Breaking News

News

ವಾಕಿಂಗ್ ಹೋದ ವ್ಯಕ್ತಿಗೆ ಹಿಟ್ ಆಂಡ್ ರನ್

ಹುಬ್ಬಳ್ಳಿ:ವಾಯು ವಿಹಾರಕ್ಕೆ ಹೋಗಿದ್ದ ವ್ಯಕ್ತಿಯೊಬ್ಬನ ಮೇಲೆ ಅಪರಿಚಿತ ವಾಹನ ಹರಿದ ಪರಿಣಾಮ ವ್ಯಕ್ತಿಯೊಬ್ಬನ ಒಂದು ಕೈ ಬಿಟ್ಟು ಉಳಿದೆಲ್ಲ ದೇಹವೆಲ್ಲ ಸಂಪೂರ್ಣವಾಗಿ ಛಿದ್ರ ಛಿದ್ರ ವಾದ ಘಟನೆ ಹುಬ್ಬಳ್ಳಿಯ ಧಾರವಾಡ ಬೈಪಾಸ್ ಬಳಿ ನಡೆದಿದೆ. ಸುಮಾರು 50 ರಿಂದ 55 ವರ್ಷದ ವ್ಯಕ್ತಿ ಶಿಮ್ಲಾ ನಗರದ ಬಳಿ ಪ್ರತಿನಿತ್ಯ ವಾಯು ವಿಹಾರ ಮಾಡಲು ಈ ರಸ್ತೆಯಲ್ಲಿ ಬರುತ್ತಿದ್ದರಂತೆ,ಇಂದು ಬೆಳ್ಳಿಗ್ಗೆ ಕೂಡಾ ವಾಯು ವಿಹಾರ ಮಾಡಲು ಬಂದಾಗ ಅಪರಿಚಿತ ವಾಹನ ಡಿಕ್ಕಿ …

Read More »

ರೈತ ಸಾಂತ್ವನ ಯಾತ್ರೆ ಸ್ವಾಗತಿಸಿದ ಸಿದ್ದರಾಮಯ್ಯ…

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ‘ರೈತ ಸಾಂತ್ವನ ಯಾತ್ರೆ’ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ವಿಧಾನಸಭೆ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡ ಬಳಿಕ ರಾಜ್ಯದ 31 ಜಿಲ್ಲೆಗಳಲ್ಲಿ ಈ ಯಾತ್ರೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಎಚ್. ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ ‘ರೈತ ಸಾಂತ್ವನ ಯಾತ್ರೆ’ಯನ್ನು ಸ್ವಾಗತ ಮಾಡಿದ್ದಾರೆ. ‘ಈ ಯಾತ್ರೆಯ ನಂತರ ಅವರು ಕೊಡುವ …

Read More »

ನಾವಿಬ್ಬರು ನಿಕಟ ಸ್ನೇಹಿತರಲ್ಲ….

ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಲ್ಲಿ ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಅಗ್ರ ಆಟಗಾರರಾಗಿದ್ದಾರೆ. ಈ ಇಬ್ಬರು ಹಲವು ವರ್ಷಗಳ ಕಾಲ ರಾಷ್ಟ್ರೀಯ ತಂಡದಲ್ಲಿ ಅದ್ಭುತಗಳನ್ನು ಮಾಡಿದ್ದಾರೆ ಮತ್ತು ಕೆಲವು ಪ್ರಮುಖ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದಾರೆ. ಸದ್ಯ ಇಬ್ಬರೂ ದಿಗ್ಗಜರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದಾರೆ. ಕ್ರಿಕೆಟ್ ಮೈದಾನದ ಹೊರಗೆ ತಮ್ಮ ವೈಯಕ್ತಿಕ ಜೀವನವನ್ನು ಆನಂದಿಸುತ್ತಿದ್ದಾರೆ. ಆದರೆ, ಅವರ ವೈಯಕ್ತಿಕ ಸಂಬಂಧ ಮತ್ತು ಪರಸ್ಪರ ಸಮೀಕರಣದ ಬಗ್ಗೆ ಕೆಲವು …

Read More »

ಹಿಂದೂ ದ್ವೇಷದ ಸರ್ಕಾರ ಕಾಂಗ್ರೆಸ್: ಪ್ರಮೋದ್ ಮುತಾಲೀಕ್.

ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಹಿಂದೂ ದ್ವೇಷ ಸರ್ಕಾರವಾಗಿದೆ, ಹಿಂದೂ ಕಾರ್ಯಕರ್ತರ ಜೈಲಿಗಟ್ಟೋದನ್ನೇ ಸರ್ಕಾರ ಮಾಡುತ್ತಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಚಿಕ್ಕಮಗಳೂರಿನಲ್ಲಿ ವಾಗ್ದಾಳಿ ನಡೆಸಿದರು. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು, ಹುಲಿ ಉಗುರು ವಿಚಾರದಲ್ಲಿ ನೋಟೀಸ್ ಇಲ್ಲದೆ ಅರ್ಚಕರನ್ನು ಬಂಧಿಸಿದ್ದರು. ಆದರೆ ಶಾಖಾದ್ರಿ ಮನೆಯಲ್ಲಿ ಚಿರತೆ ಚರ್ಮ ಸಿಕ್ಕಿದೆ, ಆದರೂ ಇನ್ನೂ ಬಂಧನ ಮಾಡಿಲ್ಲ. ಶಾಖಾದ್ರಿಗಾದ್ರೆ ನೋಟೀಸ್ ಕೊಡ್ತೀರಾ ನೀವು, ನಾಟಕ ಮಾಡ್ತೀರಾ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದರು. …

Read More »

ಕರ್ನಾಟಕ: ಶೀಘ್ರವೇ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ

ರಿಯಾಯಿತಿ ದರದಲ್ಲಿ ಈರುಳ್ಳಿ ಪೂರೈಕೆ ಮಾಡಲು ಹೈದರಾಬಾದ್‌ ಕೃಷಿ ಸಹಕಾರ ಸಂಘ ಮುಂದಾಗಿದೆ. ಈರುಳ್ಳಿ ದರ ಏರಿಕೆಯಿಂದ ಬೇಸತ್ತಿರುವ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಜನರಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಈರುಳ್ಳಿ ಸಿಗುವ ಸಾಧ್ಯತೆ ಇದೆ. ಇದೇ ವೇಳೆ, ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿರುವ ಮದರ್‌ ಡೇರಿಯ ಸಫ‌ಲ್‌ ಚಿಲ್ಲರೆ ಮಳಿಗೆಗಳಲ್ಲಿ ಭಾನುವಾರದಿಂದ ಪ್ರತಿ ಕೆಜಿ ಈರುಳ್ಳಿಯನ್ನು ಸಬ್ಸಿಡಿ …

Read More »

ಕೃಷಿಕರ ಮನೆ ಬಾಗಿಲಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ: ಡಿ.31ರ ತನಕ ಅಭಿಯಾನ!

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 6,000ರೂ. ಸಹಾಯಧನ ಪಡೆವ ದೇಶದ ಕೃಷಿಕರ ಮನೆ ಬಾಗಿಲಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ವಿತರಣಾ ಅಭಿಯಾನ ಆರಂಭವಾಗಿದ್ದು ಡಿ. 31ರ ತನಕ ನಡೆಯಲಿದೆ. ದೇಶದಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 11 ಕೋಟಿ ರೈತರ ನೋಂದಣಿಯಾಗಿದ್ದು 2.60 ಲಕ್ಷ ಕೋಟಿ ರೂ. ಖಾತೆಗೆ ಜಮೆಯಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಕೇವಲ 7.35 ಕೋಟಿ ರೈತರಿಗಷ್ಟೇ ಸಿಕ್ಕಿದ್ದು 8.85 ಲಕ್ಷ …

Read More »

