Breaking News

Uncategorized

ಕನ್ಹಯ್ಯ ಲಾಲ್‌ ಕುಟುಂಬಕ್ಕೆ ಬಿಜೆಪಿ ನಾಯಕ ₹1 ಕೋಟಿ ನೆರವು

ಉದಯಪುರ, ರಾಜಸ್ಥಾನ: ಹತ್ಯೆಗೀಡಾದ ಟೇಲರ್ ಕನ್ಹಯ್ಯ ಲಾಲ್‌ ಕುಟುಂಬಕ್ಕೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ದೇಣಿಗೆ ಸ್ವರೂಪದಲ್ಲಿ ಸಂಗ್ರಹಿಸಿ ₹1 ಕೋಟಿ ನೆರವು ಒದಗಿಸಿದ್ದಾರೆ. ಕನ್ಹಯ್ಯಲಾಲ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದ ಮಿಶ್ರಾ, ನಮಗೆ ₹1 ಕೋಟಿ ಸಂಗ್ರಹಿಸುವ ಗುರಿ ಇತ್ತು. ಆದರೆ, ಈಗಾಗಲೇ ₹1.70 ಕೋಟಿ ಸಂಗ್ರಹವಾಗಿದೆ ಎಂದರು. ಇದರಲ್ಲಿ ಮನೆ ಸಾಲ ತೀರಿಸಲು, ಮಕ್ಕಳ ಶಿಕ್ಷಣ ಉದ್ದೇಶಕ್ಕಾಗಿ ಕನ್ಹಯ್ಯಲಾಲ್‌ ಕುಟುಂಬಕ್ಕೆ …

Read More »

ತಾಕತ್ ಇದ್ರೆ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡಿ : ಇಬ್ರಾಹಿಂ ಸವಾಲ್

ಬೆಂಗಳೂರು: ತಾಕತ್ ಇದ್ರೆ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡಿ ಎಂಬುದಾಗಿ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸವಾಲ್ ಹಾಕಿದ್ದಾರೆ. ಇಂದು ಜೆಡಿಎಸ್ ಕಚೇರಿ ಜೆ.ಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜಣ್ಣ ಕ್ಷಮೆ ಕೇಳ್ತಾರೆ ಅನ್ಕೊಂಡೆ. ಆದರೆ ಇಂದು ಉಲ್ಟಾ ಮಾತಾಡಿದ್ದಾರೆ. ಸಿದ್ದರಾಮಯ್ಯ ಉತ್ಸವ ಹಾಳ್ ಮಾಡಲು ಹೀಗೆ ಮಾತನಾಡಿದ್ರು ಅಂತಾರೆ. ಜನತಾದಳ ಅಸ್ತಿತ್ವದಲ್ಲಿ ಇಲ್ಲ ಅಂತಾರೆ. ಅಂದ್ಮೇಲೆ ಜೆಡಿಎಸ್ ಪಕ್ಷದ ಮೇಲೆ …

Read More »

ಬಿಜೆಪಿ ಸರ್ಕಾರ ವಿರುದ್ಧ ಕುಮಾರಸ್ವಾಮಿ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಹಾಳಾಗಿರುವ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಸರಿ ಮಾಡುವುದು ಹಾಗೂ ಶಾಲಾ ಕಟ್ಟಡಗಳನ್ನು ದುರಸ್ಥಿ ಮಾಡಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರಕ್ಕೆ ಒಂದು ತಿಂಗಳು ಗಡುವು ನೀಡಿದ್ದಾರೆ. ಸರಕಾರಿ ಪ್ರಾಥಮಿಕ ಹಾಗೂ ಕಿರಿಯ ಶಾಲೆಗಳ ದುಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು, ಈ ಕುರಿತು ಸರಣಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳ ದೃಶ್ಯವೈಭವ!! ನೋಡಿ ಎಂದು ಮಾಜಿ ಮುಖ್ಯಮಂತ್ರಿ …

Read More »

ನನಗೆ 75 ವರ್ಷ ತುಂಬುತ್ತಿದೆ ಅದಕ್ಕೆ ಈ ಕಾರ್ಯಕ್ರಮ. ಇದು ನನ್ನ‌ ಸ್ನೇಹಿತರು ಮಾಡ್ತಿರುವ ವಿಶೇಷವಾದ ಕಾರ್ಯಕ್ರಮ

