Breaking News

Uncategorized

ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ

ಚಿಕ್ಕಬಳ್ಳಾಪುರ : ರಾಜ್ಯ ಸರ್ಕಾರವು ಮಹಿಳೆಯರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ ಮಹಿಳೆಯರಿಗಾಗಿ ಶೀಘ್ರವೇ ವಿಶೇಷ ಕ್ಲಿನಿಕ್ ಆರಂಭಿಸುವ ಯೋಜನೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರ ಜಿಲ್‌ಎಯ ಜಡಬಂಡಹಳ್ಳಿ ಗ್ರಾಮದಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯರಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಮಹಿಳೆಯರಿಗಾಗಿ ವಿಶೇಷ ಕ್ಲಿನಿಕ್ ಆರಂಭಿಸುವ ಯೋಜನೆ ಇದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.ಪ್ರತಿ …

Read More »

ಮದ್ಯ ಕುಡಿದು ಕಿರಿಕ್: ಪ್ರಕರಣ ದಾಖಲು

ಬೆಂಗಳೂರು: ಪ್ರತಿಷ್ಠಿತ ಕ್ಲಬ್ ನಲ್ಲಿ ಕುಡಿದು ಸುನಾಮಿ ಕಿಟ್ಟಿ ಮತ್ತು ತಂಡದವರು ಕಿರಿಕ್ ಮಾಡಿಕೊಂಡಿದ್ದಾರೆ. ಕಂಠಪೂರ್ತಿ ಕುಡಿದು ಶಾಂಪೇನ್ ಬಾಟಲ್ ಓಪನ್ ಮಾಡಿದ್ದಾರೆ. ಪಕ್ಕದಲ್ಲಿ ಕೂತಿದ್ದವರ ಮೇಲೆ ಶಾಂಪೇನ್ ಚೆಲ್ಲಿದ್ದನ್ನು ಪ್ರಶ್ನಿಸಿದಕ್ಕೆ ಹಲ್ಲೆ ನಡೆಸಿದ್ದಾರೆ. ಶಾಂಪೇನ್ ಚೆಲ್ಲಿದ್ದನ್ನು ಕೇಳಲು ಹೋದಾಗ ಕೃಷ್ಣ ಮತ್ತು ಪ್ರಶಾಂತ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ …

Read More »

ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಅನುದಾನ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು, ಡ್ಯಾಮ್ ಗಳು ತುಂಬಿ ಹರಿಯುತ್ತಿವೆ. ಇದರಿಂದ ಕೆಲವು ಜಿಲ್ಲೆಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ. ಇಂತಹ ಜಿಲ್ಲೆಗಳಿಗೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಪ್ರವಾಹ ಪೀಡಿತ 21 ಜಿಲ್ಲೆಗಳಿಗೆ ರಾಜ್ಯ ಸರ್ಕಾರವು 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಭಾರೀ ಪ್ರಮಾಣದಲ್ಲಿ ಮುಂಗಾರು ಮಳೆಯಾಗುತ್ತಿದ್ದು, ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿ ಮಾನವ ಜೀವ ಹಾನಿ, …

Read More »

ಕೋವಿಡ್ ಏರಿಕೆ: ಪ್ರಮುಖ ಜಿಲ್ಲೆಗಳಿಗೆ ಪತ್ರ ರವಾನೆ

ಕೊರೊನಾ ಪ್ರಕರಣಗಳು ದೇಶದಲ್ಲಿ ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪತ್ತೆ ಕಾರ್ಯ, ಪರೀಕ್ಷೆ ತೀವ್ರಗೊಳಿಸೋದು ಹಾಗೂ ಲಸಿಕೆ ನೀಡುವ ವೇಗಕ್ಕೆ ಮನ್ನಣೆ ಕೊಡಬೇಕು ಅನ್ನೋದ್ರ ಜೊತೆಗೆ ಇನ್ನಿತರ ಮಾರ್ಗಸೂಚಿಗಳನ್ನು ಪಾಲಿಸುವಂತೆ 6 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಪತ್ರ ಬರೆದಿದೆ. ಕೋರೋನಾ ಸಂಖ್ಯೆ ಏರಿಕೆಯಾಗ್ತಿರೋ ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಒಡಿಶಾ, ಹಾಗೂ ತೆಲಂಗಾಣ ರಾಜ್ಯಗಳಿಗೆ ಸೆಂಟ್ರಲ್‌ ಗೌರ್ನಮೆಂಟ್‌ ಈ ಲೆಟರ್‌ ಬರೆದಿದೆ.

