವಾಗಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಉಪಮೇಯರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read More »

ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ

ಕಲಘಟಗಿ : ದೇವಿಕೊಪ್ಪ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಒಂಬತ್ತು ಗಂಟೆಗೆ ಸರಣಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕೆಎಸ್ ಆರ್‌ಟಿ ಸಿ ಬಸ್, ಎರಡು ಕಾರಗಳು ಹಾಗೂ ಒಂದು ಟ್ಯಾಂಕರ್ ಲಾರಿ ಜಖಂಗೊಂಡಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿಸದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.. ಅದೃಷ್ಟವಶಾತ್ ಯಾವದೇ ಪ್ರಾಣಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕಲಘಟಗಿ ಪೊಲೀಸ್ ಠಾಣೆಯ ಸಿಬ್ಬಂದಿ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Read More »

ವಿವಿಧ ಬೇಡಿಕೆಗಳಿಗಾಗಿ ತಹಶೀಲ್ದಾರ ಮುಖಾಂತರ ಸಿಎಂ ಮನವಿ ಸಲ್ಲಿಕೆ

ನವಲಗುಂದ: ನಿವೃತ್ತ ನೌಕರರ ವತಿಯಿಂದ ವಿವಿಧ ಬೇಡಿಕೆಗಳಿಗಾಗಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರು ಹಾಗೂ ನಿವೃತ್ತ ಶಿಕ್ಷಕರಾದ ಎನ್.ಎನ್.ಹಾಲಿಗೇರಿ 7 ನೇ ವೇತನ ಆಯೋಗದಲ್ಲಿ ನಿವೃತ್ತ ನೌಕರರಿಗೆ ಅನ್ಯಾಯವಾಗಿರುವ ನ್ಯೂನತೆಗಳನ್ನು ಸರಿಪಡಿಸಿ ಆರ್ಥಿಕ ಸೌಲಭ್ಯಗಳನ್ನು ಒದಗಿಸಬೇಕೆಂದು ಪರಿವರ್ತಿತ ಪಿಂಚಣೆ, ನಿವೃತ್ತಿ ಅಥವಾ ಮರಣ ಉಪಧಾನ ಮತ್ತು ಗಳಿಕೆ ರಜೆ ಸೌಲಭ್ಯವನ್ನು ನೀಡಬೇಕೆಂದು ಹೇಳಿದರು. ನಿವೃತ್ತಿ ನೌಕರರನ್ನು ಸರಕಾರ ಕಡೇಗಣಿಸಬಾರದು ನಮ್ಮ ಬೇಡಿಕೆಗಳನ್ನು ಆದಷ್ಟು …

Read More »