Breaking News

Shaikh BigTv

ಕರ್ನಾಟಕ ಜನರ ಸಮಸ್ಯೆಗಳ ಆಲಿಸಿ ಇದರ ವಿಸ್ತ್ರತ ವರದಿ ಸಿದ್ಧಪಡಿಸಿ, ಸ್ಪೀಕರ್‌ಗೆ ನೀಡಲಾಗುವುದು: ಜಗದಂಬಿಕಾ ಪಾಲ

ಹುಬ್ಬಳ್ಳಿ: ವಕ್ಸ್‌ ಬೋರ್ಡ್ ಆಸ್ತಿ ಕಬಳಿಸುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕರ್ನಾಟಕ ಜನರ ಸಮಸ್ಯೆಗಳ ಆಲಿಸಿ ಇದರ ವಿಸ್ತ್ರತ ವರದಿ ಸಿದ್ಧಪಡಿಸಿ, ಸ್ಪೀಕರ್‌ಗೆ ನೀಡಲಾಗುವುದು ಎಂದು ವಕ್ಸ್ ಬೋರ್ಡ್ ಸಂಸದೀಯ ಜಂಟಿ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ ತಿಳಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ವಕ್ಸ್ ಬೋರ್ಡ್ ಕರ್ನಾಟಕದ ರೈತರು ಹಾಗೂ ಜನಸಾಮಾನ್ಯರ ಆಸ್ತಿಗಳನ್ನು ಕಬಳಿಕೆ ಮಾಡಲು ಮುಂದಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಆದ್ದರಿಂದ ಅಹವಾಲು …

Read More »

ವಕ್ಸ್ ಬೋರ್ಡ್ ಆಸ್ತಿ ವಿವಾದ: ಜಂಟಿ ಸಂಸದೀಯ ಸಮಿತಿ ಹುಬ್ಬಳ್ಳಿಗೆ ಆಗಮನ

ಹುಬ್ಬಳ್ಳಿ: ರಾಜ್ಯದಲ್ಲಿ ವಕ್ಸ್ ಬೋರ್ಡ್ ಆಸ್ತಿ ವಿವಾದ ವಿಚಾರವಾಗಿ ಜಂಟಿ ಸಂಸದೀಯ ಸಮಿತಿ ಹುಬ್ಬಳ್ಳಿಗೆ ಆಗಮಿಸಿದೆ. ವಕ್ಸ್ (ತಿದ್ದುಪಡಿ) ಮಸೂದೆಗೆ ಸಂಬಂಧಿಸಿದ ಸಂಸತ್ತಿನ ಜಂಟಿ ಸಮಿತಿಯ ಅಧ್ಯಕ್ಷರಾಗಿರುವ ಬಿಜೆಪಿ ಸಂಸದ ಜಗದಾಂಬಿಕಾ ಪಾಲ್ ನೇತೃತ್ವದ ಕಮಿಟಿ ಇಂದು ಹುಬ್ಬಳ್ಳಿಗೆ ಆಗಮಿಸುತ್ತಿದ್ದಂತೆ ಅವರನ್ನು ಶಾಸಕ ಮಹೇಶ ಟೆಂಗಿನಕಾಯಿ ಸ್ವಾಗತಿಸಿದರು. ಈ ವೇಳೆ ರೈತರು ಮತ್ತು ವಕೀಲರು ವಕ್ಸ್ ಬೋರ್ಡ್ ಆಸ್ತಿ ವಿವಾದ ಸರಿಪಡಿಸುವಂತೆ ಸಮಿತಿಗೆ ಮನವಿ ಸಲ್ಲಿಸಿದರು.

Read More »

ಜೀಪ್ ಹಾಗೂ ಪಶು ಆ್ಯಂಬುಲೆನ್ಸ್ ನಡುವೆ ಮುಖಾಮುಖಿ ಡಿಕ್ಕಿ: ಕೆಲವರಿಗೆ ಗಾಯ

ಧಾರವಾಡ: ತಾ‌ರ್ ಜೀಪ್ ಹಾಗೂ ಪಶು ಆ್ಯಂಬುಲೆನ್ಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಾರ್‌ನಲ್ಲಿದ್ದ ಕೆಲವರಿಗೆ ಗಾಯಗಳಾಗಿರುವ ಘಟನೆ ಧಾರವಾಡ ತಾಲೂಕಿನ ಬಾಡ ಗ್ರಾಮದ ಬಳಿ ಸಂಭವಿಸಿದೆ. ಪಶು ಆ್ಯಂಬುಲೆನ್ಸ್ ಹಾಗೂ ತಾರ್ ವಾಹನದ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದರಿಂದ ತಾರ್ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅದೇ ವಾಹನದಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಗಾಯಗೊಂಡವರ ಹೆಸರು ವಿಳಾಸ ತಿಳಿದು ಬಂದಿಲ್ಲ.ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ …

