ನವಲಗುಂದ: ಜಾನುವಾರುಗಳಿಗೆ ತಗುಲಬಹುದಾದ ರೋಗಗಳ ಬಗ್ಗೆ ಮುಂಜಾಗ್ರತೆ ವಹಿಸಿ, ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯ ಪಶುವೈದ್ಯಾಧಿಕಾರಿ ಡಾ.ಮನೋಹರ ದ್ಯಾಬೇರಿ ಸಲಹೆ ನೀಡಿದರು. ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಕರುಗಳ ಪ್ರದರ್ಶನ ಹಾಗೂ ಜಾನುವಾರುಗಳ ಆರೋಗ್ಯ ಶಿಬಿರ ಉದ್ದೇಶಿಸಿ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಹೈನುಗಾರಿಕೆಗೆ ಹೆಚ್ಚು ಒತ್ತು ಸಿಗುತ್ತಿದೆ. ಹಾಲು ಉತ್ಪಾದನೆ, ಬರಡು ರಾಸುವಿಗೆ ಚಿಕಿತ್ಸೆ ಸೇರಿದಂತೆ ಜಾನುವಾರುಗಳ ಆರೈಕೆ …
Read More »ವಂಚನೆ ಮಾಡಿದ್ದ ಖತರ್ನಾಕ ಆಸಾಮಿ : ಬಂಧಿಸುವಲ್ಲಿ ಪೋಲಿಸರು ಯಶಸ್ವಿ
ಹುಬ್ಬಳ್ಳಿ : ಹಣ ಡಬಲ್ ಮಾಡಿ ಕೊಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಖತರ್ನಾಕ ಆಸಾಮಿಯನ್ನು, ಗೋಕುಲ ರೋಡ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಲ್ಲಾಪುರ ನಿವಾಸಿ ವಿನಾಯಕ ವಾಘಚವಾರೆ ಎಂಬಾತನೇ ಮೋಸ ಮಾಡಿದ ವ್ಯಕ್ತಿ. ನಗರದ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ ತಾನು ಗಣಿಗಾರಿಕೆ ಉದ್ಯಮ ನಡೆಸುತ್ತಿದ್ದು, ಈ ವ್ಯವಹಾರದಲ್ಲಿ ನಿಮ್ಮ ಹಣವನ್ನು ಹೂಡಿಕೆ ಮಾಡಿ, ಆ ಹಣವನ್ನು ನಾನು ದ್ವಿಗುಣ ಮಾಡಿಕೊಡುತ್ತೇನೆ ಎಂದು ಹಣವನ್ನು ಪಡೆದಿದ್ದ ಅಷ್ಟೇ ಅಲ್ಲದೇ, ಹಣ …
Read More »ಅ.25 ರಂದು ವಿವಿಧ ಸ್ಥಾಯಿ ಸಮಿತಿ ಚುನಾವಣೆ
ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 23 ನೇ ಅವಧಿಗೆ ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಹಾಗೂ ಲೆಕ್ಕಗಳ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಸ್ಥಾನಗಳಿಗೆ ಚುನಾವಣೆಯು ಅಕ್ಟೋಬರ್ 25 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆಯ ಸಭಾಭವನದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಯಿಂದ …
Read More »ಪ್ರತಿ ಮಂಗಳವಾರ ಹಾಗೂ ಶುಕ್ರವಾರ ದಂದು ವಿಶೇಷ ಬಸ್ ಗಳ ವ್ಯವಸ್ಥೆ
ಹುಬ್ಬಳ್ಳಿ : ಶೀಗಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯಿಂದ ಮಾಡಲಾಗಿದ್ದ ಯಲ್ಲಮ್ಮನಗುಡ್ಡ ವಿಶೇಷ ಬಸ್ ಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪ್ರಯಾಣಿಕರ ಬೇಡಿಕೆಯ ಮೇರೆಗೆ ದೀಪಾವಳಿಯವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ದಂದು ವಿಶೇಷ ಬಸ್ ಗಳ ವ್ಯವಸ್ಥೆ ಮುಂದುವರೆಸಲಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಶೀಗಿ ಹುಣ್ಣಿಮೆಯ ಪ್ರಯುಕ್ತ ಸೌದತ್ತಿ ರೇಣುಕಾ ದೇವಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳ ಅನುಕೂಲಕ್ಕಾಗಿ ಅಕ್ಟೋಬರ್ 17ರಂದು ಗುರುವಾರ, …