Read More »

ಜನತೆ ಕಷ್ಟದಲ್ಲಿರುವಾಗ ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ

ಬೆಂಗಳೂರು : ಆತ್ಮೀಯ ನನ್ನ ಹಿತೈಷಿಗಳೇ, ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅನೇಕ ಜನ ಪ್ರಾಣ ಕಳೆದುಕೊಂಡು ಆಸ್ತಿ ಪಾಸ್ತಿ ನಾಶವಾಗಿ ಸಂಕಷ್ಟದಲ್ಲಿದ್ದಾರೆ. ಜನತೆ ಕಷ್ಟದಲ್ಲಿರುವಾಗ ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಇದು ಒಪ್ಪುವ ವಿಚಾರವಲ್ಲ ಎಂದು ಸಾರಿಗೆ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಸಚಿವ ಶ್ರೀರಾಮುಲು, ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಹಾರ ತುರಾಯಿ …

Read More »

ವರುಣನ ಆರ್ಭಟ : ಬಹುತೇಕ ನದಿಗಳಲ್ಲಿ ಅಪಾಯ ಮಟ್ಟ

ಬೆಂಗಳೂರು: ರಾಜ್ಯಾದ್ಯಂತ ಎಡಬಿಡದೆ ಮಳೆ ಸುರಿಯುತ್ತಿದ್ದು, ಬಹುತೇಕ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಜಲಾಶಯಗಳಿಗೆ ದಾಖಲೆಯ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಬಹುತೇಕ ಎಲ್ಲಾ ಜಲಾಶಗಳು ಭರ್ತಿಯಾಗಿವೆ, ಹೆಚ್ಚುವರಿ ನೀರನ್ನು ನದಿಗಳಿಗೆ ಹರಿಸಲಾಗುತ್ತಿದ್ದು ಹಲವು ಪ್ರದೇಶಗಳಲ್ಲಿ ನೆರೆ ಭೀತಿ ಎದುರಾಗಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ವಿಶೇಷವಾಗಿ ತುಂಗಾ ಮತ್ತು ತುಂಗಭದ್ರಾ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More »

ಸಿದ್ದರಾಮೋತ್ಸವದಿಂದ ಕಾಂಗ್ರೆಸ್‌ಗೆ ಸೈಡ್ ಎಫೆಕ್ಟ್ ಆಗುತ್ತದೆ : ಮಾಜಿ ಸಿಎಂ ಶೆಟ್ಟರ್

ಹುಬ್ಬಳ್ಳಿ :ಸಿದ್ದರಾಮೋತ್ಸವದಿಂದ ಬಿಜೆಪಿಗೆ ಏನು ತೊಂದರೆ ಆಗುವುದಿಲ್ಲ . ಅದ್ರಿಂದ ಕಾಂಗ್ರೆಸ್ ಗೆ ಸೈಡ್ ಎಫೆಕ್ಟ್ ಆಗುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು . ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಈ ಹಿಂದೆ ಸಿದ್ದರಾಮೋತ್ಸವದಂತಹ ಸಮಾವೇಶಗಳು , ಕಾರ್ಯಕ್ರಮಗಳು ಆಗಿ ಹೋಗಿವೆ . ಅವುಗಳಿಂದ ಬಿಜೆಪಿಗೆ ಏನು ತಟ್ಟಿಲ್ಲ . ಇನ್ನು ಜಮೀರ್ ಅಹ್ಮದ್ ಮತ್ತು ಡಿಕೆಶಿ ತಪ್ಪು ಮಾಡಿಲ್ಲಾ ಅಂದ್ರೆ ಯಾಕೆ ಹೆದರಬೇಕು . …

Read More »

ದೇಸಾಯಿಗಳ ಅರ್ಧದಿನದ ಗಣೇಶೋತ್ಸವ: ಸ್ವಾತಂತ್ರ್ಯ ಹೋರಾಟದ ಮೆಲುಕು ಹಾಕುವ ಕಥನ…!

ಹುಬ್ಬಳ್ಳಿ: ಈ ವರ್ಷದ ಸ್ವಾತಂತ್ರ್ಯೋತ್ಸವ ಹಾಗೂ ಗಣೇಶ ಚತುರ್ಥಿ ಆಚರಣೆ ನಿಜಕ್ಕೂ ಈ ದೇಶಕ್ಕೆ ಹೊಸ ಮೆರಗನ್ನು ತಂದುಕೊಡುವ ಆಚರಣೆಗಳು. ಒಂದು ಕಡೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಮತ್ತೊಂದು ಕಡೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ನಡೆದ ಅವಿಸ್ಮರಣೀಯ ಘಟನೆಯಿಂದ ಅರ್ಧ ದಿನ ಆಚರಣೆ ಗಣೇಶ ಚತುರ್ಥಿ. ಹೌದು.. ಸ್ವಾತಂತ್ರ್ಯ ಹೋರಾಟದಲ್ಲಿ ದೇಸಾಯಿ ಮನೆತನಗಳ ಸುಪರ್ದಿಯಲ್ಲಿದ್ದ ಧಾರವಾಡ ಜಿಲ್ಲೆಯ ದೇಸಗತಿ ಹಳ್ಳಿಗಳ ಕೊಡುಗೆ ಆಪಾರ. ಆ ಕಂದಾಯ ಗ್ರಾಮಗಳ ಸುಂಕವನ್ನು ವಸೂಲಿ …

