ನವಲಗುಂದ: ಪಟ್ಟಣದ ತಾಲೂಕು ಪಂಚಾಯತ ಆವರಣದಲ್ಲಿ ಇರುವ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಅವರ ಕಚೇರಿ ಎದುರು ಒಳ ಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ತಾಲೂಕಾ ಮಾದಿಗ ಮತ್ತು ಮಾದಿಗ ಉಪಜಾತಿಗಳ ಸಂಘಟನೆ ಒಕ್ಕೂಟ ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು, ಅಧಿವೇಶನದಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಸಂಬಂಧ ಧ್ವನಿ ಎತ್ತಬೇಕು. ಚಳಿಗಾಲದ ಅಧಿವೇಶನದಲ್ಲಿ ಕಾಲಹರಣ ಮಾಡದೇ ಮಾದಿಗ ಸಮಾಜಕ್ಕೆ ಸಿಗಬೇಕಾದ ಸವಲತ್ತುಗಳು ಹಾಗೂ ಒಳ ಮೀಸಲಾತಿ ಜಾರಿ …
Read More »ಅಮೃತೇಶ್ವರ ಮಹಾದ್ವಾರ ಉದ್ಘಾಟಿಸಿದ ಶಾಸಕ ಕೋನರಡ್ಡಿ
ಅಣ್ಣಿಗೇರಿ: ಪಟ್ಟಣದ ಅಗಸಿ ಓಣಿಯಲ್ಲಿನ ಶ್ರೀ ಅಮೃತೇಶ್ವರ ಮಹಾದ್ವಾರವನ್ನು ಶಾಸಕ ಎನ್. ಎಚ್.ಕೋನರಡ್ಡಿ ಅವರು ಸ್ಥಳೀಯ ದಾಸೋಹ ಮಠದ ಡಾ.ಶಿವಕುಮಾರ ಮಹಾಸ್ವಾಮಿಗಳು. ಕಮಲಾಪುರ ದರ್ಗಾದ ಸಯ್ಯದ್ ಸಜ್ಜಾದ ಖಾದ್ರಿ ಪೀರಾ ಅವರುಗಳ ಸಾನಿಧ್ಯದಲ್ಲಿ ಉದ್ಘಾಟನೆ ಮಾಡಿದರು. ಈ ವೇಳೆ ಶ್ರೀ ಅಮೃತೇಶ್ವರ ದೇವಸ್ಥಾನದ ಧರ್ಮದಶಿ ಲಿಂಗರಾಜ ಕುಲಕರ್ಣಿ, ಪುರಸಭೆ ಮುಖ್ಯಾಧಿಕಾರಿ ವಾಯ್ ಜಿ ಗದ್ದಿಗೌಡರ,ಪುರಸಭೆ ಸರ್ವ ಸದಸ್ಯರು ನಾಮನಿರ್ದೇಶತ ಸದಸ್ಯರು ಅಧಿಕಾರಿಗಳು ಸಿಬ್ಬಂದಿ ವರ್ಗ ಸೇರಿದಂತೆ ಸಮಸ್ತ ಜನತೆ ಪಾಲ್ಗೊಂಡಿದ್ದರು.