Read More »ಲಾರಿ ಮತ್ತು ಆಟೋ ಮಧ್ಯೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು
ಧಾರವಾಡ: ಲಾರಿ ಮತ್ತು ಆಟೋ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡದ ಸಂಪಿಗೆನಗರದ ಬಳಿ ನಿನ್ನೆ ತಡರಾತ್ರಿ ಸಂಭವಿಸಿದೆ. ಆಟೋ ಚಾಲಕ ರಮೇಶ ಹಂಚಿನಮನಿ (35) ಹಾಗೂ ಮರೆವ್ವ ಹಂಚಿನಮನಿ (55) ಎಂಬುವವರೇ ಈ ಅಪಘಾತದಲ್ಲಿ ಸಾವಿಗೀಡಾದ ದುರ್ದೈವಿಗಳು. ಆಟೋದಲ್ಲಿದ್ದ ರೇಣುಕಾ, ಪ್ರಣವ್ ಮತ್ತು ಪೃಥ್ವಿ ಎಂಬುವವರು ಈ ಘಟನೆಯಲ್ಲಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಪ್ರಯಾಣಿಕರನ್ನು ರೈಲು ನಿಲ್ದಾಣಕ್ಕೆ ಬಿಟ್ಟು …
Read More »ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಭರತ್ ಅವರಿಗೆ ಟಿಕೆಟ್ ನೀಡಲಾಗಿದೆ: ಬೆಲ್ಲದ
ಹುಬ್ಬಳ್ಳಿ : ಶಿಗ್ಗಾಂವಿ-ಸವಣೂರು ವಿಧಾನಸಭಾ ಮತಕ್ಷೇತ್ರದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಗೆ ಟಿಕೆಟ್ ನೀಡಿರುವ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಎಂದಿಗೂ ವಂಶ ಪಾರಂಪರಿಕ ಪಕ್ಷವಲ್ಲ. ನಮ್ಮದು ಪ್ರಜಾಪ್ರಭುತ್ವ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡುವ ಪಕ್ಷ. ಅಲ್ಲಿನ ಜನರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಭರತ್ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಚನ್ನಪಟ್ಟಣ …
Read More »ಈ ಭಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಗಳಾಗಬೇಕು: ಬೆಲ್ಲದ
ಹುಬ್ಬಳ್ಳಿ: ಡಿ.9 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಲಾಗುವುದು. ಇದರೊಂದಿಗೆ ಕಳೆದ ಭಾರಿ ಅಧಿವೇಶನದಲ್ಲಿ ನಡೆಸಿದ ಚರ್ಚೆ ನಡೆಸಿ ತೆಗೆದುಕೊಂಡ ನಿರ್ಧಾರಗಳನ್ನು ಪಟ್ಟಿಮಾಡಿ ಅವುಗಳಲ್ಲಿ ಎಷ್ಟು ಜಾರಿಯಾಗಿವೆ ಎಂಬುದನ್ನು ಸಿಎಂ ಜನರಿಗೆ ತಿಳಿಸಬೇಕು ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಒತ್ತಾಯಿಸಿದರು. ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅದರಂತೆ ಈ ಭಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ …
