admin
January 6, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು : ಶಿವಮೊಗ್ಗದಲ್ಲಿ ನಾನು 3 ದಿನ ಇದ್ದೆ, ಅಲ್ಲಿ ನೈಟ್ ಕರ್ಫ್ಯೂ ಇಲ್ಲ ಸುಡುಗಾಡು ಇಲ್ಲ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿ ಸರಕಾರವನ್ನು ಮತ್ತೆ ಮುಜುಗರಕ್ಕೆ ಸಿಲುಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಒಂದೇ ರೀತಿ ನಿಯಮ ಇಲ್ಲ.ಶಿವಮೊಗ್ಗ ದಲ್ಲಿ ನಾನು 3 ದಿನ ಇದ್ದೆ ಅಲ್ಲಿ ನೈಟ್ ಕರ್ಫ್ಯೂ ಇಲ್ಲ, ಸುಡುಗಾಡು ಇಲ್ಲ ಎಂದರು. ರಾಜ್ಯವ್ಯಾಪಿ ರಾತ್ರಿ ಕರ್ಫ್ಯೂ ಗೆ ವಿರೋಧ ವ್ಯಕ್ತಪಡಿಸಿದ್ದ ಈಶ್ವರಪ್ಪ ಬೆಂಗಳೂರಿನಲ್ಲಿ ನಿಯಮ …
Read More »
admin
January 6, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು: ಸಿದ್ದರಾಮಯ್ಯನವರು ರಾಷ್ಟ್ರ ಹಾಗೂ ರಾಜ್ಯ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವ ದುರಭ್ಯಾಸ ಬೆಳೆಸಿಕೊಂಡಿದ್ದಾರೆ. ಗಾಂಧಿ ಮನೆತನವನ್ನು, ಸೋನಿಯಾ ಹಾಗೂ ರಾಹುಲ್ ಗಾಂಧಿಯವರನ್ನು ಹೊಗಳುವುದಷ್ಟೇ ತಿಳಿದುಕೊಂಡಿದ್ದಾರೆ ಎಂದು ಕುಡಚಿ ಶಾಸಕ ಪಿ.ರಾಜೀವ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಅವರಿಗೆ ಬುದ್ದಿ ಇಲ್ಲ ಅಂದಿದ್ದಾರೆ. ಆದರೆ ಇವರ ಬಳಿ ಇರುವುದು ಯಾವ ಬುದ್ದಿ? ಒಳ್ಳೆಯ ಬುದ್ದಿ ಕೆಟ್ಟ ಬುದ್ದಿ ಎರಡಿರುತ್ತದೆ. ಸಿದ್ಧರಾಮಯ್ಯ ಹತ್ತಿರ ಯಾವ ಬುದ್ದಿ ಇದೆ? ಬಿಜೆಪಿಯವರಿಗೆ …
Read More »
admin
January 6, 2022
Breaking News, ಕರ್ನಾಟಕ, ಬೆಳಗಾವಿ
ಬೆಳಗಾವಿ : ಮಹಾರಾಷ್ಟ್ರದಲ್ಲಿ ಪೊಲೀಸರು ಪ್ರತಿ ವಾಹನವನ್ನೂ ತಪಾಸಣೆಗೆ ಒಳಪಡಿಸಿದ ನಂತರವೇ ರಾಜ್ಯ ಪ್ರವೇಶಿಸಲು ಅನುವು ಮಾಡಿಕೊಡುತ್ತಿದ್ದಾರೆ.ಕೋವಿಡ್ ಪ್ರಕರಣಗಳು ಹೆಚ್ಚಳಗೊಂಡಿದ್ದು ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್ ಪರಿಸ್ಥಿತಿ ಇದೆ. ಬೆಳಗಾವಿ ಜಿಲ್ಲೆಯ 23 ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೆಳಗಾವಿ ತಾಲೂಕಿನ ಬಾಚಿ ಚೆಕ್‌ಪೋಸ್ಟ್, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ, ಕಾಗವಾಡ ಹಾಗೂ ಅಥಣಿ ತಾಲೂಕಿನಲ್ಲಿ ನಿರ್ಮಿಸಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ತಪಾಸಣೆ ನಡೆಯುತ್ತಿದೆ.