ಬೆಂಗಳೂರು: ದಾವಣಗೆರೆಯಲ್ಲಿ ಆಯೋಜಿಸಿರುವ ತಮ್ಮ ಕುರಿತಾದ ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ನನಗೆ 75 ವರ್ಷ ತುಂಬುತ್ತಿದೆ ಅದಕ್ಕೆ ಈ ಕಾರ್ಯಕ್ರಮ. ಇದು ನನ್ನ‌ ಸ್ನೇಹಿತರು ಮಾಡ್ತಿರುವ ವಿಶೇಷವಾದ ಕಾರ್ಯಕ್ರಮ. ಯಡಿಯೂರಪ್ಪ 77ನೇ ಬರ್ತ್ ಡೇ ಮಾಡಿಕೊಂಡರು. ನಾನು ಅವರ ಕಾರ್ಯಕ್ರಮಕ್ಕೆ ಹೋಗಿದ್ದೆ. ಯಡಿಯೂರಪ್ಪ ಯಾಕೆ ಬರ್ತ್​​​ಡೇ ಮಾಡಿಕೊಂಡರು? 75ನೇ ವರ್ಷ ಅಮೃತ ಮಹೋತ್ಸವ ಇದ್ದಂತೆ. ಅದಕ್ಕೆ ನಮ್ಮ‌ ಸ್ನೇಹಿತರು, ಅಭಿಮಾನಿಗಳು‌ ಮಾಡ್ತಿದ್ದಾರೆ. ನಾನೂ …

Read More »

ರಾಜ್ಯಪಾಲ ಅವರು ಫ‌ಲಾನುಭವಿಗಳೊಂದಿಗೆ ಸಂವಾದ

ಮಡಿಕೇರಿ: ಕೇಂದ್ರ ಮತ್ತು ರಾಜ್ಯ ಸರಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಫ‌ಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ| ಬಿ.ಸಿ. ಸತೀಶ ಅವರು ಸ್ವಾಗತಿಸಿ, ಸರಕಾರದ ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ವಿವಿಧ ಯೋಜನೆಗಳ ಫ‌ಲಾನುಭವಿಗಳು ತಮ್ಮ ಅನುಭವಗಳನ್ನು ರಾಜ್ಯಪಾಲರೊಂದಿಗೆ ಹಂಚಿಕೊಂಡರು. ಈ ಸಂದರ್ಭ ಮಾತನಾಡಿದ ಗೆಹ್ಲೋಟ್‌ ಅವರು ಕೇಂದ್ರ ಮತ್ತು ರಾಜ್ಯ ಸರಕಾರದ ಹಲವು ಕಾರ್ಯಕ್ರಮಗಳನ್ನು ಬಳಸಿಕೊಂಡು …

Read More »

ಬೆಳಗಿನ ಜಾವ ಸೈಕಲ್‌ಗೆ ಡಿಕ್ಕಿ : ಪತ್ರಿಕಾ ವಿತರಕ ಸಾವು

ಸಾಗರ: ನಗರದ ಪ್ರವಾಸಿ ಮಂದಿರದ ಎದುರು ಶನಿವಾರ ಬೆಳಗಿನ ಜಾವ ಸೈಕಲ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಪತ್ರಿಕಾ ವಿತರಕ, ‌‌ಬೆಳಲಮಕ್ಕಿ ಬಡಾವಣೆಯ ನಿವಾಸಿ ಗಣೇಶ್ (ಚೌಡ) ಸ್ಥಳದಲ್ಲೇ ಮೃತಪಟ್ಟಿದ್ದಾರೆ. 19 ವರ್ಷದ ಗಣೇಶ್ ಅವರು ಪತ್ರಿಕೆ ವಿತರಿಸಲು ತಮ್ಮ ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಬೆಂಗಳೂರಿನಿಂದ ಯಲ್ಲಾಪುರಕ್ಕೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಶನಿವಾರ ಅಂತ್ಯಕ್ರಿಯೆ ನಡೆಯಿತು. ಗಣೇಶ್ ಅವರು ಬೆಳಲಮಕ್ಕಿಯ ಸುರೇಶ್, ಉಮಾ ದಂಪತಿ ಏಕೈಕ ಪುತ್ರ. ಸುರೇಶ್ …

Read More »

ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಎಲ್ಲ ರೀತಿಯ ಚರ್ಚೆ ನಡೆದಿದೆ: ಸಿಎಂ

