ಧಾರವಾಡ : ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನ ಅಂಗವಾಗಿ ಹುಬ್ಬಳ್ಳಿ ಧಾರವಾಡ ಅವಳಿನಗರಗಳ ಉದ್ಯಾನವನ ಸ್ಪರ್ಧೆ ಸೆಪ್ಟೆಂಬರ್ 25, 2024 ರಿಂದ ಸೆಪ್ಟೆಂಬರ್ 27, 2024 ವರೆಗೆ ಆಯೋಜಿಸಿದ್ದ, ಉದ್ಯಾನವನ ಸ್ಪರ್ಧೆಯ ಫಲಿತಾಂಶವನ್ನು ತೋಟಗಾರಿಕೆ ಇಲಾಖೆ ಪ್ರಕಟಿಸಿದೆ. ಸಾರ್ವಜನಿಕ ಚಿಕ್ಕ ಉದ್ಯಾನವನ (1/2) ಎಕೆರೆ) ಈ ವಿಭಾಗ: ಆಯುಕ್ತರು ಎಚ್ಡಿಎಮ್ಸಿ, ಮುಖ್ಯ ಕಛೇರಿ, ಹುಬ್ಬಳ್ಳಿ – ಚಾಂಪಿಯನ್ ಹಾಗೂ ಶಿರೂರ ಪಾರ್ಕ್ ಒಂದನೇ ಹಂತ ಉದ್ಯಾನವನ ಮತ್ತು …
Read More »ಕವಿವಿ ಬ್ಯಾಡ್ಮಿಂಟನ್ ತಂಡ ಚೆನ್ನೈ ನಗರಕ್ಕೆ ಪ್ರಯಾಣ
ಧಾರವಾಡ : ಅಕ್ಟೋಬರ್ 26 ರಿಂದ 29 ರವರೆಗೆ ಚೆನ್ನೈ ನಗರದ ಎಸ್.ಆರ್.ಎಂ ಕರ್ನಾಟಕ ವಿಶ್ವವಿದ್ಯಾಲಯದ ಬ್ಯಾಡ್ಮಿಂಟನ್ ತಂಡ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಬ್ಯಾಡ್ಮಿಂಟನ್ ಪುರುಷರ ವಿಭಾಗದ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಇಂದು ತಂಡದ ಸದಸ್ಯರು ತಮ್ಮ ಪ್ರಯಾಣವನ್ನು ಆರಂಭಿಸಿದರು. ಬಿ.ಎಂ.ಪಾಟೀಲ್ ಶುಭ ಹಾರೈಸಿ ನಿರ್ಗಮಿಸಿದ ತಂಡಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಈ ಸಂದರ್ಭದಲ್ಲಿ ವ್ಯವಸ್ಥಾಪಕ ವಿಜಕುಮಾರ ಎಂ. ಸಹಾಯಕ ಬೋಧಕರು, ಕ್ರೀಡಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Read More »ಮಾದಕವಸ್ತು ಮುಕ್ತ ಜಿಲ್ಲೆಗಾಗಿ ನವೆಂಬರದಿಂದ ವಿಶೇಷ ಜಾಗೃತಿ ಕಾರ್ಯಕ್ರಮಗಳ ಆಯೋಜನೆ: ಜಿಲ್ಲಾಧಿಕಾರಿ ದಿವ್ಯ ಪ್ರಭು
ಧಾರವಾಡ : ಬರುವ ನವೆಂಬರ ಹಾಗೂ ಡಿಸೆಂಬರ ತಿಂಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯನ್ನು ಮಾದಕವಸ್ತು ಮುಕ್ತ ಜಿಲ್ಲೆ ಆಗಿ ಮಾಡಲು ಕ್ರಮವಹಿಸಲಾಗುವುದು. ಮಾದಕವಸ್ತು ಮುಕ್ತ ಜಿಲ್ಲೆಗಾಗಿ ಶಾಲಾ ಕಾಲೇಜುಗಳಲ್ಲಿ ಒಂದು ತಿಂಗಳ ಪರಿಯಂತರ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾದಕವಸ್ತು ನಿಯಂತ್ರಣ ಹಾಗೂ ನಿರ್ಮೂಲನೆ ಕುರಿತು ಜಿಲ್ಲಾ ಮಟ್ಟದ ವಿವಿಧ …
Read More »ನಮ್ಮ ಪಕ್ಷದ ಅಭ್ಯರ್ಥಿಯಾಗಿ ಯಾರೇ ನಿಂತರು ಸಹ ಗೆಲುವು ಖಚಿತ: ಬಿ.ಎಸ್.ಯಡಿಯೂರಪ್ಪ