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ ಇಳಿಕೆ ಕಂಡ ಚಿನ್ನ-ಬೆಳ್ಳಿ ದರ

ಬೆಂಗಳೂರು ;- ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ.. ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,500 ರೂ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,640ರೂ. ಬೆಳ್ಳಿ ಬೆಲೆ 1 …

Read More »

ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ನಿರೀಕ್ಷೆ

ಬೆಂಗಳೂರು;- ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಈ10 ಜಿಲ್ಲೆಗಳಲ್ಲಿ ಇಂದು ಅಧಿಕ ಮಳೆ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್​ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್​ ನೀಡಲಾಗಿದೆ. ಉಳಿದಂತೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ,ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. …

Read More »

ಸಾರಿಗೆ ಇಲಾಖೆ ನಿರ್ಧಾರ?ಶಕ್ತಿ ಯೋಜನೆ ಎಫೆಕ್ಟ್:ಬಸ್ ದರ ಏರಿಕೆಗೆ

ಬೆಂಗಳೂರು: ವರ್ಷಕ್ಕೊಂದು ಬಾರಿ ಕೆಇಆರ್‌ಸಿ ಮೂಲಕ ಇಂಧನ ಇಲಾಖೆ ದರ ಏರಿಕೆ ಮಾಡಿ, ಇದರಿಂದ ಗ್ರಾಹಕರಿಗೆ ಹೊರೆಯಾಗುವುದನ್ನು ನೋಡಿದ್ದೇವೆ. ಆದರೀಗ ಬಸ್‌ದರ ಏರಿಕೆಗೂ ಇದೇ ಮಾಡೆಲ್ ಅನುಸರಿಸುವಂತೆ ಸಾರಿಗೆ ಇಲಾಖೆಗೆ ಗಂಭೀರ ಸಲಹೆ ಬಂದಿದೆ. ಇಂಧನ ಇಲಾಖೆಯಲ್ಲಿ ಎಸ್ಕಾಂಗಳು ವರ್ಷಕ್ಕೊಮ್ಮೆ ಕೆಇಆರ್‌ಸಿ ಮುಂದೆ ದರ ಪ್ರಸ್ತಾಪ ಇಡುತ್ತದೆ. ಕೆಇಆರ್‌ಸಿ ಕೂಡ ಒಪ್ಪಿಗೆ ನೀಡಿ ವರ್ಷಕ್ಕೊಮ್ಮೆ ದರ ಏರಿಕೆ ಮಾಡುತ್ತಿದೆ. ಇದೇ ಮಾಡೆಲ್‌ನ್ನು ಈಗ ಸಾರಿಗೆ ಇಲಾಖೆಗೂ ಅನ್ವಯ ಮಾಡುವಂತೆ ಹಿರಿಯ …

Read More »

ಸಹೋದರನ ಗೋಳಾಟ! ನನ್ನ ಸಹೋದರಿಯನ್ನು ಕೆಲಸದ ವಿಚಾರಕ್ಕೆ ಕೊಲೆ ಮಾಡಲಾಗಿದೆ:

ಬೆಂಗಳೂರು: ನನ್ನ ಸಹೋದರಿಯನ್ನು ಕೆಲಸದ ವಿಚಾರಕ್ಕೆ ಕೊಲೆ ಮಾಡಲಾಗಿದೆ. ಸರ್ಕಾರದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇ ತಪ್ಪಾ? ಎಂದು ಹತ್ಯೆಯಾದ ಉಪ ನಿರ್ದೇಶಕಿ ಪ್ರತಿಮಾ ಅವರ ಸಹೋದರ ಗೋಳಾಡಿದ್ದಾರೆ. ಗಣಿ ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಯಾಗಿದ್ದ ಪ್ರತಿಮಾ ತೀರ್ಥಹಳ್ಳಿ ಮೂಲದವರಾಗಿದ್ದು, ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರ ಬಳಿಕ ಕುವೆಂಪು ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಳೆದ ರಾತ್ರಿ ಅವರನ್ನು ತಮ್ಮ ಮನೆಯಲ್ಲಿಯೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಕಳೆದ 8 ವರ್ಷಗಳಿಂದ ಅದೇ …

Read More »