Breaking News

ಗದಗ

ಭೀಕರ ಅಪಘಾತ : ಸ್ಥಳದಲ್ಲಿಯೇ ವ್ಯಕ್ತಿ ಸಾವು

ಗದಗ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ  ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದ ಘಟನೆ  ಗದಗ ತಾಲೂಕಿನ ಹರ್ಲಾಪುರ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಯಲ್ಲಪ್ಪಗೌಡ ವೆಂಕನಗೌಡ (50) ಸ್ಥಳದಲ್ಲೇ ಸಾವಿಗೀಡಾದರೆ, ಲೋಕೇಶ್ ಗುಡಕೇರಿ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಸಾವಿಗೀಡಾದ ಯಲ್ಲಪ್ಲಗೌಡ ಹಾಗೂ ಲೋಕೇಶ್ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದ ನಿವಾಸಿಗಳು. ಇಬ್ಬರೂ ಒಂದೇ ಬೈಕ್​ನಲ್ಲಿ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ …

Read More »

ಗೂಡ್ಸ್ ವಾಹನಕ್ಕೆ ಆಕಸ್ಮಿಕ ಬೆಂಕಿ

ಗದಗ: ನಿಂತಿದ್ದ ಗೂಡ್ಸ್ ವಾಹನವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ವಾಹನ ಹೊತ್ತಿ ಉರಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸವೇಶ್ವರ ನಗರದಲ್ಲಿ ನಡೆದಿದೆ. ನಿಂತಿದ್ದ ಗೂಡ್ಸ್ ಗಾಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ವಾಹನ ಸುಟ್ಟು ಕರಕಲಾಗಿದೆ. ರಬ್ಬಾನಿಸಾಬ್ ಮೀರಚ್ಚನೆ ಎಂಬುವರಿಗೆ ಸೇರಿದ ವಾಹನಕ್ಕೆ ಬೆಂಕಿ ತಗುಲಿದೆ. ಇನ್ನೂ ಸುದ್ದಿ ತಿಳಿಯುತ್ತಿದ್ದಂತೆ ಓಣಿಯ ನಿವಾಸಿಗಳು ಅಗ್ನಿಶಾಮಕ ಇಲಾಖೆಗೆ ಫೋನ್ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು …

Read More »

ಕೋರೋನಾ ಸಂದರ್ಭದಲ್ಲಿ ಪೌರಕಾರ್ಮಿಕರ ಸೇವೆ ಅನನ್ಯ: ಶ್ರೀಕಾಂತ್ ಕಾಟೇವಾಲೆ.

ಲಕ್ಷ್ಮೇಶ್ವರ : ಜಿಲ್ಲಾ ನಗರಾಭಿವೃದ್ಧಿ ಕೋಶ , ಜಿಲ್ಲಾಡಳಿತ ಗದಗವತಿಯಿಂದ ಕಾರ್ಯಲಯ ಲಕ್ಷ್ಮೇಶ್ವರ ಇವರ ಸಹಯೋಗದೊಂದಿಗೆ ಲಕ್ಷ್ಮೇಶ್ವರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೌರಕಾರ್ಮಿಕರಿಗೆ ಹಾಗೂ ನೈರ್ಮಲ್ಯ ಕಾರ್ಯ ನಿರ್ವಹಿಸುವ ಸಿಬ್ಬಂದಗಳು, ವಾಹನ ಚಾಲಕರು ಮತ್ತು ಅವಲಂಬಿತ ಕಾರ್ಮಿಕರಿಗೆ ಮುಖ್ಯ ಆರೋಗ್ಯ ತಪಾಸಣೆ ಹಾಗೂ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಶ್ರೀಕಾಂತ್ ಕಾಟೇವಾಲೇ ದಿನದಿಂದ ದಿನಕ್ಕೆ ಕೊರೊನಾ ವೈರಸ್ …

Read More »

ಗದಗನಲ್ಲಿ ಬಡವ ರ‍್ಯಾಸ್ಕಲ್‌ ಪ್ರಚಾರ

ಗದಗ:  ಉತ್ತಮ ಅಭಿನಯ ತೀವ್ರತೆಯಿಂದಲೇ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ  ಸ್ಯಾಂಡಲ್‌ವುಡ್‌ ನಟ ಧನಂಜಯ ಅವರು ಸೋಮವಾರ ಗದಗ ನಗರದಲ್ಲಿ ‘ಬಡವ ರ‍್ಯಾಸ್ಕಲ್‌’ ಚಿತ್ರದ ಪ್ರಚಾರ ನಡೆಸಿದರು. ನಗರದ ಮಹಾಲಕ್ಷ್ಮೀ ಚಿತ್ರಮಂದಿರ ಹಾಗೂ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಈ ಊರಿಗೆ ಮೊದಲಬಾರಿಗೆ ಬಂದಿದ್ದರೂ ಗದುಗಿನ ಜನರು ಅಪಾರ ಪ್ರೀತಿ ತೋರಿಸಿದ್ದಾರೆ.

