Breaking News

ತಮಿಳುನಾಡು

ಕಾಲು ಜಾರಿ ಹೊಂಡಕ್ಕೆ ಬಿದ್ದ ಮಗು ದೇವರಾದ ತಂದೆ.

ತಮಿಳುನಾಡಿನ ತೂತುಕುಡಿ ನಗರದಲ್ಲಿ ನಡೆದ ಘಟನೆ ನೀರಿನ ಹೊಂಡಕ್ಕೆ ಜಾರಿ ಬಿದ್ದ ಕಂದಮ್ಮ ಅಪ್ಪ ಕಾಪಾಡಿದ್ದಾನೆ ಒಂಟಿಯಾಗಿ ರಸ್ತೆಯಲ್ಲಿ ನಡೆದು ಬಂದ ಮೂರು ವರ್ಷದ ಮಗು ಕಾಲು ಜಾರಿ ಹಂಡಕ್ಕೆ ಬಿದ್ದಿದ್ದಾನೆ ಕೂಡಲೇ ನೋಡಿದ ತಂದೆ ಹೋಗಿ ಮಗುವನ್ನು ಕಾಪಾಡಿದ್ದಾರೆ.

Read More »

ಎರಡೆರಡು ಚಂಡ ಮಾರುತಗಳ ಆರ್ಭಟ 15 ದಿನ ಬಾರಿ ಮಳೆ.

ಭಾರತದಲ್ಲಿ ಎರಡು ಚಂಡಮಾರುತಗಳ ಪರಿಚಲನೆಯ ಬಗ್ಗೆ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ .ಒಂದು ಇರಾಕ್ ನಲ್ಲಿ ಹುಟ್ಟಿಕೊಂಡಿದ್ದು ಮುಂದಿನ 24 ಗಂಟೆಗಳಲ್ಲಿ ಜಮ್ಮು ಕಾಶ್ಮೀರ್ ಗಡಿಯನ್ನು ತಲುಪಿ ಭಾರತದ ಅನೇಕ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮಾರ್ಚ್ 15 ರ ತನಕ ಪಶ್ಚಿಮ ಬಂಗಾಳದಿಂದ ಈಶಾನ್ಯದವರಿಗೆ ಮತ್ತೆ ಕೇರಳದಿಂದ ತಮಿಳ್ನಾಡಿನವರೆಗೆ ಭಾರಿ ಮಳೆ ಎಚ್ಚರಿಕೆ ನೀಡಲಾಗಿದೆ. ಬಾಂಗ್ಲಾದೇಶದಲ್ಲಿ ಎರಡನೆಯ ಸೈಕ್ಲೋಸ್ ರೂಪಗೊಳ್ಳುತ್ತದೆ. ಮುಂದಿನ ಐದು ದಿನಗಳವರೆಗೆ ಪೂರ್ವ ಮತ್ತು ಈಶಾನ್ಯ …

Read More »

ಟ್ರಾಕ್ ಮತ್ತು ಬಸ್ ನಡುವೆ ಬೀಗರ ಅಪಘಾತ ಐದು ಜನ ಸ್ಥಳದಲ್ಲೇ ಸಾವು.

ತಮಿಳುನಾಡಿನ ಬಂಪರ್ ಟ್ರಾಕ್ ಮತ್ತು ಬಸ್ ನಡುವೆ ನಡೆದ ಬಿಕರ ಅಪಘಾತದಲ್ಲಿ ಸ್ಥಳದಲ್ಲಿ ಐದು ಜನ ಸಾವನ್ನಪ್ಪಿರುವ ದೃಶ್ಯ ಕಂಡು ಬಂದಿದೆ. ತಿರುತ್ತಣಿ ಪೊಲೀಸರ ಪ್ರಕಾರ ತಿರುತ್ತಣಿ ಬಳಿ ಕೆಜಿ ಕಂಡಿಗೈ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಡಂಪರ್ ಟ್ರಾಕ್ ಮತ್ತು ಬಸ್ ಡಿಕ್ಕಿಯಲ್ಲಿ ಐದು ಜನ ಸಾವನ್ನಪ್ಪಿದ್ದಾರೆ. ಇತರ 10 ಜನಗಳ ಸ್ಥಿತಿ ಗಂಭೀರವಾಗಿದ್ದು ಅವರನ್ನು ತೀರ್ಥನೆ ಜನರಲ್ ಹಾಸ್ಪಿಟಲ್ಗೆ ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಶುರು ಮಾಡಿದ್ದಾರೆ.

