Breaking News

Shaikh BigTv

ವಿನಯ್ ಕುಲಕರ್ಣಿ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಜೋಶಿ

ಹುಬ್ಬಳ್ಳಿ: ವಿನಯ್ ಕುಲಕರ್ಣಿ ಕೇಸ್ ವಿಚಾರ, ಸಂಪೂರ್ಣವಾಗಿ ನನಗೆ ಮಾಹಿತಿ ಇಲ್ಲಾ ಅತ್ಯಂತ ಗಂಭೀರವಾಗಿದೆ. ನ್ಯಾಯುತವಾಗಿ ನಡೆಯೋದು ನಡಿಯಲೇಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. ರಾಜ್ಯ ಸರ್ಕಾರ ಮುನಿರತ್ನ ವಿರುದ್ಧ ಮತ್ತು ಬೇರೆಯವರ ವಿಚಾರದಲ್ಲಿ ಹೇಗೆ ನಡೆದುಕೊಂಡಿತ್ತು. ಅದೇ ರೀತಿ ಇಲ್ಲೂ ನಡೆದುಕೊಳ್ಳಬೇಕು. ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಬಂದ ನಂತರ ಎಚ್ಚರ ಆಗ್ತಿರಿ ನೀವು. ಎಲ್ಲರನ್ನೂ ಒಂದೇ ರೀತಿಯಲ್ಲಿ ತನಿಖೆ ಮಾಡಬೇಕೆಂದದರು. ಇನ್ನು ಕೋವಿಡ್ ವಿಚಾರದಲ್ಲಿ ಸಬ್ ಕಮೀಟಿ ಮಾಡಿದ …

Read More »

ಬೈಕ್‌ಗೆ ಬಸ್ ಡಿಕ್ಕಿ : ಸವಾರಿಬ್ಬರಿಗೆ ಗಂಭೀರ ಗಾಯ

ಕುಂದಗೋಳ: ದೇವಸ್ಥಾನಕ್ಕೆ ಹೋಗಿ ವಾಪಾಸ್‌ ಮನೆಗೆ ತೆರಳುತ್ತಿದ್ದ ಬೈಕ್‌ಗೆ ಬಸ್ ಡಿಕ್ಕಿಯಾಗಿ ಬೈಕ್ ಸವಾರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದ, ಘಟನೆ ರಾಮಗಿರಿ ಬಳಿಯಲ್ಲಿ ನಡೆದಿದೆ. ಹುಬ್ಬಳ್ಳಿ ಲಕ್ಷೇಶ್ವರ ರಾಜ್ಯ ಹೆದ್ದಾರಿಯ ರಾಮಗಿರಿ ಬಳಿಯಲ್ಲಿ ಲಕ್ಷ್ಮೀಶ್ವರ ಪಟ್ಟಣದ ಲಕ್ಷ್ಮಣ ಗೌಡನಾಯ್ಕ‌ರ್, ನೀಲಪ್ಪ ಎಂಬಾತರೇ ಗಾಯಗೊಂಡಿದ್ದಾರೆ. ಇವರು ನವರಾತ್ರಿ ನಿಮಿತ್ತ ರಾಮಗಿರಿಯ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ, ಪುನಃ ರಸ್ತೆ ಎಡಬದಿಯಲ್ಲಿ ಲಕ್ಷ್ಮೀಶ್ವರಕ್ಕೆ ತೆರಳುತ್ತಿದ್ದ ವೇಳೆ ತಕ್ಷಣ ಬೈಕ್ ಬಲಬದಿಗೆ ತೆಗೆದುಕೊಂಡ ವೇಳೆ ಸಾರಿಗೆ ಬಸ್‌ …

Read More »

ರಾಹುಲ್ ಗಾಂಧಿ ಬ್ಯಾಟರಿ ಡೌನ್ ಆಗಿದೆ, ಚಾರ್ಜ್ ಆಗ್ತಿಲ್ಲ,ರಿಪ್ಲೇಸ್ ಮಾಡಬೇಕು: ಜೋಶಿ ಟೀಕೆ

ಹುಬ್ಬಳ್ಳಿ : ರಾಹುಲ್ ಗಾಂಧಿ ಬ್ಯಾಟರಿ ಡೌನ್ ಆಗಿದೆ, ಚಾರ್ಜ್ ಆಗ್ತಿಲ್ಲ. ಬ್ಯಾಟರಿ ಆಯುಷ್ಯ ಮುಗಿದ ನಂತರ ಬ್ಯಾಟರಿ ರಿಪ್ಲೇಸ್ ಮಾಡಬೇಕು. ರಾಹುಲ್ ಗಾಂಧಿಗೆ ಬಾಲ ಬುದ್ದಿಯ ರಾಹುಲ್ ಗಾಂಧಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಟೀಕೆ ಮಾಡಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹರಿಯಾಣ, ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಪಕ್ಷದವರು ನಾವು ಗೆದ್ದೇ ಬಿಟ್ಟಿ ಅಂತ ಸಿಹಿ ಹಂಚಿದ್ರು, ಕಾಂಗ್ರೆಸ್ ನವರು ಬೇರೆಯವರ ಬಲದ ಮೇಲೆ ಬದುಕುವಂತವರು. …

