Breaking News

News

ಅಧಿಕೃತವಾಗಿ ‘ಕೆಜಿಎಫ್ 3’ ಘೋಷಣೆ ಮಾಡಿದ ಹೊಂಬಾಳೆ ಫಿಲ್ಮ್ಸ್

ಸಲಾರ್ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯ ಜೊತೆಗೆ ಮತ್ತೊಂದು ಮಹತ್ವದ ಸುದ್ದಿಯನ್ನೂ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ನೀಡಿದೆ. ಮುಂದಿನ ದಿನಗಳಲ್ಲಿ ಕೆಜಿಎಫ್ 3 (KGF 3) ಸಿನಿಮಾವನ್ನೂ ನಿರ್ಮಾಣ ಮಾಡುವುದಾಗಿ ಅದು ತಿಳಿಸಿದೆ. ಸಲಾರ್ ಸಿನಿಮಾದ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯವನ್ನು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಬರೆದುಕೊಂಡಿದೆ. ಕೆಜಿಎಫ್ 3 ಸಿನಿಮಾ ಮುಂಬರುವ ದಿನಗಳಲ್ಲಿ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಆದರೆ, ಅಧಿಕೃತವಾಗಿ ಯಾರೂ ಅದನ್ನು ಹೇಳುವ ಪ್ರಯತ್ನ ಮಾಡಿರಲಿಲ್ಲ. …

Read More »

ವಿಶ್ವದೆಲ್ಲೆಡೆ ಜನಮನ್ನಣೆ ಪಡೆದ ಕಾಂತಾರ” ಬಿಡುಗಡೆಯಾಗಿ ಇಂದಿಗೆ ಒ‌ಂದು ವರ್ಷ

ರಕ್ಷಿತ್ ಶೆಟ್ಟಿ ಅವರು ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಒ‌ಂದು ವರ್ಷ. ಕಳೆದ ವರ್ಷ ಸೆ.30 ಕ್ಕೆ ಬೆಳ್ಳಿ ತೆರೆಮೇಲೆ ಮೂಡಿದ್ದ ಕಾಂತಾರ ಸಿನಿಮಾ ವಿಶ್ವದೆಲ್ಲೆಡೆ ಜನಮನ್ನಣೆ ಪಡೆದಿತ್ತು. ಕಾಂತಾರ ಬಿಡುಗಡೆಯಾಗಿ ಒಂದು ವರ್ಷ ಆದ ಬೆನ್ನಲ್ಲೆ, ಚಿತ್ರದ ಸೂಪರ್ ಹಿಟ್ ಸಾಂವ್ ವರಾಹ ರೂಪಂ ಸಾಂಗ್ ರಿಲೀಸ್ ಗೆ ಸಜ್ಜಾದ ಹೊಂಬಾಳೆ ಸಜ್ಜಾಗಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಹೊಂಬಾಳೆ ಯೂಟ್ಯೂಬ್ ಚಾನಲ್ ನಲ್ಲಿ ಸಾಂಗ್ …

Read More »

ರಣ್‌ಬೀರ್ ಜೊತೆ ನಟಿಸಲು ರಶ್ಮಿಕಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಕನ್ನಡದ ಬ್ಯೂಟಿ ರಶ್ಮಿಕಾ ಮಂದಣ್ಣ ಸೌತ್- ಬಾಲಿವುಡ್‌ನಲ್ಲಿ ಗುರುತಿಸಿಕೊಳ್ತಿದ್ದಾರೆ. ಸಾಲು ಸಾಲು ಸಿನಿಮಾ ಆಫರ್‌ಗಳನ್ನ ನಟಿ ಬಾಚಿಕೊಳ್ತಿದ್ದಾರೆ. ಈಗ ‘ಅನಿಮಲ್’ (Animal) ಸಿನಿಮಾಗಾಗಿ ರಶ್ಮಿಕಾ ಪಡೆದ ಸಂಭಾವನೆ ಬಗ್ಗೆ ಸಖತ್ ಟಾಕ್ ಆಗ್ತಿದೆ. ರಣ್‌ಬೀರ್ ಜೊತೆ ನಟಿಸಲು ‘ಪುಷ್’ ನಟಿ ದುಬಾರಿ ಸಂಭಾವನೆಯನ್ನೇ ಪಡೆದಿದ್ದಾರೆ. ರಶ್ಮಿಕಾ ಮಂದಣ್ಣಗೆ ‘ಅನಿಮಲ್’ ಬಾಲಿವುಡ್‌ನ 3ನೇ ಸಿನಿಮಾವಾಗಿದ್ದು, ಮೊದಲ ಬಾರಿಗೆ ರಣ್‌ಬೀರ್ ಕಪೂರ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಿರುವಾಗ ಈ ಚಿತ್ರಕ್ಕಾಗಿ 4 ಕೋಟಿ ರೂಪಾಯಿ …

Read More »

ಶುಗರ್ ಫ್ಯಾಕ್ಟರಿ’ಯಲ್ಲಿ ಡಾರ್ಲಿಂಗ್ ಕೃಷ್ಣ ಮಿಂಚಿಂಗ್ : ಯಾವಾಗ ರಿಲೀಸ್ ಆಗ್ತಿದೆ ಸಿನಿಮಾ?

