Breaking News

Crime

ಡಿಜಿ ಆದೇಶಕ್ಕೆ ಹೊಸ ಕಮಿಷನರ್‌ ಬೆಲೆ ತಂದರಾ..? ಟ್ರಾಫಿಕ್ ಪೊಲೀಸರ ದರ್ಬಾರ್‌ಗೆ ಭೂಷಣ್‌ ಬೊರಸೆ ಬ್ರೇಕ್..!

ಡಿಜಿ ಆದೇಶಕ್ಕೆ ಗೌರವ ತಂದ ಹೊಸ ಕಮಿಷನರ್‌..! ಟ್ರಾಫಿಕ್ ವ್ಯವಸ್ಥೆಗೆ ಹೊಸ ರೂಪ — ಹುಬ್ಬಳ್ಳಿ ನೂತನ ಪೊಲೀಸ್ ಕಮಿಷನರ್‌ ಭೂಷಣ್‌ ಜಿ. ಬೊರಸೆ, IPS ಖಡಕ್‌ ಎಂಟ್ರಿ..! ಹುಬ್ಬಳ್ಳಿ ನಗರದಲ್ಲಿ ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ನೂತನ ಪೊಲೀಸ್ ಕಮಿಷನರ್‌ ಭೂಷಣ್‌ ಜಿ. ಬೊರಸೆ, IPS ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದ್ದು, ಇದರಿಂದ ಟ್ರಾಫಿಕ್ ವಿಭಾಗದಲ್ಲಿ ಹೊಸ ಚರ್ಚೆ ಶುರುವಾಗಿದೆ… ವಾಹನ ತಪಾಸಣೆ ವೇಳೆ ಸಾರ್ವಜನಿಕರಿಗೆ ಅನಗತ್ಯ ಕಿರುಕುಳ …

Read More »

ಮಂಡ್ಯ ಹಲಗೂರಿನಲ್ಲಿ ಯುವಕನ ಕುತ್ತಿಗೆಗೆ ಚಾಕು ಇರಿತ

ಹಲಗೂರು: ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಯುವಕನೊಬ್ಬನ ಕುತ್ತಿಗೆಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಗುರುವಾರ ಸಂಜೆ ಹಾಡ್ಲಿ-ಮೇಗಳಪುರ ಸರ್ಕಲ್‌ನಲ್ಲಿ ನಡೆದಿದೆ. ಗಾಯಗೊಂಡ ಯುವಕನನ್ನು ಕಸಬಾ ಹೋಬಳಿಯ ಲಿಂಗಾಣಪುರ ದೊಡ್ಡಿ ಗ್ರಾಮದ ಸ್ವಾಮಿ ಎಂದು ಗುರುತಿಸಲಾಗಿದೆ. ಶರತ್, ಮುತ್ತುರಾಜು, ರಾಜು ಸೇರಿದಂತೆ ಕೆಲವರು ಬೇಕರಿ ಮುಂಭಾಗ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆಸಿ, ಬಳಿಕ ಸ್ವಾಮಿ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಾಯಗೊಂಡ ಸ್ವಾಮಿ …

Read More »

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ ಇಂದು ಸಾಕಾರ! ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ಗೆ ನೂತನ ಕಮಿಷನರ್ ಆಗಿ ಬೋರ್ಸೆ ಭೂಷಣ್ ಗುಲಾಬರಾವ್, IPS ನೇಮಕಗೊಂಡಿರುವ ಸುದ್ದಿ ನಿನ್ನೆ ಭಾರೀ ಗಮನ ಸೆಳೆದಿತ್ತು. ಇದೀಗ ಆ ಸುದ್ದಿಗೆ ಮತ್ತೊಂದು ಮಹತ್ವದ ಅಪ್‌ಡೇಟ್ ಸಿಕ್ಕಿದೆ. ಇಂದು ಮಧ್ಯಾಹ್ನ 1:30ರಿಂದ 2 ಗಂಟೆಯೊಳಗೆ ನೂತನ …

Read More »