Read More »

ಪತ್ರಕರ್ತರಿಗೆ ಉಚಿತ ಬಸ್‌ ಪಾಸ್‌ : ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಕೆ

ಕುಂದಗೋಳ : ಭಾಗದ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್‌ ಸೇವೆ ಒದಗಿಸಿದ್ದಕ್ಕೆ ಯುವ ಕಾಂಗ್ರೆಸ್ ಕಾರ್ಯದರ್ಶಿ ಮಂಜುನಾಥ ಎಂಟೂವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಯನ್ನು ಮನವಿ ಪತ್ರದ ಮೂಲಕ ತಿಳಿಸಿದ್ದಾರೆ. ಕುಂದಗೋಳ ಗ್ರೇಡ್-2 ತಹಶೀಲ್ದಾರ್ ಹೆಚ್.ಎಸ್.ಭಜಂತ್ರಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಹಿಂದೆ ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್, ಆರೋಗ್ಯ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಮನ್ನಣೆ ನೀಡುವಂತೆ ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ …

Read More »

ಮೈದುಂಬಿ ಹರಿಯುತ್ತಿರುವ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ

ನವಲಗುಂದ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳ ಮೈದುಂಬಿ ಹರಿಯುತ್ತಿವೆ. ನಗರದಲ್ಲಿ ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳ ಸಂಗಮವಾಗುವದು. ಯಮನೂರು ಮತ್ತು ನರಗುಂದ ಮಾರ್ಗಗಳ ಮಧ್ಯ ಇರುವ ಸೇತುವೆಯ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತಿದ್ದು, ಅಕ್ಕ ಪಕ್ಕದ ಜಮೀನುಗಳು ಜಲಾವೃತಗೊಂಡಿವೆ. ಈಗಾಗಲೇ ಜಿಲ್ಲಾಧಿಕಾರಿಗಳು ಹಳ್ಳದ ಪಕ್ಕದ ಜನರು ಮುಂಜಾಗ್ರತೆ ವಹಿಸಿ ಎಂಬ ಮುನ್ಸೂಚನೆ ನೀಡಿದ್ದಲ್ಲದೆ ಆಯಾ ತಾಲೂಕಿನಲ್ಲಿ ಸಹಾಯವಾಣಿ ಆರಂಭಿಸಿದ್ದಾರೆ. ಇನ್ನೂ ಸಾರ್ವಜನಿಕರು ಎಚ್ಚರಿಕೆ ವಹಿಸಿ …

Read More »

ಗೂಂಡಾಗಿರಿ ಮಾಡಿದವರ ಕೇಸನ್ನು ಈ ಸರ್ಕಾರ ವಾಪಸ್ ಪಡೆದಿದೆ : ಶೆಟ್ಟರ್ ವಾಗ್ದಾಳಿ

ಧಾರವಾಡ : ಯಾವ ಪ್ರಕರಣ ವಾಪಸ್ ಪಡೆಯಬೇಕು ಯಾವ ಪ್ರಕರಣ ವಾಪಸ್ ಪಡೆಯಬಾರದು ಎಂಬುದು ಸರ್ಕಾರಕ್ಕೆ ತಿಳಿಯಬೇಕಿತ್ತು. ಗೂಂಡಾಗಿರಿ ಮಾಡಿದವರ ಕೇಸನ್ನು ಈ ಸರ್ಕಾರ ವಾಪಸ್ ಪಡೆದಿದೆ ಎಂದು ಸಂಸದ ಜಗದೀಶ ಶೆಟ್ಟರ್ ವಾಗ್ದಾಳಿ ನಡೆಸಿದರು. ಹುಬ್ಬಳ್ಳಿ ಗಲಭೆ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್‌ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಕೇಸ್ ವಾಪಸ್ ಪಡೆಯುವುದು ಸಹಜ. ರೈತರ ಹೋರಾಟದ ಕೇಸ್‌ಗಳನ್ನು ವಾಪಸ್ …

Read More »

ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಬೆಂಬಲಿಗ ಪಕ್ಷ : ಪ್ರಲ್ಲಾದ್ ಜೋಶಿ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಕೇಸ್ ನ ಆರೋಪಿಗಳು ಅಮಾಯಕರು ಅಂತ ಜಮೀರ್ ಅಹ್ಮದ್ ಪತ್ರ ಬರೆದಿದ್ದರು. ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಬೆಂಬಲಿಗ ಪಕ್ಷ. ಕಾಂಗ್ರೆಸ್ ನವರಿಗೆ ಮತಾಂಧತೆಯ ಪಿತ್ತ ತಲೆಗೇರಿದೆ ಎಂದು ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ ಕಿಡಿಕಾರಿದ್ದಾರೆ. ನಗರದಲ್ಲಿಂದು ಹಳೇ ಹುಬ್ಬಳ್ಳಿಯಲ್ಲಿ ನಡೆದ ಘಟನೆಯ ಕುರಿತು ಮಾತನಾಡಿದ ಅವರು, ಕೇಸ್ ತೆಗೆದಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. ನನಗೆ ಅಧಿಕೃತವಾಗಿ ಸಿಕ್ಕಿಲ್ಲ, …

Read More »

ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹದ ಮುನ್ಸೂಚನೆ; ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಧಾರವಾಡ: ಭಾರತೀಯ ಹವಾಮಾನ ಇಲಾಖೆ ವರದಿಯಂತೆ ವಾಯುಭಾರ ಕುಸಿತದಿಂದ ಧಾರವಾಡ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರಿಂದ ಧಾರವಾಡ ಜಿಲ್ಲೆಯಲ್ಲಿ ಭಾರಿ ಮಳೆ, ಪ್ರವಾಹದ ಮುನ್ಸೂಚನೆ ಇದ್ದು, ಜಿಲ್ಲೆಯ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಪೂರ್ವಾನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡದಂತೆ ಆದೇಶಿಸಿದ್ದಾರೆ. ಈ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಜಿಲ್ಲೆಯ ಎಲ್ಲ ತಾಲ್ಲೂಕಿನ ಅಧಿಕಾರಿಗಳಿಗೆ ಪ್ರಭಾರ ಜಿಲ್ಲಾಧಿಕಾರಿಗಳಾಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ ಅವರು ತಿಳಿಸಿದ್ದಾರೆ. …

Read More »

ಭಾರಿ ಮಳೆ : ದಾಟಲು ಹೋಗಿ ಗಿಡಕ್ಕೆ ಸಿಲುಕಿಕೊಂಡ ಬೈಕ್ ಸವಾರರು

ನವಲಗುಂದ: ಜಿಲ್ಲೆಯ ಎಲ್ಲೆಡೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಗಳು ತುಂಬಿ ಹರಿಯುತ್ತಿವೆ. ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಬೈಕ್ ಸವಾರರು ಇಬ್ಬರು ದಾಟಲು ಹೋಗಿ ಗಿಡಕ್ಕೆ ಸಿಲುಕಿಕೊಂಡ ಘಟನೆ ನಡೆದಿದೆ. ತಾಲೂಕಿನ ಇನಾಮಹೊಂಗಲ ಹಾಗೂ ಶಿರೂರು ಗ್ರಾಮದ ಮಧ್ಯ ಇರುವ ಈ ಸೇತುವೆ ಮೇಲೆ ಹಳ್ಳ ತುಂಬಿ ಸಂಪರ್ಕ ಕಡಿತಗೊಂಡಿದೆ. ಬೈಕ್ ಸವಾರರು ದುಸ್ಸಾಹಸ ಮೆರೆಯಲು ಹೋಗಿ ನೀರಿನ ರಭಸಕ್ಕೆ ತಮ್ಮ ವಾಹನದೊಂದಿಗೆ ನೀರಿನಲ್ಲಿ ಹೋಗಿ ಮುಂದೆ ಇರುವ ಗಿಡವನ್ನು ಹಿಡಿದು …

Read More »

ರೈತನಿಗೆ ಸಂಕಷ್ಟ ತಂದ ಮಳೆ

ಅಳ್ಳಾವರ: ಭತ್ತದ ಬೆಳೆ ಸಂಪೂರ್ಣ ಜಲಾವೃತವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಳ್ಳಾವರ ತಾಲೂಕಿನಾದ್ಯಂತ ವರ್ಷದ ಸರಾಸರಿಗಿಂತ ಈ ಬಾರಿ ತುಸು ಹೆಚ್ಚೇ ಮಳೆಯಾಗಿದೆ. ಭಾರೀ ಪ್ರಮಾಣದ ಮಳೆಗೆ ಬೆಳೆಗಳೆಲ್ಲ ಮಳೆ ನೀರಿಗೆ ಆಹುತಿಯಾಗಿವೆ. ಕಟಾವಿಗೆ ಬಂದ ಭತ್ತದ ಬೆಳೆ ಮೇಲೆಯೇ ನೀರು ಹರಿಯುತ್ತಿದ್ದು, ಭತ್ತದ ಬೆಳೆ ಸಂಪೂರ್ಣ ಹಾಳಾಗಿದೆ. ಇದರಿಂದ ಅಲ್ಪ ಸ್ವಲ್ಪ ಬಂದ ಬೆಳೆಯು ಕೈಗೆ …

Read More »