Read More »

ತಮಿಳುನಾಡು: ಸರ್ಕಾರದಿಂದ 48 ಕೋಟಿ ಶಿಕ್ಷಣ ಸಾಲ ಮನ್ನಾ

ತಮಿಳುನಾಡು: ಸರ್ಕಾರ 48 ಕೋಟಿ ರೂಪಾಯಿಯ ಶಿಕ್ಷಣ ಸಾಲವನ್ನು ಮನ್ನಾ ಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ಹೌದು ತಮಿಳುನಾಡು ಸರ್ಕಾರ ಎಸ್ ಸಿ ಹಾಗೂ ಎಸ್ ಟಿ ವಿದ್ಯಾರ್ಥಿಗಳ 48 ಕೋಟಿ ಶಿಕ್ಷಣ ಸಾಲವನ್ನು ಮನ್ನಾ ಗೊಳಿಸಲಿದೆ. ಈ ಕುರಿತು ತಮಿಳುನಾಡು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಬುಡಕಟ್ಟು, ಆದಿ ದ್ರಾವಿಡ, ಕ್ರಿಶ್ಚಿಯನ್ ಆದಿ ದ್ರಾವಿಡ ವಿಭಾಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಸುಮಾರು 48 ಕೋಟಿ ರೂಪಾಯಿ ಶಿಕ್ಷಣ ಸಾಲವನ್ನು ಮನ್ನಾ ಮಾಡುವುದಾಗಿ …

Read More »

ನವೆಂಬರ್ 1 ರಂದು ಸಾರ್ವಜನಿಕ ರಜೆ ಘೋಷಿಸಿದ ತಮಿಳುನಾಡು ಸರ್ಕಾರ

ತಮಿಳುನಾಡು: ಈ ವರ್ಷ ದೀಪಾವಳಿ ಹಬ್ಬವನ್ನು ತಮಿಳುನಾಡಿನಲ್ಲಿ ಅಕ್ಟೋಬರ್ 31 ರಂದು ಆಚರಿಸಲಾಗುತ್ತಿದೆ ಅಕ್ಟೋಬರ್ 31 ಗುರುವಾರದ ಕಾರಣ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸರ್ಕಾರಿ ಅಧಿಕಾರಿಗಳು ತಮ್ಮ ಊರುಗಳಿಗೆ ಹೋಗಲು ಅನುಕೂಲವಾಗುವಂತೆ ತಮಿಳುನಾಡು ಸರ್ಕಾರ ನವೆಂಬರ್ 1 ರಂದು ಸಾರ್ವಜನಿಕ ರಜೆ ಘೋಷಿಸಿದೆ. ಈ ಕುರಿತು ತಮಿಳುನಾಡು ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ನವೆಂಬರ್‌ 1ರಂದು ಸಂಪೂರ್ಣ ರಜೆ ಎಂದು ಘೋಷಿಸಿದೆ. ಈ ಕುರಿತು ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ, ಈ …

Read More »

ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬದಲಾವಣೆ: ಅಪ್ಪ ಸಿಎಂ, ಪುತ್ರ ಡಿಸಿಎಂ

ತಮಿಳುನಾಡು: ತಮಿಳುನಾಡು ರಾಜಕೀಯದಲ್ಲಿ ಹೊಸ ಹಾಗೂ ಮಹತ್ವದ ಬದಲಾವಣೆ ಆಗಿದ್ದು, ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪುತ್ರ ಹಾಗೂ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಡಿಎಂಕೆಯ (ದ್ರಾವಿಡ್‌ ಮುನ್ನೇತ್ರ ಕಳಗಂ) ಉತ್ತಾರಧಿಕಾರಿಯನ್ನು ಮುನ್ನೆಲೆಗೆ ತರುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಇದೀಗ ಅಪ್ಪ ಮುಖ್ಯಮಂತ್ರಿ ಹಾಗೂ ಮಗ ಅದೇ ಸರ್ಕಾರದ ಉಪ ಮುಖ್ಯಮಂತ್ರಿಯಾಗಿರುವ ಅಪರೂಪದ ರಾಜಕೀಯಕ್ಕೆ ತಮಿಳುನಾಡು ಸಾಕ್ಷಿಯಾಗಿದೆ. ತಮಿಳುನಾಡು …

Read More »

ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ 13 ವರ್ಷದ ವಿದ್ಯಾರ್ಥಿನಿಯಿಂದ ಭಾವಚಿತ್ರ ಚಿತ್ರಿಸಿ ವಿಶ್ವದಾಖಲೆ

ಚೆನ್ನೈ: 13 ವರ್ಷದ ಶಾಲಾ ವಿದ್ಯಾರ್ಥಿ ಪ್ರೀಸ್ಲಿ ಶೆಕಿನಾ ಅವರು 800 ಕೆಜಿ ಧಾನ್ಯ ಬಳಸಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ನಿರಂತರ 12 ಗಂಟೆಗಳ ಕಾಲ ಚಿತ್ರಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ. ನಾಳೆ (ಸೆ. 17 ) ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ ಅವರು ವಿಶ್ವದ ಅತಿದೊಡ್ಡ ಚಿತ್ರವನ್ನು ಅನಾವರಣಗೊಳಿಸಿದ್ದಾರೆ. ಪ್ರೀಸ್ಲಿ ಶೆಕಿನಾ ತನ್ನ ಪೋಷಕರಾದ ಪ್ರತಾಪ್ ಸೆಲ್ವಂ ಮತ್ತು ಸಂಕೀರಾಣಿ ಅವರೊಂದಿಗೆ …

