Breaking News

News

ಮುಂದುವರಿದ ಚಿಗರಿ ಬಸ್ ಅಪಘಾತ: ಲ್ಯಾಮಿಂಗ್ಟನ್ ರಸ್ತೆಯಲ್ಲಿ ಘಟನೆ

ಹುಬ್ಬಳ್ಳಿ: ಮುಂದೆ ಹೊರಟಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸಿಗೆ ಚಿಗರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವಾಯುವ್ಯ ಸಾರಿಗೆ ಸಂಸ್ಥೆ ಬಸ್ಸಿನ ಹಿಂದಿನ ಗಾಜು ಒಡೆದು ಪುಡಿಪುಡಿಯಾಗಿರುವ ಘಟನೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಡೆದಿದೆ. ಚಿಗರಿ ಬಸ್ ಒಂದಿಲ್ಲೊಂದು ರೀತಿಯಲ್ಲಿ ಅಪಘಾತಕ್ಕೆ ಸಿಲುಕುತ್ತಿರುವುದು ನಿಜಕ್ಕೂ ಜನರಲ್ಲಿ ಆತಂಕದ ಭಾವನೆ ಹುಟ್ಟು ಹಾಕಿದೆ. ಎಲ್ಲೆಂದರಲ್ಲಿ ಚಿಗರಿ ಬಸ್ ಡಿಕ್ಕಿ ಹೊಡೆಯುವ ಪ್ರಸಂಗಗಳನ್ನು ನೋಡಿದರೇ ಬ್ರೇಕ್ ಸಮಸ್ಯೆಯೋ ಏನೋ ಅರ್ಥವಾಗದಂತಾಗಿದೆ. ಇನ್ನೂ …

Read More »

ಚಂದ್ರಯಾನ- 3 ಯಶಸ್ಸಿಗೆ ಶಾಲಾ ಮಕ್ಕಳಿಂದ ಪ್ರಾರ್ಥನೆ.

ಧಾರವಾಡ: ದೇಶವೇ ಹೆಮ್ಮೆ ಪಡುವ ಚಂದ್ರಯಾನ 3 ಉಡಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಇಸ್ರೋಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಧಾರವಾಡದಲ್ಲಿ ಐದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೆಡೆ ಸೇರಿ ಆಲ್ ದಿ ಬೆಸ್ಟ್ ಇಸ್ರೋ… ಅಂತಾ ಹೇಳುತ್ತ ಶುಭ ಕೊರಿದ್ದಾರೆ. ಧಾರವಾಡದ ಮೃತ್ಯುಂಜಯ ನಗರದಲ್ಲಿರುವ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನರ್ಸರಿಯಿಂದ 10ನೇ ತರಗತಿವರೆಗಿನ ಮಕ್ಕಳು ತಮ್ಮ ಶಾಲೆ ಕ್ಯಾಂಪಸ್‌ನಲ್ಲಿ ಸೇರಿ ಸಾಮೂಹಿಕ ಶುಭಾಶಯ ಹೇಳಿದ್ದಾರೆ. ರಾಕೆಟ್ ನ …

Read More »

ದಿಲ್ಲಿಯಲ್ಲಿ ರಸ್ತೆಗೆ ನುಗ್ಗಿದ ನೀರು: ವಿದ್ಯುತ್ ಹರಿದು ಹಲವು ನಾಗರಿಕರಿಗೆ ವಿದ್ಯುದಾಘಾತ.

ಹೊಸದಿಲ್ಲಿ: ಯಮುನಾ ನದಿ ಉಕ್ಕೇರಿ ರಸ್ತೆಗಳಿಗೆ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಮನೆಗಳು, ಮಳಿಗೆಗಳು ಹಾಗೂ ಕಾರುಗಳು ಮುಳುಗಿ, ದಿಲ್ಲಿ ನಿವಾಸಿಗಳು ಅದರಿಂದ ಪಾರಾಗಲು ಹರಸಾಹಸ ಪಡುತ್ತಿದ್ದಾರೆ. ಈ ಸಂಕಷ್ಟದ ನಡುವೆಯೇ, ರಸ್ತೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ವಿದ್ಯುತ್ ಕಂಬಗಳಿಂದ ವಿದ್ಯುತ್ ಪ್ರವಹಿಸುತ್ತಿದ್ದು, ದಿಲ್ಲಿ ನಿವಾಸಿಗಳ ಗೋಳು ಮತ್ತಷ್ಟು ಹೆಚ್ಚಾಗಿದೆ. ಯಮುನಾ ನದಿಯ ಬದಿ ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯಕ್ಕೆ ಈಡಾಗಿರುವ ದಿಲ್ಲಿ ನಾಗರಿಕರು ದಿಲ್ಲಿಯ ಐಟಿಒ ಬಳಿ ಬರಿಗಾಲಲ್ಲಿ ನಡೆಯುವಾಗ ವಿದ್ಯುತ್‌ …