Read More »

ಹುಬ್ಬಳ್ಳಿ ವಕೀಲರ ಸಂಘ ವತಿಯಿಂದ ರಾಜ್ಯದ ಏಕೈಕ ರಿಸರ್ಚರ್ ಆ್ಯಂಡ್‌ ಸ್ಟಡಿ ಸೆಂಟರ್‌ ರೆಡಿ

ಹುಬ್ಬಳ್ಳಿ : ಇಡೀ ರಾಜ್ಯದಲ್ಲಿಯೇ ಮಾದರಿಯಾದ ಲಾ ರಿಸರ್ಚರ್ ಆ್ಯಂಡ್‌ ಸ್ಟಡಿ ಸೆಂಟರ್‌ನ್ನು ರೆಡಿ ಮಾಡಿದ್ದುಹುಬ್ಬಳ್ಳಿ ವಕೀಲರ ಸಂಘ ವಕೀಲರು, ವಿದ್ಯಾರ್ಥಿಗಳು ಸೇರಿ ಕಾನೂನು ಜ್ಞಾನದ ಹಸಿವುಳ್ಳ ಎಲ್ಲರಿಗೂ ಇದು ಬಹು ಉಪಯುಕ್ತ ಲವಾದ ಕೇಂದ್ರವಾಗಲಿದೆ. ಕಾನೂನು ಅರಿಯಬೇಕು, ಸಂಶೋಧನೆ ಮಾಡುವವರಿಗೆ ಇಂಥದೊಂದು ಪುಸ್ತಕ ಸಿಗುತ್ತಿಲ್ಲ ಎಂಬ ಬೇಸರ ಆಗಬಾರದು ಎಂಬ ಆಶಯದಲ್ಲಿ ಈ ಸೆಂಟರ್‌ ತಲೆ ಎತ್ತಿದೆ. 150 ವರ್ಷಗಳ ಹಿಂದಿನ ಪುಸ್ತಕದಿಂದ ಹಿಡಿದು ತಿಂಗಳು ಪ್ರಕಟವಾಗುವ ಜರ್ನಲ್‌ಗಳು …

Read More »

ಸೇತುವೆ ಕುಸಿತ, ಸಿಲುಕಿದ ಭಾರಿ ಲಾರಿ

 ಹುಬ್ಬಳ್ಳಿ: ಸತತ ಸುರಿಯುತ್ತಿರುವ ಮಳೆಯಿಂದಾಗಿ ಶಿಥಿಲವಾಗಿದ್ದ ಸೇತುವೆ ಮೇಲೆ 16 ಚಕ್ರಗಳ ಲಾರಿಯೊಂದು ದಾಟುವ ವೇಳೆ ಸೇತುವೆ ಕುಸಿದು ಸಿಲುಕಿದ ಘಟನೆ ಹುಬ್ಬಳಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ನಗರದ ಕಮರಿಪೇಟೆ ಪೊಲೀಸ ಠಾಣೆ ಹಿಂದಿನ ಕಮರಿಪೇಟದಿಂದ ತುಮಕೂರಗಲ್ಲಿ ಹೋಗುವ ರಸ್ತೆಯಲ್ಲಿ ನಾಲಾ ಮೇಲೆ ಅಡ್ಡವಾಗಿ ಕಟ್ಟಿರುವ ಸೇತುವೆ ಮೇಲೆ ರಾಜಸ್ಥಾನ್ ದಿಂದ ಹುಬ್ಬಳಿಗೆ ಪ್ಲೈವುಡ್ ಹೇರಿಕೊಂಡು ಬಂದ ಲಾರಿಯು ಸೇತುವೆ ಕುಸಿದಿದ್ದರಿಂದ ನಾಲಾ ದಲ್ಲಿ ಸಿಲುಕಿಕೊಂಡಿದೆ. ನಾಲಾ ಮೇಲೆ ಕಟ್ಟಿರುವ …

Read More »