ಹುಬ್ಬಳ್ಳಿ : ರಾಜ್ಯದ ಮೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಅಭ್ಯರ್ಥಿಯಾಗಿ ಯಾರೇ ನಿಂತರು ಸಹ ಗೆಲುವು ಖಚಿತ. ಚನ್ನಪಟ್ಟಣದಲ್ಲಿ ಸಹ ಕುಮಾರಸ್ವಾಮಿ ಅವರ ಮಗ ಬಂದ ಕಾರಣ ಅಲ್ಲಿಯೂ ಸಹ ನಿಖಿಲ್ ಕುಮಾರಸ್ವಾಮಿ ಗೆಲುತ್ತಾರೆಂಬ ವಿಶ್ವಾಸವಿದೆ ಎಂದರು. ಇನ್ನೂ ಕುಟುಂಬ ರಾಜಕಾರಣ ವಿಚಾರವಾಗಿ …
Read More »ನಿವೃತ್ತ ಯೋಧ ನಿಧನ : ಗೌರವಪೂರ್ವಕ ವಿದಾಯ
ಧಾರವಾಡ: ಭಾರತೀಯ ಸೇನೆಯಲ್ಲಿ ಸತತ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನಿವೃತ್ತ ಯೋಧರೊಬ್ಬರು ವಯೋಸಜಹ ಕಾಯಿಲೆಯಿಂದ ಅಸುನೀಗಿದ್ದು, ಅವರಿಗೆ ಇಡೀ ಗ್ರಾಮಸ್ಥರೆಲ್ಲ ಸೇರಿ ಗೌರವಪೂರ್ವಕ ವಿದಾಯ ಹೇಳಿದ್ದಾರೆ. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಯಲ್ಲಪ್ಪ ಭೋವಿ ಎಂಬುವವರೇ ತಮ್ಮ 77 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದವರು.ಯಲ್ಲಪ್ಪ ಅವರು ಭಾರತೀಯ ಸೇನೆ ಸೇರಿ ಸಧೀರ್ಘ 28 ವರ್ಷಗಳ ಕಾಲ ತಾಯಿ ಭಾರತಿಯ ಸೇವೆ ಸಲ್ಲಿಸಿದ್ದರು. 1987 ರಲ್ಲಿ ಸೇನೆಯಿಂದ ನಿವೃತ್ತರಾಗಿ …
Read More »ಸರ್ಕಾರಕ್ಕೆ ಕಣ್ಣಿದ್ದೂ ಕುರುಡಾಗಿದೆ : ಶಂಕರ ಪಾಟೀಲ ಮುನೇನಕೊಪ್ಪ
ನವಲಗುಂದ: ತಾಲೂಕಿನಾದ್ಯಂತ ಹಲವಾರು ದಿನಗಳಿಂದ ಸತತವಾಗಿ ಸುರಿದ ಮಳೆಗೆ ರೈತರು ಬೆಳೆದಂತಹ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಅತಿಯಾದ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಗೋಡೆಗಳು ನೆನೆದು ಸಾವಿರಾರು ಮನೆಗಳು ಕುಸಿದು ಬಿದ್ದಿವೆ. ಈ ಸಂಕಷ್ಟದ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕಾಗಿತ್ತು. ಆದರೆ, ಸರ್ಕಾರಕ್ಕೆ ಕಣ್ಣಿದ್ದೂ ಕುರುಡಾಗಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು. ಬಿಜೆಪಿ ಪಕ್ಷದ …
Read More »ಮನೆ ಕುಸಿತ ಮಹಿಳೆ ಸಾವು: ಕುಟುಂಬಕ್ಕೆ ಪರಿಹಾರ ಚಕ್ ವಿತರಣೆ
ನವಲಗುಂದ: ತಾಲೂಕು ಆಡಳಿತ ಅಧಿಕಾರಿಗಳು ಮನೆ ಬಿದ್ದು ಸಾವನ್ನಪ್ಪಿರುವ ಮಂಗಳಾ ಪಾಟೀಲ ಅವರ ಕುಟುಂಬಕ್ಕೆ ಪರಿಹಾರದ ಚೆಕ್ ನೀಡಲು ವಿಳಂಬ ಮಾಡಿದ್ದನ್ನು ಖಂಡಿಸಿ ಹಾಗೂ ಕೂಡಲೇ ಚೆಕ್ ನೀಡುವಂತೆ ಆಗ್ರಹಿಸಿ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಕಾರ್ಯಕರ್ತರು ಮಿನಿ ವಿಧಾನಸೌಧದ ಎದುರು ಧರಣಿ ನಡೆಸಿದರು. ತಾಲೂಕಿನ ಹನಸಿ ಗ್ರಾಮದಲ್ಲಿ ಮಳೆಯಿಂದಾಗಿ ಮನೆ ಬಿದ್ದು, ಸಾವನ್ನಪ್ಪಿರುವ ಮಂಗಳಾ ಪಾಟೀಲ ಕುಟುಂಬಕ್ಕೆ ಒಂದು ವಾರವಾದರೂ ಪರಿಹಾರ ನೀಡದೇ ಕುಂಟು ನೆಪ …