Read More »ಚಿರತೆ ಪತ್ತೆ : ಸಾರ್ವಜನಿಕರಿಗೆ ಹೆಚ್ಚಿದ ಭಯದ ವಾತಾವರಣ
ಅಳ್ಳಾವರ: ತಾಲೂಕಿನ ಕೋಗಿಲಗೇರಿ ಗ್ರಾಮದಲ್ಲಿ ಚಿರತೆಯೊಂದು ಕಾಣಿಸಿದ್ದು, ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸುಮಾರು ದಿನಗಳಿಂದ ತಮ್ಮ ಸುತ್ತ ಮುತ್ತಲಲ್ಲೇ ಚಿರತೆಯೊಂದು ಓಡಾಡುತ್ತಿದೆ ಎಂಬ ಅನುಮಾನ ಕೋಗಿಲಗೇರಿ ಗ್ರಾಮಸ್ಥರಲ್ಲಿ ಮೂಡಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲಿಯ ವರೆಗೆ ಸುಮಾರು ನೂರರ ಆಸುಪಾಸಿನಷ್ಟು ಆಡು-ಕುರಿಗಳು, ಮೂವತ್ತಕ್ಕೂ ಹೆಚ್ಚು ನಾಯಿಗಳು ಕಾಣೆಯಾಗಿದ್ದವು. ಯಾವುದೋ ಪ್ರಾಣಿಗೆ ಬಲಿಯಾಗಿರಬಹುದು ಎಂಬ ಅನುಮಾನಕ್ಕೆ ಬಂದಿದ್ದರೂ ಎಲ್ಲಿಯೂ ಅವುಗಳ ಅವಶೇಷಗಳು ದೊರೆಯದ ಕಾರಣ ಗ್ರಾಮಾಸ್ಥರು ಸುಮ್ಮನಾಗಿದ್ದರು. ನಿನ್ನೆ …
Read More »ತುಮಕೂರು ಸಿರಾ ಭಾಗದಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ಅರವಿಂದ ಬೆಲ್ಲದ ಒತ್ತಾಯ
ಹುಬ್ಬಳ್ಳಿ: ಮಧ್ಯ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ತುಮಕೂರ-ಸಿರಾ ಭಾಗದಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರಕಾರ ಮುಂದಾಗಬೇಕು ಯಾವುದೇ ಕಾರಣಕ್ಕೂ ಇತರೆ ಭಾಗಗಳ ಬಗ್ಗೆ ಚಿಂತನೆ ಮಾಡಬಾರದು ಎಂದು ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಭಾಗದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಮಧ್ಯ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ತುಮಕೂರ-ಸಿರಾ ಬಳಿ ಹೊಸ ನಿಲ್ದಾಣಯಾಗಬೇಕು. ಸಲಹಾ ಸಂಸ್ಥೆಯ ಅಭಿಪ್ರಾಯಕ್ಕೆ ಮನ್ನಣೆ …
Read More »ಬೆಣ್ಣೆಹಳ್ಳದಿಂದ ಭಾರಿ ಹಾನಿಯಾಗುತ್ತೀದ್ದು, ಅದಕ್ಕೆ ಸೂಕ್ತ ಪರಿಹಾರ ನೀಡಲಾಗುವುದು: ಕೋನರಡ್ಡಿ
ನವಲಗುಂದ: ತಾಲೂಕಿನ ಬೆಣ್ಣೆಹಳ್ಳ ಅಕ್ಕಪಕ್ಕ ಇರುವ ಗ್ರಾಮಗಳ, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಈರುಳ್ಳಿ, ಗೋವಿನಜೋಳ, ಮೆಣಸಿನಕಾಯಿ ಬೆಳೆ ಹಾನಿ ತಪ್ಪಿಸಲು ಶಾಶ್ವತ ಪರಿಹಾರಕ್ಕಾಗಿ ಬೆಣ್ಣೆಹಳ್ಳದ ಅಗಲೀಕರಣ ಮಾಡಿ ಗ್ರಾಮಗಳಿಗೆ ನೀರು ನುಗ್ಗದಂತೆ ಈ ವರ್ಷವೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಶಾಸಕ ಎನ್.ಹೆಚ್. ಕೋನರಡ್ಡಿ ಹೇಳಿದರು. ತಾಲೂಕಿನ ಗುಡಿಸಾಗರ, ನಾಗನೂರ, ಸೊಟಕನಾಳ, ಕಡದಳ್ಳಿ, ಅರಹಟ್ಟಿ ಹಾಗೂ ತಡಹಾಳ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ತಡಹಾಳ ಹತ್ತಿರ ಪ್ರತಿ ವರ್ಷ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