Read More »

ದಲಿತ ವಿರೋಧಿ ಗದಗ ಎಸ್ ಪಿಯವರನ್ನು ವರ್ಗಾವಣೆ ಮಾಡಲು ಒತ್ತಾಯಿಸಿ ಮನವಿ.

ರೋಣ : ಪಟ್ಟಣದ ಮಾದಿಗ ಮೀಸಲಾತಿ ಹೋರಾಟ ಸಮಿತಿಯವತಿಯಿಂದ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ತಹಸೀಲ್ದಾರರ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಗದಗ ಜಿಲ್ಲಾ ಎಸ್ ಪಿಯವರ ಕಾರ್ಯಾಲಯದಲ್ಲಿ ದಲಿತರ ಕುಂದುಕೊರತೆ ಸಭೆ ಆಯೋಜಿಸಿ ಕುಂದುಕೊರತೆಯ ವಿಷಯದ ಬಗ್ಗೆ ಚೆರ್ಚೆ ಮಾಡುತ್ತಿರುವಾಗ ದಲಿತ ಸಮಾಜದ ಮುಖಂಡರೆಲ್ಲರಿಗೂ ಏರು ಧ್ವನಿಯಲ್ಲಿ ಬೆದರಿಸಿ ಏಕ ವಚನದಲ್ಲಿ ಗದರಿಸಿ ಏ ಸುಮ್ಮನೆ ಕುಳಿತುಕೊಳ್ಳಿ ಎಂದು ತಮ್ಮ ಅಧಿಕಾರದ ಧರ್ಪ …

Read More »

ಅತಿಕ್ರಮಣ ಅಂಗಡಿಗಳಿಗೆ ಬೀಗಹಾಕಿದ ಪ್ರೊಬೇಷನರಿ ತಹಶೀಲ್ದಾರ ಮಾಧವ ಗಿತ್ತೆ

ಅಣ್ಣಿಗೇರಿ : ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ರುವ ಸರ್ಕಾರಿ ಜಾಗದಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿದ ಅಂಗಡಿಗಳಿಗೆ ಪ್ರೊಬೇಷನರಿ ತಹಶೀಲ್ದಾರ ಮಾಧವ ಗಿತ್ತೆ ಇಂದು ಬೆಳ್ಳಂ ಬೆಳಿಗ್ಗೆ ಬೀಗ ಹಾಕುವ ಮೂಲಕ ಎಚ್ಚರಿಕೆ ನೀಡಿದರು. ಕಟ್ಟಡ ಮಾಲೀಕರು ಕಟ್ಟಡ ನಿರ್ಮಾಣಕ್ಕಾಗಿ ಸ್ಥಳೀಯ ಆಡಳಿತದಿಂದ ಪಾರವಾನಿಗಿ ಪಡೆದಿರುವದು ಒಂದು ಕಡೆಯಾದರೆ, ಕಟ್ಟಡ ನಿರ್ಮಿಸಿರುವದು ಸರ್ಕಾರಿ ಜಾಗದಲ್ಲಿ ಆದ್ದರಿಂದ ಇಂತಹ ಕಟ್ಟಡಗಳಲ್ಲಿ ನಿರ್ಮಾಣವಾದ ವಾಣಿಜ್ಯ ಮಳಿಗೆಗಳನ್ನು ಕೂಡಲೇ ತೆರುವುಗೊಳಿಸಬೇಕು ಎಂದು ಮಾಲೀಕರಿಗೆ ಬೀಗಿ ಹಾಕಿದರು. …

Read More »

ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ ಲಿಂಗೈಕ್ಯ

ಗದಗ: ಗಜೇಂದ್ರಗಡ ತಾಲೂಕಿನ ಹಾಲಕೇರಿ ಮಠದ ಪೀಠಾಧಿಪತಿ ಡಾ.ಅಭಿನವ ಅನ್ನದಾನೇಶ್ವರ ಮಹಾಸ್ವಾಮೀಜಿ (85) ಲಿಂಗೈಕ್ಯರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಹಾಲಕೇರಿ ಮಠದ ಪೀಠಾಧಿಪತಿ ಅಭಿನವ ಅನ್ನದಾನೇಶ್ವರ ಮಹಾ ಸ್ವಾಮೀಜಿ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆ ಉಸಿರೆಳೆದಿದ್ದಾರೆ. ಶಿವಯೋಗ ಮಂದಿರ ಅಧ್ಯಕ್ಷರು ಆಗಿದ್ದ ಸ್ವಾಮೀಜಿ ಅವರು ನವೆಂಬರ್ 8, 9, 10ರಂದು ಮಠಕ್ಕೆ ನೂತನ ಚಿರ ಪಟ್ಟಾಧಿಕಾರ ಕಾರ್ಯಕ್ರಮ ನಡೆಸಿದ್ದರು. ತಮ್ಮ ಸ್ಥಾನಕ್ಕೆ ನೂತನವಾಗಿ ಮುಪ್ಪಿನ …