ಬೆಂಗಳೂರು : ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಎಲ್ಲ ರೀತಿಯ ಚರ್ಚೆ ನಡೆದಿದ್ದು, ಇಂದು ಮುಷ್ಕರ ಹಿಂಪಡೆಯುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಹೈದರಾಬಾದ್ಗೆ ತೆರಳುವ ಮುನ್ನ ಆರ್.ಟಿ ನಗರ ನಿವಾಸದ ಬಳಿ ಮಾತನಾಡಿದ ಸಿಎಂ, ಇಂದು ಮುಷ್ಕರ ಹಿಂಪಡೆಯುತ್ತಾರೆ. ಸಹಾನುಭೂತಿಯಿಂದ, ಮಾನವೀಯತೆಯಿಂದ ಕ್ರಮ ತೆಗೆದುಕೊಂಡು ಕಾನೂನು ಮಾಡಬೇಕೆಂದು ಕೊಂಡಿದ್ದೇವೆ. ಮೂರು ತಿಂಗಳಲ್ಲಿ ಯಾವ ರೀತಿ ನೇಮಕಾತಿ ಮಾಡಬೇಕು ಅನ್ನೋ ಬಗ್ಗೆ ಚರ್ಚೆ ಮಾಡಿದ್ದೇವೆ. …

Read More »

ಸರ್ಕಾರಿ ಬಸ್ ಗಳ ನಡುವೆ ಅಪಘಾತ : 30 ವಿದ್ಯಾರ್ಥಿಗಳಿಗೆ ಗಾಯ

ಹಾವೇರಿ : ರಾಜ್ಯದಲ್ಲಿ ಮತ್ತೊಂದು ಸರ್ಕಾರಿ ಬಸ್ ಗಳ ನಡುವೆ ಅಪಘಾತವಾಗಿದ್ದು, ವಿದ್ಯಾರ್ಥಿಗಳು ಸೇರಿದಂತೆ 30 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಚೀರಹಳ್ಳಿ ಬಳಿ ನಡೆದಿದೆ. ಹಾನಗಲ್ ತಾಲೂಕಿನ ಚೀರಹಳ್ಳಿ ಗ್ರಾಮದ ಬಳಿ ಎರಡು ಸರ್ಕಾರಿ ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬಸ್ ನಲ್ಲಿ ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿಗಳು ಸೇರಿದಂತೆ 30 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ತಾಲೂಕು ಸರ್ಕಾರಿ …

Read More »

ಶಾಲಾ ವಾಹನ ಢಿಕ್ಕಿ : ಒಂದುವರೆ ವರ್ಷದ ಮಗು ಸಾವು

ಪಿರಿಯಾಪಟ್ಟಣ : ಶಾಲಾ ವಾಹನ ಢಿಕ್ಕಿ ಹೊಡೆದ ಪರಿಣಾಮ ಒಂದುವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜರುಗಿದೆ. ತಾಲ್ಲೂಕಿನ ಹಡಗನಹಳ್ಳಿ ಗ್ರಾಮದ ಸಾಧಿಕ್ ಅಹಮದ್ ರವರ ಪುತ್ರ ಮಹಮದ್ ಅದಂ ಮೃತಪಟ್ಟ ಬಾಲಕನಾಗಿದ್ದಾನೆ. ಈತ ಶನಿವಾರ ಮಧ್ಯಾಹ್ನ 1.45 ರ ಸಮಯದಲ್ಲಿ ಸಾಧಿಕ್ ಅಹಮದ್ ಅಣ್ಣ ಸಿದ್ದಿಕ್ ಅಹಮದ್ ಎಂಬುವವರ ಮಗ ಜೂಹರಾನ್ ಎಂಬಾತ ತಾಲ್ಲೂಕಿನ ಬೆಟ್ಟದಪುರ ಎಸ್‌ಎಂಎಸ್ ಕಾನ್ವೆಂಟ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಶನಿವಾರ ಮಾರ್ನಿಂಗ್ ಕ್ಲಾಸ್ …

Read More »

ಉಚಿತ ನೋಟ್ ಬುಕ್ ವಿತರಣೆ

ಧಾರವಾಡ : ತಾಲೂಕಿನ ಕವಲಗೇರಿ ಗ್ರಾಮದ ಶ್ರೀ ನೀಲಕಂಠಪ್ಪ ಶಿವಪ್ಪ ಹಂಪಣ್ಣವರ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡಿ ಮಾತನಾಡಿದ ಅವರು, ಮಕ್ಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಸಾಧನೆ ಮೈಲುಗಲ್ಲು ತಲುಪಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜನ ಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ , ಶಾಲೆಯ ಶಿಕ್ಷಕರಾದ ಎಸ್ ಎಸ್ ಗಟ್ಟಿ, ಎಮ್ ಕರಿಕಟ್ಟಿ, ಜೆ.ಎಫ್ ಉಪ್ಪಾರ, ಗ್ರಾಮ ಪಂಚಾಯಿತಿ ಸದಸ್ಯ ರಿಯಾಜ್ …

Read More »