Read More »
admin
January 6, 2022
Breaking News, SPECIAL NEWS, ಕರ್ನಾಟಕ, ಬೆಂಗಳೂರು
ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಹತ್ತಾರು ಮಹತ್ತರ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲ ಕಡೆ ಕೋವಿಡ್ ಪ್ರೋಟೋಕಾಲ್ ಬೇಕಾ? ಅಂತ ಸಚಿವರು ಕೇಳಿದ್ದಾರೆ. ಹೀಗಾಗಿ ನಾಲ್ಕೈದು ದಿನ ಬಿಟ್ಟು ತಜ್ಞರ ಜತೆ ಚರ್ಚಿಸಿ ಇತರ ನಗರಗಳಿಗೆ ರಿಲೀಫ್ ಮಾಡಲು ನಿರ್ಧರಿಸಲಾಗಿದೆ. ಆಯುಷ್ ಶುಶ್ರೂಷಕರ 80 ಹುದ್ದೆಗೆ ನೇರ ನೇಮಕ. ಗುತ್ತಿಗೆ ನೌಕರರಿಗೆ ವರ್ಷಕ್ಕೆ ಎರಡು ಕೃಪಾಂಕ ಕೊಡಲು ನಿರ್ಧಾರ. ಅಂಬರೀಷ್ ಸ್ಮಾರಕ ನಿರ್ಮಿಸಲು 12 …
Read More »
admin
January 6, 2022
Breaking News, ಕರ್ನಾಟಕ, ಬೆಂಗಳೂರು
ಬೆಂಗಳೂರು : ವಿಧಾನಪರಿಷತ್ ಸದಸ್ಯರ ಪಾತ್ರದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ವಿಕಾಸಸೌಧದಲ್ಲಿ ಪರಿಷತ್ ಅವಧಿ ಮುಕ್ತಾಯವಾಗಿರುವ ಸದಸ್ಯರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಾದ ನಿರ್ಣಯಗಳನ್ನು ಮರು ದೃಢೀಕರಣ ಮಾಡುವ ಗುರುತರ ಜವಾಬ್ದಾರಿ ವಿಧಾನಪರಿಷತ್‌ನದ್ದಾಗಿದೆ . ಪರಿಷತ್‌ಗೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಪರಿಷತ್‌ನ ಇತಿಹಾಸ, ಪರಂಪರೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ …
Read More »
admin
January 5, 2022
Breaking News, ಆರೋಗ್ಯ, ಕರ್ನಾಟಕ, ಬೆಂಗಳೂರು, ರಾಜಕೀಯ ಸುದ್ದಿ, ಶಿವಮೊಗ್ಗ, ಸುದ್ದಿ
ಶಿವಮೊಗ್ಗ : ಕೋವಿಡ್ ಹೆಚ್ಚಳ ಹಿನ್ನೆಲೆ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿರುವ ಸರ್ಕಾರದ ನಿರ್ಧಾರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಬುಧವಾರ ಅಸಮಾಧಾನ ಹೊರ ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೊರೊನಾ ಜಾಸ್ತಿ ಇರುವುದು ಹೌದು, ನಾನು ಇಲ್ಲ ಅಂತಾ ಹೇಳಿಲ್ಲ.ರಾಜ್ಯದ ಎಲ್ಲಾ ಕಡೆಯೂ ಇದು ಇಲ್ಲ.ಉದಾಹರಣೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕೊರೋನಾ ಅಷ್ಟಿಲ್ಲ.ಕೆಲವೆಡೆ 2-3-4-5 ಈ ರೀತಿ ಇದೆ. ಜಾಸ್ತಿ ಅಂದರೆ 10 ರವರೆಗೆ ಇದೆ. ಜಾಸ್ತಿ ಇದೆ ಅಂದುಕೊಂಡು ಇಡೀ ರಾಜ್ಯಕ್ಕೆ …
Read More »
admin
January 5, 2022
Breaking News, ಆರೋಗ್ಯ, ಕರ್ನಾಟಕ, ದೆಹಲಿ