Read More »

ಬೆಳಗಾವಿಯಲ್ಲಿ SDA ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ

ಹುಬ್ಬಳ್ಳಿ : ಬೆಳಗಾವಿಯಲ್ಲಿ SDA ಆತ್ಮಹತ್ಯೆ ಪ್ರಕರಣದಲ್ಲಿ ಸಚಿವರ ಆಪ್ತರಾಗಲಿ ಯಾರೇ ಆಗಿರಲಿ ಕ್ರಮ ಆಗತ್ತೆ. ಚುನಾವಣೆ ಸಮಯದಲ್ಲಿ ಈ ತರಹದ ಆರೋಪ ಇರೋದೆ ಎಂದು ಡಿಕೆ ಶಿವಕುಮಾರ ಹೇಳಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೆಲವರು ಚುನಾವಣೆ ಸಂದರ್ಭಗಳಲ್ಲಿ ಇಂತಹದ್ದು ತರ್ತಾರೆ. ಕಾನೂನಿನ ಪ್ರಕಾರ ತನಿಖೆ ಆಗತ್ತೆ ಎಂದ ಡಿಕೆ ಶಿವಕುಮಾ‌ರ್ ಹೇಳಿದರು.

Read More »

ದೇಶದಲ್ಲಿ ಯಾವುದಾದರೂ ಸರ್ಕಾರ ಸತ್ತಂತಾಗಿದೆ ಅಂದ್ರೆ ಅದು ಕಾಂಗ್ರೆಸ್‌ ಸರ್ಕಾರ : ವಿ. ಸೋಮಣ್ಣ

ಹುಬ್ಬಳ್ಳಿ: ರಾಜ್ಯ ಸರ್ಕಾರ ಇದ್ದು ಸತ್ತಂತಾಗಿದೆ. ದೇಶದಲ್ಲಿ ಯಾವುದಾದರೂ ಸರ್ಕಾರ ಸತ್ತಂತಾಗಿದೆ ಅಂದ್ರೆ ಅದು ಕಾಂಗ್ರೆಸ್‌ ಸರ್ಕಾರ. ಸಿದ್ದರಾಮಯ್ಯ ಪಂಜರದ ಗಿಳಿ ಆಗಿದ್ದಾರೆ. ಸಿದ್ದರಾಮಯ್ಯ ಅವರು ಮೊದಲ ಬಾರಿ ಸಿಎಂ ಆಗಿದ್ದಾಗ ಇದ್ದ ಗತ್ತು ಈಗಿಲ್ಲ ಎಂದು ಕೇಂದ್ರದ ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಚುನಾವಣೆ ಮುಗಿದ ಬಳಿಕ ಸರ್ಕಾರ ಇರುತ್ತದೋ ಇಲ್ಲೋ ಅನ್ನೋ ನಂಬಿಕೆ ಇಲ್ಲ. ಇವತ್ತು …

Read More »

ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೆ ಹಾಜರಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್

Featured Video Play Icon

ಹುಬ್ಬಳ್ಳಿ : ಒಳಗಡೆ ಏನ ಪ್ರಶ್ನೆ ಕೇಳಿದಾರೇ ಏನ ಉತ್ತರ ಕೊಟ್ಟೀದಾರೆ ಅನ್ನೋದು ಅವರಿಗೆ ಮಾತ್ರ ಗೊತ್ತು.ಅದರ ಬಗ್ಗೆ ನಿಮಗೇನು ಗೊತ್ತು . ವಾಪಸ್ ವಿಚಾರಣೆಗೆ ಕರೀಬಹುದು ಎಂದು ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೆ ಹಾಜರಾದ ವಿಚಾರಕ್ಕೆ ಡಿಸಿಎಮ್ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತರ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿದಾರಾ ಅನ್ನೋ ಹೇಳಿಕೆಗೆ ಡಿಕೆ ಗರಂ ಆಗಿದ್ದಾರೆ. ಗೌರವ ಕೊಟ್ಟು ಲೋಕಾಯುಕ್ತ ಕಚೇರಿಗೆ ಸಿಎಮ್ ಹಾಜರಾಗಿದ್ದರೆ. …

Read More »

ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಮಂಜೂರಾತಿ ಪತ್ರ ವಿತರಣೆ

ನವಲಗುಂದ: ನಗರದ ಅಣ್ಣಿಗೇರಿ ರಸ್ತೆಯಲ್ಲಿ ಇರುವ ಆಶ್ರಯ ಬಡಾವಣೆಯಲ್ಲಿ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಮನೆಗಳನ್ನು ನಿರ್ಮಿಸಲು ಆಶ್ರಯ ಯೋಜನೆಯಡಿ ಹಕ್ಕುಪತ್ರ ಪಡೆದಂತಹ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಮಂಜೂರಾತಿ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ, ಶಿವಾನಂದ ತಡಸಿ, ಶ್ರೀ ಜೀವನ ಪವಾರ, ಅಪ್ಪಣ್ಣ ಹಳ್ಳದ, ಮೋದಿನ ಶಿರೂರ, ಮಂಜುನಾಥ ಜಾಧವ, ಹನುಮಂತ ವಾಲಿಕರ, ಬಾಬಾಜಾನ ಮಕಾನದಾರ, ಆಶ್ರಯ ಸಮಿತಿ ಸದಸ್ಯರಾದ ಮದರಸಾಬ ಉಗುರಗೋಳ ಸೇರಿದಂತೆ ಇನ್ನು ಮುಂತಾದವರು …

Read More »

ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮ

ನವಲಗುಂದ: ಅಂಗವಿಕಲರನ್ನು ದೈಹಿಕವಾಗಿ, ಮಾನಸಿಕವಾಗಿ ಸದೃಢರನ್ನಾಗಿಸುವಲ್ಲಿ ಆರೈಕೆದಾರರ ಪಾತ್ರ ಮಹತ್ವದ್ದಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಗೀರದಾರ ಹೇಳಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆರೈಕೆದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಂಗವಿಕಲರ ಸಾಮರ್ಥ್ಯವನ್ನು ನಿರ್ಲಕ್ಷ್ಯ ಮಾಡಬಾರದು. ಅವರ ಸಾಧನೆ ಆರೋಗ್ಯವಂತರಿಗೂ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಾಯತ್ರಿದೇವಿ ಪಾಟೀಲ ಮಾತನಾಡಿ, ಅಂಗವಿಕಲ ಮಕ್ಕಳ …

Read More »

ಮನೆಯ ಮೇಲ್ಪಾವಣಿಗೆ ತಗಡು ಹಾಕುವ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್‌

ಹುಬ್ಬಳ್ಳಿ: ಮನೆಯ ಮೇಲ್ಪಾವಣಿಗೆ ತಗಡು ಹಾಕುವ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ ಪರಿಣಾಮ ದೊಡ್ಡ ಪ್ರಮಾಣದ ಬೆಂಕಿ ಹೊತ್ತಿಕೊಂಡಿರುವ ಘಟನೆ ಹುಬ್ಬಳ್ಳಿಯ ತಾಜ್‌ನಗರದಲ್ಲಿ ನಡೆದಿದೆ. ಮನೆಯ ಟೆರೇಸ್‌ಗೆ ತಗಡು ಹಾಕುವ ಸಂದರ್ಭದಲ್ಲಿ ಫೈಬ‌ರ್ ವೆಲ್ಡಿಂಗ್ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ತಕ್ಷಣವೇ ಎಚ್ಚೆತ್ತ ಸಾರ್ವಜನಿಕರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ದಳ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಬೆಂಕಿ ನಂದಿಸಲಾಗಿದೆ. ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಕರಕಲಾಗಿದೆ. ಈ …

Read More »

ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ

ನವಲಗುಂದ: ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಶಿಶು ಅಭಿವೃದ್ಧಿ ಯೋಜನೆ, ತಾಲೂಕಾ ಕಾನೂನು ಸೇವಾ ಸಮೀತಿ ಹಾಗೂ ತಾಲೂಕಾ ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದಡಿ ನ.5 ರಂದು ಜನಿಸಿದ ಹೆಣ್ಣು ಮಕ್ಕಳ ತಾಯಂದಿರಿಗೆ ಪ್ರೋತ್ಸಾಹ ನೀಡಲು ಹಾಗೂ ಅವರ ರಕ್ಷಣೆ ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡಲು ಹಮ್ಮಿಕೊಂಡಿದ್ದ ಕಾರ್ಯಕ್ರಮ ಹಿರಿಯ ದಿವಾಣಿ ನ್ಯಾಯಾಧಿಶರಾದ ಮಂಜುನಾಥ ಪಾನಘಂಟಿ ಅವರು ಭಾಗಿಯಾಗಿದ್ದರು. ಇದೆ ವೇಳೆ …

Read More »