Breaking News

Shaikh BigTv

ಹಳೆ ಹುಬ್ಬಳ್ಳಿ ಗಲಭೆ ಪ್ರಕರಣ ಕುರಿತು ಸ್ಪೋಟಕ್ ಮಾಹಿತಿ ಬಿಚ್ಚಿಟ್ಟ ಸಿಎಂ

ಹುಬ್ಬಳ್ಳಿ : ರಾಜ್ಯ ಸರ್ಕಾರ ಹಳೆ ಹುಬ್ಬಳ್ಳಿ ಗಲಭೆ ಕೇಸ್‌ ಹಿಂಪಡೆದ ವಿಚಾರವಾಗಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಕೇಸ್ ಇದ್ದಿದ್ದರಿಂದ ಉದ್ದೇಶಪೂರ್ವಕವಾಗಿ ಮೊಕದ್ದಮೆ ಹಾಕಿದ್ದಾರೆ. ಹೋರಾಟ ಮಾಡಿದಾಗ ಕೇಸ್ ಹಾಕಿದ್ದರೆ ವಾಪಸ್ ತೆಗೆದುಕೊಳ್ಳುವ ಅವಕಾಶವಿದೆ ಎಂದು ಹುಬ್ಬಳ್ಳಿಯ ಏರ್ಪೋಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರ ಕಾಲದಲ್ಲೂ ಪ್ರಕರಣ ವಾಪಸ್ ಪಡೆದ ಉದಾಹರಣೆಗಳಿವೆ …

Read More »

ಹರೀಶ್ ಮೆಡಿ ಲ್ಯಾಬ್ ಗೆ ನುಗ್ಗಿದ ಕಳ್ಳರು : ಸಿಸಿಟಿವಿಯಲ್ಲಿ ಸೆರೆ

ಧಾರವಾಡ: ಹರೀಶ್ ಮೆಡಿ ಲ್ಯಾಬ್ ಇದು ರಕ್ತ ತಪಾಸಣಾ ಕೇಂದ್ರವಾಗಿದ್ದು, ನಿನ್ನೆ ರಾತ್ರಿ ಸಿಬ್ಬಂದಿ ಲ್ಯಾಬ್‌ಗೆ ಕೀಲಿ ಹಾಕಿಕೊಂಡು ಹೋದ ತಕ್ಷಣ ರಾತ್ರೋರಾತ್ರಿ ಕಳ್ಳರು ಆ ಲ್ಯಾಬ್‌ನ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಲ್ಯಾಬ್‌ನಲ್ಲಿ ಹಣಕ್ಕಾಗಿ ಖದೀಮರು ಹುಡುಕಾಡಿದ್ದಾರೆ. ಆದರೆ, ಅವರಿಗೆ ಹಣ ಸಿಕ್ಕಿಲ್ಲ. ಆಯುಧ ಪೂಜೆಗೆಂದು ದೇವರ ಮುಂದೆ ಇಟ್ಟಿದ್ದ ಚಿಲ್ಲರೆ ಹಣವನ್ನು ಖದೀಮರು ಎಗರಿಸಿ ಲ್ಯಾಬ್‌ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಳ್ಳರ ಈ ಚಲನವಲನ ಸಿಸಿ ಟಿವಿ ಕ್ಯಾಮೆರಾದಲ್ಲಿ …

Read More »

ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಗೆ ಗುಂಡಿಕ್ಕಿ ಕೊಲೆ

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಅಜಿತ್‌ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ ಬಾಬಾ ಸಿದ್ದಿಕ್ ಅವರನ್ನು ಶನಿವಾರ ಸಂಜೆ ಮುಂಬೈನಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಮೂಲಗಳ ಪ್ರಕಾರ ಸಿದ್ದಿಕ್ ಮೇಲೆ ಮೂರು ಗುಂಡುಗಳು ಹಾರಿವೆ. ತಕ್ಷಣವೇ ಅವರನ್ನು ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಕೆಲವೇ ಕ್ಷಣಗಳ ನಂತರ ನಿಧನರಾದರು. ಬಾಂದ್ರಾ ಬಾಯ್ ಎಂದೂ ಕರೆಯಲ್ಪಡುವ ಸಿದ್ದಿಕ್ ಬಾಲಿವುಡ್ ನಟರಾದ ಸಂಜಯ್ ದತ್ ಮತ್ತು …

Read More »