Read More »

ನೂತನ ಅಂತಾರಾಷ್ಟ್ರೀಯ ಕಂಟೈನರ್ ಟರ್ಮಿನಲ್ ನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ಚೆನ್ನೈ: ತಮಿಳುನಾಡಿನ ತೂತುಕುಡಿ ಬಂದರಿನಲ್ಲಿ ನೂತನ ಅಂತಾರಾಷ್ಟ್ರೀಯ ಕಂಟೈನರ್ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂದು ಉದ್ಘಾಟಿಸಿದರು. ಬಳಿಕ ಮಾತನಾಡಿದ ಪ್ರಧಾನಿ, ಎರಡು ವರ್ಷಗಳ ಹಿಂದೆ ನಾನು ವಿ.ಓ. ಚಿದಂಬರನಾರ್ ಪೋರ್ಟ್‌ಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದ್ದು ನನಗೆ ನೆನಪಿದೆ. ಆ ಸಮಯದಲ್ಲಿ ಈ ಬಂದರಿನ ಸರಕು ನಿರ್ವಹಣೆ ಸಾಮರ್ಥ್ಯವನ್ನು ಹೆಚ್ಚಿಸಲು ಅನೇಕ ಕೆಲಸಗಳನ್ನು ಪ್ರಾರಂಭಿಸಲಾಯಿತು. ಫೆಬ್ರವರಿಯಲ್ಲಿ ನಾನು ತೂತುಕುಡಿಗೆ ಬಂದಾಗ ಅನೇಕ ಬಂದರು ಸಂಬಂಧಿತ ಕೆಲಸಗಳು ಪ್ರಾರಂಭವಾದವು. …

Read More »

ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಅವರ ಅಗಲಿಕೆ ಇಡೀ ಚಿತ್ರರಂಗ ಮತ್ತು ತಮಿಳುನಾಡಿನ ರಾಜಕೀಯಕ್ಕೆ ಒಂದು ತುಂಬಲಾರದ ನಷ್ಟ….

ಜನಪ್ರಿಯ ನಾಯಕ ಮತ್ತು ರಾಜಕಾರಣಿ ಕ್ಯಾಪ್ಟನ್ ವಿಜಯಕಾಂತ್ ಅವರ ಅಗಲಿಕೆ ಇಡೀ ಚಿತ್ರರಂಗ ಮತ್ತು ತಮಿಳುನಾಡಿನ ರಾಜಕೀಯಕ್ಕೆ ಒಂದು ತುಂಬಲಾರದ ನಷ್ಟ. ನಟನಿಗೆ ಶ್ರದ್ಧಾಂಜಲಿ ಅರ್ಪಿಸಲು ಶುಕ್ರವಾರ ಚೆನ್ನೈನ ಮರೀನಾ ಬೀಚ್ ಬಳಿಯ ಐಲ್ಯಾಂಡ್ ಮೈದಾನದಲ್ಲಿ ಅಭಿಮಾನಿಗಳ ಸಾಗರವೇ ನೆರೆದಿತ್ತು. ವಿಜಯಕಾಂತ್ ಅವರು ಪತ್ನಿ ಪ್ರೇಮಲತಾ, ಪುತ್ರರಾದ ವಿಜಯ ಪ್ರಭಾಕರನ್ ಮತ್ತು ಷಣ್ಮುಗ ಪಾಂಡಿಯನ್ ಅವರನ್ನು ಅಗಲಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್, ವಿಜಯ್, ಕಮಲ್ ಹಾಸನ್, ಮನ್ಸೂರ್ ಅಲಿ ಖಾನ್ ಸೇರಿದಂತೆ …

Read More »

ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ 6 ತಿಂಗಳ ಜೈಲು ಶಿಕ್ಷೆ…

ತಮಿಳುನಾಡು: ಚೆನ್ನೈ ಎಗ್ಮೋರ್ ನ್ಯಾಯಾಲಯ ಖ್ಯಾತ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜಯಪ್ರದಾ ನಡೆಸುತ್ತಿದ್ದ ಚಿತ್ರಮಂದಿರದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಇಎಸ್‌ಐ ಹಣ ಪಾವತಿಸಿಲ್ಲ ಎಂದು ಕಾರ್ಮಿಕರು ರಾಜ್ಯ ವಿಮಾ ನಿಗಮಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಯಪ್ರದಾ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಈಗ ತೀರ್ಪು ಪ್ರಕಟವಾಗಿದ್ದು, ಚೆನ್ನೈ ಎಗ್ಮೋರ್​ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಜಯಪ್ರದಾ ಅವರು …

Read More »