Read More »

ಚಂದ್ರಯಾನ-3 ಯಶಸ್ವಿ ಉಡಾವಣೆ

ನವದಹಲಿ ಪ್ರಜಾಕಿರಣ.ಕಾಮ್ : ಭಾರತದ ಹೆಮ್ಮೆಯ ಪ್ರತೀಕವಾದ ಚಂದ್ರಯಾನ-3 ಇಂದು ಶುಕ್ರವಾರ ಅಪರಾಹ್ನ 2.35ಗಂಟೆಗೆ ಆಂಧ್ರದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -3ರ ಚಾಲನೆ ಯಶಸ್ವಿ ಆಯಿತು. ದೇಶದ ಜನರ ನಿರೀಕ್ಷೆಯಂತೆ ಈ ಬಾರಿ ಇಸ್ರೋ ಗೆದ್ದಿದೆ. ಚಂದ್ರಯಾನ -3 ಯಶಸ್ವಿಯಾಗಿ ಉಡಾವಣೆಯಾಗಿದೆ.ಆ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಮತ್ತೊಮ್ಮೆ ಮುಗಿಲೆತ್ತರಕ್ಕೆ ಏರಿದೆ. ನಮ್ಮ ಹೆಮ್ಮೆಯ ಇಸ್ರೋ ಇನ್ನೊಂದು ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿದೆ. ಸಮಸ್ತ ಭಾರತೀಯರ ಬಹು ನಿರೀಕ್ಷಿತ ಬಾಹ್ಯಾಕಾಶ …

Read More »

ಜಿಎಸ್ ಟಿ ಸೋರಿಕೆ ತಡೆಯಲು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಲಹೆ

ಬೆಂಗಳೂರು : ರಾಜ್ಯ ಸರ್ಕಾರ ಜಿಎಸ್‌ಟಿ ಸೋರಿಕೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ತೆರಿಗೆ ರಿಟರ್ನ್ಸ್ ಸಲ್ಲಿಸಲು‌ ಮೂರು ವರ್ಷದ ಅವಧಿ ಕಲ್ಪಿಸುವುದು ದುರುಪಯೋಗಕ್ಕೆ ಕಾರಣವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸಭೆಯಲ್ಲಿ ವಿಧೇಯಕಗಳ ಮೇಲಿನ ಪರ್ಯಾಲೋಚನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರಕು ಮತ್ತು ಸೇವೆ ಇಡಿ ರಾಷ್ಟ್ರದಲ್ಲಿ ಏಕ ರೂಪ ತೆರಿಗೆ ಇರಬೇಕೆಂದು 2017 ರಲ್ಲಿ ಸಂವಿಧಾ‌ನ ತಿದ್ದುಪಡಿ ಮಾಡಲಾಯಿತು. ಕೆಲವು ರಾಜ್ಯಗಳು ಉತ್ಪಾದನಾ …

Read More »

ಎಸ್ಸಿ ಎಸ್ಟಿ ಗುತ್ತಿಗೆದಾರರಿಗೆ ಟೆಂಡರನಲ್ಲಿ ವಿನಾಯಿತಿ 1 ಕೋಟಿಗೆ ರೂ.ಗೆ ಹೆಚ್ಚಳ : ಬಸವರಾಜ ಬೊಮ್ಮಾಯಿ ಸ್ವಾಗತ

ಬೆಂಗಳೂರು: ಎಸ್ಸಿ ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಟೆಂಡರ್ ಪ್ರಕ್ರಿಯೆಯಿಂದ ವಿನಾಯಿತಿ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿನ ಪಾರದರ್ಶಕತೆ ಕಾಯ್ದೆ ತಿದ್ದುಪಡಿ ಮಾಡಿ 50 ಲಕ್ಷ‌ದಿಂದ 1 ಕೋಟಿಗೆ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧೇಯಕದ ಪರ್ಯಾಲೋಚನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಸ್ ಸಿಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಟೆಂಡರ್ ವಿನಾಯತಿಯಲ್ಲಿ ಐವತ್ತು ಲಕ್ಷದಿಂದ ಒಂದು ಕೋಟಿ ರೂ. ಗೆ ಹೆಚ್ಚಳ ಮಾಡುವ ತಿದ್ದುಪಡಿ ಮಾಡಿರುವುದು …

Read More »

ದಶಪಥ ಹೆದ್ದಾರಿಯಲ್ಲಿ ಸರಣಿ ಅಪಘಾತ:ನಾಲ್ಕು ವಾಹನಗಳು ಜಖಂ.

