Breaking News

Crime

ಕ್ರಿಕೆಟ್ ಬೆಟ್ಟಿಂಗ್ ಗೆ ಬಲಿ, ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ.!

ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಚೋಡವರಂ ಮಂಡಲದ ಭೋಗಪುರಂ ಗ್ರಾಮದ ರಮಣ ಮತ್ತು ಕನಕಮ್ಮ ದಂಪತಿ ಮಗ ಸೋಮೇಶ್ ಕುಮಾರ್ ಎಂಬಾತ ಆತ್ಮಹತ್ಯೆ ಮಾಡಿಕೊಮಡ ಯುವಕ ಕೊಂಪಲ್ಲಿ ಬಳಿಯ ಕಂಪನಿಯ ಗೋದಾಮಿನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಆಯಪ್‌ನಲ್ಲಿ 1 ಲಕ್ಷ ರೂ.ಗಳ ಬೆಟ್ಟಿಂಗ್ ಇಟ್ಟಿದ್ದರು. ದುರದೃಷ್ಟವಶಾತ್, ಡೆಲ್ಲಿ ಪಂದ್ಯವನ್ನು ಗೆದ್ದ ನಂತರ, ಅವರು ರೂ. ರಾತ್ರಿಯಿಡೀ 1 ಲಕ್ಷ ರೂ. ಕಳೆದುಕೊಂಡಿದ್ದ ಬಗ್ಗೆ ಬೇಸರಗೊಂಡಿದ್ದ ಇದರಿಂದ ಬೇಸತ್ತು …

Read More »

ಚಿಕ್ಕಮಂಗಳೂರ್ : ಪ್ಲಾಸ್ಟಿಕ್ ತಿಂದು ಪ್ರಾಣ ಬಿಟ್ಟ ಗೂಳಿ.

ಚಿಕ್ಕಮಂಗಳೂರು ನಗರದ ವಿಜಯಪುರ ಮುಖ್ಯ ರಸ್ತೆಯಲ್ಲಿ ಸುಮಾರು 25 ಕೆಜಿಗು ಹೆಚ್ಚು ತೂಕದ ಪ್ಲಾಸ್ಟಿಕ್ ಅನ್ನು ತಿಂದ 15 ವರ್ಷದ ಗೂಳಿಯೊಂದು ಮೃತಪಟ್ಟಿದೆ. ಗೂಳಿ ಹೊಟ್ಟೆ ಊದಿ ಮಲಗಿರುವುದನ್ನು ಕಂಡು ಹಲವರು ಚಿಕಿತ್ಸೆಗೆ ಮುಂದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಸರಕಾರಿ ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಗೂಳಿ ಹೊಟ್ಟೆಯಲ್ಲಿದ್ದ ಪ್ಲಾಸ್ಟಿಕ್ ಹೊರ ತೆಗೆದರು.

Read More »

ಹೈವೆಯಲ್ಲಿ ಟಾಟಾ ಏಸ್ ನಡುವೆ ಡಿಕ್ಕಿ ಸ್ಥಳದಲ್ಲೇ ಇಬ್ಬರು ಮೃತ್ಯು.

ಕೊಳ್ಳೇಗಾಲದಲ್ಲಿ ತಿಥಿ ಕಾರ್ಯಕ್ಕೆ ಬಂದು ವಾಪಾಸ್ ಆಗುವಾಗ ಕೆಎಸ್ ಆರ್ ಟಿಸಿ ಹಾಗೂ ಟಾಟಾ ಏಸ್ ನಡುವೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ಸಾವು, ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ‌ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಬಳಿ‌ ನಡೆದಿದೆ. ಪ್ರಕರಣ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More »

ಗುಜರಾತ್:ಸಂಬಂಧಿಕರ ಮನೆಗಳನ್ನು ನೆಲಸಮ ಮಾಡಿದ ಪ್ರಕರಣ.

ವಿವಾಹಿತ ಮಹಿಳೆಯೊಂದಿಗೆ ಪರಾರಿಯಾಗಿದ್ದಾನೆ ಎಂದು ಶಂಕಿಸಿ ವ್ಯಕ್ತಿ ಮತ್ತು ಆತನ ಸಂಬಂಧಿಕರ ಮನೆಗಳನ್ನು ನೆಲಸಮ ಮಾಡಿದ ಪ್ರಕರಣ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ.ವ್ಯಕ್ತಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಬುಲ್ಡೋಜರ್ ಚಾಲಕ ಸೇರಿದಂತೆ ಆರು ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

Read More »

ಹೆಂಡತಿಯನ್ನು ಕೊಂದು, ಆತ್ಮಹತ್ಯೆಗೆ ಶರಣಾದ ಪತಿ.

ಹೆಂಡತಿ ಮೇಘಾ ಸಿದ್ದಪ್ಪ ಹರನಾಳ ಎಂಬವಳನ್ನು ಹತ್ಯೆ ಮಾಡಿ, ಜಮೀನು ಪಕ್ಕದ ತೆಗ್ಗಿನಲ್ಲಿ ಬಿಸಾಕಿದ ಗಂಡ ಸಿದ್ದಪ್ಪ ಮಲ್ಲಪ್ಪ ಹರನಾಳ ತಾನೂ ಹತ್ತಿರದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಹೊಲದಲ್ಲಿ ಯಾರೂ ಇಲ್ಲದ ವೇಳೆ ಗಂಡ ಹೆಂಡತಿ ಮಧ್ಯೆ ಕಲಹ ಉಂಟಾಗಿ, ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುದ್ದೇಬಿಹಾಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Read More »

ಕೇರಳ :ಆತ್ಮಹತ್ಯೆಗೆ ಯತ್ನಿಸಿ ಕೋಮಾಗೆ ಜಾರಿದ್ದ ವಿದ್ಯಾರ್ಥಿನಿ ಸಾವು.