Read More »

ಅತೀವೃಷ್ಠಿಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಸುದರೇಶಬಾಬು ಭೇಟಿ

ಶಿರಹಟ್ಟಿ: ವಾಯುಭಾರ ಕುಸಿತದಿಂದ ಉಂಟಾದ ಅಕಾಲಿಕವಾಗಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ರವಿವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ತಾಲೂಕಿನ ತಂಗೋಡ, ತೊಳಲಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಹಾನಿಗೊಳಗಾದ ಬೆಳೆಯ ಸ್ಥಳ ಪರಿಶೀಲನೆಯನ್ನು ತಹಶೀಲ್ದಾರ ನೇತೃತ್ವದಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ ನಿಖರ ವರದಿ ನೀಡಬೇಕು. ಅಲ್ಲದೆ ಮಳೆಯಿಂದ ಹಾನಿಗೊಳಗಳಾದ ಮನೆಗಳ ಮಾಹಿತಿಯನ್ನು …

Read More »

ರಾಜ್ಯ ಹೆದ್ದಾರಿಯಲ್ಲಿ ಸಸಿನೆಟ್ಟು ಕರವೇ ಪ್ರತಿಭಟನೆ

ಲಕ್ಷ್ಮೇಶ್ವರ :ಪಟ್ಟಣದ ರಾಜ್ಯ ಹೆದ್ದಾರಿಯಲ್ಲಿ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರಿಂದ ರಸ್ತೆ ಹದಗೆಟ್ಟರ ಬಗ್ಗೆ ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ಮಾಡಿ ರಸ್ತೆಯಲ್ಲಿ ಸಸಿ ನೆಟ್ಟರು ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರುಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ್ ಹೊಗೆಸೊಪ್ಪಿನ ಮಾತನಾಡಿ ಕಳೆದ 10 ರಿಂದ 15ವರ್ಷದಿಂದ ಹದಗೆಟ್ಟಿ ರಸ್ತೆ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ ಹಾಗೂ ಪಟ್ಟಣದ ಎಲ್ಲ ರಸ್ತೆಗಳು ಹದಗೆಟ್ಟು ಹೋಗಿದೆ ನಮ್ಮ ಜಿಲ್ಲೆಯವರಾದ ಲೋಕೋಪಯೋಗಿ ಸಚಿವರಾದ …

Read More »

ಬೆಳೆಹಾನಿ ಸಮೀಕ್ಷೆ ಮಾಡದ ಆರೋಪ- ರೈತರಿಂದ ಅಧಿಕಾರಿಗೆ ತರಾಟೆ

ಲಕ್ಷ್ಮೇಶ್ವರ: ರೈತರ ಸಮಸ್ಯೆಗಳಿಗೆ ಸ್ಪಂದಿಸಿತ್ತಿಲ್ಲ ಎಂದು ಆರೋಪಿಸಿ ಸಮೀಪದ ಯತ್ನಳ್ಳಿ ಗ್ರಾಮದ ರೈತರು ಗ್ರಾಮಕ್ಕೆ ಆಗಮಿಸಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿ ಎಸ್.ಬಿ.ಪಾಟೀಲ್ ಅವರಿಗೆ ದಿಗ್ಭಂಧನ ಹಾಕಿದರಲ್ಲದೇ ಗ್ರಾಮದ ಚಾವಡಿಯಲ್ಲಿ ಕೂಡಿ ಹಾಕಿರಿವ ಘಡನೆ ನಡೆಯಿತು. ಕಳೆದ ತಿಂಗಳು ಸುರಿದ ಭಾರಿ ಮಳೆಗೆ ತೋಟಗಾರಿಕೆ ಬೆಳೆಗಳು ನಾಶವಾಗಿದ್ದವು. ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು. ಆದರೆ ಕ್ಯಾರೆ ಎನ್ನದ ಅಧಿಕಾರಿಗಳು ನಿರ್ಲಕ್ಷ್ಯ ತೊರಿದ್ದರು. ಇದರಿಂದ ರೈತರು …

Read More »