ಹುಬ್ಬಳ್ಳಿ-ಧಾರವಾಡ ಮಹಿಳಾ ಮಂಡಳಗಳ ರೂಪಕ ಸ್ಪರ್ಧೆಗೆ ಅರ್ಜಿ ಆಹ್ವಾನ

ಧಾರವಾಡ : ಕರ್ನಾಟಕ ಅರ್ಚಕ ಆಲೂರು ವೆಂಕಟರಾವ್ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಹುಬ್ಬಳ್ಳಿ-ಧಾರವಾಡ ಮಹಿಳಾ ಮಂಡಳಗಳಿಗೆ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹಿಳೆಯರು ಎಂಬ ವಿಷಯದ ಕುರಿತು ರೂಪಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಮಹಿಳಾ ಮಂಡಳದವರು ಆಲೂರು ವೆಂಕಟರಾವ್ ಭವನ ಟ್ರಸ್ಟ್‌ನ ಕಛೇರಿಯಲ್ಲಿ ಅರ್ಜಿಯನ್ನು ತೆಗೆದುಕೊಂಡು ಅಕ್ಟೋಬರ್ 24, 2024 ರೊಳಗೆ ಸಲ್ಲಿಸಬೇಕು. ಕನ್ನಡ ಜಾತಿಯ ಅರ್ಚಕ ಆಲೂರು ವೆಂಕಟರವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ವೆಂಕಟೇಶ ದೇಸಾಯಿ …

Read More »

ಬೈಕ್‌ ಟಚ್ ಆದ ವಿಚಾರ: ಯುವಕನಿಗೆ ಇಟ್ಟಿಗೆಯಿಂದ ಹಲ್ಲೆ

ಹುಬ್ಬಳ್ಳಿ : ಬೈಕ್‌ ಟಚ್ ಆದ ವಿಚಾರಕ್ಕೆ ದಾಯಾದಿಗಳ ನಡುವೆ ಮಾತಿಗೆ ಮಾತು ಬೆಳೆದು ಸಿದ್ದಾರ್ಥ ಎಂಬಾತನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಪರಿಣಾಮ ಯುವಕನ ತಲೆಗೆ ಗಂಭೀರ ಗಾಯವಾದ ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಬಿ ನಗರದಲ್ಲಿ ನಡೆದಿದೆ. ಸಿದ್ದಾರ್ಥ ಎಂಬ ಯುವಕ ಅಕ್ಕಿ ಹೊಂಡ ಬಳಿಯಲ್ಲಿ ಬೈಕ್‌ ತೆಗೆಯುತ್ತಿದ್ದಾಗ ಈತನ ಸಂಬಂಧಿಯಾದ ಪ್ರಭು ಎಂಬಾತ ಪಲ್ಸರ್ ಬೈಕ್‌ನಲ್ಲಿ ಬಂದು ಈತನ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. …

Read More »

ದತ್ತಾತ್ರೇಯ ಮೂರ್ತಿಯನ್ನು ಭಗ್ನ: ದೇವಸ್ಥಾನಕ್ಕೆ ಭೇಟಿದ ಜೋಶಿ

ಹುಬ್ಬಳ್ಳಿ: ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಅಪರ್ಣಾ ಅಪಾರ್ಟೆಂಟ್ ನಲ್ಲಿನ ದತ್ತಾತ್ರೇಯ ದೇವಸ್ಥಾನದಲ್ಲಿ ದತ್ತಾತ್ರೇಯ ಮೂರ್ತಿಯನ್ನು ಭಗ್ನ ಗೊಳಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಮಂತ್ರಿ ಪ್ರಹ್ಲಾದ್‌ ಜೋಷಿ ಅಪರ್ಣಾ ಅಪಾರ್ಟ್‌ಮೆಂಟ್‌ನಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಾರದ ಕೆಳಗೆ ದತ್ತಾತ್ರೇಯ ದೇವಸ್ಥಾನದಲ್ಲಿ ಇಡಲಾಗಿದ್ದ ದತ್ತಾತ್ರೇಯ ಮೂರ್ತಿಯ ನಾಲ್ಕು ಕೈಗಳನ್ನು ಮೂರಿದು ವಿರೂಪಗೊಳಿಸಲಾಗಿತ್ತು. ಈ ಕುರಿತು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿತ್ತು. ಆದ್ರೆ ತಾಂತ್ರಿಕ …

Read More »

ಮಲ್ಲಿಕಾರ್ಜುನ ಖರ್ಗೆಗೆ ಪ್ರಹ್ಲಾದ್ ಜೋಶಿ ಟಾಂಗ್

ಹುಬ್ಬಳ್ಳಿ: ಕಾಂಗ್ರೆಸ್‌ ಪಕ್ಷ ಇಸ್ಲಾಮಿಕ್ ಭಯೋತ್ಪಾದಕರಿಗೆ ಬೆಂಬಲಿತ ಪಾರ್ಟಿ ಎಂಬುದಕ್ಕೆ ಸಾಕ್ಷಿ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಂಡಿರುವುದರಲ್ಲಿಯೇ ಕಂಡು ಬರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಗೆ ಬರುತ್ತಿರೋ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ಕೂಡ ನೀವು ಯಾವ ಕಾರಣಕ್ಕಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದೀರಾ ಅಂತಾ ಕೇಳಿದ್ದಾರೆ. ನಾನು ಅವರಿಗೆ ಹೇಳಿದ್ದು ನಾವು …