ಹೊಸ ಹಾದಿಯತ್ತ ಹೊರಳಿಕೊಂಡಿರುವ ಕನ್ನಡ ಚಿತ್ರರಂಗದ ಪಾಲಿಗೀಗ ಒಂದಷ್ಟು ಭಿನ್ನ ವಿಭಿನ್ನ ಪ್ರಯತ್ನಗಳು, ಗೆಲುವುಗಳು ಜಮೆಯಾಗುತ್ತಿವೆ. ಈ ಆಶಾದಾಯಕ ವಾತಾವರಣದ ಮುಂದುವರೆದ ಭಾಗವೆಂಬಂತೆ ಮತ್ತೊಂದಿಷ್ಟು ಸಿನಿಮಾಗಳು ಚಿತ್ರೀಕರಣ ಮುಗಿಸಿಕೊಂಡು, ಬಿಡುಗಡೆಗೆ ತಯಾರಾಗಿ ನಿಂತಿವೆ. ಸದ್ಯದ ಮಟ್ಟಿಗೆ ಆ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳಬಲ್ಲ ಎಲ್ಲ ಅರ್ಹತೆಗಳನ್ನು ಅಡಕವಾಗಿಸಿಕೊಂಡಿರುವ ಚಿತ್ರ ಶುಗರ್ ಫ್ಯಾಕ್ಟರಿ. ದೀಪಕ್ ಅರಸ್ ಸಾರಥ್ಯದ ಶುಗರ್ ಫ್ಯಾಕ್ಟರಿ ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ. ಪಾರ್ಟಿ ಪ್ರಿಯರಿಗೆ ಹೇಳಿ ಮಾಡಿಸಿದ ಹಾಡಿನ ಮೂಲಕ …

Read More »

ಬೆಂಗಳೂರು ಬಂದ್ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ಬೆಂಗಳೂರು ಬಂದ್ ಶಾಂತಿಯುತವಾಗಿ ಆಗಿದೆ. ಬೆಂಗಳೂರು ನಾಗರಿಕರಿಗೆ ನನ್ನ ಅಭಿನಂದನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕದಲ್ಲಿ ಬರ ಇದ್ದಾಗಲೂ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ರೈತ ಮುಖಂಡರು ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆಶಿ, ಪ್ರತಿಭಟನೆ ಮಾಡಲಿ. ಅವರ ಧ್ವನಿ, ಹೋರಾಟ ನಡೆಯಲಿ. ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಸಂಘಟನೆಯವರಿಗೆ ಅಭಿನಂದನೆಗಳು ಎಂದರು. ಕಾವೇರಿ ನಿರ್ವಹಣಾ ಸಮಿತಿ ಸಭೆ …

Read More »

ಕಾವೇರಿ ನದಿ ನೀರು ವಿಚಾರ: ಸಿಎಂ ಸಿದ್ಧರಾಮಯ್ಯಗೆ ಮನವಿ ಪತ್ರ ಸಲ್ಲಿಸಿದ ಕಿಚ್ಚ ಸುದೀಪ್!

ಕಾವೇರಿ ನದಿ ನೀರಿನ ವಿಚಾರವಾಗಿ ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಸುದೀರ್ಘವಾಗಿ ಪತ್ರವೊಂದನ್ನು ಬರೆದಿರುವ ಸುದೀಪ್, ಆ ಪತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾವೇರಿ ಸಮಸ್ಯೆ ಈ ವರ್ಷವೂ ಶುರುವಾಗಿದೆ. ಕನ್ನಡ ಪರ ಸಂಘಟನೆಗಳು, ರೈತರು, ಹೋರಾಟ ನೆಡೆಸುತ್ತಿದ್ದಾರೆ. ಕನ್ನಡದ ನೆಲ, ಜಲ, ಭಾಷೆಯ ಎಲ್ಲ ಹೋರಾಟಗಳಲ್ಲೂ ನಾನು ಸದಾ ನಿಮ್ಮೊಂದಿಗೆ ಇದ್ದೇನೆ. ಮುಂಗಾರು ಮಳೆಯ ಅಭಾವದಿಂದ ರೈತರಿಗೆ ಜನತೆಯ …

Read More »

ಮತ್ತೆ ರಾಜ್ಯಕ್ಕೆ ಹಿನ್ನಡೆ: ತಮಿಳುನಾಡಿಗೆ ಪ್ರತಿ ದಿನ 3 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಆದೇಶ

ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ (Karnataka) ಮುಂದಿನ 18 ದಿನಗಳ ಕಾಲ ಪ್ರತಿ ದಿನ 3 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಆದೇಶಿಸಿದೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿಡಬ್ಲ್ಯೂಆರ್‌ಸಿ ಸಭೆ ನಡೆಸಿ ಅಕ್ಟೋಬರ್‌ 15ರವರೆಗೆ 3 ಸಾವಿರ ಕ್ಯೂಸೆಕ್‌ ನೀರನ್ನು ತಮಿಳುನಾಡಿನ (Tamil Nadu) ಬಿಳಿಗುಂಡ್ಲುಗೆ ಹರಿಸುವಂತೆ ಆದೇಶಿಸಿದೆ. ಕರ್ನಾಟಕದ ವಾದ ಏನಿತ್ತು? ಇಂದಿನ ಸಭೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ …

Read More »

ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಆರಂಭ

ದೆಹಲಿ: ಕಾವೇರಿ ನೀರು ಹರಿಸಲು ಆದೇಶ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ದೆಹಲಿಯ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಆರಂಭವಾಗಿದೆ. ವರ್ಚುವಲ್ ಮೂಲಕ ನಡೆಯುತ್ತಿರುವ ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಅಧಿಕಾರಿಗಳು ವರ್ಚುವಲ್ ಮೂಲಕ ಭಾಗಿಯಾಗಿದ್ದಾರೆ. ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಕಾವೇರಿ ನೀರು ಹರಿಸುವಂತೆ ತಮಿಳುನಾಡು ರೈತರು ಪ್ರತಿಭಟನೆ ನಡೆಸುತ್ತಿದ್ದರೇ ಇತ್ತ ಕರ್ನಾಟಕದಲ್ಲಿ (Karnataka) ನೀರು ಹರಿಸದಂತೆ ಒತ್ತಾಯಿಸಿ ಮಂಡ್ಯ …

Read More »

ಕಾವೇರಿ ವಿಚಾರದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತಿವೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಅವಕಾಶವಿದೆ. ಪ್ರತಿಭಟನೆ ಮಾಡುವುದಕ್ಕೆ ನಾವು ಯಾವುದೇ ಅಡ್ಡಿಪಡಿಸುವುದಿಲ್ಲ. ಕಾವೇರಿ ನದಿ ವಿಚಾರದಲ್ಲಿ ವಿಪಕ್ಷಗಳು ರಾಜಕೀಯ ಮಾಡುತ್ತೀವೆ ಎಂದಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಜನರ ಹಿತಕ್ಕಾಗಿ ವಿಪಕ್ಷಗಳು ಹೋರಾಟ ಮಾಡುತ್ತಿಲ್ಲ. ಕರ್ನಾಟಕ ಜನರ ಹಿತ ಕಾಪಾಡುವುದು ನಮ್ಮ ಸರ್ಕಾರ ಬದ್ಧ. ಕಾವೇರಿ ವಿಚಾರದಲ್ಲಿ ನಾವು ವಿಫಲವಾಗಿದ್ದೇವೆ ಅನ್ನೋದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು

Read More »

ರೋಗಿಗಳಿಗೂ ತಟ್ಟಿದ ಬೆಂಗಳೂರು ಬಂದ್ ಎಫೆಕ್ಟ್: ಹೆಚ್ಚಿನ ಚಿಕಿತ್ಸೆಗೆ ಹೋಗಲು ಬಸ್ ಇಲ್ಲದೇ ಪರದಾಟ

ಬೆಂಗಳೂರು: ಬೆಂಗಳೂರು ಬಂದ್ ಎಫಕ್ಟ್ ರೋಗಿಗಳಿಗೂ ತಟ್ಟಿದೆ. ಶಿವಮೊಗ್ಗದ ಮಾನಸ ಆಸ್ಪತ್ರೆಗೆ ಹೋಗಲು ಆಂಧ್ರಪ್ರದೇಶದಿಂದ ಮೆಜೆಸ್ಟಿಕ್​ಗೆ ಪ್ರಯಾಣಿಕರು ಬಂದಿದ್ದಾರೆ. ಇಲ್ಲಿಂದ ಚಿಕಿತ್ಸೆಗಾಗಿ ಶಿವಮೊಗ್ಗ ಹೋಗಲು ನಿರ್ಧರಿಸಿದ್ದಾರೆ. ಆದರೆ ಪ್ರಯಾಣಿಕ ಸಂಖ್ಯೆ ಇಲ್ಲ ಅಂತ ಕೆಎಸ್​ಆರ್​ಟಿಸಿ ಶಿವಮೊಗ್ಗಕ್ಕೆ ಬಸ್ ಬಿಡುತ್ತಿಲ್ಲ. ಹೀಗಾಗಿ ರೋಗಿಗಳು ಪರದಾಡುತ್ತಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವುತ್ತಿರುವುದನ್ನು ವಿರೋಧಿಸಿ ಬೆಂಗಳೂರು ಬಂದ್​ಗೆ ಕರೆ ಕೊಟ್ಟಿದ್ದು, ಕೆ.ಆರ್​.ಮಾರ್ಕೆಟ್​​ ವ್ಯಾಪಾರಿಗಳು ಬಂದ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಬಂದ್ ದಿಕ್ಕು ತಪ್ಪಿಸುವ ಕೆಲಸವಾಗಬಾರದು. ಜಲ್ಲಿಕಟ್ಟು …

Read More »