ಮೈಸೂರಿನಲ್ಲಿ ಮತ್ತೊಂದು ‘ಗೋಲ್ಡ್ ಸ್ಕ್ಯಾಮ್’: ಮೋಹನ್ ಜ್ಯುವೆಲರಿಯಿಂದ ನೂರಾರು ಗ್ರಾಹಕರಿಗೆ ಮೋಸ

ಮೈಸೂರಿನ ವಿವೇಕಾನಂದ ವೃತ್ತದಲ್ಲಿರುವ ‘ಮೋಹನ್ ಜ್ಯುವೆಲರಿ’ ಮಾಲೀಕ ಮೋಹನ್ ಲಾಲ್, ಚಿನ್ನ ನೀಡುವುದಾಗಿ ನಂಬಿಸಿ ಮಾಸಿಕ ಕಂತುಗಳ ಮೂಲಕ 80ಕ್ಕೂ ಹೆಚ್ಚು ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪ ಕೇಳಿಬಂದಿದೆ. ಕಳೆದ ಎರಡು ಕಂತು ಯೋಜನೆಗಳಲ್ಲಿ ಸಮಯಕ್ಕೆ ಸರಿಯಾಗಿ ಚಿನ್ನ ನೀಡಿದ್ದರಿಂದ ಗ್ರಾಹಕರ ವಿಶ್ವಾಸ ಗಳಿಸಿದ್ದ ಎನ್ನಲಾಗಿದೆ. ಆದರೆ, ಈ ಬಾರಿ ಕಳೆದ ಒಂದು ವಾರದಿಂದ ಅಂಗಡಿ ಬಾಗಿಲು ಮುಚ್ಚಿದ್ದು, ಮೋಹನ್ ಲಾಲ್ ಕೂಡ ನಾಪತ್ತೆಯಾಗಿದ್ದ. ಮನೆಯೂ ಖಾಲಿಯಾಗಿರುವುದು …

Read More »

ಎನಿ ಕಂಡೀಶನ್… ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಬೆಳಗ್ಗೆಯೇ ಅಧಿಕಾರ ಸ್ವೀಕಾರ…!

ಭೂಷಣ್ ಬೋರ್ಸೆ ಹೆಗಲಿಗೆ ಅವಳಿ ನಗರದ ಖಾಕಿ ಹೊಣೆ! ನಾಳೆಯಿಂದ ಹುಬ್ಬಳ್ಳಿ–ಧಾರವಾಡಕ್ಕೆ ಹೊಸ ಕಮಿಷನರ್! ಹುಬ್ಬಳ್ಳಿಗೆ ನಾಳೆ ನೂತನ ಕಮಿಷನರ್ ಎಂಟ್ರಿ! ಎನಿ ಕಂಡೀಶನ್… ನಾಳೆ ಬೆಳಗ್ಗೆ ಹುಬ್ಬಳ್ಳಿ ಕಮಿಷನರ್ ಅಧಿಕಾರ ಸ್ವೀಕಾರ! ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ಗೆ ನೂತನ ಕಮಿಷನರ್ ಆಗಿ ನೇಮಕಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ಬೋರ್ಸೆ ಭೂಷಣ್ ಗುಲಾಬರಾವ್ ಅವರು ನಾಳೆ ಬೆಳಗ್ಗೆ ಹುಬ್ಬಳ್ಳಿಗೆ ಆಗಮಿಸಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಕರ್ನಾಟಕ ಸರ್ಕಾರದ ಇತ್ತೀಚಿನ ಐಪಿಎಸ್ …

Read More »

ಆಸ್ತಿ ವಿವಾದ: ಹಾಡಹಗಲೇ ಬಿಯರ್ ಬಾಟಲ್ ಎಸೆದು ಕಾಂಗ್ರೆಸ್ ಮುಖಂಡನ ಸಹೋದರನಿಂದ ಗೂಂಡಾಗಿರಿ!

ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಪ್ಪನಹಳ್ಳಿಯಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮನೆಯೊಂದರ ಮೇಲೆ ಬಿಯರ್ ಬಾಟಲಿ ಎಸೆದು ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ. ಥಾರ್ ರಾಕ್ಸ್ ಕಾರಿನಲ್ಲಿ ಬಂದ ಕೆಲವರು ಹಾಡಹಗಲೇ ಬಾಟಲಿ ಎಸೆದು ಪರಾರಿಯಾಗಿದ್ದು, ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಎಸ್‌ಬಿಐ ಮಂಜುನಾಥ್ ಮತ್ತು ಸಿ.ಮಂಜುನಾಥ್ ಕುಟುಂಬಗಳ ನಡುವೆ ಗಲಾಟೆ ನಡೆಯುತ್ತಿದ್ದು, ಕಳೆದ ಭಾನುವಾರ ಎರಡೂ ಕಡೆಯವರು ಬನ್ನೇರುಘಟ್ಟ ಠಾಣೆಯಲ್ಲಿ ಕೌಂಟರ್ ಕೇಸ್ ದಾಖಲಿಸಿದ್ದರು. ಇದೇ …

Read More »

ಹುಬ್ಬಳ್ಳಿ ವ್ಯಕ್ತಿ ಹತ್ಯೆ ಕೇಸ್‌ಗೆ ರೋಚಕ ಟ್ವಿಸ್ಟ್.. 2015ರಲ್ಲಿ ಮಗನ ಸಾವಿಗೆ ಸೇಡು ತೀರಿಸಿಕೊಂಡ ತಾಯಿ

ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡು ರಸ್ತೆಯಲ್ಲಿ ದಾದಾಪೀರ್‌ನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. 2015ರಲ್ಲಿ ನಡೆದ ಮಾರುತಿ ಹತ್ಯೆ ಪ್ರಕರಣದ ಹಳೆಯ ದ್ವೇಷವೇ ದಾದಾಪೀರ್ ಕೊಲೆಗೆ ಕಾರಣ ಎನ್ನಲಾಗಿದ್ದು, ಪೊಲೀಸರು ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ. ದಾದಾಪೀರ್ ಸಣ್ಣ ಪ್ರಮಾಣದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದನು. 2015ರ ಮಾರುತಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಎನ್ನಲಾಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳೂ ದಾಖಲಾಗಿದ್ದವು ಎನ್ನಲಾಗಿದೆ. ಮಾರುತಿಯ …

Read More »

ಚಿಕನ್ ಪೀಸ್‌ಗಾಗಿ ಕಿರಿಕ್… ಮದ್ಯದ ನಶೆಯಲ್ಲಿ ಗೆಳೆಯನನ್ನೇ ಮುಗಿಸಿದ! ಒಂದು ತುಂಡಿನ ಜಗಳಕ್ಕೆ ರಕ್ತದೋಕುಳಿ!

ಚಿಕನ್ ಪೀಸ್‌ಗಾಗಿ ಗೆಳೆಯನ ಕಗ್ಗೊಲೆ! ಎಣ್ಣೆ ಏಟಿನಲ್ಲಿ ಎದೆಗೆ ಚಾಕು… ಕೊಲೆ ಮುಚ್ಚಲು ಕಟ್ಟುಕಥೆ ಕಟ್ಟಿದ ಆರೋಪಿ ಅರೆಸ್ಟ್! ಬೆಳಗಾವಿ: ಭಾನುವಾರದ ರಜೆಯ ಮಜಾ ಕಳೆಯಲು ಗೆಳೆಯರು ಸೇರಿ ಮಾಡಿದ್ದ ಮದ್ಯದ ಪಾರ್ಟಿ ಕೊನೆಗೆ ರಕ್ತದೋಕುಳಿಯಾಗಿ ಮಾರ್ಪಟ್ಟಿದೆ. ಕೇವಲ ಚಿಕನ್ ಪೀಸ್ ವಿಚಾರಕ್ಕೆ ಶುರುವಾದ ಜಗಳ, ಗೆಳೆಯನೊಬ್ಬನ ಪ್ರಾಣವನ್ನೇ ಬಲಿ ಪಡೆದಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ನಡೆದಿದೆ…. ಉತ್ತರ ಪ್ರದೇಶ ಮೂಲದ …

Read More »

ಮರಳು ಮಾಫಿಯಾದಲ್ಲಿ ಲೋಕಾಯುಕ್ತರ ದಾಳಿ ಬಳಿಕ… ಕಾಲು ಕೆತ್ತು ಓಡಿ ಹೋದ ಹುಬ್ಬಳ್ಳಿ ‘ಆನೆ ಒಂಟೆ ’!