Read More »ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ದಾಖಲು
ಕಲಘಟಗಿ: ತಾಲ್ಲೂಕಿನ ಮುತ್ತಗಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಗ್ರಾಮದ ಎಪ್ಪತ್ತಕ್ಕೂ ಅಧಿಕ ಜನರು ವಾಂತಿಭೇದಿಯಿಂದ ಆಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂರು ದಿನಗಳಿಂದಲೂ ಗ್ರಾಮದ ಜನರು ವಾಂತಿಭೇದಿಯಿಂದ ಬಳಲುತ್ತಿದ್ದು, ಇಂದು ಸಾಯಂಕಾಲ ಹೆಚ್ಚಾದ ಕಾರಣ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಳವೆ ಬಾವಿಯಿಂದ ನೀರಿನ ಟ್ಯಾಂಕ್ ಗೆ ನೀರನ್ನು ಸಂಗ್ರಹ ಮಾಡಿ ನಂತರ ಗ್ರಾಮಸ್ಥರಿಗೆ ನೀರು ಬಿಡಲಾಗುತ್ತದೆ. ಆದರೆ, ಹಲವಾರು ವರ್ಷಗಳಿಂದ ನೀರಿನ ಟ್ಯಾಂಕ್ ನ್ನು ಸ್ವಚ್ಛತೆ ಮಾಡದೇ ಇರುವುದರಿಂದ ಈ …
Read More »ಶಿಗ್ಗಾಂವಿಯಿಂದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿಯವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಚನ್ನಪಟ್ಟಣ ಕ್ಷೇತ್ರಕ್ಕೆ ಬಿಜೆಪಿ ಅಥವಾ ಜೆಡಿಎಸ್ ನವರು ಯಾರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುತ್ತಾರೆಂಬುದು ನಮಗೆ ಮುಖ್ಯವಲ್ಲ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ …
Read More »ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದ ಕರಿಯಮ್ಮದೇವಿ ಜಾತ್ರೆ
ಧಾರವಾಡ: ಧಾರವಾಡದ ಕುಮಾರೇಶ್ವರ ನಗರದಲ್ಲಿರುವ ಕರಿಯಮ್ಮ ದೇವಿ ಜಾತ್ರೆ ಅದ್ದೂರಿಯಿಂದ ನೆರವೇರಿತು. ಕಳೆದ ನಾಲೈದು ದಿನಗಳಿಂದ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಕೊನೆಯ ದಿನ ಪಲ್ಲಕ್ಕಿ ಉತ್ಸವ ಹಾಗೂ ದೇವಿಗೆ ಉಡಿ ತುಂಬುವ ಕಾರ್ಯ ನಡೆಯಿತು. ಕರಿಯಮ್ಮ ದೇವಿಯ ಪಲ್ಲಕ್ಕಿಯು ಕುಮಾರೇಶ್ವರ ನಗರದ ಅನೇಕ ಬಡಾವಣೆಯಲ್ಲಿ ಸಂಚರಿಸಿ ಮರಳಿ ದೇವಸ್ಥಾನಕ್ಕೆ ಬಂದು ತಲುಪಿತು. ಪಲ್ಲಕ್ಕಿ ಉತ್ಸವದಲ್ಲಿ ಮಹಿಳಾ ಡೊಳ್ಳು ಕುಣಿತದವರು ಪಾಲ್ಗೊಂಡು ಗಮನಸೆಳೆದರು. ಒಟ್ಟಾರೆ ಕುಮಾರೇಶ್ವರನಗರದ ಕರಿಯಮ್ಮ ದೇವಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