ರಾಮನಗರ: ಬೆಂಗಳೂರು-ದಶಪಥ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಸರಣಿ ಅಪಘಾತ ನಡೆದು ನಾಲ್ಕು ವಾಹನಗಳು ಜಖಂಗೊಂಡಿವೆ. ಬಿಡದಿಯ ನೆಲ್ಲಿಗುಡ್ಡೆ ಕೆರೆಯ ಸಮೀಪ ದಶಪಥ ಹೆದ್ದಾರಿಯಲ್ಲಿ ಲಾರಿ, ಬಸ್ ಹಾಗೂ ಎರಡು ಕಾರು ನಡುವೆ ಅಪಘಾತ ನಡೆದಿದೆ. ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಸಂಚಾರ ಮಾಡುತ್ತಿದ್ದ ಈ ನಾಲ್ಕು ವಾಹನಗಳ ನಡುವೆ ಅಪಘಾತ ನಡೆದು ಕಾರಿನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಂದಗತಿಯಲ್ಲಿ ಚಲಿಸುತ್ತಿದ್ದ ಲಾರಿಗೆ ಮೊದಲು ಐರಾವತ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. …

Read More »

ಗ್ರಾ.ಪಂ. ಚುನಾವಣೆಯಲ್ಲಿ ಪುತ್ತಿಲ ಬೆಂಬಲಿಗರ ಸ್ಪರ್ಧೆ ವಿಚಾರ: ನಳಿನ್ ಕುಮಾರ್ ಕಟೀಲ್ ಹೇಳಿದ್ದೇನು?

ಪುತ್ತೂರು: ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗರು ಸ್ಪರ್ಧಿಸುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪುತ್ತಿಲ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ನಾಯಕರು ಈಗಾಗಲೇ ಚರ್ಚೆ ನಡೆಸಿದ್ದಾರೆ. ಗ್ರಾಮ ಪಂಚಾಯತ್ ಉಪ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಕೂಡಾ ಚುನಾವಣೆಗೆ ಸ್ಪರ್ಧಿಸಬಹುದು. ಅರುಣ್ ಪುತ್ತಿಲ ಪರಿವಾರ ಚುನಾವಣೆಗೆ ಸ್ಪರ್ಧಿಸಲು ಕೂಡಾ ಪ್ರಜಾಪ್ರಭುತ್ವದಲ್ಲಿ ಇರುವ …

Read More »

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಆರ್ ಅಶೋಕ್ ವಾಗ್ದಾಳಿ.

ಬೆಂಗಳೂರು: ‘ಒಂದು ಕೈಯ್ಯಲ್ಲಿ ಐದು ಭಾಗ್ಯಗಳನ್ನು ಕೊಟ್ಟು, ಎರಡು ಕೈಯಲ್ಲಿ ಕಿತ್ತುಕೊಂಡರು’ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಶುಕ್ರವಾರ ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಸ್ತಾಪಿಸಿ, ‘ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಹಾಲು ಮಾಡೋದಕ್ಕೆ ಹೊರಟಿರುವ ಕಾಂಗ್ರೆಸ್ ಸರಕಾರ, ಜನರ ಮೂಗಿಗೆ ಸವರುವ ಕೆಲಸ ಮಾಡಿದೆ’ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹಾಲಿನ ದರ 5 ರೂ.ಯಿಂದ 6ರೂ.ಗೆ …

Read More »

ರೋಟರಿ ಕ್ಲಬ್ ವತಿಯಿಂದ ಪರಿಸರ ರಕ್ಷಣೆ ಬಗ್ಗೆ ಜಾಗ್ರತಿ.

ಧಾರವಾಡ: ರೋಟರಿ ಕ್ಲಬ್ ಧಾರವಾಡ ಹೆರಿಟೇಜ್ ವತಿಯಿಂದ ಇವರ ನೇತೃತ್ವದಲ್ಲಿ ನಡೆದ ಪರಿಸರ ರಕ್ಷಣೆ ಕಾಯ೯ಕ್ರಮದಲ್ಲಿ ರೋಟರಿ ಜಿಲ್ಲಾ ಗವರ್ನರ್ ರೋಟರಿಯನ್ ನಜೀರ್‌ ಬೋಸರ್ಡವಾಲಾ ಗಿಡ ನೆಡುವ ಮೂಲಕ ಚಾಲನೆ ನೀಡಿದರು . ಈ ಸಂದರ್ಭದಲ್ಲಿ ಅವರು ಪರಿಸರ ರಕ್ಷಣೆ ಕುರಿತು ಮಾತನಾಡಿದರು . ಮಾಜಿ ಜಿಲ್ಲಾ ಗವರ್ನರ್ ಆದ ರೋಟರಿಯನ್ ಗಣೇಶ್ ಭಟ್ ಅಸಿಸ್ಟೆಂಟ್ ಗವರ್ನರ್ ಬಸವರಾಜ ಕನದಾಳೆ ಹಾಗೂ ಡಿಪೋಟಿ ರೇಂಜ್ ಫಾರೆಸ್ಟ್ ಆಫೀಸರ್ ಎಲ್. ನಾಯಕ್ …

Read More »