ನವದೆಹಲಿ : ದೇಶದಲ್ಲಿ ಓಮಿಕ್ರಾನ್ ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಇದು ಕೊರೊನಾ ರೂಪಾಂತರಿ ಓಮಿಕ್ರಾನ್ ನಿಂದ ಸಂಭವಸಿದ ಮೊದಲ ಸಾವು ಎನ್ನಲಾಗಿದೆ. ದೇಶದಲ್ಲಿ ಓಮಿಕ್ರಾನ್ ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಹಲವೆಡೆ ಓಮಿಕ್ರಾನ್ ಸೋಂಕು ಸಮುದಾಯಕ್ಕೂ ಹಬ್ಬಿರುವ ಕುರಿತು ತಜ್ಞರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ರಾಜಸ್ಥಾನದಲ್ಲಿ ಓಮಿಕ್ರಾನ್ ಸೋಂಕಿನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ರಾಜ್ಯ ಆರೋಗ್ಯ ಇಲಾಖೆಯ ಮೂಲದಿಂದ ತಿಳಿದು ಬಂದಿದೆ ಎಂದು ರಾಯಿಟರ್ಸ್ ವರದಿ …
Read More »
admin
January 5, 2022
Breaking News, ಕರ್ನಾಟಕ, ದೆಹಲಿ, ದೇಶ-ವಿದೇಶ, ಬೆಂಗಳೂರು, ರಾಜಕೀಯ ಸುದ್ದಿ, ಶಿವಮೊಗ್ಗ
ಶಿವಮೊಗ್ಗ : ಕೊರೊನಾ ಟಫ್ ರೂಲ್ಸ್ ಜನ ಸಾಮಾನ್ಯರಿಗೆ ಅನ್ವಯವಾಗುವಂತೆ ಕಾಂಗ್ರೆಸ್ ಪಕ್ಷಕ್ಕೂ ಅನ್ವಯವಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆಗೆ ಟಾಂಗ್ ನೀಡಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿ ಸಹ ಪ್ರತಿ ದಿನ ಸಾವಿರಾರ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿವೆ. ರಾಜ್ಯ ಸರ್ಕಾರ ತಜ್ಞರ ಸಲಹೆ ಪಡೆದು ಕಠಿಣ ನಿಯಮ ಜಾರಿ ಮಾಡಲಾಗಿದೆ. ನೈಟ್ ಕಫ್ರ್ಯೂ …
Read More »
admin
January 5, 2022
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಹಾಡಹಗಲೇ ಕೇಶ್ವಾಪುರ ಆದರ್ಶ ಲೇಔಟ್‌ನ ಮನೆಯೊಂದರ ಕೀಲಿ ಮುಂದು 45 ಗ್ರಾಂ ಚಿನ್ನಾಭರಣ ಹಾಗೂ 6,400 ರೂ. ನಗದು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ರೈಲ್ವೆ ಉದ್ಯೋಗಿ ಪುಷ್ಪಲತಾ ಮೋಚರಲ ಡಿ .28 ರಂದು ಮನೆಗೆ ಕೀಲಿ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಾಗ ಕಳವಾಗಿದೆ . ಕುರಿತು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Read More »
admin
January 5, 2022
Breaking News, ಕರ್ನಾಟಕ, ದಾವಣಗೆರೆ
ದಾವಣಗೆರೆ: ಜಿಲ್ಲೆಯ ಆನಗೋಡು ರಾಷ್ಟ್ರೀಯ ಹೆದ್ದಾರಿ ಬಳಿ ಒಕ್ಕಣಿಗೆ ಹಾಕಿದ್ದ ರಾಗಿ ಹುಲ್ಲಿನ ಮೇಲೆ ಓಮ್ನಿಕಾರು ಬರುತ್ತಿದ್ದಂತೆ, ಬೆಂಕಿ ಹೊತ್ತಿ ಧಗಧಗನೆ ಉರಿದು ಸುಟ್ಟು ಭಸ್ಮವಾಗಿದೆ. ಫಜಲ್ ಅಹಮ್ಮದ್ ಎಂಬವರಿಗೆ ಸೇರಿದ ಕಾರಾಗಿದೆ. ಅಂಗಡಿಗೆ ದಿನಸಿ ಸಾಮನುಗಳನ್ನ ಒಯ್ಯುವಾಗ ಹೊತ್ತಿ ಉರಿದಿದೆ. ಓಮ್ನಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತಿದ್ದಂತೆ ಚಾಲಕ ಹೊರ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಗ್ನಿ ಶಾಮಕ ಸಿಬ್ಬಂದಿ ಬರುವಷ್ಟರಲ್ಲೆ ಓಮ್ನಿ ಕಾರು ಸಂಪೂರ್ಣ ಭಸ್ಮವಾಗಿದೆ.ಬೆಂಕಿ ಹೊತ್ತಿ ಉರಿಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ …
Read More »