ಕೇರಳದ ಕೋಝಿಕ್ಕೋಡ್ ಹಾಸ್ಟೇಲ್ ನಲ್ಲಿ ಈ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಕೊಟ್ಟಾಯಂ ಮೂಲದ ಚೈತನ್ಯ ಕುಮಾರಿ ಎಂದು ಗುರುತಿಸಲಾಗಿದೆ. ಆಕೆ ಮಂಜೂರ್ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.ವಾರ್ಡನ್ ಮಾನಸಿಕ ಕಿರುಕುಳವೇ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಲು ಕಾರಣ ಎಂದು ಕುಟುಂಬದವರು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಇದೀಗ ಪ್ರಕರಣ ಸಂಬಂಧ ವಾರ್ಡನ್ ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Read More »

ಕೈಕಟ್ಟಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ.!

ಬಲಿಯಾ ಜಿಲ್ಲೆಯಲ್ಲಿ 20 ವರ್ಷದ ಪೂಜಾ ಚೌಹಾಣ್ ಎಂಬ ಯುವತಿ ಅನುಮಾನಾಸ್ಪದ ರೀತಿಯಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕೆಯ ದೇಹವು ನೆಲದಿಂದ ಸುಮಾರು ಆರು ಅಡಿ ಎತ್ತರದಲ್ಲಿ ನೇತಾಡುತ್ತಿದ್ದು, ಆಕೆಯ ಎರಡು ಕೈಗಳನ್ನು ಬೆನ್ನಿನ ಹಿಂದೆ ಕಟ್ಟಲಾಗಿತ್ತು.ಪೊಲೀಸರು ಸಾವಿನ ಕಾರಣವನ್ನು ನಿರ್ಧರಿಸಲು ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ

Read More »

ಕೋಚ್ ನಿಂದ ಆಟಗಾರ್ತಿ ಮೇಲೆ ದೌರ್ಜನ್ಯ

ಮಹಿಳಾ ಬಾಸ್ಕೆಟ್ ಬಾಲ್ ತಂಡದ ಕೋಚ್ ತಮ್ಮ ತಂಡದ ಮಹಿಳಾ ಆಟಗಾರ್ತಿಯ ಮೇಲೆ ದೌರ್ಜನೆ ಮಾಡಿದ್ದಾರೆ. ಕೂದಲನ್ನು ಎಳೆದಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಅಮೆರಿಕದ ಪ್ರೌಢಶಾಲೆ ಮಹಿಳಾ ಬಾಸ್ಕೆಟ್ ಬಾಲ್ ಪಂದ್ಯದ ಕೊನೆಯಲ್ಲಿ 81 ವರ್ಷದ ಕೋಚ ಜಿಮ್ ಅವರು ತಮ್ಮ ತಂಡದ ಆಟಗಾರ್ತಿಯ ಕೂದಲನ್ನು ಎಳೆದಿದ್ದಾರೆ. ಕೋಚ್ನ. ಈ ವಿರೋಧ ತೀವ್ರ ವ್ಯಕ್ತವಾಗಿದೆ.

Read More »

ಹೂಟೇಲನಲ್ಲಿ ವೇಶ್ಯಾವಾಟಿಕೆ 4 ಜನ ಯುವತಿ ರನ್ನು ರಕ್ಷಿಸಿದ ಪೊಲೀಸರು.

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣನಗರ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯನ್ನು ಪೊಲೀಸರು ಭೇದಿಸಿ ಇಬ್ಬರು ಮಹಿಳೆಯರನ್ನು ಬಂಧಿಸಿ ನಾಲ್ಕು ಜನ ಯುವತಿಯರನ್ನು ರಕ್ಷಿಸಿದ್ದಾರೆ . ಆರೋಪಿ ಮಹಿಳೆಯರು ಯುವತಿಯರಿಗೆ ವೆಷವಾಟಿಕೆಗೆ ಒತ್ತಾಯಿಸಿ ಹಣ ಸಂಪಾದನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ ಘಟನೆ ಕುರಿತು ತನಗೆ ನಡೆಸಲಾಗಿದೆ

Read More »

ನವಜಾತ ಶಿಶುವಿನ ಮೃತದೇಹ ಪತ್ತೆ

ತಿಪ್ಪೆಗೊಂಡೆಯಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತ ಪ್ರಕರಣ ಸಂಬಂಧಿಸಿದಂತೆ ಪ್ರೇಮಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸಿಮ್ರಾನ್ ಮಾನಿಕಾಬಾಯಿ ಹಾಗೂ ಮಹಾಬಲೇಶ್ ಕಾಮೂಜಿ ಬಂದಿತ ಆರೋಪಿಗಳು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಮನೆಯ ಪಕ್ಕದ ತಿಪ್ಪೆ ಗೊಂಡಿಯಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು. ಕಿತ್ತೂರಿನ ಪೊಲೀಸರ ಪ್ರಕರಣ ದಾಖಲೆ ಮಾಡಿದ್ದಾರೆ.

Read More »