Read More »ಎಮ್.ಆರ್.ಪಾಟೀಲ ಅವರಿಗೆ ಮಾದಿಗ ಮತ್ತು ಉಪಜಾತಿಗಳ ಸಂಘಟನೆ ಒಕ್ಕೂಟ ಮನವಿ
ಕುಂದಗೋಳ : ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು ಒಳ ಮೀಸಲಾತಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದರು, ರಾಜ್ಯದ ಕಾಂಗ್ರೆಸ್ ಸರ್ಕಾರ ನಮ್ಮ ಸಮಾಜಕ್ಕೆ ಒಳ ಮೀಸಲಾತಿ ನೀಡದೆ ಕಾಲಹರಣ ಮಾಡುತ್ತಿದ್ದು ಅಧಿವೇಶನದಲ್ಲಿ ಈ ವಿಷಯ ಪ್ರಸ್ಥಾಪಿಸುವಂತೆ ಶಾಸಕ ಎಮ್.ಆರ್.ಪಾಟೀಲ ಅವರಿಗೆ ಮಾದಿಗ ಮತ್ತು ಉಪಜಾತಿಗಳ ಸಂಘಟನೆ ಒಕ್ಕೂಟ ಶನಿವಾರ ಮನವಿ ಮಾಡಿದರು. ಶಾಸಕರ ನಿವಾಸದ ಎದುರು ತಮಟೆ ಬಾರಿಸಿ ಮನವಿ ಪತ್ರ ನೀಡಿ ಆಗ್ರಹಿಸಿ, ಹರಿಯಾಣ ಸರ್ಕಾರ ಈಗಾಗಲೇ …
Read More »ಸಿಎಂ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು ಕೊಡ್ತಾರೆ : ಅರವಿಂದ್ ಬೆಲ್ಲದ
ಹುಬ್ಬಳ್ಳಿ: ಸಿಎಂ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು ಕೊಡ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಸ್ಲಿಮರೆಂದರೆ ಪ್ರೀತಿ. ಎಲ್ಲರ ಮೀಸಲಾತಿ ತೆಗೆದು ಅವರಿಗೆ ಕೊಡಲು ಹೊರಟಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನ್ನು ಪರಮೇಶ್ವರ್ ಸಮರ್ಥಿಸಿಕೊಂಡಿದ್ದಕ್ಕೆ ವಿರೋಧವಿದೆ. ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದಲ್ಲಿಗೆ ಇವರು ಮುತ್ತು ಕೊಡ್ತಾರೆ. ಡಿಜೆ ಹಳ್ಳಿ, …
Read More »ಕಾಂಗ್ರೆಸ್ನವರು ಸಂವಿಧಾನದ ಸುಖಾಸುಮ್ಮನೆ ಮಾತನಾಡುತ್ತಾರೆ:ಅರವಿಂದ್ ಬೆಲ್ಲದ ಆರೋಪ
ಹುಬ್ಬಳ್ಳಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಯಲ್ಲಿ ಬೈಬಲ್ ಹಿಡ್ಕೊಂಡು ಅಂಬೇಡ್ಕರ್ರವರ ಸಂವಿಧಾನದ ಬಗ್ಗೆ ಮಾತಾಡ್ತಾರೆ, ಕಾಂಗ್ರೆಸ್ನವರು ಸಂವಿಧಾನದ ಸುಖಾಸುಮ್ಮನೆ ಮಾತನಾಡುತ್ತಾರೆ. ಆದ್ರೆ ಮುಖ್ಯವಾಘಿ ಇವರ ಕೈಯಲ್ಲಿರೋದು ಬೈಬಲ್ ಎಂದು ಪ್ರತಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ ಆರೋಪ ಮಾಡಿದ್ದಾರೆ.
Read More »ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಬಿಜೆಪಿಯವರಿಗೆ ಆಸಕ್ತಿ ಇಲ್ಲಾ : ಡಿಕೆಶಿ
ಹುಬ್ಬಳ್ಳಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಸಿದ್ಧರಿದ್ದೇವೆ. ಆದ್ರೆ ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ. ನೀರಾವರಿ ಸೇರಿದಂತೆ ಎಲ್ಲ ವಿಚಾರವಾಗಿ ಚರ್ಚೆ ಮಾಡಲು ನಾವು ಸಿದ್ಧರಿದ್ದೇವೆ. ಆದ್ರೆ ಬಿಜೆಪಿಯವರಿಗೆ ರಾಜಕಾರಣವೇ ಮುಖ್ಯ. ಅವರಲ್ಲಿ ಯಾವುದೇ ಒಗ್ಗಟ್ಟಿಲ್ಲ ಉತ್ತರ ಕರ್ನಾಟಕಭಾಗದ ಚರ್ಚೆ ಮಾಡಲು ಅವರೇ ಸಿದ್ಧರಿಲ್ಲ ಎಂದು ಹುಬ್ಬಳ್ಳಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
Read More »ಹುಬ್ಬಳ್ಳಿಯಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ಬಸ್ ಗಳ ವ್ಯವಸ್ಥೆ