Read More »

ಹಳೇ ಹುಬ್ಬಳ್ಳಿಯ ಪೊಲೀಸ್‌ ಠಾಣೆ ಪ್ರಕರಣ ಕುರಿತು ಯಾವುದೇ ಮಾಹಿತಿ ಇಲ್ಲಾ: ಕಮಿಷನ‌ರ್ ಎನ್‌.ಶಶಿಕುಮಾ‌ರ್

ಹುಬ್ಬಳ್ಳಿ: ರಾಜ್ಯ ಸರ್ಕಾರ ಹಳೇ ಹುಬ್ಬಳ್ಳಿಯ ಪೊಲೀಸ್‌ ಠಾಣೆಯ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಮಾಡಿದವರ ವಿರುದ್ಧ ದಾಖಲಾಗಿದ್ದ ಕೇಸ್‌ಗಳನ್ನು ವಾಪಸ್ ಪಡೆದಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕಮಿಷನ‌ರ್ ಎನ್‌.ಶಶಿಕುಮಾ‌ರ್ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ ಕೇಸ್ ಹಿಂದೆ ಪಡೆದಿರೋ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಪಕ್ಷದ ಮುಖಂಡರು ಹೇಳಿಕೆ ನೀಡಿದ್ದನ್ನು ನೋಡಿದ್ದೇನೆ. ಆದ್ರೆ ನಮಗೆ ಹಿರಿಯ ಅಧಿಕಾರಿಗಳಿಂದ ಹಾಗೂ ಸರ್ಕಾರದಿಂದ ಯಾವುದೇ ರೀತಿಯಾದ ಮಾಹಿತಿ ಬಂದಿಲ್ಲ. ಈ ಕುರಿತು …

Read More »

ಏಕಾಎಕಿ ಜಮೀನಕ್ಕೆ ನುಗ್ಗಿದ ನೀರು : ದೇವಸ್ಥಾನ ಕಟ್ಟೆಯನ್ನೇರಿ ಕುಳಿತ ರೈತ

ನವಲಗುಂದ: ಕಾಲವಾಡ ಗ್ರಾಮದ 45 ವರ್ಷದ ಲಕ್ಷ್ಮಣ ಹಣಮಂತಪ್ಪ ಬಾರಕೇರ ಎಂಬ ರೈತ ತನ್ನ ಜಮೀನಿಗೆ ಹೋದ ಸಮಯದಲ್ಲಿ ಏಕಾಏಕಿ ಬೆಣ್ಣೆಹಳ್ಳದ ನೀರು ಬಂದದ್ದರಿಂದ ಅಲ್ಲಿಯೇ ಹತ್ತಿರದಲ್ಲಿದ್ದ ಕಲ್ಯಾಣ ಬಸವೇಶ್ವರ ದೇವಸ್ಥಾನ ಕಟ್ಟೆಯನ್ನೇರಿ ಮೂರು ದಿನಗಳಿಂದ ಅಲ್ಲಿಯೇ ಉಳಿದಿದ್ದ. ಮೂರು ದಿನಗಳ ಕಾಲ ಊಟ, ನೀರು ಇಲ್ಲದೆ ಕುಳಿತ ಜಾಗದಲ್ಲೇ ಕುಳಿತ ಹನುಮಂತಪ್ಪನನ್ನು ಇಂದು ಬೆಳಿಗ್ಗೆ ಅಗ್ನಿಶಾಮಕ ದಳ ಸಿಬ್ಬಂದಿ ಸಹಾಯದಿಂದ ರಕ್ಷಿಸಲಾಗಿದೆ. ಘಟನೆ ತಿಳಿದ ತಕ್ಷಣ ಶಾಸಕ ಎನ್.ಎಚ್.ಕೋನರಡ್ಡಿ …

Read More »

ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ : ಧಗಧಗನೇ ಹೊತ್ತಿ ಉರಿದ ವಾಹನ

ಧಾರವಾಡ: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಹತ್ತಿ ನಡು ರಸ್ತೆಯಲ್ಲೇ ಆ ಕಾರು ಧಗಧಗನೇ ಹೊತ್ತಿ ಉರಿದ ಘಟನೆ ಧಾರವಾಡದ ಸತ್ತೂರು ಕೆಎಚ್‌ಬಿ ಕಾಲೊನಿಯಲ್ಲಿ ಸಂಭವಿಸಿದೆ. ಸಾಧನಕೆರೆಯ ಶಿವಪುತ್ರಪ್ಪ ಹರಿಹರ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ತಾಂತ್ರಿಕ ದೋಷದಿಂದ ಕಾರು ಹೊತ್ತಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರು ಬಿಟ್ಟು ಎಲ್ಲರೂ ಕೆಳಗೆ ಇಳಿದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಧಾರವಾಡ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Read More »