ಮರಳು ಮಾಫಿಯಾಗೆ ಲೋಕಾಯುಕ್ತ ಶಾಕ್! ಲಂಚದ ಜಾಲದಲ್ಲಿ ಸಿಕ್ಕಿದ್ದು ಕೆಳಹಂತದವರೇನಾ, ಇನ್ನೂ ದೊಡ್ಡವರ ಸರದಿ ಬಾಕಿಯಿದೆಯಾ..? ಹುಬ್ಬಳ್ಳಿ: ಮರಳು ದಂಧೆಯ ಮೇಲೆ ಲೋಕಾಯುಕ್ತರ ದಾಳಿ ಬೀಳುತ್ತಿದ್ದಂತೆ, ಹುಬ್ಬಳ್ಳಿಯಲ್ಲಿ ಮತ್ತೊಂದು ಕುತೂಹಲಕಾರಿ ಚರ್ಚೆ ಶುರುವಾಗಿದೆ… ಲಂಚದ ಆರೋಪದಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿ ಲೋಕಾಯುಕ್ತರ ಬಲೆಗೆ ಬಿದ್ದ ಬೆನ್ನಲ್ಲೇ, ಮರಳು ದಂಧೆಯ ಹಿಂದೆ ಓಡಾಡುತ್ತಿದ್ದ ಕೆಲವರು ಇದೀಗ ಏಕಾಏಕಿ ಕಾಣೆಯಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ…. ಲೋಕಾಯುಕ್ತರ ದಾಳಿ ಬೀಳುವವರೆಗೂ ಎಲ್ಲವೂ ಸರಾಗವಾಗಿತ್ತಂತೆ… ಆದರೆ …

Read More »

ಮರಳು ದಂಧೆಯಲ್ಲಿ ಖಾಕಿಯ ‘ಮಂತ್ಲಿ’ ಆಟ? ಠಾಣೆಯಲ್ಲೇ ಲಾರಿ, ಮೇಲ್ವಿಚಾರಣೆ ಯಾರದ್ದು..?

ಧಾರವಾಡ–ಹುಬ್ಬಳ್ಳಿ: ಅಕ್ರಮ ಮರಳು ಸಾಗಾಟದ ಲಾರಿಗಳನ್ನು ಬಿಡಿಸಲು ಲಂಚದ ಬೇಡಿಕೆ ಇಟ್ಟ ಆರೋಪದಲ್ಲಿ ಕೆಳಹಂತದ ಪೊಲೀಸ್ ಸಿಬ್ಬಂದಿ ಲೋಕಾಯುಕ್ತರ ಬಲೆಗೆ ಬೀಳುತ್ತಿದ್ದಂತೆ, ಇದೀಗ ಈ ಪ್ರಕರಣದ ಬೆನ್ನಲ್ಲೇ ಖಾಕಿಯ ಮೇಲೆಯೇ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ… ಮರಳು ದಂಧೆಯಲ್ಲಿ ಲಾರಿಗಳಿಂದ ‘ಮಂತ್ಲಿ’ ಹಣ ಫಿಕ್ಸ್ ಮಾಡಿ ವಸೂಲಿ ಮಾಡಲಾಗುತ್ತಿತ್ತೇ..? ವಸೂಲಿ ಮಾಡಿದ ಹಣದಲ್ಲಿ ಮೇಲಧಿಕಾರಿಗಳಿಗೂ ಪಾಲು ಹೋಗುತ್ತಿತ್ತೇ..? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ… ಇನ್ನೊಂದೆಡೆ, ಇನ್ಸ್‌ಪೆಕ್ಟರ್‌ಗಳು ಸ್ವಲ್ಪ ಜಾಸ್ತಿ …

Read More »