ಹುಬ್ಬಳ್ಳಿ: ಸೌದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ, ಹುಣ್ಣಿಮೆಯ ಅಂಗವಾಗಿ, ಇಂದಿನಿಂದ ಬರುವ ಅಮವಾಸ್ಯೆಯವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಹುಬ್ಬಳ್ಳಿಯಿಂದ ಯಲ್ಲಮ್ಮನಗುಡ್ಡಕ್ಕೆ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಿದ್ದಾರೆ. ಕಳೆದ ಶೀಗಿ ಹುಣ್ಣಿಮೆ, ದೀಪಾವಳಿ ಅಮವಾಸ್ಯೆ ಹಾಗೂ ನಂತರದ ಹುಣ್ಣಿಮೆಗಳ ಸಮಯದಲ್ಲಿ ಸೌದತ್ತಿಯ ಶ್ರೀ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಕಲ್ಪಿಸಲಾಗಿದ್ದ, ವಿಶೇಷ ನೇರ ಬಸ್ ಗಳಿಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ …
Read More »ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಕಾಮಗಾರಿ ಪರಿಶೀಲಿಸಿದ ಡಾ.ಶಾಲಿನಿ ರಜನೀಶ್
ಧಾರವಾಡ: ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಡಾ. ಶಾಲಿನಿ ರಜನೀಶ ಅವರು ಇಂದು ಬೆಳಿಗ್ಗೆ, ನರೇಂದ್ರ ಕ್ರಾಸ್ ದಿಂದ ಗಬ್ಬೂರ ವರೆಗಿನ ಬೈಪಾಸ್ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ರಾಷ್ಷ್ರೀಯ ಹೆದ್ದಾರಿ 48 ರಲ್ಲಿ ಧಾರವಾಡದ ನರೇಂದ್ರ ಕ್ರಾಸ್ ದಿಂದ ಹುಬ್ಬಳ್ಳಿಯ ಗಬ್ಬೂರ ವರೆಗೆ ಬರುವ ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ಅಗಲೀಕರಣದ ಕಾಮಗಾರಿಗೆ ಮೊದಲ ಹಂತದಲ್ಲಿ ಅಗತ್ಯವಿರುವ ಭೂಮಿ ಸ್ವಾದೀನಪಡಿಸಿಕೊಂಡು ನೀಡಿದರೂ, ಗುತ್ತಿಗೆದಾರ …
Read More »ಅಪರಾಧ ತಡೆ ಮಾಸಾಚರಣೆ
ಅಪರಾಧ ತಡೆ ಮಾಸಾಚರಣೆ ಅಂಗವಾಗಿ #ಧಾರವಾಡ ಉಪವಿಭಾಗದ ACP ಶ್ರೀ ಪ್ರಶಾಂತ ಸಿದ್ದನಗೌಡ್ರ ರವರು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ ಸೈಬರ್ ವಂಚನೆ, ಡ್ರಗ್ಸ್ ದುಷ್ಪರಿಣಾಮ, ರಸ್ತೆ ಸುರಕ್ಷತೆ ಮತ್ತು 112 ಸಹಾಯವಾಣಿ ಸಂಖ್ಯೆ ಕುರಿತು ಜಾಗೃತಿ ಮೂಡಿಸಿದರು.
Read More »ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠ ರಾಷ್ಟ್ರೀಯ ಲೋಕ ಅದಾಲತ್; ಒಟ್ಟು 235 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತ
ಧಾರವಾಡ : ಕರ್ನಾಟಕ ಉಚ್ಛ ನ್ಯಾಯಾಲಯದ ಧಾರವಾಡ ಪೀಠದಲ್ಲಿ ಇಂದು ರಾಷ್ಟ್ರೀಯ ಲೋಕ ಅದಾಲತ್ನ್ನು ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠದ ಹಿರಿಯ ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ ಕುಮಾರ್ ಅವರ ನೇತೃತ್ವದಲ್ಲಿ ಏರ್ಪಡಿಸಲಾಗಿತ್ತು. ಈ ಅದಾಲತನಲ್ಲಿ ನ್ಯಾಯಮೂರ್ತಿಗಳಾದ ಜೆ.ಎಮ್. ಖಾಜಿ ಮತ್ತು ಟಿ. ಜಿ. ಶಿವಶಂಕರೆಗೌಡ ಹಾಗೂ ಇವರೊಂದಿಗೆ ಲೋಕ ಅದಾಲತ್ ನ ಸದಸ್ಯರುಗಳಾದ ಎಮ್. ಟಿ. ಬಾಂಗಿ, ಅರ್ಚನಾ ಮಗದುಮ ಮತ್ತು ವಿ. ಜಿ. ದಳವಾಯಿ ಈ ರೀತಿಯಾಗಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





